ಗುರುತು ಸಿಕ್ತಾ ಈ ಫೋಟೋದಲ್ಲಿ ಇರುವ ನಟಿ ಯಾರು ಅಂತ? ಈಗಿದ್ದಾರೆ ಇವರೇ ನ್ಯಾಷನಲ್ ಕ್ರಶ್!
ನಟ ನಟಿಯರು ಅಂದ ಮೇಲೆ ಅವರಿಗೆ ದೊಡ್ಡ ಅಭಿಮಾನಿಗಳ ಬಳಗ ಇದ್ದೇ ಇರುತ್ತದೆ. ಅಭಿಮಾನಿಗಳಿಗೂ ತಮ್ಮ ನೆಚ್ಚಿನ ನಟ ಅಥವಾ ನಟಿಯ ಜೀವನದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುವುದು ಇರುತ್ತದೆ. ಹಾಗೂ ತಮ್ಮ ನೆಚ್ಚಿನ ಐಕಾನ್ ಚಿಕ್ಕಂದಿನಲ್ಲಿ ಹೇಗಿದ್ದರು ಎಂಬುದನ್ನು ತಿಳಿದುಕೊಳ್ಳಬೇಕೆಂಬ ಹಂಬಲವೂ ಸಹ ಇರುತ್ತದೆ. ಅದರಲ್ಲೂ ತಾವು ಬಯಸುವ ಅಥವಾ ತುಂಬಾ ಇಷ್ಟವಾದ ನಾಯಕ, ನಾಯಕಿಯ ಫೋಟೋ ಏನಾದರೂ ಸಿಕ್ಕರೆ ಆಯಿತು ಅಭಿಮಾನಿಗಳ ಸಂತೋಷಕ್ಕೆ ಸಿಮೆಯೇ ಇರುವದಿಲ್ಲ. ಇಂದಿನ ಲೇಖನದಲ್ಲಿ ಒಂದು ಸುಪ್ರಸಿದ್ಧ ನಟಿಯ ಫೋಟೋ ನಿಮಗಾಗಿ ತಂದಿದ್ದೇವೆ. ನೀವು ಗುರುತಿಸಬಲ್ಲಿರಾ? ಇವತ್ತು ಈ ನಟಿ ನ್ಯಾಷನಲ್ ಕ್ರಶ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.
ಈ ಫೋಟೋ ನೋಡಿದ ಅನೇಕರು ತಮ್ಮ ಅಂದಾಜು ವ್ಯಕ್ತ ಮಾಡುತ್ತಿದ್ದಾರೆ. ನೀವು ಪ್ರಯತ್ನಿಸಿ ಯಾರು ಎಂದು ಗುರುತಿಸಲು. ಆದರೆ ನಿಮಗೆ ಒಂದು ವೇಳೆ ಸಾಧ್ಯವಾಗದೆ ಇದ್ದರೆ ಉತ್ತರ ರಶ್ಮಿಕಾ ಮಂದಣ್ಣ.

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ರಶ್ಮಿಕಾ ಅವರ ಈ ಫೋಟೋ ತುಂಬಾ ವೈರಲ್ ಆಗುತ್ತಿದೆ. ರಷ್ಮಿಕಾ ಅವರು ಈ ಫೋಟೋದಲ್ಲಿ ಕೆಂಪು ಬಣ್ಣದ ಟಾಪ್ ತೊಟ್ಟುಕೊಂಡು ತುಂಬಾ ಕ್ಯೂಟ್ ಆಗಿ ಕಂಡು ಬರುತ್ತಿದ್ದಾರೆ.
ಇವರು ಕನ್ನಡದ ಅಷ್ಟೇ ಅಲ್ಲ ದಕ್ಷಿಣದ ಪ್ರಸಿದ್ಧ ನಟಿ ಹಾಗೂ ಮಾಡೆಲ್ ಸಹ ಆಗಿದ್ದಾರೆ. ಅನೇಕ ಜನಪ್ರಿಯ ಚಲನಚಿತ್ರಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಇದೇ ಕಾರಣಕ್ಕೆ ಇವರಿಗೆ ಕೃಶ್ ಆಫ್ ಕರ್ನಾಟಕ ಎಂತಲೂ ಕರೆಯುತ್ತಿದ್ದರು. ಆದರೆ ಈಗ ಅವರು ಬರೀ ಕರ್ನಾಟಕದ ಅಷ್ಟೇ ಅಲ್ಲ ಇಡೀ ದೇಶದ ಕೃಶ್ ಆಗಿದ್ದಾರೆ.
ರಶ್ಮಿಕಾ ಅವರ ಜನ್ಮ ಎಪ್ರಿಲ್ 5 ರಂದು ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಆಯಿತು. ಮೊದಲ ಹಂತದ ಶಿಕ್ಷಣವನ್ನು ಇಲ್ಲಿಯೇ ಪೂರ್ಣಗೊಳಿಸಿದ ನಂತರ ಹೆಚ್ಚುವರಿ ಶಿಕ್ಷಣವನ್ನು ಮೈಸೂರ್ ಯೂನಿವರ್ಸಿಟಿಯಲ್ಲಿ ಪೂರ್ಣಗೊಳಿಸಿದರು. ಇವರು ಕಲೆ, ಪತ್ರಿಕೋದ್ಯಮ, ಇಂಗ್ಲಿಷ್, ಮನೋವಿಜ್ಞಾನದಂತಹ ವಿವಿಧ ಕೋರ್ಸ್‌ಗಳಲ್ಲಿ ಪದವಿ ಪಡೆದಿದ್ದಾರೆ. ಹಾಗಾಗಿ ಈ ನಟಿ ಪ್ರಸಿದ್ಧ ಕಲಾವಿದೆ ಮಾತ್ರವಲ್ಲದೆ ಉನ್ನತ ಶಿಕ್ಷಣ ಪಡೆದ ನಟಿಯೂ ಹೌದು.