Articles

ಜಗತ್ತಿನಿಂದ ಶೀಘ್ರದಲ್ಲಿಯೇ ಹದ್ದುಪಾರು ಆಗಲಿದೆ ಕ್ಯಾನ್ಸರ್! ಔಷಧಿ ಟೆಸ್ಟಿಂಗ್ ನಲ್ಲಿ ಎಲ್ಲ ರೋಗಿಗಳೂ ಗುಣಮುಖ; ಎಷ್ಟಿರಲಿದೆ ಬೆಲೆ?

ಜಗತ್ತು ಆದಷ್ಟು ಶೀಘ್ರದಲ್ಲಿಯೇ ಭಯಾನಕವಾದ ಕ್ಯಾನ್ಸರ್ ರೋಗದಿಂದ ಮುಕ್ತವಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಅಮೆರಿಕಾದ ಮ್ಯಾನ್ಹ್ಯಾಟನ್ ನ ಮೆಮೋರಿಯಲ್ ಸ್ಲೋನ್ ಕೇಟರಿಂಗ್ ಕ್ಯಾನ್ಸರ್ ಸೆಂಟರ್ನಲ್ಲಿ ಮಾಡಿದ ಔಷಧಿ ಪರೀಕ್ಷೆಯಲ್ಲಿ ಕ್ಯಾನ್ಸರ್ ಪೇಷಂಟ್ ಗಳು 100% ಗುಣಮುಖರಾಗಿದ್ದಾರೆ.

ಈ ಪರೀಕ್ಷೆಯನ್ನು ಚಿಕ್ಕ ಸ್ವರೂಪದಲ್ಲಿ ಮಾಡಲಾಗಿದ್ದು ನೋವಿನಿಂದ ಕೂಡಿದ ಕಿಮೊತೆರಪಿ ಹಾಗೂ ಸರ್ಜರಿ ಕಾಯಂ ಆಗಿ ಬಂದ್ ಆಗಲಿದೆ.

ದ ನ್ಯೂಯಾರ್ಕ ಟೈಮ್ ನೀಡಿದ ವರದಿಯ ಪ್ರಕಾರ, ಈ ಔಷಧಿಯನ್ನು (ಡೋಸ್ಟರ್ ಲಿಮೈಬ್) 18 ರೆಕ್ಟಲ್ ಕ್ಯಾನ್ಸರ್ ರೋಗಿಗಳಿಗೆ ನೀಡಲಾಗಿತ್ತು. ತದನಂತರ ಅವರ ಬಾಡಿ ಟೆಸ್ಟಿಂಗ್, ಎಂಡೋಸ್ಕೋಪಿ, ಪಾಜಿಟ್ರಾನ್ ಎಮಿಷನ್ ಟ್ರೋಮೋಗ್ರಫಿ, (PET) ಇವೆಲ್ಲವುಗಳು ಎಂ ಆರ್ ಐ ಸ್ಕ್ಯಾನ್ ನಲ್ಲಿ ಕ್ಯಾನ್ಸರ್ ರೋಗವು ಕಂಡುಬರದ ಕಾರಣ ನೂರಕ್ಕೆ ನೂರು ಪ್ರತಿಶತ ಕಡಿಮೆಯಾಗಿದೆಯೆಂದು ತಿಳಿಯಲಾಗಿದೆ.

ಕ್ಯಾಲಿಫೋರ್ನಿಯ ಯುನಿವರ್ಸಿಟಿ ಸನ್ ಫ್ರನ್ಸಿಸ್ಕೋ ನಲ್ಲಿ ಕೋಲೊರೆಕ್ಟಲ್ ಕ್ಯಾನ್ಸರ್ ತಜ್ಞರಾದ ಡಾಕ್ಟರ್ ಎಲೆನ್ P ವೇನುಕ್ ಇವರು ಕ್ಯಾನ್ಸರ್ ಅಧ್ಯಯನ ಮಾಡುವ ತಂಡದಲ್ಲಿ ಇರಲಿಲ್ಲ. ಆದರೂ ಇವರು ಹೇಳುವ ಪ್ರಕಾರ, ‘ಹೌದು ಇದು ನಿಜ, ಈ ಔಷಧಿ ನೀಡಿದ ಕ್ಯಾನ್ಸರ್ ರೋಗಿಗಳಲ್ಲಿ ನಂತರದ ಸಮಯದಲ್ಲಿ ಯಾವುದೇ ರೀತಿಯ ಕ್ಯಾನ್ಸರ್ ಇರುವ ಲಕ್ಷಣವೇ ಕಂಡುಬಂದಿಲ್ಲ. ಹೀಗಾಗಿ ಅದು ದೇಹದಿಂದ ಸಂಪೂರ್ಣವಾಗಿ ಕಡಿಮೆಯಾಗಿದೆ’ ಎಂದಿದ್ದಾರೆ.

ಈ ಔಷಧಿ ಹೇಗೆ ಕೆಲಸ ಮಾಡುತ್ತದೆ?

ಕ್ಯಾನ್ಸರ್ ರೋಗಿಗಳಿಗೆ ಆರು ತಿಂಗಳುಗಳಲ್ಲಿ ಪ್ರತಿ ಮೂರು ವಾರಕ್ಕೆ ಡೋಸ್ಟರ್ ಲಿಮೈಬ್ ಔಷಧಿಯನ್ನು ನೀಡಲಾಗುತ್ತದೆ. ಔಷಧಿ ನೀಡುವ ಉದ್ದೇಶ ಕ್ಯಾನ್ಸರ್ ಕೋಶಗಳನ್ನು ಹೈಲೈಟ್ ಮಾಡುವ ಸಲುವಾಗಿ ಆಗಿರುತ್ತದೆ. ಔಷಧೀಯ ಮುಖ್ಯ ಉದ್ದೇಶ ದೇಹದ ರೋಗ ನಿರೋಧಕ ಶಕ್ತಿಯನ್ನು ನೈಸರ್ಗಿಕ ರೀತಿಯಲ್ಲಿ ಹೆಚ್ಚಿಸುವುದು ಮತ್ತು ಗಡ್ಡೆಗೆ ನಷ್ಟ ಮಾಡುವಂತಹ ಶಕ್ತಿ ನೀಡುವುದು ಆಗಿರುತ್ತದೆ.

ಉಪಚಾರಕ್ಕೆ ಬೇಕಾಗುವ ಹಣ…

ಒಂದು ವೇಳೆ ಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಉಪಚಾರದ ಸಲುವಾಗಿ ಔಷಧಿಗೆ ಮಂಜೂರಿ ಸಿಕ್ಕರೆ ಪ್ರಸ್ತುತ ಔಷಧಿಯು ಅಷ್ಟೊಂದು ಅಗ್ಗವಾಗಿಲ್ಲ. ಏಕೆಂದರೆ ಇದರ ಟೆಸ್ಟಿಂಗ್ ಡೋಸ್ ನ ಬೆಲೆ 11000 ಸಾವಿರ ಅಮೆರಿಕನ್ ಡಾಲರ್ ಅಂದರೆ ಸುಮಾರು ಭಾರತೀಯ ರೂಪಾಯಿಗಳಲ್ಲಿ 8.5 ಲಕ್ಷ ರೂಪಾಯಿಗಳ ಆಗುತ್ತವೆ.

Leave a Comment

Your email address will not be published. Required fields are marked *