Articles

ಕನ್ನಡಿಗರ ಅಭಿಮಾನಕ್ಕೆ ತಲೆಬಾಗಿದ ಬಾಲಿವುಡ್ ನಟಿ ಸನ್ನಿ ಲಿಯೋನ್!

ಇದೆ ದಿನಾಂಕ ಮೇ 13 ರಂದು 40 ನೆ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ಕರ್ನಾಟಕದ ಒಂದು ಹಳ್ಳಿಯಲ್ಲಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಹಾಕಲಾದ ಫ್ಲೆಕ್ಸ್ ಗೆ ಫಿದಾ ಆಗಿದ್ದಾರೆ. ಕರ್ನಾಟಕದ ತನ್ನ ಅಭಿಮಾನಿಗಳ ಈ ಕೆಲಸ ಅವರಿಗೆ ಖುಷಿ ಕೊಟ್ಟಿದೆ. ಆ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸನ್ನಿಗೂ ತಲುಪಿದೆ.

ಹಳದಿ ಸೀರೆಯುಟ್ಟ ನಟಿ ಸನ್ನಿ ಲಿಯೋನ್ ಅವರ ಒಂದು ಫೋಟೋವನ್ನು ದೊಡ್ಡ ಫ್ಲೆಕ್ಸ್ ಮಾಡಿಸಿ ಕರ್ನಾಟಕದ ಒಂದು ಹಳ್ಳಿಯ ಬೀದಿಯಲ್ಲಿ ಹಾಕಲಾಗಿತ್ತು. ಅದರ ಮೇಲ್ಗಡೆ Happy Birthday Sunny Leone ಎಂದು ಇಂಗ್ಲಿಷ್ ನಲ್ಲಿ ಬರೆಸಿದ್ದ ಅಭಿಮಾನಿಗಳು, ಕೆಳಗೆ ಕನ್ನಡದಲ್ಲಿ ಅನಾಥ ಮಕ್ಕಳ ತಾಯಿ, ಅಭಿಮಾನಿಗಳ ದೇವತೆ ಎಂದು ಬರೆಸಿದ್ದು ವಿಶೇಷವಾಗಿತ್ತು.

ಇನ್ನೂ ವಿಶೇಷ ಎಂದರೆ ಆ ವೈರಲ್ ಆಗಿರೋ ಫೋಟೋ ಅದು ಹೇಗೋ ನಟಿ ಸನ್ನಿ ಲಿಯೋನ್ ಗೂ ತಲುಪಿದೆ, ಇದನ್ನು ಕಂಡು ಸಂತೋಷದಿಂದ ಆ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗೆ ಹಾರ್ಟ್ ಸಿಂಬಲ್ ಸಮೇತ ಅಪ್ಲೋಡ್ ಮಾಡಿ ಅಭಿಮಾನಿಗಳ ಮನಸ್ಸನ್ನು ಮತ್ತಷ್ಟು ಗೆದ್ದಿದ್ದಾರೆ ಸನ್ನಿ.

ಹುಟ್ಟಿ ಬೆಳೆದದ್ದು ಕೆನಡಾ ದೇಶವಾದರೂ, ಭಾರತದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಈ ನಟಿ ಅದರಲ್ಲೂ ಕರ್ನಾಟಕದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಅದಕ್ಕೆ ಕಾರಣವೂ ಕೂಡ ಇದೆ, ಅದೇನೆಂದರೆ ಅವರು ಮಾಡುವ ಸಾಮಾಜಿಕ ಕಾರ್ಯಗಳು, ನಿಸ್ವಾರ್ಥ ಸೇವೆ, ಅನಾಥ ಮಕ್ಕಳಿಗೆ ಅವರು ನೇರವಾಗುವ ರೀತಿ.

ಇವೆಲ್ಲ ಅವರ ನಟನೆಗಿಂತಲೂ ಹೆಚ್ಚು ಹಾಗೂ ವ್ಯಯಕ್ತಿಕ ಬದುಕನ್ನು ಮೀರಿ ಅಭಿಮಾನಿಗಳ ಮನಸ್ಸು ಗೆದ್ದಿರುವ ಅಂಶಗಳಾಗಿವೆ. ಇನ್ನು ಹೆಚ್ಚು ಹೇಳಬೇಕೆಂದರೆ ನಟಿ ಸನ್ನಿ ಲಿಯೋನ್ ಅವರು ಒಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿ ತೊಟ್ಟು ತಾವು ಕೂಡ ಈ ತಂಡದ ಅಭಿಮಾನಿ ಎಂಬಂತೆ ಕಾಣಿಸಿದ್ದರು, ಅಂದಿನಿಂದ ಕನ್ನಡಿಗರಿಗೆ ಇವರ ಮೇಲೆ ಮತ್ತಷ್ಟು ಅಭಿಮಾನ ಹೆಚ್ಚಾಗಿರುವದರಲ್ಲಿ ಸಂಶಯವೆ ಇಲ್ಲ.
-ಮಂಜುನಾಥ್

Leave a Comment

Your email address will not be published. Required fields are marked *