VIDEO : ಇದು ಕೋರೋನ ವಾರ್ಡ್ : ಇಲ್ಲಿ ಏನೇನಿದೆ ಅಂತ ನೋಡಿದ್ರೆ ದಂಗಾಗ್ತಿರಿ!
ಕೋವಿಡ್ ವಾರ್ಡ್ ಹೇಗಿರ್ತಾವೆ ಅಂತ ಸಾಕಷ್ಟು ಉದಾಹರಣೆ ಕೊಡಬಹುದು. ಆದರೆ ಕೋವಿಡ್ ವಾರ್ಡ್ ಹೇಗಿರಬಾರದು ಎಂಬುದಕ್ಕೆ ಒಳ್ಳೆ ಉದಾಹರಣೆ ಈ ವಿಡಿಯೊ. ಚಿಕ್ಕದೊಂದು ಜನರಲ್ ವಾರ್ಡೇ ಇಲ್ಲಿ ಕೊರೋನ ವಾರ್ಡ್. ನಮ್ಮ ಸರಕಾರಿ ಆಸ್ಪತ್ರೆ ಇನ್ನೂವರೆಗೂ ಹೇಗಿದಾವೆ ಎಂಬುದಕ್ಕೆ ಇದು ತಾಜಾ ಉದಾಹರಣೆ.
ಹಾಗೆಯೇ ನಮ್ಮವರು ಎಷ್ಟೊಂದು ಕೇರ್ ಲೆಸ್ ಎಂಬುದಕ್ಕೂ ನಿದರ್ಶನ, ಜೊತೆಗೇ ಕೊರೋನ ಯಾಕೆ ಕಂಟ್ರೋಲ್ ಆಗ್ತಿಲ್ಲ ಅನ್ನೋದಕ್ಕೂ ಇದು ಎಕ್ಸಾಂಪಲ್ ಆಗಿ ಕಾಣುತ್ತದೆ. ಇಲ್ಲಿ ಮಾಮೂಲಿ ಲಕ್ಷಣಗಳಿರುವ ಕೊರೋನ ರೋಗಿಗಳಿಂದ ಹಿಡಿದು, ಸ್ಥಿತಿ ಗಂಭೀರವಾಗಿರುವ ಪೇಶೆಂಟ್ ಸಹ ಇದ್ದಾರೆ.
ಅಷ್ಟೇ ಏಕೆ ಇಲ್ಲಿ ಕೊರೋನ ಬಂದು ಸ’ತ್ತ’ವ’ರ ಬಾ’ಡಿ ಕೂಡ ನೋಡಬಹುದು. ಅದೆಲ್ಲ ಒತ್ತಟ್ಟಿಗಿರಲಿ, ಅಲ್ಲಿ ಚೆನ್ನಾಗಿದ್ದವರ ಪರಸ್ಥಿತಿ ಹೇಗಿದೆ ನೋಡಿ, ಅಲ್ಲಿರುವವರಿಗೆ ಏನೋ ಮಾಮೂಲಿ ಕಾಯಿಲೆ ಬಂದಿದೆಯೇನೋ ಎಂಬಂತೆ ಅವರ ಸಂಬಂಧಿಕರು ಅಲ್ಲೇ ಸುತ್ತ ಕೂತಿದ್ದಾರೆ!
ಅವರಿಗೆ ಮಾಸ್ಕ್ ಬಿಟ್ಟು ಬೇರೆ ಏನೂ ರಕ್ಷಣಾ ಕವಚ ಧರಿಸಿಲ್ಲ, ಕೆಲವರು ಅಲ್ಲೇ ಮಾಸ್ಕ್ ತಗೆದು ಊಟ ಮಾಡುತ್ತಿದ್ದಾರೆ! ಆ ಜನ ಒತ್ತಟ್ಟಿಗಿರಲಿ, ಸ್ವತಃ ಅಲ್ಲಿನ ಸಿಬ್ಬಂದಿ ಕೂಡ ಮಾಸ್ಕ್ ಬಿಟ್ಟು ಬೇರೇನೂ ಹಾಕಿಲ್ಲ! ಇಂಥ ಕೊರೋನ ವಾರ್ಡ್ ಕೂಡ ಇದ್ದಾವಾ ಎಂದು ನೋಡಿದವರಿಗೆಲ್ಲ ಗಾಭರಿಯಾಗುವುದು ಸತ್ಯ.
