VIDEO : ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಟ್ರಾವೆಲ್ ಮಾಡುವಾಗ ಅವರ ಸೆಕ್ಯೂರಿಟಿ ಹೇಗಿರುತ್ತದೆ ನೋಡಿ…!
ಜಗತ್ತಿನ ಮುಂದುವರೆದ ರಾಷ್ಟ್ರಗಳಲ್ಲಿ ಒಂದಾದ ರಷ್ಯಾ ದೇಶದ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಅವರು ಅತ್ಯಂತ ಶಿಸ್ತುಬದ್ಧ ಜೀವನ ಶೈಲಿ ಅಳವಡಿಸಿಕೊಂಡಿರುವ ವ್ಯಕ್ತಿ. ಅಷ್ಟೇ ಅಲ್ಲದೇ ಅವರು ತಮ್ಮ ರಕ್ಷಣೆಗಾಗಿ ಇಟ್ಟುಕೊಂಡಿರುವ ಸೆಕ್ಯೂರಿಟಿ ಟೀಮ್ ಕೂಡ ಅಷ್ಟೇ ಶಿಸ್ತುಬದ್ಧವಾಗಿದೆ. ಬನ್ನಿ ನೋಡೋಣ ಇವರ ರಕ್ಷಣೆಗೆ ಅದೆಂಥ ಟೀಮ್ ನಿಂತಿರುತ್ತದೆ ಅಂತ.
ಇವರು ಆಗಾಗ ವಿಶ್ವದ ಬೇರೆ ಬೇರೆ ದೇಶಗಳಿಗೆ ಪ್ರಯಾಣ ಬೆಳೆಸುತ್ತಿರುತ್ತಾರೆ, ವಿದೇಶಗಳಲ್ಲಿ ನಡೆಯುವ ಮೀಟಿಂಗ್ ಹಾಗೂ ಜೀ-20 ಯಂತಹ ಸಭೆಗಳಲ್ಲಿ ಭಾಗವಹಿಸಲು ಹೊರಡುತ್ತಾರೆ. ಇಂತಹ ಸಮಯದಲ್ಲಿ ಹಾಗೂ ಪುಟಿನ್ ಎಲ್ಲೇ ಹೋದರೂ ಜಗತ್ತಿನ ಅತ್ಯಂತ ವೆಲ್ ಟ್ರೈನ್ಡ್ ಯಂಗ್ & ಎನರ್ಜಿಟಿಕ್ ಗಾರ್ಡ್ ಗಳು ಇವರ ಭದ್ರತೆಗೆ ತಯಾರಾಗಿ ನಿಂತಿರುತ್ತಾರೆ.
ಇವರ ರಕ್ಷಣೆಗಾಗಿ ರಷ್ಯನ್ ಮಿಲಿಟರಿ ಜಗತ್ತಿನ ಮೂಲೆ ಮೂಲೆಗೂ ಹೋಗುತ್ತದೆ, ಅಷ್ಟೇ ಅಲ್ಲದೇ ವ್ಲಾದಿಮೀರ್ ಪುಟಿನ್ ಅವರು ಎಲ್ಲೇ ಹೋದರೂ ತಮ್ಮದೇ ಆದ ಒಂದು ಗತ್ತಿನಲ್ಲಿ ಹೋಗುತ್ತಾರೆ. ಇವರ ರಕ್ಷಣೆ ಎಷ್ಟರ ಮಟ್ಟಿಗೆ ಇರುತ್ತದೆಂದರೆ. ಇವರ ಅವಶ್ಯಕತೆ ಇಲ್ಲದೆ ಇವರ ಸಮೀಪ ಯಾರನ್ನೂ ಬಿಡುವುದಿಲ್ಲ.
