ಕುಡಿದ ಅಮಲಿನಲ್ಲಿ ಬಾಹುಬಲಿ ಚಿತ್ರದಲ್ಲಿಯ ಹಾಗೆ ಗೂಳಿಯನ್ನು ನೆಲಕ್ಕೆ ಉರುಳಿಸಲು ಹೋದ ಯುವಕ…..! ವಿಡಿಯೋ ನೋಡಿ.!
ಸಾಮಾನ್ಯವಾಗಿ ಯಾರಾದರೂ ಮ ದ್ಯ ಪಾನ ಮಾಡಿದಾಗ, ಕುಡಿದಿದ್ದು ಹೆಚ್ಚಾದಾಗ ಅವರು ತಮ್ಮ ಮನಸ್ಸಿಗೆ ಬಂದಂತೆ ಮಾತನಾಡುವುದನ್ನು ಹಾಗೂ ಮನಬಂದಂತೆ ವರ್ತಿಸುವುದು, ಮೈಮೇಲೆ ಹಿಡಿತವಿಲ್ಲದೇ ವರ್ತಿಸುವುದನ್ನು ನಾವೆಲ್ಲರೂ ಕೂಡಾ ಗಮನಿಸಿಯೇ ಇರುತ್ತೇವೆ. ಇನ್ನೂ ಕೆಲವರಿಗಂತೂ ಮತ್ತು ಹೆಚ್ಚಿದಾಗ, ಕಿಕ್ ಏರಿದಾಗ ಅವರ ಬಾಯಿಂದ ಆಂಗ್ಲ ಭಾಷೆ ಕೂಡಾ ಬರಲಾರಂಭಿಸುತ್ತದೆ.
ಕೆಲವರು ಕುಡಿದ ನಂತರ ತಾವು ಮಾಡುವ ಕೃ#ತ್ಯ ಅವರಿಗೆ ಗೊತ್ತು ಇರುವದಿಲ್ಲ. ಕುಡಿದಾಗ ಮನುಷ್ಯ ಏನೆಲ್ಲಾ ಸಾಧನೆ ಮಾಡುತ್ತಾನೆ ಅನ್ನೋದು ನಿಮಗೆಲ್ಲ ಗೊತ್ತೇ ಇದೆ. ಒಬ್ಬ ತೆಳ್ಳಗಿದ್ದ ಮನುಷ್ಯ ಕುಡಿದಾಗ ಆತನ ಶರೀರದಲ್ಲಿ ಶಕ್ತಿಮಾನ ತರಹ ಶಕ್ತಿ ಬರುತ್ತದೆ. ಆಗ ಅವರು ಯಾರಿಗೂ ಸಹ ಅಂಜದೆ ಧೈರ್ಯದಿಂದ ಮಾತನಾಡುತ್ತಾರೆ, ಅಷ್ಟೇ ಅಲ್ಲ ತಮ್ಮ ಮನಸ್ಸಿಗೆ ಬಂದ ಹಾಗೆ ಯಾರನ್ನು ಬೇಕಾದರೂ ಸಹ ಬೈಯುತ್ತಾರೆ, ಸದ್ಯಕ್ಕೆ ಅಂತಹದೇ ಒಬ್ಬ ವ್ಯಕ್ತಿಯ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಕುಡಿದ ಮತ್ತಿನಲ್ಲಿ ರಸ್ತೆಯ ಮೇಲೆ ನಿಂತುಕೊಂಡಿದ್ದ ಒಂದು ಗೂಳಿಯ ಜೊತೆಗೆ ಕಾದಾಟ ಮಾಡುತ್ತಾನೆ, ಏಕೆಂದರೆ ಬಾಹುಬಲಿ ಚಿತ್ರದಲ್ಲಿ ಬಲ್ಲಾಳ ಹೇಗೆ ಕೋಣದ ಜೊತೆಗೆ ಹೋರಾಡಿ ಅದನ್ನು ನೆಲಕ್ಕೆ ಉರುಳಿಸುತ್ತಾನೆಯೊ ಹಾಗೆ ಈತನು ಸಹ ಅಲ್ಲಿದ್ದ ಗೂಳಿಯ ಜೊತೆಗೆ ಕಾದಾಟ ಮಾಡಿ ಅದನ್ನು ಸಹ ನೆಲಕ್ಕೆ ಉರುಳಿಸ ಬೇಕು ಎಂದು ಮನದಲ್ಲಿ ಯೋಚನೆ ಮಾಡಿ ಅದರ ಜೊತೆಗೆ ಹೊರಡಲು ಶುರು ಮಾಡುತ್ತಾನೆ. ಬಾಹುಬಲಿ ಇದೊಂದು ಚಿತ್ರ ಅಲ್ಲಿ ಗ್ರೀನ್ ಸ್ಕ್ರೀನ್ ಮುಖಾಂತರ ಶೂಟ್ ಮಾಡಲಾಗಿರುತ್ತದೆ. ಆದರೆ ಇಲ್ಲಿ ನಿಜವಾದ ಗೂಳಿಯ ಜೊತೆಗೆ ಹೋರಾಡುವದು ಎಂದರೆ ಎಂಥ ಕಷ್ಟದ ಕಾರ್ಯ ಎಂಬುದು ನಮ್ಮ ನಿಮ್ಮಲ್ಲರಿಗೂ ಗೊತ್ತೇ ಇದೆ.
ಈತ ಕುಡಿದ ಮತ್ತಿನಲ್ಲಿ ಮೊದಲಿಗೆ ಗೂಳಿಯ ಎರಡು ಕೊಂಬುಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಅದಕ್ಕೆ ಹಿಂದಕ್ಕೆ ತಳ್ಳಲು ಶುರು ಮಾಡುತ್ತಾನೆ. ಆಗ ಗೂಳಿ ಸಹ ಸುಮ್ಮನೆ ನಿಲ್ಲುತ್ತದೆ. ಆಗ ಈ ವ್ಯಕ್ತಿಗೆ ಗೂಳಿ ತನಗೆ ಹೆದರುತ್ತಿದೆ ಅಂದುಕೊಂಡು ಮೈಯಲ್ಲಿ ಇನ್ನಷ್ಟು ಜೋಶ್ ಬರುತ್ತದೆ. ತದನಂತರ ಈ ವ್ಯಕ್ತಿ ಕೊಂಬುಗಳನ್ನು ಹಿಡಿದು ನೆಲಕ್ಕೆ ತಳ್ಳಬೇಕು ಅನ್ನೋವಷ್ಟರಲ್ಲಿ ಗೂಳಿ ತನ್ನ ಶಕ್ತಿ ಪ್ರದರ್ಶನ ಮಾಡಿ ಈತನನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ಎತ್ತಿ ಬಿಸಾಡುತ್ತದೆ. ನಿಜಕ್ಕೂ ಆ ವ್ಯಕ್ತಿಯ ಒಂದೇ ಎಸೆತಕ್ಕೆ ನಶೆ ಇಳಿದಿರಬಹುದು ಅನಿಸುತ್ತೇ. ಈ ವಿಡಿಯೋ ನೋಡಿದಾಗ ನಿಮಗೆ ಗೊತ್ತಾಗುವದು.
ವಿಡಿಯೋ ನೋಡಿ.
View this post on Instagram