ಫಿನ್ಲ್ಯಾಂಡ್ ದೇಶದ ಬಗ್ಗೆ ನಿಮಗೆಷ್ಟು ಗೊತ್ತು? ಫಿನ್ಲ್ಯಾಂಡ್ ಬಗೆಗಿನ ಕೆಲವು ರೋಚಕ ಮಾಹಿತಿ ಇಲ್ಲಿದೆ ನೋಡಿ..

ಒಂದು ಸುಂದರ ದೇಶ, ಮನುಷ್ಯ ಆರಾಮಾಗಿ ಬದುಕುವುದಕ್ಕೆ ಬೇಕಾಗಿರೋ ಎಲ್ಲಾ ಸೌಲಭ್ಯ ಇಲ್ಲಿ ಸಿಗುತ್ತೆ. ಪ್ರಕೃತಿಯು ತನ್ನ ಅಂದವನ್ನೆಲ್ಲಾ ಇಲ್ಲೇ ಹರಡಿದೆ ಏನೋ ಎನ್ನುವ ಸೌಂದರ್ಯ ಈ ದೇಶದಲ್ಲಿ ಇದ್ದು, ಜಗತ್ತಿನ ಒಂದು ಸಂಪದ್ಭರಿತ ಹಾಗೂ ಶಾಂತಿಯುತ ದೇಶವಾಗಿದೆ. ಹಾಗಾದರೆ ಆ ದೇಶ ಯಾವುದು? ಏನದರ ವಿಶೇಷತೆಗಳು ಎನ್ನುವ ಕುತೂಹಲ ನಿಮಗಿದ್ದರೆ ಅದಕ್ಕೆ ಉತ್ತರ ಇಲ್ಲಿದೆ ಬನ್ನಿ‌. ಯೂರೋಪ್ ಖಂಡದಲ್ಲಿರುವ ಫಿನ್ ಲ್ಯಾಂಡ್ ಇಂತಹ ಒಂದು ಅದ್ಭುತ ದೇಶವಾಗಿದ್ದು, ಇದನ್ನು ಸರೋವರಗಳ ದೇಶ ಎಂದು ಕೂಡಾ ಕರೆಯಲಾಗಿದೆ‌. ಈ ದೇಹದಲ್ಲಿ ಒಟ್ಟು 1,87,888 ಸರೋವರಗಳಿವೆ ಎಂದರೆ ಅದ್ಬುತ ಎನಿಸದೇ ಇರಲಾರದು. ಆದ್ದರಿಂದಲೇ ಇಲ್ಲಿನ ಪ್ರಕೃತಿ ರಮಣೀಯವಾಗಿದೆ.

ಫಿನ್ ಲ್ಯಾಂಡ್ ದೇಶದಲ್ಲಿನ ಒಟ್ಟು ಜನಸಂಖ್ಯೆ ಕೇವಲ 55 ಲಕ್ಷ ಮಾತ್ರ. ಆದ್ದರಿಂದಲೇ ಇಲ್ಲಿ ಎಲ್ಲಾ ಸೌಲಭ್ಯಗಳು ಕೂಡಾ ಎಲ್ಲರಿಗೂ ದಕ್ಕುವಂತೆ ಸರ್ಕಾರ ಗಮನ ಹರಿಸುತ್ತದೆ‌. ಶಿಕ್ಷಣದಿಂದ ಹಿಡಿದು ವೈದ್ಯಕೀಯ ಸೇವೆಗಳವರೆಗೂ ಎಲ್ಲವೂ ಇಲ್ಲಿ ಉಚಿತವಾಗಿದ್ದು, ಸರ್ಕಾರವೇ ಅದರ ಖರ್ಚನ್ನು ಭರಿಸುತ್ತದೆ ಎಂದರೆ ನೀವು ನಂಬಲೇಬೇಕು. ಜನಸಂಖ್ಯೆ 55 ಲಕ್ಷವಿದ್ದರೂ, ಇಲ್ಲಿರುವ ಒಟ್ಟು ವಾಹನಗಳ ಸಂಖ್ಯೆ 40 ಲಕ್ಷ. ಆದ್ದರಿಂದ ಮಾಲಿನ್ಯದ ಪ್ರಮಾಣ ಕೂಡಾ ಇಲ್ಲಿ ಕಡಿಮೆಯಿದ್ದು, ಶುದ್ಧವಾದ ಗಾಳಿ ಜನರಿಗೆ ದೊರೆಯುತ್ತದೆ. ಇಲ್ಲಿನ ನಾಗರಿಕರು ಕಾನೂನುಗಳನ್ನು ಬಹಳ ಶಿಸ್ತಿನಿಂದ ಪಾಲಿಸುವುದರಲ್ಲಿ ನಂಬಿಕೆ ಹೊಂದಿದ್ದಾರೆ.

