Articles

ತೆವಳುತ್ತಾ ಸಾಗುತ್ತಿರುವ ಹೆಬ್ಬಾವಿನ ಮೇಲೆಯೇ ಕುಳಿತು ಸವಾರಿ ಮಾಡುತ್ತಿರುವ ‘ಕೆಚ್ಚೆದೆಯ ಕಪ್ಪೆ!’ ಜನರಂತಿದ್ದಾರೆ ‘ಖತರೋಂ ಕೆ ಖಿಲಾಡಿ!’

ಪ್ರಕೃತಿಯಲ್ಲಿ ಕೆಲವೊಮ್ಮೆ ನಡೆಯುವ ವಿಚಿತ್ರ ಘಟನೆಗಳು ವಿಸ್ಮಯದಂತೆ ಕಾಣುತ್ತವೆ. ಈ ವಿಸ್ಮಯಗಳನ್ನು ನೋಡುವ ಕಣ್ಣುಗಳಿಗೆ ಮತ್ತು ಅದನ್ನು ನೋಡಿ ಖುಷಿ ಪಡುವ ಮನಸ್ಸುಗಳಿಗೆ ಆ ವೀಡಿಯೋಗಳನ್ನು ಎಷ್ಟು ಸಲ ನೋಡಿದರೂ ಕೂಡಾ ಮತ್ತೆ ಮತ್ತೆ ನೋಡಬೇಕು, ನಮ್ಮವರಿಗೆ ಆ ವೀಡಿಯೋವನ್ನು ಹಂಚಿಕೊಳ್ಳಬೇಕು ಎನಿಸುತ್ತದೆ. ಹಾಗೆ ಹಂಚಿಕೊಂಡಾಗ ಸಹಜವಾಗಿಯೇ ಇಂತಹ ವೀಡಿಯೋಗಳು ಸಾಕಷ್ಟು ವೈರಲ್ ಕೂಡಾ ಆಗಿ ಬಿಡುತ್ತವೆ. ಸೋಶಿಯಲ್ ಮೀಡಿಯಾ ಗಳಲ್ಲಿ ಪ್ರತಿ ದಿನವೂ ಕೂಡಾ ಇಂತಹ ಅದೆಷ್ಟೋ ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಪ್ರತಿಯೊಂದು ವೀಡಿಯೋ ಕೂಡಾ ವಿಶೇಷವಾಗಿ ಇರುತ್ತದೆ.

ಹಾವು ಸಾಮಾನ್ಯವಾಗಿಯೇ ಕಪ್ಪೆಯೊಂದು ಕಂಡರೆ ಅದನ್ನು ತನ್ನ ಆಹಾರವಾಗಿ ನುಂಗುತ್ತದೆ. ಕಪ್ಪೆಗಳನ್ನು ನುಂಗಿರುವ ಹಾವುಗಳ ಫೋಟೋ ಹಾಗೂ ವೀಡಿಯೋಗಳನ್ನು ನಾವು ನೋಡಿಯೇ ಇರುತ್ತೇವೆ. ಇದು ಸಹಜ ಕೂಡಾ. ಆದರೆ ಅದಕ್ಕೆ ಭಿನ್ನವಾಗಿ ಕಪ್ಪೆಯೊಂದು ಹಾವಿನ ಮೈಮೇಲೆ ಕುಳಿತು ಸವಾರಿ ಮಾಡಿದರೆ ಹೇಗಿರುತ್ತದೆ? ಈ ವಿಷಯ ಕೇಳಿದರೆ ಏನು ಕಾಮೆಡಿ ಮಾಡ್ತಾ‌ ಇದ್ದೀರಾ? ಇಂತದ್ದು ಸಾಧ್ಯನಾ? ಅಂತ ನೀವು ಕೇಳಬಹುದು. ಆದರೆ ನಾವಿಲ್ಲಿ ಹೇಳೋಕೆ ಹೋಗ್ತಾ ಇರೋ ವೀಡಿಯೋದಲ್ಲಿ ಇಂತದ್ದೇ ಒಂದು ಅಪರೂಪದ ಸನ್ನಿವೇಶ ರೆಕಾರ್ಡ್ ಆಗಿದ್ದು ನೋಡುಗನ ಮನಸ್ಸನ್ನು ಸೆಳೆದಿದೆ.‌