ಇನ್ನೂ ವಿಶೇಷ ಎಂದರೆ ಅದು ದೇಶದ ಹೊರಗೆ ಇರಲಿ ಒಳಗೆ ಇರಲಿ, ಅವರು ಬೆಳಗಿನ ಉಪಹಾರ ಸೇವಿಸಿದ ನಂತರ ಎರಡು ಘಂಟೆ ವ್ಯಾಯಾಮ ಮುಗಿಸಿದ ಕೂಡಲೇ ಇವರ ನಿತ್ಯದ ಕೆಲಸ ಆರಂಭವಾಗುತ್ತವೆ. ಅಲ್ಲಿಂದಲೇ ಇವರೊಂದಿಗೆ ಭದ್ರತಾ ಸೇವೆ ಆರಂಭವಾಗುತ್ತದೆ.

ಜಗತ್ತಿನ ಎಲ್ಲಾ ನಾಯಕರು ಹೆಲಿಕಾಪ್ಟರ್ ಬಳಸುವುದು ಸಾಮಾನ್ಯ, ಆದರೆ ಪುಟಿನ್ ಅವರು ಯಾವಾಗಲೂ ತಮ್ಮ ಕಚೇರಿಗೆ ತೆರಳಲು ಕೂಡ ಹೆಲಿಕಾಪ್ಟರ್ ಬಳಸುತ್ತಾರೆ. ಅದು ಕೂಡ Mi-8 ಹೆಲಿಕಾಪ್ಟರ್. ಈ ಹೆಲಿಕಾಪ್ಟರ್ ನ ವಿಶೇಷತೆ ಎಂದರೆ, ಇದು ಕಾಮನ್ ಹೇಲಿಕಾಪ್ಟರ್ ಆಗಿದ್ದು ಇದನ್ನು ಪುಟಿನ್ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಫಿಕೇಷನ್ ಮಾಡಿಸಿದ್ದಾರೆ.
ಇದರಲ್ಲಿ ಒಂದು ಪುಟ್ಟ ಮೀಟಿಂಗ್ ಟೇಬಲ್, ಎಲ್ ಸಿ ಡಿ ಗಳು, ಕಮ್ಯುನಿಕೇಷನ್ ಸಿಸ್ಟಮ್ ಗಳಂತಹ ಅವಶ್ಯಕವಾದ ವ್ಯವಸ್ಥೆ ಇದ್ದೆ ಇದೆ. ಇನ್ನೂ ವಿಶೇಷ ಎಂದರೆ ಇದರಲ್ಲಿ ರೆಫ್ರಿಜೆರೇಟರ್ ಹಾಗೂ ಒಂದು ಮಿನಿ ಕಿಚನ್ ಕೂಡ ಇದೆಯಂತೆ! ಈ ವಿಶೇಷ ರೀತಿಯಲ್ಲಿ ಬದಲಾವಣೆ ಮಾಡಲ್ಪಟ್ಟ ಹೆಲಿಕಾಪ್ಟರ್ ನ ಬೆಲೆ ಸಾಧಾರಣ ಹೆಲಿಕಾಪ್ಟರ್ ಗಿಂತ ಸಾಕಷ್ಟು ಪಟ್ಟು ಜಾಸ್ತಿ ಇದ್ದು, ಪುಟಿನ್ ಹತ್ತಿರ ಇಂತಹ ಎರಡು ಹೇಲಿಕಾಪ್ಟರ್ ಇವೆ.
