Articles

ತನ್ನ ಮರಿಗಳಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಬಾತುಕೋಳಿಯ ವೀಡಿಯೋ ನೋಡಿ ಕಣ್ಣೀರಿಟ್ಟ ನೆಟ್ಟಿಗರು! Viral Video

ಈ ಜಗತ್ತಿನಲ್ಲಿ ನಿ ಷ್ಕಲ್ಮಶವಾದುದು, ನಿಸ್ವಾರ್ಥವಾದುದು ಹಾಗೂ ಪ್ರತಿಫಲವನ್ನು ಅಪೇಕ್ಷೆ ಮಾಡದಿರುವುದು ಎಂದರೆ ಅದು ತಾಯಿ ಪ್ರೀತಿ ಮಾತ್ರ. ತಾಯಿಯ ಮಮತೆಗೆ, ಆಕೆಯ ಪ್ರೀತಿ ವಾತ್ಸಲ್ಯಕ್ಕೆ ಹಾಗೂ ತ್ಯಾಗಕ್ಕೆ ಸರಿಸಮಾನವಾದುದು ಈ ಜಗದಲ್ಲಿ ಇನ್ನಾವುದೂ ಇಲ್ಲ. ಅದಕ್ಕೆ ತಾಯಿಗಿಂತ ಬಂಧುವಿಲ್ಲ ಹಾಗೂ ಉಪ್ಪಿಗಿಂತ ರುಚಿ ಇಲ್ಲ ಎಂದು ಹೇಳುವುದೂ ಉಂಟು. ಮಾತೃಪ್ರೇಮಕ್ಕೆ ಮಿಗಿಲಾದುದು ಇಡೀ ಜಗತ್ತಿನಲ್ಲಿ ಇನ್ನಾವುದೂ ಇಲ್ಲ ಎನ್ನುವುದಕ್ಕೆ ಅನೇಕ ಉದಾಹರಣೆಗಳು ನಮ್ಮ ಇತಿಹಾಸದ ಉದ್ದಕ್ಕೂ ಕೂಡಾ ಇದ್ದು, ಅವೆಲ್ಲಾ ಕೂಡಾ ಮಾತೃಪ್ರೇಮದ ಪ್ರಾಮುಖ್ಯತೆಯನ್ನು ತಿಳಿಸುವ ನಿದರ್ಶನಗಳೇ ಹೊರತು ಮತ್ತೇನೂ ಅಲ್ಲ ಎನ್ನಬಹುದು.

ಮಾತೃ ಪ್ರೇಮ ಎನ್ನುವುದು ಮನುಷ್ಯ ಮತ್ತು ಪ್ರಾಣಿ ಎನ್ನುವ ಬೇದ ಭಾವ ಇರುವುದಿಲ್ಲ. ಮನುಷ್ಯನು ಮಾತ್ರವೇ ಜಗತ್ತಿನ ಎಲ್ಲಾ ಜೀವಿಗಳಲ್ಲಿ ಕೂಡಾ ತಾಯಿ ತಾಯಿಯಾಗೇ ಇರುವಳು, ಆಕೆಯ ಪ್ರೀತಿಯಲ್ಲಿ ಹೆಚ್ಚು ಕಡಿಮೆ ಎನ್ನುವುದಿಲ್ಲ, ಬೇಧ ಭಾವ ಎನ್ನುವುದಿಲ್ಲ ಹಾಗೂ ಅದಕ್ಕೆ ಆದಿ ಅಂತ್ಯ ಎನ್ನುವುದಂತೂ ಮೊದಲೇ ಇಲ್ಲ. ನಾವು ನೋಡಿದ್ದೇವೆ ಅಲ್ಲವೇ? ಕೋತಿಗಳು ತಮ್ಮ ಮರಿಗಳನ್ನು ಸದಾ ಎತ್ತಿಕೊಂಡು ತಿರುಗುತ್ತವೆ, ಕಾಂಗರೂ ಗಳು ತಮ್ಮ ಹೊಟ್ಟೆಯ ಮೇಲೆ ಇರುವ ಚೀಲಗಳಂತಹ ಭಾಗದಲ್ಲಿ ಮರಿಗಳನ್ನು ಭದ್ರವಾಗಿ ಇಟ್ಟುಕೊಂಡರೆ, ಕೋಳಿಗಳು ತಮ್ಮ ಮರಿಗಳನ್ನು ಹದ್ದುಗಳಿಂದ ರಕ್ಷಣೆ ಮಾಡಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತವೆ.

