ಮನೆಯಲ್ಲಿ ಹಲ್ಲಿಗಳ ಕಾಟ ಜಾಸ್ತಿಯಾಗಿದ್ದರೆ ಹೀಗೆ ಮಾಡಿ, ಶಾಶ್ವತವಾಗಿ ಮನೆಯಿಂದ ಓಡಿಸಿ!

ಹಲ್ಲಿಗಳೆಂದರೆ ಆಯ್ತು ಬಹಳ ಜನರಿಗೆ ಭಯವಾಗುತ್ತೆ. ಹಲ್ಲಿ ಎಷ್ಟೇ ಚಿಕ್ಕದಾದರೂ ಸಹ ದೊಡ್ಡ ದೊಡ್ಡವರಿಗೆ ಹೆದರಿಸುತ್ತದೆ. ಹಳ್ಳಿ ಇದು ವಿಷಾರಿ ಜೀವಿಯಾಗಿದೆ. ಇದು ಹೆಚ್ಚಾಗಿ ಗೋಡೆಯ ಮೇಲೆ ಕಂಡು ಬರುತ್ತದೆ. ಅದೇ ಅಡುಗೆ ಮನೆಯಲ್ಲಿದ್ದರೆ ಅದು ನಮ್ಮ ಆರೋಗ್ಯಕ್ಕೆ ಘಾತಕವಾಗಿದೆ. ಆದ್ದರಿಂದಲೇ, ಕೆಲವು ಮನೆಮದ್ದುಗಳಿಂದ ಹಲ್ಲಿಯನ್ನು ಹೊರಗೆ ಹಾಕಲು ಇಲ್ಲಿವೆ ಟಿಪ್ಸ್.

ಹಲ್ಲಿ ಯಾವ ಸ್ಥಳಕ್ಕೆ ಬರುತ್ತದೆ ಅಲ್ಲಿ ಒಡೆದ ಮೊಟ್ಟೆಯ ಮೇಲಿನ ಚಿಪ್ಪು, ಕರಟ, ಕವಚವನ್ನು ನೇತಾಡಿಸಿ. ಆ ಮೊಟ್ಟೆಯ ಕವಚವನ್ನು ನೋಡಿ ಹಲ್ಲಿಗಳು ಅಲ್ಲಿಗೆ ಬರುವದಿಲ್ಲ. ಆದರೆ ಆ ಮೊಟ್ಟೆಯ ಮೇಲಿನ ಕವಚಗಳನ್ನು ಪ್ರತಿ ನಾಲ್ಕೈದು ದಿವಸಕ್ಕೊಮ್ಮೆ ಬದಲಾಯಿಸಬೇಕು. ಇನ್ನೊಂದು ಗಮನಹರಿಸಬೇಕಾದ ವಿಷಯವೆಂದರೆ ಮೊಟ್ಟೆಯ ಕವಚ ನಾಟಿ (ಜವಾರಿ) ಕೋಳಿಯದ್ದಾಗಿರಬೇಕು.

ಈರುಳ್ಳಿಯ ವಾಸನೆ ಹಲ್ಲಿಗೆ ಸಹನೆಯಾಗುವದಿಲ್ಲ. ಆದ್ದರಿಂದ ಹಲ್ಲಿ ಬರುವ ಜಾಗದಲ್ಲಿ ಈರುಳ್ಳಿ ಕೊಯ್ದು ಇಡಿ. ಅದರಲ್ಲಿ ಸಲ್ಫರ್ ಇರುವ ಕಾರಣದಿಂದ ಅದು ದುರ್ಗಂಧ ಹರಡಿಸುತ್ತದೆ. ಹೀಗಾಗಿ ಹಲ್ಲಿ ಅಲ್ಲಿಂದ ಓಡಿ ಹೋಗಿತ್ತದೆ.

ಈರುಳ್ಳಿಯ ರಸ ಮತ್ತು ಬೆಳ್ಳುಳ್ಳಿಯ ರಸ ಕೂಡಿಸಿ ಅದನ್ನು ಒಂದು ಬಾಟಲಿಯಲ್ಲಿ ನೀರನ್ನು ಹಾಕಿ ತುಂಬಿ ಇಡಿ. ಹಲ್ಲಿ ಯಾವ ಸ್ಥಳದಲ್ಲಿ ಬರುತ್ತದೆ ಆ ಸ್ಥಳದಲ್ಲಿ ಈ ನೀರನ್ನು ಸಿಂಪಡಿಸಬೇಕು.