ಎಲ್ಲೆಲ್ಲಿ ಹೆಲಿಪ್ಯಾಡ್ ಗಳು ಇಲ್ಲಯೋ ಅಲ್ಲೆಲ್ಲ ರಸ್ತೆ ಮಾರ್ಗವಾಗಿ ಹೋಗುತ್ತಾರೆ. ಇವರು ಎಲ್ಲಿಯೂ ಕೂಡ ತಮ್ಮ ರಕ್ಷಣೆಯ ವಿಷಯದಲ್ಲಿ ಎಂದಿಗೂ ರಾಜೀ ಮಾಡಿಕೊಳ್ಳುವುದಿಲ್ಲ. ಇವರ ಕಾರಿನ ಬಗ್ಗೆ ಮಾತನಾಡುವುದಾದರೆ, ಅಮೇರಿಕಾದೊಂದಿಗಿನ ಬಾಂಧವ್ಯದ ಕೊರತೆಯಿಂದಾಗಿ ಅಲ್ಲಿನ ಗಾಡಿಗಳನ್ನು ಬಳಸಲು ನಿರಾಕರಿಸುವ ಪುಟಿನ್ ಅವರು ರಷ್ಯಾ ನಿರ್ಮಿತ ಕಾರನ್ನೇ ಬಳಸುತ್ತಾರೆ.

ಅದು ಅಮೇರಿಕಾ ಅಧ್ಯಕ್ಷರು ಬಳಸುವ ಕಾರಿಗಿಂತಲೂ ಅಂದರೆ ಜಗತ್ತಿನಲ್ಲಿ ಎಲ್ಲಾ ದೇಶಗಳ ಪ್ರೆಸಿಡೆಂಟ್ ಗಳು ಬಳಸುವ ಕಾರಿಗಿಂತಲೂ ಹೆಚ್ಚು ವ್ಯವಸ್ಥಿತವಾಗಿದೆ. ಅಲ್ಲದೇ ಇದರಲ್ಲಿ ಒಂದು ವಿಶೇಷ ಕಮ್ಯುನಿಕೇಷನ್ ಸಿಸ್ಟಮ್ ಕೂಡ ಅಳವಡಿಸಲಾಗಿದೆ, ಇದು ಬು’ಲೆ’ಟ್ ಪ್ರೂಫ್ ಹಾಗೂ ಬಾಂ'”ಬ್ ಪ್ರೂಫ್ ಕೂಡ ಆಗಿದೆ.
ಇನ್ನೂ ವಿಶೇಷ ಎಂದರೆ ಇದರ ನಾಲ್ಕು ಟೈಯರ್ ಗಳು ಬಸ್ಟ್ ಆದರೂ ಕೂಡ ಇದು ಘಂಟೆಗೆ 80 ಕಿಲೋಮೀಟರ್ ವೇಗದಲ್ಲಿ 30 ಕಿಲೋಮೀಟರ್ ವರೆಗೂ ಓಡಬಲ್ಲದು! ಪುಟಿನ್ ಅವರ ವಾಹನ ಮುಂದೆ ಹೋಗಲು ಶುರು ಮಾಡಿದರೆ ಸಾಕು ನಾಲ್ಕು ದಿಕ್ಕಿನಿಂದಲೂ ಇವರ ಗಾಡಿಗೆ ಎಸ್ಕಾರ್ಟ್ ಶುರುವಾಗುತ್ತದೆ.
ಇವರ ಗಾಡಿಗೆ ಒಟ್ಟು ಹತ್ತು ಜನ ಡ್ರೈವರ್ಸ್ ಇದ್ದು, ಅವರೆಲ್ಲ ವೆಲ್ ಟ್ರೈನ್ಡ್ ಕಮಾಂಡೋಗಳೇ ಆಗಿರುವುದು ವಿಶೇಷ. ಇವರು ಕೇವಲ ಡ್ರೈವರ್ ಕೆಲಸ ಮಾಡದೇ ಅವಶ್ಯಕತೆ ಬಿದ್ದರೆ ಪುಟಿನ್ ಅವರ ರಕ್ಷಣೆಗೂ ನಿಲ್ಲುತ್ತಾರೆ. ಇವರ ಡ್ರೈವರ್ ಆಗಲು ಬರೋಬ್ಬರಿ ಹತ್ತು ವರ್ಷ ತರಬೇತಿ ನೀಡಲಾಗುತ್ತದೆ! ಇವರು ಫೈರಿಂಗ್ ಮಾಡುತ್ತಲೇ ಗಾಡಿಯನ್ನು ವೇಗವಾಗಿ ರಿವರ್ಸ್ ಚಲಾಯಿಸುವಲ್ಲಿ ನಿಪುಣರಾಗಿರುತ್ತಾರೆ.

