VIDEO : ನಕ್ಕು ನಕ್ಕು ಸಾಕಾಗುವ 20 ಸೆಕೆಂಡಿನ ವಿಡಿಯೊ : ಕರೋನ ಲಾಕ್ ಡೌನ್ ನಿಂದ ಜನರ ಮನಸ್ಥಿತಿ ಹೇಗಾಗಿದೆ ನೋಡಿ!

ಇಡೀ ಜಗತ್ತಿನಲ್ಲಿ ಕರೋನ ಎಂಬ ಹೆಮ್ಮಾರಿಯ ರೌದ್ರ ನರ್ತನದಿಂದ ಜನರು ಬಳಲಿ ಬೆಂಡಾಗಿ ಹೋಗಿರುವುದು ನಿಮಗೆಲ್ಲ ಗೊತ್ತೇ ಇದೆ. ಇದೇ ಕರೋನದಿಂದ ಭಾರತದಲ್ಲಿ ಹಾಗೂ ಇಡೀ ಜಗತ್ತಿನಾದ್ಯಂತ ಹಲವು ಕಡೆ ಕಳೆದ ವರ್ಷ ಹಾಗೂ ಈ ವರ್ಷ ಕೂಡ ಲಾಕ್ ಡೌನ್ ಮಾಡಿದ್ದಾರೆ, ಈ ಲಾಕ್ ಡೌನ್ ನಿಂದ ಸಾಕಷ್ಟು ಜನರಿಗೆ ಸಮಸ್ಯೆ ಆಗಿದ್ದಂತೂ ನಿಜ.

ಆದರೆ ಯಾವಾಗಲೂ ಕರೋನ ಆಕ್ಸಿಜನ್ ಕೊರತೆ, ಅಲ್ಲಿ ಅಷ್ಟು ಕೇಸ್ ಇಲ್ಲಿ ಇಷ್ಟು ಕೇಸ್ ಎಂದೇ ನೋಡುವ ನಮಗೆ ಕೆಲವೊಂದು ಕಾಮಿಡಿ ವಿಡಿಯೋಗಳು ಮನಸೆಳೆದಿದ್ದು ಸೆಳಿತಾ ಇರೋದು ನೀವು ಕೂಡ ನೋಡಿಯೇ ಇರುತ್ತೀರಾ. ಅವುಗಳಲ್ಲಿ ಒಂದೊಂದಂತೂ ನಕ್ಕು ನಗಿಸಿ ಸುಸ್ತು ಮಾಡುತ್ತವೆ.

ಬೈಕ್ ಮೇಲೆ ಹೋಗಿ ಪೊಲೀಸರಿಂದ ಹೊಡೆತ ತಿನ್ನುವುದನ್ನು ಕಾಮಿಡಿ ಮಾಡಿಕೊಂಡು ಇರುವ ಜನ ಸಿಗೋದು ಅಂದ್ರೆ ಅದು ಭಾರತದಲ್ಲಿ ಮಾತ್ರ ಎಂದೆನಿಸುತ್ತದೆ. ಇನ್ನು ಮನೆಯ ಗೇಟ್ ಬಳಿ ಹಾಗೂ ಬಾಲ್ಕನಿಯಲ್ಲಿ ಕುಳಿತುಕೊಂಡು ಹೋಗೋ ಅಕ್ಕ ಪಕ್ಕದ ಮನೆಯವರ ಬಳಿ ಗುಟ್ಕಾ, ಎಲೆ, ಸುಣ್ಣ ಹಾಗೂ ಸಾರಾಯಿ ಇದೆಯಾ ಎಂದು ಸನ್ನೆ ಮಾಡಿ ಕೇಳುವ ಈ ವಿಡಿಯೋ ಅಂತೂ ನಕ್ಕು ನಗಿಸುತ್ತದೆ.

ಇದಷ್ಟೇ ಅಲ್ಲದೇ ಬೈಕ್ ಜೊತೆಗೆ ಮಾತನಾಡುವ ರೀತಿಯಲ್ಲಿ ಮಾಡಿರುವ ವಿಡಿಯೋ ನೋಡಿದರಂತೂ ಹೊಟ್ಟೆ ಹುಣ್ಣಾಗಿಸುತ್ತದೆ. ಹಾಗೆಯೇ ಲಾಕ್ ಡೌನ್ ನಲ್ಲಿ ಮನೆಯಲ್ಲಿರುವ ಗಂಡಸರ ಪಾಡು ಅಂತ ಮಾಡಿರೋ ವಿಡಿಯೋಗಳು ಸಾಕಷ್ಟು ಇವೆ, ಪಾತ್ರೆ ತೊಳೆಯುತ್ತಿರುವ, ತರಕಾರಿ ಹೆಚ್ಚುತ್ತಿರುವ ಗಂಡಸರು, ಒಂದಾ ಎರಡಾ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನೆಯಲ್ಲಿ ಸಣ್ಣ ಮಕ್ಕಳಂತೆ ಆಟಿಕೆ ಗಾಡಿಗಳನ್ನು ಓಡಿಸುವ ಯುವಕರು, ಬ್ಯೂಟಿ ಪಾರ್ಲರ್ ಮುಚ್ಚಿದ್ದರಿಂದ ಮೊಬೈಲ್ ಕೂಡ ಫೇಸ್ ಅನ್ ಲಾಕ್ ತೆರೆಯುತ್ತಿಲ್ಲ ಎಂದು ಗೋಗರೆಯುತ್ತ ವಿಡಿಯೋ ಮಾಡುವ ಯುವತಿಯರು ಹೀಗೆ ಹತ್ತು ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತ ಇವೆ.

ಇಂಥ ವಿಡಿಯೊಗಳು ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಕುಳಿತು ಬೇಜಾರಾಗಿರುವ ಹಾಗೂ ಈ ಕರೋನದಿಂದ ನಾವು ಬದುಕುತ್ತಿವೋ ಇಲ್ಲವೋ ಎಂಬ ಭಯವಿರುವ ಜನರಿಗೆ ಸ್ವಲ್ಪ ಮನರಂಜನೆ ನೀಡುತ್ತಿರುವುದು ಸುಳ್ಳಲ್ಲ. ವಿಡಿಯೊ ಮೇಲಿದೆ ನೋಡಿ…
-ಮಂಜುನಾಥ್