Articles

83 Movie: ಶ್ರೀಕಾಂತ್ ರ ಹನಿಮೂನ್ ಪ್ಲಾನ್ ಗೆ ಎಳ್ಳುನೀರು ಬಿಟ್ಟ ಕಪಿಲ್ ದೇವ್! ವರ್ಲ್ಡ್ ಕಪ್ ಗೆಲ್ಲುವ ಆಸೆ ಬಿಟ್ಟು ಹನಿಮೂನ್ ಸ್ಕೆಚ್ ಹಾಕಿದ್ದರಂತೆ ಶ್ರೀಕಾಂತ್! ನಂತರ ನಡೆದದ್ದೇ ಬೇರೆ…

ಟೀಮ್ ಇಂಡಿಯಾ 83 ರ ವರ್ಲ್ಡ್ ಕಪ್ ಗೆಲ್ಲುತ್ತದೆ ಎಂದು ಭಾರತಕ್ಕೆ ಅಷ್ಟೇ ಅಲ್ಲ, ಜಗತ್ತಿಗೂ ಅನಿಸಿರಲಿಕ್ಕಿಲ್ಲ. ಆದರೆ ನಾಯಕ ಕಪಿಲ್ ದೇವ್ ಮಾತ್ರ ಆಸೆ ಬಿಟ್ಟಿರಲಿಲ್ಲ. ನಾಯಕನ ಒಂದೇ ಒಂದು ಮಾತಿಗೆ ಮತ್ತು ಉತ್ಸಾಹಕ್ಕೆ ಟೀಮ್ ಇಂಡಿಯಾಗೆ ಆಡುವ ಬಲ ಸಿಕ್ಕಿತ್ತು. ಕೊನೆಗೆ ರಿಸಲ್ಟ್ ಸಹ ಅಷ್ಟೇ ಆಶ್ಚರ್ಯಕರವಾಗಿತ್ತು. ಭಾರತ 83 ವರ್ಲ್ಡ್ ಕಪ್ ಗೆದ್ದು ಬೀಗಿತ್ತು ಮತ್ತು ಜಗತ್ತು ಅಚ್ಚರಿಯಿಂದ ಹುಬ್ಬೇರಿಸುವಂತೆ ಮಾಡಿತ್ತು.

ಭಾರತ ಕ್ರಿಕೆಟ್ ತಂಡದ ಬಗ್ಗೆ ಹೀನಾಯವಾಗಿ ಮಾತನಾಡುವ ಬಾಯಿಗಳು ತನ್ನಾಂತಾನೆ ಮುಚ್ಚಲ್ಪಟ್ಟವು. ಭಾರತ ಇತಿಹಾಸ ನಿರ್ಮಿಸಿತ್ತು. ಸದ್ಯ ಇದರದ್ದೇ ಮೂವಿ ಎಲ್ಲಕಡೆಗೆ ಪ್ರಸಾರವಾಗಿದೆ. OTT ಪ್ಲಾಟ್ ಫಾರ್ಮ್ ಮೇಲೂ ಪ್ರದರ್ಶನ ಕಂಡಿದೆ. ಈ ಚಿತ್ರ ಕ್ರಿಕೆಟ್ ರಸಿಕರ ಮನಸ್ಸನ್ನು ಗೆಲ್ಲುವದರ ಜೊತೆಗೆ ಹಳೆಯ ನೆನಪುಗಳಿಗೂ ಮೆಲುಕು ಹಾಕಿದೆ. ಆ ಸಮಯದಲ್ಲಿ ಘಟಿಸಿದ ಒಂದು ರೋಚಕ ಕಥೆಯನ್ನು ಸಹ ಈ ಚಿತ್ರ ಬಿಚ್ಚಿಟ್ಟಿದೆ.