ಇಂಥ ಪರಸ್ಥಿತಿಯಲ್ಲಿ ರೋಗಿ ಹುಷಾರಾಗುವುದು ಒತ್ತಟ್ಟಿಗಿರಲಿ, ಅಲ್ಲಿ ನೆರೆದಿರುವ ಅವರ ಸಂಬಂಧಿಕರೂ ಸಹ ಸೋಂಕಿಗೆ ಒಳಗಾಗುವುದರಲ್ಲಿ ಸಂಶಯವಿಲ್ಲ. ಇದು ಯಾವುದೋ ಗಡಿಭಾಗದ ಚಿಕ್ಕ ತಾಲೂಕು ಆಸ್ಪತ್ರೆಯಲ್ಲ, ಇದು ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆ! ಒಂದು ಜಿಲ್ಲಾಸ್ಪತ್ರೆ ಹೀಗೂ ಇರಲು ಸಾಧ್ಯವಾ?
ಸೋಂಕಿನಿಂದ ಮೃ”ತ’ಪ’ಟ್ಟ ಶ”ವದ ಪಕ್ಕದಲ್ಲೇ ರೋಗಿ, ಅವರ ಪಕ್ಕದಲ್ಲೇ ಅವರ ಸಂಬಂಧಿಕರು, ಅಲ್ಲಿಯೇ ಸಿಬ್ಬಂಧಿ, ಅಲ್ಲಿಯೇ ಊಟ – ವಸತಿ, ಹೀಗಾದರೆ ಕೊರೋನ ನಿಯಂತ್ರಣವಾಗುವುದಾದರೂ ಹೇಗೆ? ಜನ ಹುಷಾರಾಗಲು ಆಸ್ಪತ್ರೆಗೆ ಬರುತ್ತಾರೆ, ಆದರೆ ಇದು ಮತ್ತೊಂದಿಷ್ಟು ರೋಗಿಗಳನ್ನು ತಯಾರಿಸುವ ಹಾಟ್ ಸ್ಪಾಟ್ ಆಗಿದೆ.
ಇನ್ನೂ ಅಚ್ಚರಿಯೆಂದರೆ, ಇಲ್ಲಿರುವ ಅವರ ಸಂಬಂಧಿಕರು ಆವಾಗಾವಾಗ ಹೊರಗಡೆ ತಿರುಗಾಡಿ ಕೂಡ ಬರುತ್ತಾರೆ! ಒಟ್ಟಿನಲ್ಲಿ ಇಲ್ಲಿ ಯಾವುದಕ್ಕೂ ನಿರ್ಬಂಧ ಇಲ್ಲ, ಗೈಡ್ ಲೈನ್ಸ್ ಅಂತೂ ಗಾಳಿಯಲ್ಲಿ ಹಾರಾಡುತ್ತಿವೆ. 12 ದಿನ ಕಠಿಣ ಲಾಕ್ ಡೌನ್ ಮಾಡಿದರೂ ಜಿಲ್ಲೆಯಲ್ಲಿ ಸೋಂಕು ಕಡಿಮೆಯಾಗಿಲ್ಲ, ಇಂಥ ಆಸ್ಪತ್ರೆಗಳಿದ್ದರೆ ಕಡಿಮೆಯಾಗುವುದಾದರೂ ಹೇಗೆ?
ಕೊರೋನ ಎರಡನೇ ಅಲೆಯಿಂದ ಇಡೀ ಇಂಡಿಯಾ ತತ್ತರಿಸುತ್ತಿದೆ. ಈಗಾಗಲೇ ಭಾರತದಲ್ಲಿ ಲಕ್ಷಕ್ಕೂ ಅಧಿಕ ಜನ ಈ ಸೋಂಕಿನಿಂದ ಮೃ’ತಪಟ್ಟಿದ್ದಾರೆ. ರಾಜ್ಯದಲ್ಲೂ ದಿನಕ್ಕೆ ನೂರಾರು ಜನ ಪ್ರಾ’ಣ ಕಳೆದುಕೊಳ್ಳುತ್ತಿದ್ದಾರೆ. ಆದರೂ ಕೂಡ ಸ್ವಲ್ಪಾನಾದ್ರು ಜವಾಬ್ಧಾರಿಯಿಂದ ವರ್ತಿಸುವುದು ಬೇಡವಾ?