ಇಂತಹುದೇ ಒಂದು ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಇದನ್ನು ನೋಡಿದ ಪ್ರತಿಯೊಬ್ಬರೂ ಕೂಡಾ ಮಾತೃ ಪ್ರೇಮವನ್ನು ಮನತುಂಬಿ ಹಾಡಿ ಹೊಗಳಿದ್ದರೆ‌ ಕೆಲವರು ಇದನ್ನು ನೋಡಿ ಭಾವುಕರು ಆಗಿದ್ದಾರೆ. ಆದರೆ ಅದೇ ಸಮಯದಲ್ಲಿ ಕೆಲವರು ಪ್ರಕೃತಿಯ ನಿಯಮವನ್ನು ಯಾರಿಂದಲೂ ಕೂಡಾ ತಪ್ಪಿಸಲು ಸಾಧ್ಯವಿಲ್ಲ ಎಂದು ಕೂಡಾ ಹೇಳಿದ್ದಾರೆ. ಇಷ್ಟಕ್ಕೂ ವೈರಲ್ ಆಗಿರುವ ಆ ವೀಡಿಯೋ ಏನು ಎನ್ನುವ ವಿಚಾರಕ್ಕೆ ಬರುವುದಾದರೆ ಹೇಗೆ ಒಂದು ತಾಯಿ ಹಕ್ಕಿ ತನ್ನ ಮರಿಗಳಿಗಾಗಿ ತನ್ನ ಪ್ರಾಣವನ್ನೇ ಪಣಕ್ಕೆ ಇಡುತ್ತದೆ ಎನ್ನುವುದನ್ನು ನಾವು ಈ ವೀಡಿಯೋದಲ್ಲಿ ನೋಡಬಹುದಾಗಿದೆ.

ವೀಡಿಯೋದಲ್ಲಿ ಬಾತುಕೋಳಿಯೊಂದು ತನ್ನ ಮರಿಗಳೊಂದಿಗೆ ಗೂಡಿನಲ್ಲಿ ಇರುವಾಗ ಅನಿರೀಕ್ಷಿತ ಎನ್ನುವಂತೆ ಒಂದು ಭಾರೀ ಗಾತ್ರದ ಹೆಬ್ಬಾವು ಅಲ್ಲಿಗೆ ಧಾ ಳಿ ಇಡುತ್ತದೆ. ಹೆಬ್ಬಾವು ಆಹಾರದ ಹುಡುಕಾಟದಲ್ಲಿ ಅಲ್ಲಿಗೆ ಬಂದಿರುತ್ತದೆ. ಆದರೆ ಅಪಾಯವನ್ನು ಅರಿತ ಬಾತುಕೋಳಿ ತಾನು ಓಡಿ ಹೋಗದೇ ತನ್ನ ಮರಿಗಳನ್ನೆಲ್ಲಾ ಗೂಡಿನಿಂದ ಹೊರಗೆ ಹೋಗಲು ಬಿಟ್ಟು ತಾನು ಗೂಡಿನೊಳಗೇ ಉಳಿದು ಬಿಡುತ್ತದೆ‌. ಆಗ ಹೆಬ್ಬಾವು ಆ ತಾಯಿ ಬಾತುಕೋಳಿ ಯನ್ನು ಸಂಪೂರ್ಣವಾಗಿ ತನ್ನ ಆಹಾರವನ್ನಾಗಿ ಮಾಡಿಕೊಳ್ಳಲು ಅದನ್ನು ಸುತ್ತಿಕೊಳ್ಳುತ್ತಾ ಹೋಗುತ್ತದೆ, ಆ ತಾಯಿ ಬಾತುಕೋಳಿ ತನ್ನ ಮರಿಗಳಿಗಾಗಿ ತಾನು ಪ್ರಾಣ ನೀಡಲು ಕೂಡಾ ಹಿಂಜರಿಯದೆ ಅಲ್ಲೇ ಉಳಿದು ಬಿಡುತ್ತದೆ‌.

ವಿಡಿಯೋ ನೋಡಿ

ಹೀಗೆ ತನ್ನ ಮರಿಗಳ ಜೀವ ಉಳಿಸಲು ತಾಯಿ ಬಾತುಕೋಳಿ ಮಾಡಿದ ತ್ಯಾಗದ ಈ ವೀಡಿಯೋವನ್ನು ಈಗಾಗಲೇ 71 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಸಾವಿರಾರು ಜನ ಲೈಕ್ಸ್ ನೀಡಿದ್ದು ನೂರಾರು ಜನರು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಬಹುತೇಕ ಎಲ್ಲರೂ ಕೂಡಾ ಆ ದೃಶ್ಯವನ್ನು ವೀಡಿಯೋ ಮಾಡಿದ ವ್ಯಕ್ತಿಯನ್ನು ತೆಗಳುತ್ತಾ ಆತ ಬಾತುಕೋಳಿಯ ಪ್ರಾಣ ವನ್ನು ಉಳಿಸಬಹುದಿತ್ತು ಎಂದು ಕೂಡಾ ಹೇಳಿದ್ದಾರೆ. ಆದರೆ ಮತ್ತೆ ಕೆಲವರು ಇದೆಲ್ಲಾ ಪ್ರಕೃತಿಯ ನಿಯಮಗಳು ಅದರ ಮಧ್ಯೆ ಯಾರೂ ಕೂಡಾ ಕೈ ಹಾಕಿ ಬದಲಾಯಿಸಬಾರದು ಎಂದು ಕೂಡಾ ಹೇಳಿದ್ದಾರೆ.

Leave a Comment

Your email address will not be published. Required fields are marked *