ಟೀಮ್ ಇಂಡಿಯಾದ ಆರಭಿಂಕ ಹಾಗೂ ಬಿರುಸಿನ ಹೊಡೆತದ ಆಟಗಾರ K. ಶ್ರೀಕಾಂತ್ ವರ್ಲ್ಡ್ ಕಪ್ ನ ಎರಡು ತಿಂಗಳು ಮೊದಲೇ ಮದುವೆಯಾಗಿದ್ದರು. ವರ್ಲ್ಡ್ ಕಪ್ ನಲ್ಲಿ ಭಾರತ ಎರಡು ಪಂದ್ಯಗಳನ್ನು ಗೆದ್ದಿತ್ತು. ಆದರೆ ಭಾರತ ಫೈನಲ್ ತಲುಪುತ್ತದೆ ಎಂಬ ಭಾವನೆ ಯಾರಲ್ಲಿಯೂ ಇರಲಿಲ್ಲ. ಹೀಗಾಗಿ ಶ್ರೀಕಾಂತ್ ಅವರು ಪತ್ನಿಯ ಜೊತೆ ಹನಿಮೂನ್ ಗೆಂದು ಅಮೆರಿಕಾಗೆ ಹೋಗುವ ಸಿದ್ಧತೆ ಮಾಡಿದ್ದರು. ಶ್ರೀಕಾಂತ್ ಆಗ 24 ವರ್ಷದವರಾಗಿದ್ದರು. ಟೀಮ್ ಇಂಡಿಯಾ ವರ್ಲ್ಡ್ ಕಪ್ ಏನು ಫೈನಲ್ ಗೂ ಹೋಗಲಿಕ್ಕಿಲ್ಲ ಎಂಬ ಮಾನಸಿಕತೆ ಹೆಚ್ಚು ಕಡಿಮೆ ಎಲ್ಲರಲ್ಲೂ ನಿರ್ಮಾಣವಾಗಿತ್ತು. ಈ ಕಾರಣದಿಂದಾಗಿ ಶ್ರೀಕಾಂತ್ ಅವರು ಅಮೆರಿಕಕ್ಕೆ ಹೋಗುವ ಟಿಕೆಟ್ ಬುಕ್ ಮಾಡಿದ್ದರು.

ಟೀಮ್ ಇಂಡಿಯಾದ ಅದೃಷ್ಟವೋ (ಶ್ರೀಕಾಂತ್ ಅವರ ದುರದೃಷ್ಟವೋ) ಏನೋ ಎಂಬಂತೆ ಭಾರತ ಫೈನಲ್ ಪ್ರವೇಶ ಮಾಡಿತು. ವಿಶೇಷ ವೆಂಬಂತೆ ಟೀಮ್ ಇಂಡಿಯಾ ಫೈನಲ್ ಮ್ಯಾಚ್ ಆಡುವ ದಿನಾಂಕ ಮತ್ತು ಶ್ರೀಕಾಂತ್ ಅವರು ಅಮೆರಿಕಾಗೆ ಹೋಗುವ ದಿನಾಂಕ ಎರಡು ಒಂದೇ ಆಗಿದ್ದವು. ವರ್ಲ್ಡ್ ಕಪ್ ಗೆದ್ದ ನಂತರ ಶ್ರೀಕಾಂತ್ ಅವರಿಗೆ ತಂಡದ ಜೊತೆಗೆ ಭಾರತಕ್ಕೆ ಮರಳಿ ಬರಬೇಕಾಯಿತು. ಹೀಗಾಗಿ ಶ್ರೀಕಾಂತ್ ಅವರ ಹನಿಮೂನ್ ಪ್ಲಾನ್ ಅಪೂರ್ಣವಾಗಿಯೇ ಉಳಿಯಿತು.

83 ಮೂವಿಯಲ್ಲಿ ಈ ಸೀನ್ ತೋರಿಸಲಾಗಿದೆ. ಶ್ರೀಕಾಂತ್ ಅವರು ಮಸ್ತಿಯಲ್ಲಿ ತಮ್ಮ ಪ್ಲಾನ್ ಹೇಳಿದ್ದನ್ನು ಸಹ ಈ ಚಿತ್ರದಲ್ಲಿ ತೋರಿಸಲಾಗಿದೆ. ಶ್ರೀಕಾಂತ್ ಅವರು ಭಾವುಕರಾಗಿ ಕಪಿಲ್ ದೇವ್ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದನ್ನು ಸಹ ಈ ಸೀನ್ ನಲ್ಲಿ ತೋರಿಸಿದ್ದಾರೆ.

Leave a Comment

Your email address will not be published. Required fields are marked *