Articles

20 ವರ್ಷದ ಹುಡುಗಿ ಫೋಟೋ ತೋರಿಸಿ 45 ವರ್ಷದ ಮಹಿಳೆ ಜೊತೆ ಮಾಡಿಸುತ್ತಿದ್ದರು ಮದುವೆ: ವಿಷಯ ತಿಳಿದು ಮಂಟಪದಿಂದ ಓಡಿದ ವರ!

ಮದುವೆ ಎನ್ನುವುದು ಯುವಕ ಯುವತಿಯರಿಗೆ ಒಂದು ವಿಶೇಷವಾದ ಕ್ಷಣಗಳಿಗೆ ಸಾಕ್ಷಿಯಾಗುವ ಜೀವನದ ಮಹತ್ತರವಾದ ಘಟ್ಟವಾಗಿರುತ್ತದೆ. ಆದರೆ ಇಂತಹ ಮಹತ್ವದ ಘಟ್ಟದಲ್ಲೇ ಅವರೊಡನೆ ಮೋಸ ನಡೆದರೇ?? ಊಹೆ ಮಾಡುವುದು ಕಠಿಣ. ಆದರೆ ಇಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಉತ್ತರ ಪ್ರದೇಶದ ಇಟಾವಾದಲ್ಲಿ 20 ವರ್ಷದ ಯುವತಿಯ ಫೋಟೋವನ್ನು ತೋರಿಸಿ ಮದುವೆ ವೇಳೆಯಲ್ಲಿ 45 ವರ್ಷ ವಯಸ್ಸಿನ ಮಹಿಳೆಯನ್ನು ವಾಗಿ ಬಲವಂತವಾಗಿ ವರನಿಗೆ ಕೊಟ್ಟು ಮದುವೆ ಮಾಡಿಸುವ ಪ್ರಯತ್ನವನ್ನು ನಡೆಸಲಾಗಿದ್ದು, ಈ ವಂಚನೆಯ ಪ್ರಕರಣ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ವರನು ತನ್ನೊಡನೆ ವಂಚನೆ ಮಾಡಲಾಗುತ್ತಿದೆ ಎನ್ನುವುದನ್ನು ತಿಳಿದುಕೊಂಡು, ಅಲ್ಲಿಂದ ಕೂಡಲೇ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಬಂದು ತನ್ನನ್ನು ವಂಚಿಸಲು ಪ್ರಯತ್ನಿಸುತ್ತಿದ್ದ ಪುಂಡರ ವಿರುದ್ಧ ದೂರನ್ನು ದಾಖಲು ಮಾಡಿದ್ದಾನೆ. ಈ ಘಟನೆಯಲ್ಲಿ ಮದುವೆಯ ಹೆಸರಿನಲ್ಲಿ ವರನಿಗೆ ದೊಡ್ಡ ಮೋಸ ಮಾಡುವ ಪ್ರಯತ್ನವನ್ನು ಮಾಡಲಾಗಿದೆ.