ಆಗಸ್ಟ್ 17 ರಂದು ಟ್ವಿಟರ್ ಬಳಕೆದಾರರೊಬ್ಬರು ಒಂದು ವೀಡಿಯೋವನ್ನು ಹಂಚಿಕೊಂಡು ಅದಕ್ಕೆ ಸ್ನೇಕ್ ಟ್ಯಾಕ್ಸಿ ಎಂದು ಶೀರ್ಷಿಕೆಯನ್ನು ಹಾಕಿಕೊಂಡಿದ್ದಾರೆ. ಅವರ ಈ ಶೀರ್ಷಿಕೆಗೆ ತಕ್ಕಂತೆ ಇದೆ ವೀಡಿಯೋ. ವೀಡಿಯೋದಲ್ಲಿ ನೋಡಿದಾಗ ಕಾಡಿನ ದಾರಿಯಲ್ಲಿ ಹುಲ್ಲಿನ ಮೇಲೆ ಒಂದು ಹಾವು ತೆವಳುತ್ತಾ ಸಾಗುತ್ತಿದೆ. ಆ ಹಾವಿನ ಬೆನ್ನ ಮೇಲೆ ಕುಳಿತ ಕಪ್ಪೆಯೊಂದು ಒಂದು ಸೂಪರ್ ರೈಡ್ ನ ಅನುಭವ ಪಡೆಯುವಂತೆ ಮಜವಾಗಿ ಕುಳಿತು ಮುಂದೆ ಸಾಗುತ್ತಿದೆ. ಹಾವಿನ ಮೇಲೆ ಕುಳಿತು ಸವಾರಿ ಹೊರಟ ಕಪ್ಪೆಯ ಈ ವಿಶೇಷ ರೈಡ್ ನೋಡುಗನ ಮನಸ್ಸನ್ನು ಸೆಳೆದಿದೆ, ಪ್ರಕೃತಿಯ ನಡುವಿನ ಈ ಮೋಜಿನ ಸನ್ನಿವೇಶ ಅದ್ಭುತ ಎನಿಸಿದೆ‌.

ವಿಡಿಯೋ ನೋಡಿ…

ಇನ್ನು ವೀಡಿಯೋ ಶೇರ್ ಆದ ಕೆಲವೇ ದಿನಗಳಲ್ಲಿ ಕೋಟಿ ದಾಟಿದ ವೀಕ್ಷಣೆಯನ್ನು ಪಡೆದಿದೆ ಈ ಸೂಪರ್ ವೀಡಿಯೋ. ಈಗಾಗಲೇ 1.20 ಲಕ್ಷ ರೀಟ್ವೀಟ್ ಗಳನ್ನು ಪಡೆದಿದ್ದರೆ, ನಾಲ್ಕು ಲಕ್ಷ ಮೀರಿದ ಲೈಕ್ ಗಳನ್ನು ಪಡೆದುಕೊಂಡಿದೆ. ವೀಡಿಯೋ ನೋಡಿದ ನೆಟ್ಟಿಗರು ಕೂಡಾ ವಾವ್ ವಾವ್ ಎಂದು ಉದ್ಗಾರವನ್ನು ತೆಗೆದಿದ್ದಾರೆ. ಪ್ರತಿಕ್ರಿಯೆಗಳ ಮಹಾಪೂರವೇ ಅಲ್ಲಿ ಹರಿದು ಬರುತ್ತಿದೆ. ಒಬ್ಬ ಟ್ವಿಟರ್ ಬಳಕೆದಾರರು ಇದು ತುಂಬಾ ಚೆನ್ನಾಗಿದೆ. ಕಪ್ಪೆಯೊಂಸು ಉಚಿತ ಸವಾರಿ ಪಡೆಯುತ್ತಿರುವುದು ಮಾತ್ರವಲ್ಲ, ನನಗೆ ತಿಳಿದ ಮಟ್ಟಿಗೆ ಹಾವುಗಳು ಕಪ್ಪೆಗಳನ್ನು ತಿನ್ನಲು ಇಷ್ಟಪಡುತ್ತವೆ. ಆದರೆ ಈ ಕಪ್ಪೆ ನಿಜವಾದ ಡೇರ್ ಡೆವಿಲ್ ಆಗಿದೆ ಎಂದಿದ್ದಾರೆ.‌

Leave a Comment

Your email address will not be published. Required fields are marked *