Articles

ಹೆಚ್ಚುತ್ತಿರುವ ತೂಕದಿಂದ ಚಿಂತಿಸಬೇಡಿ, ಈ ‘ನಾಲ್ಕು’ ಸರಳ ಉಪಾಯಗಳನ್ನು ತಪ್ಪದೇ ಮಾಡಿ

ಇತ್ತೀಚಿನ ದಿನಗಳಲ್ಲಿ ಮನುಷ್ಯನು ಬಿಡುವಿಲ್ಲದ ಚಟುವಟಿಕೆಗಳಿಂದ ಬೇಸತ್ತು ಹೋಗಿದ್ದಾನೆ. ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡುವ ಒತ್ತಡ, ಈ ಒತ್ತಡದ ಮಧ್ಯೆದಲ್ಲಿ ಸಿಗಲಾರದ ಬಿಡುವು, ಕುಳಿತಲ್ಲೇ ಕೆಲಸ ಮಾಡುವದು, ಆರೋಗ್ಯದ ಕಡೆಗೆ ದುರ್ಲಕ್ಷ, ಜಂಕ್ ಫುಡ್ ಗಳ ಸೇವನೆ, ಸರಿಯಾಗಿ ನಿದ್ರೆ ಆಗದಿರುವುದು ಹೀಗೆ ಹಲವು ಹತ್ತು ಕಾರಣಗಳಿಂದ ಮನುಷ್ಯನ ತೂಕ ಹೆಚ್ಚಾಗುತ್ತದೆ.

ಸ್ಥೂಲ ಕಾಯ ನಿಜವಾಗಿಯೂ ಒಂದು ದೊಡ್ಡ ಸಮಸ್ಯೆ ಎಂದೇ ಹೇಳಲಾಗುತ್ತದೆ. ಇದು ಮುಂದೆ ಅನೇಕ ರೋಗಗಳಿಗೆ ಜನ್ಮ ನೀಡುತ್ತದೆ. ಆದ್ದರಿಂದ ಸಮಯ ಇರುವಾಗಲೇ ಇದನ್ನು ಹತೋಟಿಯಲ್ಲಿ ತರುವದು ತುಂಬಾ ಅಗತ್ಯವಾಗಿದೆ.

ಒಂದು ರಾಣಿ ನೀವು ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅದನ್ನು ಹೇಗೆ ಕಡಿಮೆ ಮಾಡಬೇಕೆಂಬ ಪ್ರಶ್ನೆ ನಿಮಗೆ ಸತಾಯಿಸುತ್ತಿದ್ದರೆ ಇಲ್ಲಿ ನೀಡಿದ ನಾಲ್ಕು ಪ್ರಕಾರದ ವ್ಯಾಯಾಮಗಳ ಬಗ್ಗೆ ತಿಳಿದುಕೊಳ್ಳಿ.

1) ಸೈಕ್ಲಿಂಗ್ ಮಾಡುವುದು ಒಂದು ಉತ್ತಮ ವ್ಯಾಯಾಮದ ಪ್ರಕಾರವಾಗಿದೆ. ಇದರಿಂದ ಪಚನ ತಂತ್ರ ಚೆನ್ನಾಗಿ ಕೆಲಸ ಮಾಡುತ್ತದೆ. ಸೈಕಲ್ ನಡೆಸುವುದರಿಂದ ರೋಗನಿರೋಧಕ ಶಕ್ತಿಯ ಜೊತೆಗೆ ನಿಮ್ಮ ತೂಕ ಕಡಿಮೆಯಾಗುತ್ತದೆ. ಪಚನಶಕ್ತಿಯನ್ನು ಇನ್ನಷ್ಟು ಸ್ಟ್ರಾಂಗ್ ಆಗುತ್ತದೆ.

2) ದೀರ್ಘ ಶ್ವಾಸ ತೆಗೆದುಕೊಳ್ಳುವುದು ದೇಹಕ್ಕೆ ತುಂಬಾ ಲಾಭದಾಯಕವಾಗಿದೆ. ಹೀಗೆ ಮಾಡುವುದರಿಂದ ಎದೆಯಲ್ಲಿಯ ಉರಿತ ಮತ್ತು ತೂಕ ಕಡಿಮೆಯಾಗಲು ಸಹಾಯವಾಗುತ್ತದೆ. ಇದಕ್ಕಾಗಿ ಬರಿ ನಿಂತಲ್ಲೇ ದೀರ್ಘಶ್ವಾಸ ತೆಗೆದುಕೊಳ್ಳಬೇಕಾಗುತ್ತದೆ. ಹೀಗೆ ಮಾಡುವುದರಿಂದ ಒತ್ತಡವು ಸಹಿತ ಕಡಿಮೆಯಾಗುತ್ತದೆ.

3) ವೇಗದ ನಡಿಗೆ:- ದಿನಂಪ್ರತಿ ಬರಿ 30ರಿಂದ 45 ನಿಮಿಷಗಳವರೆಗೆ ಓಡುವುದು ಇಲ್ಲವೇ ವೇಗವಾಗಿ ಚಲಿಸುವುದರಿಂದ ದೇಹದ ತೂಕ ಕಡಿಮೆಯಾಗಲು ಸಹಾಯವಾಗುತ್ತದೆ.

4) ನಾಲ್ಕನೆಯ ವ್ಯಾಯಾಮ ಪ್ರಕಾರ ಕ್ರಂಚಸ್ ಮಾಡುವುದು. ವ್ಯಾಯಾಮದ ಈ ಪ್ರಕಾರ ಮಾಡುವುದರಿಂದ ಕಿಬ್ಬೊಟ್ಟೆಯ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಮತ್ತು ಪಚನ ತಂತ್ರ ಇನ್ನಷ್ಟು ವಿಕಸಿತವಾಗಿ ಚೆನ್ನಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಕ್ರಂಚ್ ನಲ್ಲಿ ಅನೇಕ ಪ್ರಕಾರಗಳಿವೆ. ಅದರಲ್ಲಿಂದ ನಿಮಗೆ ಸೂಟ್ ಅಥವಾ ಸರಿಹೊಂದುವ ವ್ಯಾಯಾಮ ಪ್ರಕಾರಗಳನ್ನು ಆರಿಸಿ ಅವುಗಳನ್ನೇ ಮಾಡಬಹುದು.

ಮಿತ್ರರೇ, ಮೇಲೆ ನೀಡಿದ ಈ ಮಾಹಿತಿಯ ಬಗ್ಗೆ ನೀವು ನಿಮ್ಮ ಫ್ಯಾಮಿಲಿ ಡಾಕ್ಟರ್ ಜೊತೆಗೆ ಚರ್ಚೆ ಮಾಡಿ ಮುಂದಿನ ಕ್ರಮಗಳನ್ನು ಅನುಸರಿಸಿ. ಕಾರಣ ಪ್ರತಿಯೊಬ್ಬರ ಶರೀರವು ಬೇರೆ ಬೇರೆಯಾಗಿರುತ್ತದೆ. ಆದ್ದರಿಂದ ನಿಮ್ಮ ದೇಹಕ್ಕೆ ಸರಿಹೊಂದುವ ವ್ಯಾಯಾಮಗಳನ್ನು ನಿಮ್ಮ ಡಾಕ್ಟರ್ ಹೇಳುವ ಮಾರ್ಗದರ್ಶನ ಮುಖಾಂತರ ನೀವು ಮಾಡಿದರೆ ನಿಮಗೆ ನಿಶ್ಚಿತವಾಗಿ ಲಾಭ ಆಗುವದು.

Leave a Comment

Your email address will not be published. Required fields are marked *