Articles

Video: ಮೊಟ್ಟೆ ತಾಜಾ ಇದೆಯೋ ಇಲ್ಲ ಹಾಳಾಗಿದೆಯೋ ಗುರುತಿಸುವುದು ಹೇಗೆ? ಸರಕಾರ ತಿಳಿಸಿದ ಈ ಸರಳ ‘ಟ್ರಿಕ್’ ಒಮ್ಮೆ ನೋಡಿ

ಶಕ್ತಿವರ್ಧಕ ಆಹಾರಗಳಲ್ಲಿ ಮೊಟ್ಟೆ ಯಾವತ್ತೂ ಮೇಲಿನ ಸ್ಥಾನದಲ್ಲಿರುವುದು. ಅನೇಕ ಜೀವನಸತ್ವಗಳನ್ನು ಹೊಂದಿರುವ ಇದನ್ನು ಬೇಯಿಸಿ, ಆಮ್ಲೆಟ್ ಫ್ರಾಯ ಮಾಡಿ ಅಥವಾ ಯಾವುದೇ ಪ್ರಕ್ರಿಯೆ ಮಾಡದೆ ಇದ್ದ ರೀತಿಯಲ್ಲೇ ಒಡೆದು ಸೇವಿಸಿದರೂ ದೇಹಕ್ಕೆ ಲಾಭವನ್ನು ನೀಡುತ್ತದೆ. ಕೆಲವೊಮ್ಮೆ ಅಂಗಡಿಯಿಂದ ನಾವು ಹೆಚ್ಚು ಕಡಿಮೆ ಖರೀದಿಸಿದ ಮೊಟ್ಟೆಗಳನ್ನು ಎಲ್ಲವೂ ಒಮ್ಮೆಲೆ ತಿನ್ನಲು ಸಾಧ್ಯವಾಗುವುದಿಲ್ಲ. ಆಗ ಹಾಗೆಯೇ ಬಹಳ ದಿನಗಳಿಂದ ಮನೆಯಲ್ಲಿ ಉಳಿಯುತ್ತವೆ, ಇಲ್ಲವೆ ಅಂಗಡಿಯಲ್ಲಿ ಇಟ್ಟ ಮೊಟ್ಟೆಗಳು ಎಂದಿನಿಂದ ಮಾರಾಟಕ್ಕೆ ಇಟ್ಟಿರುತ್ತಾರೆ ಅದರ ಬಗ್ಗೆಯೂ ಗೊತ್ತಾಗುವುದಿಲ್ಲ.

ಈ ಎಲ್ಲ ಕಾರಣಕ್ಕೆ MyGovIndia ಟ್ವೀಟರ್ ಅಕೌಂಟ್ ನಿಂದ ಮೊಟ್ಟೆಗಳು ತಿನ್ನಲು ಯೋಗ್ಯವಾಗಿವೆಯೋ ಇಲ್ಲ ಎಂಬುದರ ಬಗ್ಗೆ ತಿಳಿದುಕೊಳ್ಳಲು ಸರಳ ಉಪಾಯವನ್ನು ಹೇಳಿದ್ದಾರೆ.

ಫ್ರಿಜ್ ನಲ್ಲಿಟ್ಟ ಮೊಟ್ಟೆಗಳು ಹೆಚ್ಚು ದಿವಸಗಳವರೆಗೆ ಚೆನ್ನಾಗಿ ಇರುತ್ತವೆ. ಆದರೆ ಮಾರ್ಕೆಟ್ಟಿನಿಂದ ತಂದ ಮೊಟ್ಟೆಗಳು ಚೆನ್ನಾಗಿರುವುದರ ಬಗ್ಗೆ ತಿಳಿಯಲು ಸಾಧ್ಯವಾಗುವುದಿಲ್ಲ. ಅಂಥ ಸಮಯದಲ್ಲಿ ನಶಿಸಿದ ಅಥವಾ ಕೆಟ್ಟ ಮೊಟ್ಟೆಗಳನ್ನು ತಿಳಿಯುವದು ಹೇಗೆ ನೋಡಿ.

MyGovIndia ಟ್ವೀಟರ್ ಮುಖಾಂತರ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ನೀರಿನಿಂದ ತುಂಬಿದ ಗಾಜಿನ ಗ್ಲಾಸ್ ತೆಗೆದುಕೊಳ್ಳಿ. ಒಂದು ಮೊಟ್ಟೆಯನ್ನು ತೆಗೆದುಕೊಂಡು ಆ ಗ್ಲಾಸಿನಲ್ಲಿ ಹಾಕಿಬಿಡಿ. ಗ್ಲಾಸ್ ಗಾಜಿನದಿರಬೇಕು ಕಾರಣ ಪರೀಕ್ಷಿಸಲು ಸಹಾಯವಾಗುತ್ತದೆ.

ವಿಡಿಯೋ ನೋಡಿ

ಈ ಪರೀಕ್ಷೆ ಮಾಡುವಾಗ ಮೊಟ್ಟೆ ತಳದಲ್ಲಿ ಹೋಗಿ ಅಡ್ಡಲಾಗಿ ಕೂಡಬೇಕು. ಒಂದು ವೇಳೆ ಮೊಟ್ಟೆ ಕೆಟ್ಟಿದ್ದರೆ ಅದು ಗ್ಲಾಸಿನ ಬುಡದವರೆಗೆ ಹೋಗದೆ ನೀರಿನ ಮೇಲೆ ತೇಲುತ್ತದೆ.

MyGovIndia ನ ಟ್ವಿಟರ್ ಹ್ಯಾಂಡಲ್ ನಿಂದ ನಾಗರೀಕರ ಉತ್ತಮ ಆರೋಗ್ಯಕ್ಕಾಗಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಕಾರಣ ಎಲ್ಲರಿಗೂ ಒಳ್ಳೆಯ ಮತ್ತು ನಶಿಸಿದ ಮೊಟ್ಟೆಗಳಲ್ಲಿ ವ್ಯತ್ಯಾಸ ತಿಳಿದುಕೊಳ್ಳಲು ಸಹಾಯ ವಾಗಬೇಕೆಂದು.

Leave a Comment

Your email address will not be published. Required fields are marked *