Articles

ಪುಟ್ಟ ಆಮೆಯ ನಾಯಿಯ ಜೊತೆಗೆ ಕಿರಿಕ್! ಆಮೆಯ ದಾದಾಗಿರಿಗೆ ನೇಟಿಜನ್ಸ್ ಫಿದಾ! ನೋಡಿ ವೈರಲ್ ವಿಡಿಯೋದಲ್ಲಿ.

ಸೋಶಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೋಗಳು ಜನರಿಗೆ ತುಂಬಾ ಇಷ್ಟವಾಗುತ್ತವೆ. ಅದರಲ್ಲೂ ವಿವಿಧ ಪ್ರಾಣಿಗಳು ತಮ್ಮ ಬುದ್ಧಿಶಕ್ತಿಯನ್ನು ತೋರಿಸುವ ವಿಡಿಯೋಗಳಂತೂ ನೋಡುಗರಿಗೆ ತುಂಬಾ ಖುಷಿ ನೀಡುತ್ತವೆ.

ಸದ್ಯ ಆಮೆ ಮತ್ತು ನಾಯಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಎರಡು ಪ್ರಾಣಿಗಳ ಜಗಳ ನಡೆದಿದೆ. ಇದರಲ್ಲಿ ಪುಟ್ಟ ಆಮೆಯೊಂದು ನಾಯಿಯ ಮೇಲೆ ದರ್ಬಾರ್ ಮಾಡಲೆತ್ನಿಸಿದೆ. ಹಮಾರಾ ಹುಬಳಿ ಹೆಸರಿನಿಂದ ಶೇರ್ ಮಾಡಿದ ಈ ವಿಡಿಯೋಗೆ ಜನರಿಂದ ತುಂಬಾ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಇದರಲ್ಲಿ ಆಮೆ ನಾಯಿಯ ಮೇಲೆ ತುಂಬಾ ಸಿಟ್ಟಾಗಿದೆ ಅದೇ ಕಾರಣಕ್ಕೆ ಅದು ನಾಯಿಯ ಮೇಲೆ ರೆಗಾಡುತ್ತಿದೆ ಎನ್ನುವಂತಿದೆ.

ಆಮೆಯ ಈ ಕಿರಿಕ್ ನಿಂದಾಗಿ ನಾಯಿ ತನ್ನ ಸಂಯಮ ಕಳೆದುಕೊಂಡು ಅದರ ಮುಖವನ್ನು ಬಾಯಿಯಲ್ಲಿ ಹಿಡಿಯಲು ಪ್ರಯತ್ನಿಸುತ್ತದೆ. ಆದರೆ ಜಾಣ ಆಮೆ ಪ್ರತಿಸಲ ತನ್ನ ಮುಖವನ್ನು ಚಿಪ್ಪಿನೊಳಗೆ ಎಳೆದುಕೊಳ್ಳಲು ಯಶಸ್ವಿಯಾಗಿದೆ. ಈ ಜಗಳಕ್ಕೆ ವೈಸ್ ಓವರ್ ನಿಂದ ಬಣ್ಣ ಹಚ್ಚಲಾಗಿದೆ. ಹೀಗಾಗಿ ನೋಡುಗರಿಗೆ ಈ ವಿಡಿಯೋ ಮತ್ತಷ್ಟು ತಮಾಷೆಯಾಗಿದೆ.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 45 ಲಕ್ಷಕ್ಕೂ ಮೀರಿ ಜನರು ನೋಡಿದ್ದಾರೆ. ಮತ್ತು ಒಂದುವರೆ ಲಕ್ಷಗಳ ವರೆಗೆ ಲೈಕ್ಸ್ ಗಳು ಸಹ ಬಂದಿವೆ. ಸಾವಿರಾರು ಜನರು ಕಾಮೆಂಟ್ ಗಳನ್ನೂ ಸಹ ಮಾಡಿದ್ದಾರೆ.

ಪ್ರಾಣಿ ಪ್ರಿಯರು ಮಾತ್ರ ಸಾಕು ಪ್ರಾಣಿಗಳಿಗೆ ಈ ರೀತಿ ತೊಂದರೆ ನೀಡುವದು ಸರಿಯಲ್ಲ ಎಂದೂ ಸಹ ಹೇಳಿದ್ದಾರೆ.

Leave a Comment

Your email address will not be published. Required fields are marked *