VIDEO : ಸಹಾಯ ಮಾಡಿ ಶಿವಣ್ಣ : ನಟಿ ವಿಜಯಲಕ್ಷ್ಮಿ ಮನವಿ
ತಮ್ಮ ಸಹೋದರಿ ಉಷಾರವರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ನಟಿ ವಿಜಯಲಕ್ಷ್ಮಿ ಸಹಾಯ ಮಾಡುವಂತೆ ನಟ ಶಿವರಾಜಕುಮಾರ್ ರವರಲ್ಲಿ ಮನವಿ ಮಾಡಿದ್ದಾರೆ. ವಿಡಿಯೊ ಮೂಲಕ ಕೇಳಿಕೊಂಡಿರುವ ವಿಜಯಲಕ್ಷ್ಮಿಯವರು, ಸಹೋದರಿಯ ಚಿಕಿತ್ಸೆಗಾಗಿ ಈಗಾಗಲೇ ಇದ್ದ ಹಣವೆಲ್ಲ ಖರ್ಚಾಗಿದೆ, ಮುಂದೇನು ಮಾಡಬೇಕೋ ತಿಳಿಯದಾಗಿದೆ ಎಂದಿದ್ದಾರೆ.
ಗರ್ಭಾಶಯದ ತೊಂದರೆಯಿಂದ ಉಷಾರವರು ಬಳಲುತ್ತಿದ್ದರು. ಹಾಗಾಗಿ ಚೆನೈನ ಆಸ್ಪತ್ರೆಯೊಂದರಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆಪರೇಶನ್ ಮಾಡಿ ಪೂರ್ತಿ ಗರ್ಭಾಶಯವನ್ನೇ ತಗೆಯಲಾಗಿತ್ತು. ಆದರೆ ನಂತರ ಏನೋ ತೊಂದರೆಯಾಗಿ ಅವರು ಚೇತರಿಸಿಕೊಳ್ಳಲೇ ಇಲ್ಲ. ಸಧ್ಯ ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಚೆನೈನಲ್ಲಿ ಇದ್ದೇನೆ, ಲಾಕ್ ಡೌನ್ ಮುಗಿದ ಮೇಲೆ ಬೆಂಗಳೂರು ಬರುತ್ತೇನೆ, ಈಗ ಏನೋ ಮಾಡಬೇಕೊ ತಿಳಿಯದಾಗಿದೆ, ಉಷಾ ಸ್ಥಿತಿ ಗಂಭೀರವಾಗಿದೆ, ಶಿವಣ್ಣ ಅವರು ಸಹಾಯ ಮಾಡಿ ಎಂದು ಅವರು ಕೇಳಿಕೊಂಡಿದ್ದಾರೆ.
ಮಾಡಿರುವ ಆಪರೇಶನ್ ಫೆಲ್ಯೂರ್ ಆಗಿದ್ದು, ಶಿವಣ್ಣ ಸಹಾಯ ಮಾಡುತ್ತಾರಾ ಅಥವಾ ಚಿತ್ರರಂಗದ ಇತರ ಯಾರಾದರೂ ಸಹಾಯ ಹಸ್ತ ಚಾಚುತ್ತಾರಾ ನೋಡಬೇಕು. ಕಳೆದ ಸಲ ವಿಜಯಲಕ್ಷ್ಮಿಯವರಿಗೆ ತೀವ್ರ ಅನಾರೋಗ್ಯವಿದ್ದಾಗ ಕಿಚ್ ಮೊದಲಿಗೆ ಸುದೀಪ್ ಒಂದು ಲಕ್ಷ ಕೊಟ್ಟಿದ್ದರು. ಅದಾದ ಮೇಲೆ ಚಲನಚಿತ್ರ ಮಂಡಳಿ ನೆರವು ನೀಡಿತ್ತು.
ಅದಾದ ಮೇಲೆ ಅವರ ತಾಯಿಗೆ ಕೂಡ ಆರೋಗ್ಯ ಕೆಟ್ಟು ಇಟ್ಟ ದುಡ್ಡನ್ನೆಲ್ಲ ಅಲ್ಲಿ ಖರ್ಚು ಮಾಡಿದರು. ಈಗ ತಂಗಿಯ ಸಮಸ್ಯೆ ಎದುರಾಗಿದೆ. ಗರ್ಭಕೋಶದ ಸಮಸ್ಯೆ ಮಹಿಳೆಯರಿಗೆ ಸಾಮಾನ್ಯ, ಅದನ್ನು ರಿಮೂವ್ ಮಾಡಿಸಿಕೊಂಡ ಸಾಕಷ್ಟು ಮಹಿಳೆಯರು ಹುಷಾರಾಗೇ ಇದ್ದಾರೆ ಇವರ ಹಣೆಬರಹ ಹೇಗಿದೆ ನೋಡಿ, ಗರ್ಭಕೋಶ ತಗೆದ ಮೇಲೂ ತೊಂದರೆ ತೀವ್ರವಾಗಿದೆ. ಅವರು ಹೇಗಾಗಿದ್ದಾರೆ ಎಂದು ನೀವು ಚಿತ್ರದಲ್ಲಿ ನೋಡಬಹುದು.
-Team Infotrend