ಈ ದೇಶದಲ್ಲಿ ಒಂದು ವೇಳೆ ರಸ್ತೆಯಲ್ಲಿ ನಿಗಧಿತ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಹಾಕುವ ದಂಡ ವ್ಯಕ್ತಿಯ ಸಂಬಳದ ಮೇಲೆ ಆಧಾರಿತವಾಗಿದೆ. ಅಂದರೆ ಹೆಚ್ಚು ಸಂಬಳವಿದ್ದರೆ ಹೆಚ್ಚಿನ ಮೊತ್ತದ ದಂಡ. ಈ ದೇಶದಲ್ಲಿ ಶಿಕ್ಷಣ ಕಡ್ಡಾಯವಾಗಿದ್ದು, ಶಾಲೆಯ ಸಮವಸ್ತ್ರ ದಿಂದ ಹಿಡಿದು ಪುಸ್ತಕಗಳ ವರೆಗೆ ಎಲ್ಲವೂ ಉಚಿತ. ಅಲ್ಲದೇ ಯಾರಾದರೂ ಪಿಹೆಚ್ಡಿ ಪದವಿ ಪಡೆದರೆ ಇಡೀ ನಗರ ಅವರಿಗೆ ಅಭಿನಂದನೆ ನೀಡುತ್ತದೆ. ಇಲ್ಲಿ ಏಳು ವರ್ಷಗಳಾಗುವವರೆಗೆ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. ಕಾರಣ ಅದು ಮಕ್ಕಳ ಬೆಳವಣಿಗೆ ಹಂತ ಹಾಗೂ ಸಂತೋಷದಿಂದ ಇರಬೇಕಾದ ಅವಧಿ ಎಂದು ಪರಿಗಣಿಸಲಾಗಿದೆ‌.

ಫಿನ್ ಲ್ಯಾಂಡ್ ನಲ್ಲಿ ಜನ ಕ್ರೀಡಾಪ್ರಿಯರು‌. ಸಾಮಾನ್ಯ ಕ್ರೀಡೆಗಳು ಮಾತ್ರವಲ್ಲದೇ ಹೆಂಡತಿಯನ್ನು ಬೆನ್ನು ಮೇಲೆ ಹೊತ್ತು ಹೋಗುವ ರೇಸ್, ವಾರಾಂತ್ಯದಲ್ಲಿ ಸೊಳ್ಳೆಗಳನ್ನು ಕೊ ಲ್ಲುವ ಸ್ಪರ್ಧೆ ಹೀಗೆ ವಿಚಿತ್ರವಾದ ಆಟಗಳನ್ನು ಆಡಿಸಲಾಗುತ್ತದೆ. ಈ ದೇಶದಲ್ಲಿ ಭ್ರಷ್ಟಾಚಾರ 0% , ಅ ಪ ರಾ ಧ ಪ್ರಕರಣಗಳ ರೇಟಿಂಗ್ 0 % ಇದೆ. ಇಲ್ಲಿನ ಜೈಲುಗಳು ಸ್ವಚ್ಚತೆ ಹಾಗೂ ಅತ್ಯುತ್ತಮ ಸೌಲಭ್ಯಗಳಿಗೆ ವಿಶ್ವದಲ್ಲೇ ದಿ ಬೆಸ್ಟ್ ಎನಿಸಿಕೊಂಡಿವೆ. ಫಿನ್ ಲ್ಯಾಂಡ್ ಜನರು ಕಾಫಿ ಪ್ರಿಯರಾಗಿದ್ದು ಇಲ್ಲಿ ಒಟ್ಟು 72 ವಿಭಿನ್ನ ರೀತಿಯ ಕಾಫಿಗಳನ್ನು ಬಳಸಲಾಗುತ್ತದೆ. ವ್ಯಕ್ತಿಯೊಬ್ಬ ವರ್ಷವೊಂದಕ್ಕೆ ಸುಮಾರು 12 ಕೆಜಿ ಕಾಫಿ ಬಳಸುತ್ತಾನೆ ಎನ್ನಲಾಗಿದೆ.

