ಸಿಬ್ಬಂದಿಗಳು ಇನ್ಮುಂದೆ ಕಚೇರಿಯಲ್ಲಿ ಪ್ರತಿದಿನ ಅರ್ಧ ಗಂಟೆ ನಿದ್ರಿಸಬಹುದು, ಈ ಭಾರತೀಯ ಕಂಪನಿಯ ದೊಡ್ಡ ಘೋಷಣೆ!!!

ಕರೋನಾ ಕಾಲದಲ್ಲಿ ಇಂದಿನ ಜಗತ್ತಿನಾದ್ಯಂತ ಅನೇಕ ಕಂಪೆನಿಗಳು ತಮ್ಮ ವ್ಯವಸ್ಥಾಪನೆಯಲ್ಲಿ ಬದಲಾವಣೆ ತಂದಿದ್ದು ಚಿತ್ರವನ್ನು ನಾವು ನೋಡಿದ್ದೇವೆ. ಸದ್ಯಕ್ಕೆ ಕಂಪೆನಿಗಳು ತಮ್ಮ ಸಿಬ್ಬಂದಿಗಳ ಸೌಲಭ್ಯದ ಕಡೆಗೆ ಹೆಚ್ಚು ಗಮನ ವಹಿಸುತ್ತಿವೆ . ಅಂತಹ ಒಂದು ಕಂಪೆನಿಯ ಕುರಿತು ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ಚರ್ಚೆ ಆಗುತ್ತಿದೆ ಏಕೆಂದರೆ ಈ ಕಂಪನಿಯು ತನ್ನ ಆಫೀಸಿನಲ್ಲಿ ಕೆಲಸ ಮಾಡುವ ಸಿಬ್ಬಂದಿವರ್ಗದವರಿಗೆ ದಿನಾಲೂ ಸ್ವಲ್ಪ ಸಮಯದವರೆಗೆ ಮಲಗುವ(short nap) ಆಫರ್ ನೀಡುತ್ತಿದೆ. ಸುಮಾರು ಅರ್ಧ ಗಂಟೆ ವಿಶ್ರಾಂತಿ ಅಂದರೆ ಕಂಪೆನಿಯಲ್ಲಿ ಮಲಗುವ ಸೌಲಭ್ಯ ಒದಗಿಸಿದೆ. ಅಲ್ಲದೆ ಈ ಸೌಲಭ್ಯದ ಸಲುವಾಗಿ ಯಾವುದೇ ಪ್ರಕಾರದ ಹಣವು ಕಟ್ ಮಾಡುವದಿಲ್ಲ ಎಂದು ಈ ಕಂಪೆನಿಯು ಘೋಷಣೆ ಮಾಡಿದೆ. ಹೀಗಾಗಿ ಈ ಕಂಪೆನಿಯು ತುಂಬಾ ಚರ್ಚೆಯಲ್ಲಿದೆ.

ಈ ವಿಶೇಷ ಆಫರ್ ನೀಡುತ್ತಿರುವ ಕಂಪೆನಿಯ ಹೆಸರು ವೇಕಫಿಟ್ ಸೊಲ್ಯೂಷನ್ (wakefit solution) ಇದೆ. ಈ ಕಂಪೆನಿಯು ಬೆಂಗಳೂರಿನಲ್ಲಿದೆ. ಆಫೀಸನಲ್ಲಿ ಬರುವ ಸಿಬ್ಬಂದಿ ವರ್ಗದವರಿವೆ ದಿನನಿತ್ಯದ ಡ್ಯೂಟಿ ಸಮಯದಲ್ಲಿ 30 ನಿಮಿಷಗಳವರೆಗೆ ಅಂದರೆ ಸುಮಾರು ಅರ್ಧಾ ಗಂಟೆಗಳ ವರೆಗೆ ಮಲಗ ಬಹುದು. ಕಂಪೆನಿಯು ಈ ಕುರಿತು ವೇಳಾಪಟ್ಟಿ ಸಹ ಹೊರಡಿಸಿದೆ. ಈ ಹೊಸ ನಿರ್ಧಾರದಿಂದ ಸಿಬ್ಬಂದಿಗಳು ಫಿಟ್ ಇರುವದರೊಂದಿಗೆ ಅಧಿಕ ಉತ್ಸಾಹದಿಂದ ಸಹ ಕೆಲಸ ಮಾಡುವರು ಎಂಬುದು ಕಂಪೆನಿಯ ವಿಚಾರವಾಗಿದೆ.