ಈ ವಂಚನೆಯ ಮದುವೆಯ ವಿಷಯದ ಮಾಹಿತಿಯನ್ನು ತಿಳಿಯುವುದಾದರೆ, ಶತ್ರುಘ್ನ ಸಿಂಗ್ ಎನ್ನುವ ಹೆಸರಿನ ವ್ಯಕ್ತಿಗೆ ಇಬ್ಬರು ಮದುವೆ ದಲ್ಲಾಳಿಗಳು 20 ವರ್ಷ ವಯಸ್ಸಿನ ಹುಡುಗಿಯ ಫೋಟೋವನ್ನು ತೋರಿಸಿದ್ದಾರೆ. ಫೋಟೋ ನೋಡಿದ ಶತೃಘ್ನ ಸಿಂಗ್ ಅವರು ಮದುವೆಗೆ ಒಪ್ಪಿಗೆಯನ್ನು ನೀಡಿದ್ದಾರೆ. ಫೋಟೋದ ನಂಬಿಕೆಯ ಆಧಾರದ ಮೇರೆಗೆ ದಲ್ಲಾಳಿಗಳಿಗೆ 35000 ಸಾವಿರ ಮುಂಗಡ ಹಣವನ್ನು ಕೂಡಾ ನೀಡಿದ್ದಾರೆ. ಅನಂತರ ಮದುವೆಯ ದಿನ ಶತೃಜ್ಞ ದೇವಸ್ಥಾನಕ್ಕೆ ಬಂದಾಗ ತನ್ನ ಮದುವೆ 45 ವರ್ಷ ವಯಸ್ಸಿನ, ಎರಡು ಮಕ್ಕಳ ತಾಯಿಯ ಜೊತೆಗೆ ನಡೆಸುತ್ತಿರುವ ವಿಷಯವನ್ನು ತಿಳಿದುಕೊಂಡಿದ್ದಾರೆ. ತನ್ನೊಂದಿಗೆ ಮೋಸ ಆಗುತ್ತಿರುವುದನ್ನು ಕಂಡು ಕೋಪಗೊಂಡ ಆತ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾನೆ.

ಶತ್ರುಜ್ಞ ತನ್ನ ತಾಯಿಯ ಜೊತೆಗೆ ಪೊಲೀಸ್ ಠಾಣೆಗೆ ಹೋಗುವುದಾಗಿ ಹೇಳಿದ್ದಾರೆ. ಆಗ ಪರಿಸ್ಥಿತಿ ನಿಯಂತ್ರಣ ಕಳೆದುಕೊಳ್ಳುತ್ತಿರುವುದನ್ನು ನೋಡಿದ ದಲ್ಲಾಳಿಗಳು ಶತ್ರುಘ್ನ ಹಾಗೂ ಅವರ ಕುಟುಂಬವನ್ನು ಹೆದರಿಸಲು ಪ್ರಾರಂಭಿಸಿದ್ದಾರೆ. ಕೋಲುಗಳನ್ನು ಹಿಡಿದು ಕುಟುಂಬದ ಸದಸ್ಯರನ್ನು ಬೆದರಿಸಿ, ಅವರು ಓಡಲು ಪ್ರಾರಂಭಿಸಿದಾಗ ಅವರನ್ನು ಅಟ್ಟಿಸಿಕೊಂಡು ಬಂದಿದ್ದಾರೆ. ಶತ್ರುಜ್ಞ ಹೇಗೋ ತಮ್ಮ ಪ್ರಾಣವನ್ನು ಉಳಿಸಿಕೊಂಡು ಅವರಿಂದ ತಪ್ಪಿಸಿಕೊಂಡು ನೇರವಾಗಿ ಪೋಲಿಸ್ ಠಾಣೆಗೆ ಓಡಿ ಬಂದು ನಡೆದ ವಿಚಾರವನ್ನು ತಿಳಿಸಿ ದೂರು ದಾಖಲು ಮಾಡಿದ್ದಾರೆ. ಶತ್ರುಘ್ನ ಸಿಂಗ್ ಮಾತನಾಡುತ್ತಾ ಗ್ರಾಮದ ಇಬ್ಬರು ದಲ್ಲಾಳಿಗಳು ನನಗೆ 20 ವರ್ಷ ವಯಸ್ಸಿನ ಹುಡುಗಿಯ ಫೋಟೋ ವನ್ನು ತೋರಿಸಿದ್ದರು.