ಇಲ್ಲಿನ ಸಂಗೀತ ಪ್ರಿಯರು, ಪ್ರತಿ ಮನೆಯಲ್ಲೊಬ್ಬ ಸಂಗೀತಗಾರ ಖಚಿತವಾಗಿ ಸಿಗುವನು. ಇಲ್ಲಿನ ಜನ ಮದ್ಯಪಾನ ಪ್ರಿಯರು ಹೌದು, ಅಲ್ಲದೇ ಹಣ್ಣಿನ ಕ್ಯಾಂಡಿಗಳು ಕೂಡಾ ಇಲ್ಲಿನವರಿಗೆ ಬಹಳ ಇಷ್ಟ. ಜಗತ್ತಿನಲ್ಲಿ ಅತ್ಯುತ್ತಮ ಗುಣಮಟ್ಟದ ಹಾಲು ಇಲ್ಲಿ ಉತ್ಪಾದನೆಯಾಗುತ್ತದೆ ಹಾಗೂ ಕಾಫಿಯಂತೆ ಹಾಲು ಕೂಡಾ ಇಲ್ಲಿನವರ ಇಷ್ಟವಾದ ಪೇಯ. ಫಿನ್ ಲ್ಯಾಂಡ್ ನಲ್ಲಿ 98% ಪ್ಲಾಸ್ಟಿಕ್ ಬಾಟಲಿಗಳನ್ನು, 100% ಗಾಜಿನ ಶೀಷೆಗಳನ್ನು ಮರು ಬಳಕೆಗೆ ಸಿದ್ದಪಡಿಸಲಾಗುತ್ತದೆ. ಸ್ವಚ್ಚತೆ ಈ ದೇಶದ ಜನರ ಪ್ರಥಮ ಆದ್ಯತೆ ಆಗಿದೆ. ರೋಗಗಳ ಪ್ರಮಾಣ ಇಲ್ಲಿ ತೀರಾ ಕಡಿಮೆ ಮಟ್ಟದಲ್ಲಿದೆ.

ಫಿನ್ ಲ್ಯಾಂಡ್ ನಲ್ಲಿ ಸೌನಾ ಗಳು ಕೂಡಾ ಅಧಿಕ. ಇವು ಅಧಿಕ ಉಷ್ಣಾಂಶದಲ್ಲಿ ದೇಹಕ್ಕೆ ರಿಲಾಕ್ಸ್ ನೀಡುವ ಒಂದು ವಿಧಾನ. ಜನರು ಇದರ ಮೂಲಕ ರಿಲ್ಯಾಕ್ಸ್ ಆಗುತ್ತಾರೆ‌. ಯೂರೋಪಿನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಮೊದಲ ದೇಶ ಕೂಡಾ ಇದೆ. ಒಟ್ಟಾರೆ ಫಿನ್ ಲ್ಯಾಂಡ್ ಈ ಭೂಮಿಯ ಮೇಲಿನ ಸ್ವರ್ಗವೆಂದೇ ಹೇಳಬಹುದು. ಇಲ್ಲಿನ ನಾಗರಿಕರು ಕೂಡಾ ಇಲ್ಲಿನ ಸಂಪತ್ತು ಹಾಗೂ ಶಾಂತಿಗೆ ತಮ್ಮ ಕಾಣಿಕೆ ನೀಡುತ್ತಿದ್ದಾರೆ.