ಆರೋಗ್ಯವಂತ ಸಂಬಂಧಿಕರನ್ನು ಯಾರಾದರೂ ಕೋವಿಡ್ ವಾರ್ಡ್ ನಲ್ಲಿ ಇರಿಸಿಕೊಳ್ಳುತ್ತಾರಾ? ಸಿಬ್ಬಂಧಿ ಕೂಡ ಪಿಪಿಇ ಕಿಟ್ ಕೂಡ ಹಾಕಿಕೊಳ್ಳದೇ ಅಲ್ಲಿದ್ದಾರೆ, ಹೀಗೂ ಉಂಟಾ? ರೋಗಿಯ ಎದುರಿಗೇ ಶ”ವವನ್ನು ಪ್ಯಾ’ಕ್ ಮಾಡುತ್ತಿದ್ದಾರೆ, ಹೀಗಾದಾಗ ಆತನ ಮನೊಸ್ಥೈರ್ಯ ಏನಾಗಬಹುದು. ಬದುಕುವ ಛಲ ಇರುವವನಿಗೂ ಇದನ್ನೆಲ್ಲ ನೋಡಿ ಸಾ’ಯ್ತಿನೇನೋ ಅನಿಸುತ್ತದಲ್ವಾ?
ಜನರಾದರೂ ದಿನನಿತ್ಯ ಟಿ.ವಿ ನಲ್ಲಿ ಕಾಯಿಲೆಯ ಗಂಭೀರತೆ ನೋಡುತ್ತೀರಿ, ಅವರಾದರೂ ಕೊರೊನ ವಾರ್ಡ್ ನಿಂದ ದೂರ ಇರಬೇಕು, ಸಾಧ್ಯವಾದಷ್ಟು ರಕ್ಷಣೆ ಮಾಡಿಕೊಳ್ಳಬೇಕು. ಅದು ಬಿಟ್ಟು ಅವರಿಗೆನೋ ಹೊಟ್ಟೆ ನೋವು ಬಂದಿದೆ, ಆಸ್ಪತ್ರೆ ಸೇರಿಸಿದಿವಿ ಅನ್ನೊ ಹಾಗೆ ಪಕ್ಕದಲ್ಲೇ ಕುಳಿತು ಆರೈಕೆ ಮಾಡುವುದಲ್ಲ, ಜೊತೆಗೆ ತಾವೂ ಅಲ್ಲೇ ಊಟ ಮಾಡುವುದು ಎಷ್ಟು ಅ’ಪಾ’ಯ’ಕಾರಿ ಗೊತ್ತಾ?
ಜನರನ್ನು ಸೈಡಿಗಿಡೋಣ, ಆಸ್ಪತ್ರೆಯ ವೈದ್ಯರು, ಆಡಳಿತ ಮಂಡಳಿ ಏನ್ ಮಾಡ್ತಾ ಇದೆ, ಇದನ್ನೆಲ್ಲ ವ್ಯವಸ್ಥಿತವಾಗಿ ನೋಡಿಕೊಳ್ಳುವುದು ಅವರ ಕರ್ತವ್ಯ ಅಲ್ವಾ? ಕೊರೋನ ವಾರ್ಡ್ ನಲ್ಲಿ ದನದ ದೊಡ್ಡಿಯ ಹಾಗೆ ಜನರನ್ನು ಗುಡ್ಡೆ ಹಾಕಿಕೊಂಡು ಕೂಡುವುದು ಅದ್ಯಾವ ಜಾಣತನ. ಇಷ್ಟಕ್ಕೂ ಇಲ್ಲಿಗೆ ವೈದ್ಯಾಧಿಕಾರಿಗಳು ಬಂದಾದರೂ ಬರುತ್ತಾರಾ ಅಂತ ಸಂಶಯ ಬರ್ತಿದೆ. ವಿಡಿಯೊ ನೋಡಿ, ಕಾಮೆಂಟ್ ಮಾಡಿ.
-Team Infotrend