ಮದುವೆಯ ವಿಚಾರ ಮಾತನಾಡಲು ನೀಲಕಂಠ ಮಂದಿರದ ಬಳಿ ಬರಲು ಹೇಳಿದಾಗ ನಾನು ಅಲ್ಲಿಗೆ ಹೋಗಿದ್ದೆ, ಅಲ್ಲಿ ಒಬ್ಬ ಹುಡುಗಿಯನ್ನು ತೋರಿಸಿದರು. ಆಗ ನಾನು ಆ ಹುಡುಗಿಗೆ ಸಂಪ್ರದಾಯ ಪಾಲಿಸುತ್ತಾ ಶಗುನ್ ಎಂದು 1000 ರೂ ಹಾಗೂ ಸಿಹಿ ತಿನಿಸಿನ ಬಾಕ್ಸ್ ನೀಡಿದೆ. ಅನಂತರ ಮದುವೆಯ ಮಾತುಕತೆ ನಡೆಸಿದ್ದೆವು, ನನ್ನೊಂದಿಗೆ ನನ್ನ ಚಿಕ್ಕಮ್ಮ ಬಂದಿದ್ದರು, ಇಬ್ಬರು ದಲ್ಲಾಳಿಗಳು ನನಗೆ 35000 ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಮದುವೆ ನಿಶ್ಚಯವಾದ ನಂತರ ಕಾಳಿ ವಾಹನ ಮಂದಿರದಲ್ಲಿ ಮದುವೆ ಸಿದ್ಧತೆ ನಡೆಸಿರುವುದಾಗಿ, ಅಲ್ಲಿಗೆ ಬರಲು ಹೇಳಿದರು. ನಾನು ಮತ್ತು ನನ್ನ ಕುಟುಂಬದವರು ಅಲ್ಲಿಗೆ ಮದುಗೆಗಾಗಿ ಹೋದೆವು.

ಮದುವೆ ವೇಳೆಯಲ್ಲಿ ನನಗೆ ಅವರು ಮದುವೆ ಮಾಡಿಸುತ್ತಿರುವುದು 20 ವರ್ಷದ ಯುವತಿಯ ಜೊತೆಗಲ್ಲ, ಬದಲಿಗೆ 45 ವರ್ಷದ, ಎರಡು ಮಕ್ಕಳ ತಾಯಿಯಾಗಿರುವ ಹಿರಿಯ ಮಹಿಳೆಯೊಂದಿಗೆ ಎಂದು ನನಗೆ ಗೊತ್ತಾಯ್ತು ಎಂದು ಹೇಳಿದ್ದಾರೆ. ಶತ್ರುಘ್ನ ಅವರ ತಾಯಿ ಕೂಡಾ ಮದುವೆಯ ವಿಚಾರದಲ್ಲಿ ನಡೆದಂತಹ ಮೋಸದ ಬಗ್ಗೆ ಪೊಲೀಸರ ಮುಂದೆ ಮಾಹಿತಿಯನ್ನು ನೀಡಿದ್ದಾರೆ. ಆ ಕಳ್ಳರು ನನ್ನ ಮಗನಿಗೆ 45 ವರ್ಷ ವಯಸ್ಸಿನ ಮಹಿಳೆಯನ್ನು ಬಲವಂತವಾಗಿ ಮದುವೆ ಮಾಡುವ ಪ್ರಯತ್ನ ಮಾಡಿದರು. ನಾವು ಅದನ್ನು ವಿರೋಧಿಸಿದ ಕೂಡಲೇ ಕೋಲುಗಳನ್ನು ಎತ್ತಿಕೊಂಡು ನಮ್ಮನ್ನು ಕೊಲ್ಲುವ ಬೆದರಿಕೆಯನ್ನು ಹಾಕಿದರು. ನಮ್ಮ ಮೇಲೆ ದಾಳಿ ಮಾಡುವ ಪ್ರಯತ್ನವನ್ನು ನಡೆಸಿದರು ಎಂದು ಹೇಳಿದ್ದಾರೆ. ಎಲ್ಲಾ ವಿವರಗಳನ್ನು ಗಮನದಲ್ಲಿಟ್ಟುಕೊಂಡು ಇಟಾವಾ ಎಸ್ಪಿ ಸಿಟಿ ಕಪಿಲ್ ದೇವ್ ಸಿಂಗ್ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Leave a Comment

Your email address will not be published. Required fields are marked *