Articles

ತನ್ನ ಮದುವೆಯಲ್ಲಿಯೇ ಸಖತ್ ಡಾನ್ಸ್ ಮಾಡಿದ ಮದುಮಗಳು..! ನೋಡುವವರು ಬಿಟ್ಟ ಕಣ್ಣುಗಳಿಂದ ನೋಡುತ್ತಲೇ ನಿಂತರು…

ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಸಂದರ್ಭದಲ್ಲಿ ನಡೆದ ವಿವಿಧ ಘಟನೆಗಳ ಅನೇಕ ವಿಡಿಯೋಗಳು ವೈರಲ್ ಆಗಿದ್ದನ್ನು ನೀವು ನೋಡಿರಬಹುದು. ಈಗ ಮದುವೆ ಸಂದರ್ಭದಲ್ಲಿಯ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಮದುಮಗಳ ಡ್ಯಾನ್ಸ್ ನೋಡಿ ತುಂಬಾ ಸೊಗಸಾಗಿದೆ. ಸಾಕಷ್ಟು ಜನರು ಈ ವಿಡಿಯೋವನ್ನು ನೋಡಿ ಆನಂದ ಪಡುತ್ತಿದ್ದಾರೆ.

ಇತ್ತಿಚೆಗೆ ಮದುವೆಯಲ್ಲಿ ವರ ವಧು ತಾವೇ ಇಬ್ಬರು ಡಾನ್ಸ್ ಮಾಡುವುದು ಸಾಮಾನ್ಯವಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಪದ್ಧತಿ ಮೇಲಿಂದ ಮೇಲೆ ನೋಡಲು ಸಿಗುತ್ತಿದೆ. ಹೀಗಾಗಿ ಮದುವೆಯಲ್ಲಿ ಇದೊಂದು ಪದ್ಧತಿಯೇ ಆಗಿ ಬಿಟ್ಟಿದೆ. ಕೆಲವೊಂದು ಸಲ ಸ್ವಂತದ ಮದುವೆಯ ಮಂಟಪದಲ್ಲಿ ಬರೀ ಒಂದೇ ಸ್ಥಳದಲ್ಲಿ ಮದುಮಕ್ಕಳು ಕುಳಿತು ತುಂಬಾ ಬೇಸರಿಸಿರುತ್ತಾರೆ. ಕಲ್ಯಾಣ ಮಂಟಪದಲ್ಲಿ ಒಂದೇ ಕಡೆಗೆ ಕುಳಿತುಕೊಳ್ಳುವುದಕ್ಕಿಂತ ತಮ್ಮ ಮದುವೆಯ ಸುಂದರವಾದ ಕ್ಷಣಗಳ ಆನಂದ್ ಪಡೆದುಕೊಳ್ಳಲು ಸ್ವತಃ ಡ್ಯಾನ್ಸ್ ಮಾಡುವುದು ಒಂದು ಒಳ್ಳೆಯ ನೆಪವಾಗಿದೆ. ಆದರೆ ಈ ವಿಡಿಯೋದಲ್ಲಿ ವಧು ಒಬ್ಬಳೇ ಡ್ಯಾನ್ಸ್ ಮಾಡುತ್ತಿದ್ದಾಳೆ. ವರ ಮಾತ್ರ ಆಕೆಯ ಡ್ಯಾನ್ಸ್ ನೋಡಿ ಖುಷಿ ಪಡುತ್ತಿದ್ದಾನೆ.

ಈ ವೈರಲ್ ವಿಡಿಯೋದಲ್ಲಿ ವಧು-ವರ ಇಬ್ಬರು ಜೊತೆಜೊತೆಯಾಗಿ ನಡೆಯುತ್ತಿದ್ದಾರೆ. ಅವರ ಜೊತೆ ಅನೇಕ ಮಿತ್ರರು ಸಹ ಜೊತೆಯಲ್ಲಿದ್ದಾರೆ. ವರನ ಕೆಲವು ಮಿತ್ರರು ಡ್ಯಾನ್ಸ್ ಮಾಡುತ್ತಿದ್ದಾರೆ. ಅವರಿಗೆ ನೋಡಿ ವಧುವಿಗೆ ತನ್ನನ್ನು ತಾನು ಕಂಟ್ರೋಲ್ ಮಾಡಲು ಸಾಧ್ಯವಾಗದೆ ಅವರ ಜೊತೆಗೆ ತಾನು ಸಹ ಸ್ಟೆಪ್ಸ್ ಹಾಕಲು ಶುರು ಮಾಡುತ್ತಾಳೆ. ಮದುಮಗಳ ಡ್ಯಾನ್ಸ್ ನೋಡಿ ಅಲ್ಲಿದ್ದವರೆಲ್ಲಾ ಶಾಕ್ ಆಗುತ್ತಾರೆ. ತನ್ನ ಪತ್ನಿ ಆಗುವವಳು ಡ್ಯಾನ್ಸ್ ಮಾಡುತ್ತಿದ್ದುದನ್ನು ಕಂಡು ವರನು ಸಹ ಮನದಲ್ಲಿಯೇ ಖುಷಿಪಡುತ್ತಾನೆ. ಈ ವಿಡಿಯೋವನ್ನು ಇಲ್ಲಿಯವರೆಗೆ 22 ಸಾವಿರ ನೇಟಿಜನ್ಸ್ ಗಳು ನೋಡಿ ತಮ್ಮ ಪ್ರತಿಕ್ರಿಯೆಯನ್ನು ತಿಳಿಸಿದ್ದಾರೆ.

ವಿಡಿಯೋ ನೋಡಿ

Leave a Comment

Your email address will not be published. Required fields are marked *