ಸಿಬ್ಬಂದಿಗಳು ದಿನಾಲೂ ಎರಡರಿಂದ ಎರಡೂವರೆ ಈ ಸಮಯದಲ್ಲಿ ಅರ್ಧ ತಾಸಿನ ನಿದ್ರೆ ಮಾಡಬಹುದು. ಅಲ್ಲದೆ ಅಲ್ಲಿಯ ಸಿಬ್ಬಂದಿಗಳಿಗೆ ನಿದ್ರೆ ಮಾಡುವ ಸಲುವಾಗಿ ಸ್ಥಳದ ಅವಕಾಶ ಸಹ ಮಾಡಲಾಗಿದೆ. ಈ ಸ್ಟಾರ್ಟ್ ಅಪ್ ಕಂಪನಿ ಸ್ಲೀಪ್ ಸೊಲ್ಯೂಷನ್ ನೀಡುವ ಕಾರ್ಯ ಮಾಡುತ್ತದೆ.

ಕಂಪೆನಿಯ ಸಹಸಂಸ್ಥಾಪಕರಾದ ಚೈತನ್ಯ ರಾಮಲಿಂಗೇಗೌಡಾ ಇವರು ಈ ಹೊಸ ಆಫರ್ ಕುರಿತು ತಮ್ಮ ಕಂಪೆನಿಯ ಎಲ್ಲ ಸಿಬ್ಬಂದಿವರ್ಗದವರಿಗೆ ಇ ಮೇಲ್ ಮಾಡುವ ಮೂಲಕ ತಿಳಿಸಿದ್ದಾರೆ. ಅವರು ಹೇಳಿದ್ದೇನೆಂದರೆ, ‘ ನಾಸಾ ಹಾವರ್ಡ್ ಯೂನಿವರ್ಸಿಟಿಯ ನಡೆಸಿರುವ ಒಂದು ರಿಸರ್ಚ್ ಪ್ರಕಾರ, ಯೂನಿವರ್ಸಿಟಿ ಅಭ್ಯಾಸದಲ್ಲಿ ದಿನನಿತ್ಯ ಮದ್ಯಾಹ್ನ ಅರ್ಧ ತಾಸು ನಿದ್ದೆ ಮಾಡಲು ಅವಕಾಶ ಕೊಡಲಾಯಿತು, ಏಕೆಂದರೆ ಹೀಗೆ ಮದ್ಯಾಹ್ನದಲ್ಲಿ ನಿದ್ದೆ ಮಾಡಿ ತದನಂತರ ಅಭ್ಯಾಸ ಮಾಡುವದರಿಂದ ವಿದ್ಯಾರ್ಥಿಗಳ ಪರಫಾರ್ಮೇನ್ಸ್ ಸುಮಾರು 33% ಹೆಚ್ಚಾಗುತ್ತೆ ಅಂತ ತಿಳಿದು ಬಂತು. ಈ ಒಂದು ಉದ್ದೇಶ ನೆನಪಿನಲ್ಲಿಟ್ಟುಕೊಂಡು ನಮ್ಮ ಕಂಪೆನಿಯ ಸಿಬ್ಬಂದಿವರ್ಗದವರಿಗೆ ಸುಮಾರು ಅರ್ಧ ತಾಸು ನಿದ್ದೆ ಮಾಡುವದರಿಂದ ಅವರ ಕಾರ್ಯದಲ್ಲಿ ಮತ್ತಷ್ಟು ಪ್ರಗತಿ ಹಾಗೂ ಉತ್ಸಾಹ ಉಂಟಾಗಬಹುದು’ ಎಂದು ತಿಳಿಸಿದ್ದಾರೆ.