Articles

ಶರವೇಗದಲ್ಲಿ ನುಸುಳಿ ಬಂದ ಮೊಸಳೆಯಿಂದ ಮಿಂಚಿನ ವೇಗದಲ್ಲಿ ಜಿಗಿದು ಜಾರಿದ ಜಿಂಕೆಯ ಸೂಪರ್ ವಿಡಿಯೋ ವೈರಲ್…

ವೈಲ್ಡ್ ಲೈಫ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತದೆ. ನೇಟಿಜನ್ಸ್ ಗಳಿಗೆ ಕಾಡು ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳುವುದೆಂದರೆ ತುಂಬಾ ಕುತೂಹಲವಿರುತ್ತದೆ. ಹೀಗಾಗಿ ಈ ವಿಡಿಯೋಗಳು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿರುತ್ತವೆ. ಕಾಡಿನಲ್ಲಿ ಪ್ರತಿಯೊಂದು ಹಿಂಸ್ರ ಪ್ರಾಣಿಗೆ ಜಿಂಕೆ ಇದು ತುಂಬಾ ಸಾಫ್ಟ್ ಟಾರ್ಗೆಟ್ ಆಗಿದೆ. ಇದಕ್ಕೆ ಹೆಚ್ಚಾಗಿ ಎಲ್ಲಾ ಪ್ರಾಣಿಗಳಿಂದ ಆತಂಕ ಇದ್ದೇ ಇರುತ್ತದೆ. ಜಿಂಕೆ ಇದು ನೀರು ಕುಡಿಯುವಾಗಲೂ ತುಂಬಾ ಜಾಗ್ರತೆಯಿಂದ ಕುಡಿಯುತ್ತಿರುತ್ತದೆ. ಅದಕ್ಕೆ ಕಾರಣ ನೀರಿನಲ್ಲಿ ವಾಸಿಸುವ ಮೊಸಳೆ. ಈಗ ಮೊಸಳೆ ಮತ್ತು ಜಿಂಕೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಜಿಂಕೆಯು ಕಾಡಿನಲ್ಲಿರುವ ಹೊಂಡದ ಬದಿಗೆ ನಿಂತು ತುಂಬಾ ಜಾಗ್ರತೆಯಿಂದ ನೀರುಕುಡಿಯುತ್ತಿದೆ. ತನ್ನ ಜೀವದ ಮೇಲೆ ಅಪಾಯ ಯಾವಾಗ ಬೇಕಾದರೂ ಎರಗಬಹುದು ಎಂಬ ಭಾವನೆಯಿಂದಲೇ ತುಂಬಾ ಕಟ್ಟೆಚ್ಚರದಿಂದ ಹೊಂಡದಲ್ಲಿಯ ನೀರು ಕುಡಿಯುತ್ತಿದೆ. ಮುಂದಿನ ಕೆಲವೇ ಕ್ಷಣಗಳಲ್ಲಿ ಜಿಂಕೆಯು ಮನಸ್ಸಿನಲ್ಲಿ ಅಂದುಕೊಂಡಂತೆಯೇ ಘಟನೆಯೊಂದು ನಡೆದಿದೆ. ಜಿಂಕೆಯು ಇತ್ತ ಹೆದರುತ್ತ ಜೊತೆಗೆ ಮುಂಜಾಗ್ರತೆಯಿಂದ ನೀರು ಕುಡಿಯುವಾಗ ಹಠಾತ್ತನೆ ನೀರಿನಿಂದ ಮೊಸಳೆಯೊಂದು ಜಿಂಕೆಯ ಮುಖವನ್ನು ತನ್ನ ಬಲಶಾಲಿಯಾದ ದವಡೆಯಲ್ಲಿ ಹಿಡಿಯುವ ಸಲುವಾಗಿ ನುಸುಳಿ ಬಂದಿದೆ. ಇದರ ಅರಿವು ಮೊದಲೇ ಅರಿತ ಜಿಂಕೆಯು ಚಂಗನೆ ಮಿಂಚಿನಂತೆ ಮೇಲಕ್ಕೆ ಹಾರಿ ತನ್ನ ಜೀವವನ್ನು ರಕ್ಷಿಸಿಕೊಂಡು ಅಲ್ಲಿಂದ ಜಾರಿ ಹೋಗಲು ಯಶಸ್ವಿಯಾಗಿದೆ.

ವಿಡಿಯೋ ನೋಡಿ

ಈ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ nature._.views ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋವನ್ನು ಇಲ್ಲಿಯವರೆಗೆ 7.8 ಮಿಲಿಯನ್ ಜನರು ನೋಡಿದ್ದಾರೆ. ಮತ್ತು 1 ಲಕ್ಷ 35 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

Leave a Comment

Your email address will not be published. Required fields are marked *