ಪುಟಿನ್ ಅವರು ಎಲ್ಲಿಗೆ ಹೋದರೂ ಎಲ್ಲವೂ ಪ್ರೀ ಪ್ಲಾನ್ಡ್ ಆಗಿಯೇ ಇರುತ್ತವೆ, ಯಾವ ಗಾಡಿ ಯಾರು ಚಲಾಯಿಸಬೇಕು, ಯಾವ ಲೇನ್ ನಲ್ಲಿ ಪುಟಿನ್ ಗಾಡಿ ಇರಬೇಕು, ಯಾವ ರೀತಿ ವ್ಯೂಹ ಹೆಣೆಯಬೇಕು, ಯಾವ ಗೇಟ್ ನಿಂದ ಪ್ರವೇಶ ಪಡೆಯಬೇಕು, ಎಲ್ಲಿಂದ ಹೊರಗೆ ಬರಬೇಕು, ಇಷ್ಟೇ ಅಲ್ಲದೇ ಯಾರು ಎಂತಹ ಬಟ್ಟೆ ಹಾಕಿಕೊಳ್ಳಬೇಕು ಎಂಬೆಲ್ಲ ವಿಷಯಗಳ ಬಗ್ಗೆ ಮೊದಲೇ ನಿರ್ಧರಿಸಲಾಗಿರುತ್ತದೆ.
ಇವುಗಳಲ್ಲಿ ಒಂದೇ ಒಂದು ಘಟನೆ ತಪ್ಪಿದರೂ ಕೂಡ ಎಚ್ಚರಿಕೆ ಘಂಟೆ ಬಾರಿಸಲು ಶುರು ಮಾಡುತ್ತದೆ. ಇನ್ನೂ ಇವರ ವಿಮಾನ ಸಮುದ್ರದ ಮೇಲೆ ಹಾರಾಡುವಾಗ ಇವರು ಬಳಸುವ ವಿಶೇಷ ವಿಮಾನ ಒಂದಿದೆ ಅದರ ಹೆಸರು Illushyn II-96 300 pu ಎಂದಿದೆ ಇದು ರಷ್ಯದಲ್ಲೇ ನಿರ್ಮಿಸಲಾದ ವಿಮಾನವಾಗಿದೆ.
ಇಂತಹ ನಾಲ್ಕು ವಿಮಾನಗಳು ಇವೆ, ರಕ್ಷಣೆ ವಿಷಯದಲ್ಲಿ ಇದು ಯಾವುದೇ ರೀತಿಯಲ್ಲೂ ರಾಜಿಯಾಗುವುದಿಲ್ಲ. ಅವುಗಳನ್ನು ಪುಟಿನ್ ಅವರ ವಾಯುಮಾರ್ಗದ ಆಫೀಸ್ ಎಂದೇ ಕರೆಯಲಾಗುತ್ತದೆ. ಇಲ್ಲಿಂದಲೇ ಎಲ್ಲಾ ವ್ಯವಸ್ಥೆಗಳನ್ನು ನೋಡುವ ಪುಟಿನ್ ಅವರು ಆಫೀಸರ್ ಗಳಿಗೆ ಮಾಹಿತಿ ನೀಡುವುದರಿಂದ ಹಿಡಿದು ಎಲ್ಲಾ ವ್ಯವಸ್ಥೆ ಇರುತ್ತದೆ.

