ಇದೊಂಥರ ಡಿಫ್ರೆಂಟ್ ಅತ್ತೆ ಕಾಟ : ಸೊಸೆಯನ್ನು ಹೊರಹಾಕಲು ಆಕೆ ಮಾಡಿದ ಹೇಯ ಕೆಲಸ ಹೇಗಿದೆ ನೋಡಿ
ಭೂಮಿಯ ಮೇಲೆ ಎಂತೆಂತಹ ಜನರು ಜನಿಸುತ್ತಿರುತ್ತಾರೆ ಎಂದರೆ… ತನಗೆ ಏನೇ ಕಷ್ಟ ಬರಲಿ ಮತ್ತೊಬ್ಬರು ಸುಖವಾಗಿ ಬಾಳಲಿ ಎಂಬ ಮನಸ್ಥಿತಿ ಇರುವ ಕೆಲವರು ಇರುತ್ತಾರೆ, ಇವರಿಗೆ ತದ್ವಿರುದ್ಧ ಎಂಬಂತೆ ತಾವು ಅನುಭವಿಸುವ ಕಷ್ಟಕ್ಕಿಂತ ಹೆಚ್ಚಿನ ಕಷ್ಟವನ್ನು ಎಲ್ಲರೂ ಅನುಭವಿಸುವಂತಾಗಲಿ ಎಂದು ವಿಚಾರ ಮಾಡುವ ವಿ”ಕೃ’ತ ಮನಸ್ಥಿತಿಯ ಜನರು ಕೂಡ ಇದ್ದಾರೆ. ಅದರಲ್ಲೂ ಈ ಕಲಿಯುಗದಲ್ಲಿ ಇಂಥಹ ಜನರೇ ಹೆಚ್ಚಾಗಿ ಕಾಣಸಿಗುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಈ ಕೆಳಗಿದೆ ನೋಡಿ…
ಇಲ್ಲೊಬ್ಬ ಅತ್ತೆ ತನಗೆ ಕರೋನ ಪಾಸಿಟಿವ್ ಬಂದು ಸಾಯುತ್ತಿರುವಾಗ ಎಲ್ಲರೂ ಖುಷಿಯಾಗಿದ್ದಾರೆ ಎಂದು ಭಾವಿಸಿ, ತನ್ನ ಸೊಸೆ ಹಾಗೂ ಆಕೆಯ ಎರಡು ಮಕ್ಕಳು ಅಂದರೆ ತನ್ನದೇ ಮೊಮ್ಮಕ್ಕಳಿಗೂ ಕೊರೋನ ರೋಗ ಬರಿಸಿ ಕೊನೆಗೆ ಮತ್ತೆ ಅವರನ್ನೇ ಮನೆಯಿಂದ ಹೊರಗೆ ಹಾಕಿರುವ ಅಮಾನವೀಯ ಘಟನೆ ಪಕ್ಕದ ತೆಲಂಗಾಣದ ರಾಜನ್ನ ಸರಿಸಿಲ್ಲ ಎಂಬಲ್ಲಿ ನಡೆದಿದೆ..!
ಕರೋನ ಪಾಸಿಟಿವ್ ಬಂದ ನಂತರ ಮನೆಯಲ್ಲೇ ಐಸೋಲೇಷನ್ ಆಗಿದ್ದ ಅತ್ತೆ ತನಗೆ ರೋಗವಿದೆ ಎಂದು ಗೊತ್ತಿದ್ದೂ ಬೇಕಂತಲೇ ತನ್ನ ಸೊಸೆ ಹಾಗೂ ಮೊಮ್ಮಕ್ಕಳಿಗೆ ಕಾಯಿಲೆ ಅಂಟಿಸಿದ್ದಾಳೆ. ಅವರು ಸಹ ಕೋವಿಡ್ ಪಾಸಿಟಿವ್ ಸಂಕ್ರಮಿತರಾದ್ದಾರೆ, ಇಷ್ಟಕ್ಕೆ ಖುಷಿಯಾಗದ ಈ ವಿಕೃತ ಮನಸ್ಸಿನ ಅಜ್ಜಿ ಅವರನ್ನು ಮನೆಯಿಂದಲೂ ