Articles

ನಿಮಗೆ ಗೊತ್ತಾ? ಆನೆಗಳಿಗೆ ಚಿಕ್ಕ ಜಂಪ್ ಸಹ ಮಾಡಲು ಬರುವದಿಲ್ಲ! ಆಗ ಆನೆಗಳೇನು ಮಾಡುತ್ತವೆ? ನೋಡಿ ಈ ತಮಾಷೆಯ ವಿಡಿಯೋ…

ನಿಸರ್ಗ ಎಲ್ಲ ಪ್ರಾಣಿಗಳಿಗೆ ಒಂದೊಂದು ಶಕ್ತಿ ಕೊಟ್ಟಂತೆ ಜೊತೆಗೆ ಒಂದೊಂದು ವೀಕ್ ಪಾಯಿಂಟ್ ಸಹ ನೀಡಿದೆ. ಈಗ ಭಾರಿ ಗಾತ್ರದ ದೇಹವನ್ನು ಹೊಂದಿದ ಆನೆಯನ್ನೇ ತೆಗೆದುಕೊಳ್ಳಿ. ಈ ಪ್ರಾಣಿ ಅದೆಷ್ಟು ದೇಹದಿಂದ ದೊಡ್ಡ ಕಾಯವನ್ನು ಹೊಂದಿದೆ, ಅಷ್ಟೇ ಇದಕ್ಕೆ ಚಿಕ್ಕ ಪುಟ್ಟ ದಿನ್ನೆಗಳು ಅಥವಾ ಸಣ್ಣ ಕೊರಕಲುಗಳು ದಾರಿಯಲ್ಲಿ ಅಡ್ಡ ಬಂದರೆ ಅವುಗಳನ್ನು ದಾಟುವುದು ತುಂಬಾ ಕಷ್ಟವಾಗಿ ಬಿಡುತ್ತದೆ. ಆದರೆ ಆನೆಗಳು ಈ ರೀತಿಯ ಅಡತಡೆಗಳನ್ನು ಹೇಗೆ ಪಾರು ಮಾಡುತ್ತವೆ ಎಂಬುದನ್ನು ತೋರಿಸುವ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ಪ್ರಾಣಿಪ್ರಿಯರಿಗೆ ಅದರಲ್ಲೂ ವಿಶೇಷವಾಗಿ ಆನೆಗಳನ್ನು ಪ್ರೀತಿಸುವ ನೆಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುವುದು. ಕಾರಣ ಈ ವಿಡಿಯೋ ನೋಡಲು ತುಂಬಾ ತಮಾಷೆಯಿಂದ ಕೂಡಿದೆ.

ಪ್ರಸ್ತುತ ವಿಡಿಯೋ ಕೀನ್ಯಾ ಕಾಡಿನಿಂದ ಶೂಟ್ ಮಾಡಲಾಗಿದೆ. ಈ ದೃಶ್ಯದಲ್ಲಿ ಕಂಡು ಬರುವ ಹಾಗೆ ಅನೇಕ ಆನೆಗಳು ಕಾಡಿನಲ್ಲಿ ಸುತ್ತಾಡುತ್ತಿವೆ. ಅದರಲ್ಲಿ ಈ ಎರಡು ಆನೆಗಳಿಗೆ ಪುಟ್ಟ ದಿನ್ನೆ ಇಳಿದು ಕೆಳಗೆ ಬರಬೇಕಾಗಿದೆ. ಆನೆಗಳು ಮೇರು ಕಾಯ ಹೊಂದಿರುವ ಕಾರಣದಿಂದಾಗಿ ಅವುಗಳಿಗೆ ಪುಟ್ಟ ದಿನ್ನೆ ಅಥವಾ ಚಿಕ್ಕ ಕೊರಕಲು ಸಹ ಜಿಗಿಯಲು ಬರುವದೇ ಇಲ್ಲ. ಅದಕ್ಕಾಗಿ ಆನೆಗಳು ತಮ್ಮದೇಯಾದ ಒಂದು ಉಪಾಯವನ್ನು ಮಾಡಿಕೊಂಡಿವೆ. ಆ ಉಪಾಯವನ್ನು ನೀವೇ ನೋಡಿ. ನಿಜಕ್ಕೂ ಇದು ತುಂಬಾ ತಮಾಷೆಯಿಂದ ಕೂಡಿದೆ.

ವಿಡಿಯೋ ನೋಡಿ

ಈ ವಿಡಿಯೋ ತುಣುಕನ್ನು wonder of science ಹೆಸರಿನ ಅಕೌಂಟ್ ನಿಂದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 1.5 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದು 30 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಜೊತೆಗೆ ಸಾವಿರಾರು ಜನರು ರೀಟ್ವಿಟ್ ಮಾಡಿದ್ದಾರೆ.

Leave a Comment

Your email address will not be published. Required fields are marked *