ಹೊಟ್ಟೆಯಲ್ಲಿಯ ಗ್ಯಾಸ್ ಸಮಸ್ಯೆಗೆ ವ್ಯಕ್ತಿ ಮಾಡುತ್ತಿದ್ದಾನೆ ದೇಸಿ ಉಪಚಾರ; ವಿಡಿಯೋ ನೋಡಿದ ಮೇಲೆ ನಗು ತಡೆದುಕೊಳ್ಳುವುದು ಅಸಾಧ್ಯ!
ಹೊಟ್ಟೆಯಲ್ಲಿ ಗ್ಯಾಸ್ ನಿರ್ಮಾಣವಾಗುವ ಸಮಸ್ಯೆ ತುಂಬಾ ಅಪಾಯಕಾರಿ. ಇದರ ತಾಪತ್ರಯ ಗ್ಯಾಸಿನ ಸಮಸ್ಯೆ ಇದ್ದ ವ್ಯಕ್ತಿಗೆ ಮಾತ್ರ ಗೊತ್ತು. ಇಂಥ ಸಮಸ್ಯೆಗೆ ಈಡಾದ ವ್ಯಕ್ತಿಗಳು ಸ್ವಲ್ಪ ಸ್ವಲ್ಪ ಆಹಾರವನ್ನು ತಿಂದರೂ ಗ್ಯಾಸ್ ನಿರ್ಮಾಣವಾಗಲು ಶುರುವಾಗುತ್ತದೆ. ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಜನರು ಅನೇಕ ರೀತಿಯ ಉಪಚಾರಗಳ ಮೊರೆ ಹೋಗುತ್ತಾರೆ. ಕೆಲವರು ಔಷಧಿಗಳನ್ನು ತೆಗೆದುಕೊಂಡರೆ ಇನ್ನೂ ಕೆಲವರು ಇಂಜೆಕ್ಷನ್ ನ ಸಹಾಯ ತೆಗೆದುಕೊಳ್ಳುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಸಮಸ್ಯೆಗೆ ಪರಿಹಾರ ನೀಡುತ್ತಿರುವ ದೇಶಿ ಉಪಚಾರದ ವಿಡಿಯೋ ಒಂದು ಜಾಸ್ತಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರಿಗೆ ತಮ್ಮ ನಗುವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗ್ಯಾಸಿನ ಸಮಸ್ಯೆಯುಳ್ಳ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿ ಉಪಚಾರದಿಂದ ಪರಿಹಾರ ನೀಡುವ ಕೆಲಸ ಮಾಡುತ್ತಿದ್ದಾನೆ. ಆತ ಉಪಚಾರ ನೀಡುವ ಪದ್ಧತಿ ನೋಡಿದರೆ ನಕ್ಕು ಸುಸ್ತೋ ಸುಸ್ತು.
ಉಪಚಾರ ನೀಡುವ ವ್ಯಕ್ತಿಯ ಕೈಯಲ್ಲಿ ಒಂದು ಚಿಕ್ಕ ಕಟ್ಟಿಗೆಯ ತೆಳುವಾದ ಪಟ್ಟಿಯಂತಹ ಉಪಕರಣವಿದೆ. ಅದರಿಂದ ಆತ ಮೇಲಿಂದ ಮೇಲೆ ಗ್ಯಾಸಿನ ಸಮಸ್ಯೆಯುಳ್ಳ ವ್ಯಕ್ತಿಯ ಹೊಟ್ಟೆಯ ಮೇಲೆ ಮೆಲುವಾಗಿ ಹೊಡೆಯುತ್ತಿದ್ದಾನೆ. ಆ ಉಪಕರಣದಿಂದ ಹೊಟ್ಟೆಯ ಮೇಲೆ ಹೊಡೆದ ನಂತರ ವ್ಯಕ್ತಿಯು ಹೇಳುತ್ತಾನೆ “ಗ್ಯಾಸ್ ಬ್ಲಾಕ್ ಗ್ಯಾಸ್ ಖತಮ್”.
ವೀಡಿಯೋ ನೋಡಿ
Jin ko Gas ki takleef hai, unke liye desi ilaaz.🤣🤣 pic.twitter.com/Clb9UZzeYd
— Deepak Prabhu (@ragiing_bull) October 17, 2022
ಪ್ರಸ್ತುತ ಈ ವಿಡಿಯೋವನ್ನು ದೀಪಕ್ ಹೆಸರಿನ ಯೂಸರ್, ಇಂಟರ್ನೆಟ್ ನಲ್ಲಿ ಶೇರ್ ಮಾಡಿ, ಯಾರಿಗಾದರೂ ಗ್ಯಾಸಿನ ಸಮಸ್ಯೆ ಇದ್ದರೆ ಅವರಿಗಾಗಿ ಈ ದೇಶಿ ಉಪಚಾರ ಎಂದು ಕ್ಯಾಪ್ಷನ್ ನೀಡಿ ಶೇರ್ ಮಾಡಿದ್ದಾನೆ. ಈ ಉಪಚಾರ ನೀಡುತ್ತಿರುವ ವಿಡಿಯೋ ನೆಟ್ಟಿಗರಿಗೆ ಮಾತ್ರ ತುಂಬಾ ತಮಾಷೆ ಎನಿಸುತ್ತಿದೆ. ಯೂಸರ್ಗಳು ತಮ್ಮ ಪ್ರತಿಕ್ರಿಯೆಯಲ್ಲಿ, ಈ ವ್ಯಕ್ತಿಯು ಇದೇ ರೀತಿ ಕಿಡ್ನಿ ಸ್ಟೋನ್ ನ ಸಮಸ್ಯೆಯನ್ನು ಪರಿಹರಿಸಿದರೆ ತುಂಬಾ ಒಳ್ಳೆಯದಾಗುತ್ತದೆ ಎಂದರೆ, ಇನ್ನೊಬ್ಬ ಈ ವಿಡಿಯೋ ಯಾವಾಗಿನದು ಮತ್ತು ಎಲ್ಲಿಯದು ಎಂದು ಕೇಳುತ್ತಿದ್ದಾನೆ. ಇನ್ನೂ ಕೆಲವರು ಈತ ಸರಿಯಾಗಿ ಗ್ಯಾಸಿನ ಉಪಚಾರವನ್ನು ಮಾಡುತ್ತಿದ್ದಾನೆಯೇ ಅಥವಾ ಬೇರೆ ಏನಾದರೂ ಮಾಡುತ್ತಿದ್ದಾನೆ ಎಂದು ಪ್ರಶ್ನೆ ಕೇಳಿದ್ದಾರೆ. ಇನ್ನೊಬ್ಬ ಯೂಸರ್ ಅಂತೂ ಈ ರೀತಿ ಉಪಚಾರ ಮಾಡುವವರ ಮೇಲೆ ಏನಾದರೂ ಸರಿಯಾದ ಆಕ್ಷನ್ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾನೆ. ಬೇರೊಬ್ಬ ಇಂಟರ್ನೆಟ್ ಯೂಸರ್ ಮೊದಲು ಈತನ ಬುದ್ಧಿಯ ಲಾಕ್ ಓಪನ್ ಮಾಡಿ ಎಂದಿದ್ದಾನೆ.