ನವಿಲು ಗರಿಗಳನ್ನು ಮನೆಯಲ್ಲಿ ತಂದು ಗೋಡೆಯ ಮೇಲೆ ನೇತಾಡಿಸಬೇಕು. ಯಾಕೆಂದರೆ ಹಲ್ಲಿ ಈ ನವಿಲಿನ ಗರಿಗಳಿಗೆ ಹಾವು ಎಂದು ತಿಳಿದು ಆ ಸ್ಥಳಕ್ಕೆ ಬರುವದಿಲ್ಲ.

ಇನ್ನೊಂದು ಉಪಾಯವೇನೆಂದರೆ ಹಲ್ಲಿ ಬಂದಾಗ ಅದರ ಮೇಲೆ ತಂಪಾದ ನೀರನ್ನು ಸಿಂಪಡಿಸಬೇಕು. ಕಾರಣ ಅದಕ್ಕೆ ತಂಪು ವಾತಾವರಣ ಹಿಡಿಸುವದಿಲ್ಲ. ಆದ್ದರಿಂದ ಅದು ಅಲ್ಲಿಂದ ಓಡುವದು ಮತ್ತು ಒಂದು ವೇಳೆ ನೀವು ಹೆಚ್ಚು ಬಿಸಿಯಾದ ನೀರು ಸಿಂಪಡಿಸಿದರೆ ಅದು ಅಲ್ಲಿಯೇ ಸಾಯುವದು.

ಇನ್ನು ಬೇರೊಂದು ಉಪಾಯ ಹೇಳಬೇಕಾದರೆ ತಂಬಾಕು ಮತ್ತು ಕಾಫಿ ಪಾವಡರ್ ಇವುಹಳ ಚಿಕ್ಕ ಚಿಕ್ಕ ಉಂಡಿಗಳನ್ನು ಮಾಡಿ ಹಲ್ಲಿ ಬರುವ ಜಾಗದಲ್ಲಿ ಇಟ್ಟರೆ ಅಲ್ಲಿಗೆ ಹಲ್ಲಿ ಬರುವದಿಲ್ಲ. ಹಲ್ಲಿ ಬರುವ ಗೋಡೆಯ ಮೇಲೆ ಮೆಣಸಿನಪುಡಿ ಹಾಕಿದರೂ ಹಲ್ಲಿ ಅದರ ವಾಸನೆಗೆ ಅಲ್ಲಿ ಬರುವದಿಲ್ಲ.

ಹಾಗೆ ನೋಡಲಾಗಿ ಹಲ್ಲಿ ಮನೆಯಲ್ಲಿದ್ದರೆ ಮನೆಯಲ್ಲಿರುವ ಹುಳ ಹುಪ್ಪಡಿಗಳನ್ನು ತಿನ್ನುತ್ತದೆ, ಹಾಗೂ ಲೈಟಿನ ಬಲ್ಬ್ ಹತ್ತಿರದ ಬರುವ ಇತರ ಕೀಟಕಗಳನ್ನು ತಿನ್ನುತ್ತವೆ.

ಒಂದು ಮಹತ್ವದ ಹಾಗೂ ಗಮನವಿಡಬೇಕಾದ ವಿಷಯವೆಂದರೆ, ಅಡಿಗೆ ಮನೆಯಲ್ಲಿಯ ಅನ್ನಪದಾರ್ಥಗಳಲ್ಲಿ ಬಿದ್ದರೆ ಅದರಿಂದ ವಿಷಬಾಧೆಯಾಗುತ್ತದೆ. ಈ ಕಾರಣದಿಂದ ಮನೆಯಲ್ಲಿ ಹಲ್ಲಿಗಳಿದ್ದರೆ ನಾವು ಕಾಳಜಿ ತೆಗೆದುಕೊಳ್ಳುವದು ತುಂಬಾ ಆವಶ್ಯಕ.