ವಿಡಿಯೊ : ಅಬ್ಬಾ…! ಜಮೀರ್ ಅಹ್ಮದ್ ಆರಮನೆ ಹೇಗಿದೆ ನೋಡಿ!
ಆಗಾಗ ತಮ್ಮ ವ್ಯಕ್ತಿನಿಷ್ಠೆ ಹಾಗೂ ಪಕ್ಷನಿಷ್ಠೆ ಬದಲಿಸುವ ಜಮೀರ್ ಅಹ್ಮದ್ ಖಾನ್ ವೈಯಕ್ತಿಕ ಜೀವನ ಕೂಡ ಕಲರ್ ಫುಲ್ ಆಗಿದೆ. ಸಾಕಷ್ಟು ಶ್ರೀಮಂತರಾಗಿರುವ ಜಮೀರ್ ಅದಕ್ಕೆ ತಕ್ಕನಾಗಿ ಜೀವನಶೈಲಿ ರೂಢಿಸಿಕೊಂಡಿದ್ದಾರೆ. ಚಾಮರಾಜಪೇಟೆ ನಿವಾಸಿ ಹಾಗೂ ಶಾಸಕರಾಗಿರುವ ಜಮೀರ್ ಅಹ್ಮದ್ ರವರ ಅರಮನೆ ನೋಡೋಕೆ ಎರಡು ಕಣ್ಣು ಸಾಲಲ್ಲ. ಅದರ ಒಂದು ವಿಡಿಯೊ ಕ್ಲಿಪ್ ಇಲ್ಲಿದೆ. ಆಸಕ್ತರು ನೋಡಿ…
ಜಮೀರ್ ಅಹ್ಮದ್ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅದು ಆಗಿನ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣರವರ ಕ್ಷೇತ್ರವಾಗಿತ್ತು. ಅವರು ರಾಜಕೀಯ ಬಿಟ್ಟು ಮಹಾರಾಷ್ಟ್ರದ ರಾಜ್ಯಪಾಲರಾದ ಮೇಲೆ ಆ ಕ್ಷೇತ್ರ ತೆರವಾಯಿತು.
ಆಗ ದೇವೆಗೌಡರು ಜಮೀರ್ ಅಹ್ಮದ್ ರವರನ್ನು ಕರೆತಂದು ಇಲ್ಲಿ ನಿಲ್ಲಿಸಿ ಗೆಲ್ಲಿಸಿದರು. ಅಲ್ಲಿಂದ ಅವರು ರಾಜಕೀಯವಾಗಿ ಹಿಂದಿರುಗಿ ನೋಡಲೇ ಇಲ್ಲ, ಸಮಯ ಬಂದಾಗಲೆಲ್ಲ ನಿಷ್ಠೆ ಬದಲಿಸಿದರು. 2005 ರಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಜಮೀರ್, ಕುಮಾರಸ್ವಾಮಿಯವರ ಮಂತ್ರಿಮಂಡಳದಲ್ಲಿ ವಕ್ಫ್ ಬೋರ್ಡ್ ಸಚಿವರಾದರು.
ಬಿಜೆಪಿ ಜೊತೆಗಿನ ಆ ಸಮ್ಮಿಶ್ರ ಸರಕಾರ ತನ್ನ ಪೂರ್ಣವಾಧಿ ಮುಗಿಸಲಿಲ್ಲ. ನಂತರ 2008 ರಲ್ಲಿ ಮತ್ತೊಮ್ಮೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಮತ್ತೆ ಶಾಸಕರಾಗಿ ಆಯ್ಕೆಯಾದರು. ಹಾಗೆಯೇ 2013 ರಲ್ಲಿ ಕೂಡ ಅದೇ ಕ್ಷೇತ್ರದಿಂದ ಗೆದ್ದು ಬಂದರು. ಇಲ್ಲಿಯವರೆಗೂ ಅವರ ನಿಷ್ಠೆ ಜೆಡಿಎಸ್ ಗಿತ್ತು. ಕುಮಾರಸ್ವಾಮಿ – ದೇವೆಗೌಡರು ಹಾಕಿದ ಗೆರೆ ದಾಟುತ್ತಿರಲಿಲ್ಲ.

ಆದರೆ 2016 ರಲ್ಲಿ ರಾಜ್ಯಸಭಾ ಚುನಾವಣೆ ನಡೆದಾಗ, ಪಕ್ಷದ ವಿರುದ್ದ ತಿರುಗಿಬಿದ್ದ ಜಮೀರ್ ಅಹ್ಮದ್ ಖಾನ್, ಕ್ರಾಸ್ ಓಟಿಂಗ್ ಮಾಡಿದರು. ಆಗ ಇವರೂ ಸೇರಿದಂತೆ 7 ಜನ ಶಾಸಕರನ್ನು ಅಮಾನತುಗೊಳಿಸಲಾಯಿತು. ಆಮೇಲೆ ಅವರು ಜೆಡಿಎಸ್ ನಲ್ಲಿ ಇದ್ದರೂ ಕಾಂಗ್ರೆಸ್ ಸದಸ್ಯರಂತೆ ಇರತೊಡಗಿದರು.
ಆಗಾಗ ನಾಯಕರ ವಿರುದ್ಧ ಇನ್ನಿಲ್ಲದಂತೆ ವಾಗ್ಧಾಳಿ ನಡೆಸುತ್ತಲೇ ಇದ್ದರು. ಮುಂದೆ 2018 ರಲ್ಲಿ ಜಮೀರ್ ಅಹ್ಮದ್ ಖಾನ್ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದರು. ಸಿದ್ದರಾಮಯ್ಯನವರ ಖಾಸಾ ಖಾಸಾ ಗುಂಪಿಗೆ ಆಯ್ಕೆಯಾಗಿ ದಿನದ 24 ತಾಸೂ ಅವರ ಗುಣಗಾನ ಮಾಡತೊಡಗಿದರು.
