Articles

ಒಂದೇ ಸಿಮ್ ಕಾರ್ಡ್ ಮೇಲೆ ಎರಡು ನಂಬರ್ ಯೂಸ್ ಮಾಡುವ ಸೂಪರ್ ಐಡಿಯಾ! ಮಿತ್ರರಿಗೂ ಗೊತ್ತಾಗುವುದಿಲ್ಲ ನಿಮ್ಮ ನಂಬರ್!

ಒಂದು ಸಿಮ್ ಕಾರ್ಡ್ ಎಂದಾಗ ಅದರ ಮೇಲೆ ಒಂದೇ ಫೋನ್ ಯೂಸ್ ಮಾಡಲು ಸಾಧ್ಯವಾಗುತ್ತದೆ, ಇದು ನಿಮಗೆ ಗೊತ್ತೇ ಇದೆ. ಕೆಲವು ಸ್ಮಾರ್ಟ್ ಫೋನ್ ಗಳಲ್ಲಂತೂ ಸೆಕೆಂಡ್ ಸಿಮ್ ಅಥವಾ ಮೆಮೊರಿ ಕಾರ್ಡ್ ಈ ಎರಡರಲ್ಲಿ ಬರೀ ಒಂದನ್ನೇ ಉಪಯೋಗಿಸುವ ಆಪ್ಷನ್ ಇರುತ್ತದೆ. ಇಂಥ ಯೂಸರ್ ಗಳು ಮೆಮೊರಿ ಕಾರ್ಡ್ ಸಲುವಾಗಿ ಸೆಕೆಂಡ್ ಸಿಮ್ ನ ತ್ಯಾಗ ಮಾಡುತ್ತಾರೆ. ಆದರೀಗ ಈ ಲೇಖನದಲ್ಲಿ ನಾವು ನಿಮಗೊಂದು ಟ್ರಿಕ್ಸ್ ಹೇಳಲಿದ್ದೇವೆ. ಅದೇನೆಂದರೆ ನಿಮ್ಮ ಒಂದೇ ಸಿಮ್ ಕಾರ್ಡ್ ಮೇಲೆ ಎರಡು ಫೋನ್ ನಂಬರ್ ಗಳನ್ನು ಯೂಸ್ ಮಾಡಬಹುದಾಗಿದೆ.

ಈ ರೀತಿ ಪಡೆದುಕೊಳ್ಳಿ ಎರಡನೇ ಫೋನ್ ನಂಬರ್…

ಈ ಟ್ರಿಕ್ಸ್ ಬರೀ ಆಂಡ್ರಾಯಿಡ್ ಫೋನ್ ನಲ್ಲಿಯೇ ಉಪಯೋಗಿಸಲು ಬರುತ್ತದೆ. ಜೊತೆಗೆ ಒಳ್ಳೆಯ ಇಂಟರ್ ನೆಟ್ ಕನೆಕ್ಷನ್ ದ ಅವಶ್ಯಕತೆ ಇದೆ.

ಮೊದಲು ಗೂಗಲ್ ಪ್ಲೆ ಸ್ಟೋರ್ ಮುಖಾಂತರ ‘Text Me: Second Phone Number’ ಹೆಸರಿನ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ. ಈ ಆ್ಯಪ್ ನಲ್ಲಿ ನಿಮ್ಮ gmail ಸಹಾಯದಿಂದ ಸೈನ್ ಅಪ್ ಮಾಡಿಕೊಳ್ಳಿ. ಇದರಿಂದ ಈ ಆ್ಯಪ್ ನಲ್ಲಿ ನಿಮ್ಮ ಅಕೌಂಟ್ ತಯಾರಾಗುತ್ತದೆ. ತದನಂತರ ಕೆಳಗೆ ನೀಡಿದ ಆಪ್ಷನ್ ಗಳ ಮುಖಾಂತರ ನಂಬರ್ ಆಯ್ಕೆ ಮಾಡಿ.

ಇಲ್ಲಿ ನೀವು ನಿಮ್ಮ ಇಷ್ಟದ ಯಾವುದೇ ನಂಬರ್ ಆಯ್ಕೆ ಮಾಡಬಹುದಾಗಿದೆ. ಆದರೆ ನೆನಪಿರಲಿ ಇದಕ್ಕಾಗಿ ನಿಮಗೆ ಹಣ ಖರ್ಚು ಮಾಡಬೇಕಾಗುತ್ತದೆ. ಹಣ ಕೊಟ್ಟಾಗ ನಿಮಗೆ ಬೇರೆ ದೇಶಗಳಲ್ಲಿಯ ನಂಬರ್ ಗಳು ಸಹ ದೊರೆಯುತ್ತವೆ. ಹಾಗೆಯೇ ಆ್ಯಪ್ ಇನ್ಸ್ಟಾಲ್ ಮಾಡಿದ ನಂತರ ನಿಮಗೆ ಕಾಲ್ ಮಾಡುವ ಸಲುವಾಗಿ ಉಚಿತ ನಂಬರ್ ಗಳನ್ನು ಸಹ ನೀಡಲಾಗುತ್ತದೆ. ಕಾಲ್ ಮಾಡುವ ಸಲುವಾಗಿ ನಿಮಗೆ ಕ್ರೆಡಿಟ್ ನ ಉಪಯೋಗ ಮಾಡಬೇಕಾಗುತ್ತದೆ. ಇಲ್ಲಿ ನೀವು ಆ ನಂಬರಗಳನ್ನು ಖರೀದಿ ಮಾಡಬಹುದಾಗಿದೆ ಇಲ್ಲವೆ ಜಾಹೀರಾತುಗಳನ್ನು ನೋಡಿ ಉಚಿತವಾಗಿಯೂ ಪಡೆಯಬಹುದು.

Leave a Comment

Your email address will not be published. Required fields are marked *