ಬರೀ 5 ಕ್ಷಣದಲ್ಲಿ ನಿಂತ ಈ 5 ಮಿತ್ರರೂ ನೇರವಾಗಿ ಕುಸಿದರು ಪಾತಾಳಕ್ಕೆ! ಪಂಚರ್ ಅಂಗಡಿ ಎದುರಿನ CCTV ಯಲ್ಲಿ ಶೂಟ್ ಆದ ದೃಶ್ಯ..

ಮಿತ್ರರ ಜೊತೆಗೆ ಸಂತೋಷದಿಂದ ಯಾವುದೇ ಚಿಂತೆಯಿಲ್ಲದೆ ಹರಟೆ ಹೊಡೆಯುತ್ತಿರುವಾಗ ಹಠಾತ್ತನೆ ನಿಮ್ಮ ಕಾಲು ಕೆಳಗಿನ ಭೂಮಿ ಸರಿದಾಗ ಹೇಗಾಗುತ್ತೆ? ಸೇಮ್ ಟು ಸೇಮ್ ಇದೇ ದೃಶ್ಯವನ್ನು ನೀವೀಗ ವಿಡಿಯೋದಲ್ಲಿ ನೋಡಲಿದ್ದೀರಿ. ಈ ದೃಶ್ಯದಲ್ಲಿ ಬರೀ ನೀವಿಲ್ಲ ಅಷ್ಟೇ! ಈ ರೀತಿಯ ಘಟನೆ ರಾಜಸ್ಥಾನದ ಜೈಸಲ್ಮೇರ್ ನಲ್ಲಿ ನಡೆದ ವರದಿಯಾಗಿದೆ. ಪಂಚರ್ ತೆಗೆಯುವ ಅಂಗಡಿಯೊಂದರಲ್ಲಿ ಕೆಲವು ಮಿತ್ರರು ಮಾತನಾಡುತ್ತಾ ನಿಂತಿರುವಾಗ ಕ್ಷಣಾರ್ಧದಲ್ಲಿ ಐವರೂ ಭೂಮಿಯೊಳಗೆ ಕುಸಿದಿದ್ದಾರೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆಯ ಸಿಸಿಟಿವಿ ಫುಟೇಜ್ ವೈರಲ್ ಆಗುತ್ತಿದೆ. ಈ ದೃಶ್ಯದಲ್ಲಿ ಕಂಡುಬರುವ ಹಾಗೆ ಕೆಲವು ಮಿತ್ರರು ನಿಂತು ಮಾತನಾಡುತ್ತಿದ್ದಾರೆ ಇನ್ನೊಬ್ಬ ಮೆಕ್ಯಾನಿಕ್ ಟು ವೀಲರ್ ದುರಸ್ತಿ ಮಾಡುತ್ತಿದ್ದಾನೆ. ಅದೇ ಸಮಯದಲ್ಲಿ ಇವರು ನಿಂತ ನಾಲೆಯ ಮೇಲಿದ್ದ ಸಿಮೆಂಟ್ ಸ್ಲಾಬ್ ಬ್ರೇಕ್ ಆಗಿ ಎಲ್ಲರೂ ಒಮ್ಮೆಲೆ ಆ ನಾಲೆಯ ಒಳಗೆ ಬಿದ್ದಿದ್ದಾರೆ.

ಈ ದೃಶ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಎಲ್ಲೆಡೆಯೂ ಸುತ್ತಾಡುತ್ತಿದೆ. ದೊರೆತ ಮಾಹಿತಿಯ ಪ್ರಕಾರ ಜೈಸಲ್ಮೇರ್ ರೈಲ್ವೆ ಸ್ಟೇಷನ್ ಹತ್ತಿರ ಪಂಚರ್ ತೆಗೆಯುವ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಮಳೆಗಾಲದಲ್ಲಿಯ ನೀರು ಹರಿದು ಹೋಗುವ ಸಲುವಾಗಿ ಈ ನಾಲೆಯನ್ನು ಕಟ್ಟಲಾಗಿದೆ. ನಾಲೆಯ ಮೇಲೆ ಸಿಮೆಂಟ್ ಸ್ಲ್ಯಾಬ್ ಹಾಕಲಾಗಿದೆ. ಅದರ ಮೇಲೆ ನಿಂತ ಸ್ನೇಹಿತರು ಮಾತನಾಡುವ ಸಂದರ್ಭದಲ್ಲಿ ಒಮ್ಮೆಲೆ ನಾಲೆಯಲ್ಲಿ ಕುಸಿದು ಬಿದ್ದಿದ್ದಾರೆ.

ನೋಡಿ ಈ ಘಟನೆಯ ಸಿಸಿಟಿವಿ ಫುಟೇಜ್…

 

ಪ್ರಸ್ತುತ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಅರವಿಂದ್ ಚೌಹಾಣ್ ಅವರು ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸಾಕಷ್ಟು ಜನರು ನೋಡಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.