2018 ರಲ್ಲಿ ಮತ್ತದೇ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ದಿಸಿ ಗೆದ್ದು ಬಂದರು. ಒಟ್ಟು ನಾಲ್ಕು ಸಲ ನಿರಂತರವಾಗಿ ಆ ಕ್ಷೇತ್ರದಿಂದ ಜಮೀರ್ ಅಹ್ಮದ್ ಖಾನ್ ಸುಲಭವಾಗಿ ಗೆಲುವು ಸಾಧಿಸಿದರು. ಅವರಿಗೆ ತಕ್ಕ ಪ್ರತಿಸ್ಪರ್ದಿ ಅಲ್ಲಿ ಹುಟ್ಟಲೇ ಇಲ್ಲ. 2018 ರಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದೇ ಇದ್ದಾಗ ಕಾಂಗ್ರೆಸ್, ಜೆಡಿಎಸ್ ಗೆ ಶರತ್ತಿಲ್ಲದ ಬೆಂಬಲ ಕೊಡುವುದಾಗಿ ಘೋಷಿಸಿತು.

ಆಗ ಕುಮಾರಸ್ವಾಮಿ ಕಾಂಗ್ರೆಸ್ ಆಹ್ವಾನ ಒಪ್ಪಿಕೊಂಡು ಸರಕಾರ ರಚನೆ ಮಾಡಿದರು. ಹೀಗೆ ರಚನೆಯಾದ ಸರಕಾರದಲ್ಲಿ ಜಮೀರ್ ಇರುವುದಿಲ್ಲ ಎಂದೇ ಎಲ್ಲರೂ ಲೆಕ್ಕ ಹಾಕಿದ್ದರು. ಏಕೆಂದರೆ ಅದುವರೆಗೆ ಜಮೀರ್ ಕುಮಾರಸ್ವಾಮಿಯವರಿಗೆ ಹಿಗ್ಗಾ ಮುಗ್ಗಾ ಟೀಕಿಸಿದ್ದರು. ನಿರಂತರ ವಾಗ್ದಾಳಿ ನಡೆಸಿದ್ದರು.
ಆದರೆ ಎಲ್ಲರ ಲೆಕ್ಕಾಚಾರ ಬುಡಮೇಲಾಯಿತು. ಸಿದ್ಧರಾಮಯ್ಯನವರ ಕೃಪಾಕಟಾಕ್ಷದಿಂದ ಜಮೀರ್ ಕುಮಾರಸ್ವಾಮಿ ಸಂಪುಟದಲ್ಲೂ ಸ್ಥಾನ ಪಡೆದರು. ಕ್ಯಾಬಿನೆಟ್ ದರ್ಜೆಯ ಸಚಿವರಾದರು. ಮುಂದೆ ಯಡಿಯೂರಪ್ಪನವರು ಆ ಸರ್ಕಾರವನ್ನು ಬೀಳಿಸಿ ತಮ್ಮ ಸರಕಾರ ರಚನೆ ಮಾಡಿದಾಗಿನಿಂದ ಜಮೀರ್ ಅಧಿಕಾರದಿಂದ ಮುಕ್ತರಾದರು.
ಆದರೆ ನಂತರ ಕೊರೋನ ವ್ಯಾಪಿಸಿ, ಈ ಸಮಯದಲ್ಲಿ ಹಲವಾರು ಜಮೀರ್ ಹಲವಾರು ವಿವಾದಿತ ಕೆಲಸ ಮಾಡಿದರು. ಕೊರೋನ ಹರಡುವವರಿಗೇ ಬೆಂಬಲ ನೀಡಿ ಮಾಧ್ಯಮ ಹಾಗೂ ಜನರಿಂದ ಯಕ್ಕಾಮಕ್ಕಾ ಅನಿಸಿಕೊಂಡರು. ಯಾವತ್ತೂ ತನ್ನ ಜನಾಂಗದ ಜನರನ್ನು ಬಿಟ್ಟುಕೊಡದ ಜಮೀರ್ ಅಹ್ಮದ್ ಸಧ್ಯ ರಾಜ್ಯ ರಾಜಕೀಯದಲ್ಲಿ ಆ ಸಮುದಾಯದ ನಂಬರ್ ಒನ್ ನಾಯಕ ಎನ್ನಲು ಅಡ್ಡಿಯಿಲ್ಲ.
1 ಅಗಸ್ಟ್ 1966 ರಂದು ಜಿಯಾವುಲ್ಲಾ ಖಾನ್ ಹಾಗೂ ಸೋಗ್ರಾ ಖಾನುಮ್ ದಂಪತಿಗೆ ಜನಿಸಿದ ಜಮೀರ್ ಅಹ್ಮದ್ ಖಾನ್ ರವರಿಗೆ ಝೈದ್ ಖಾನ್ ಎಂಬ ಮಗ ಕೂಡ ಇದ್ದಾನೆ. ಪಬ್ಲಿಕ್ ಟಿವಿಯವರು ಪ್ರಸಾರ ಮಾಡಿದ ಅವರ ಅದ್ಭುತ ಅರಮನೆಯ ವಿಡಿಯೊ ಮೇಲಿದೆ ನೋಡಿ…
-Team Infotrend