ಇದರಲ್ಲಿ ಎಂತಹ ಕಮ್ಯುನಿಕೇಷನ್ ಸಿಸ್ಟಮ್ ಅಳವಡಿಸಲಾಗಿದೆಯೆಂದರೆ, ಜಗತ್ತಿನ ಯಾವುದೇ ಮೂಲೆಯಲ್ಲಿ ಎಷ್ಟೇ ಎತ್ತರದಲ್ಲಿ ಹಾರುತ್ತಿದ್ದರು ಅಲ್ಲಿಂದಲೇ ಸೀಕ್ರೆಟ್ ಮೆಸೇಜ್ ಕಳಿಸಲಾಗುತ್ತದೆ. ಅಷ್ಟೇ ಅಲ್ಲದೇ ಯಾವುದಾದರೂ ಸಮಸ್ಯೆ ಎದುರಾದಲ್ಲಿ ಪುಟಿನ್ ಅವರನ್ನು ಇದರಿಂದ ಹೊರಗೆ ಹಾಕಲು ಅಂದರೆ ಬೇರೆ ವಿಮಾನಕ್ಕೆ ಶಿಫ್ಟ್ ಮಾಡುವ ವ್ಯವಸ್ಥೆ ಕೂಡ ಇದೆ!
ಅಕಸ್ಮಾತ್ ಯಾರಾದರೂ ದಾ”ಳಿ ಮಾಡಿದರೂ ಕೂಡ ಈ ವಿಮಾನದ ರಕ್ಷಣೆಗೆ ಮತ್ತೆರಡು ಯುದ್ಧ ವಿಮಾನ ಇದ್ದೇ ಇರುತ್ತವೆ. ಇನ್ನು ಇದೇ ವಿಮಾನದಲ್ಲಿ ಒಂದು ವೆಲ್ ಇಕ್ವೀಪ್ಡ ಜಿಮ್ ಹಾಗೂ ಐಷಾರಾಮಿ ಬೆಡ್ರೂಮ್, ಕಿಚನ್ ಹಾಗೂ ಮೀಟಿಂಗ್ ಹಾಲ್ ಕೂಡ ಇದೆಯಂತೆ! ಇಷ್ಟೇ ಅಲ್ಲದೇ ಕೆಲವೊಮ್ಮೆ ತಮ್ಮ ಮಿತ್ರರೊಂದಿಗೆ ಜಲ ಮಾರ್ಗವಾಗಿ ರಿಲ್ಯಾಕ್ಸ್ ಗಾಗಿ ಹೋಗುವುದು ಉಂಟು ಅಲ್ಲಿಯೂ ಕೂಡ ಒಂದು ಐಷಾರಾಮಿ ವಿಮಾನ ಇದೆ.
ವಾಯು, ಭೂ ಹಾಗೂ ಜಲಮಾರ್ಗವಾಗಲಿ ಒಟ್ಟಿನಲ್ಲಿ ಪುಟಿನ್ ಅವರು ತಮ್ಮದೇ ಆದ ಸ್ಟೈಲ್ ನಲ್ಲೆ ಹೋಗುತ್ತಾರೆ, ಅಲ್ಲದೇ ರಕ್ಷಾಣಾತ್ಮಕವಾಗಿಯೂ ಕೂಡ ಇರುತ್ತಾರೆ. ಅಮೇರಿಕ ಅಧ್ಯಕ್ಷರು, ಉತ್ತರ ಕೋರಿಯಾ ಅಧ್ಯಕ್ಷರು, ಸೌದಿ ದೊರೆ, ಚೀನಾದ ಅಧ್ಯಕ್ಷರ, ಭಾರತದ ಪ್ರಧಾನಿ… ಇವರೆಲ್ಲರ ಭದ್ರತೆ ಹೆಚ್ಚು ಕಡಿಮೆ ಒಂದೇ ಥರ ಇದೆ. ಮೇಲೆ ತಿಳಿಸಿರುವ ಮಾಹಿತಿಯನ್ನು ಒಳಗೊಂಡ ಒಂದು ಹಿಂದಿ ವಿಡಿಯೊ ಮೇಲಿದೆ, ಆಸಕ್ತಿ ಇದ್ದರೆ ನೋಡಿ…
-ಮಂಜುನಾಥ್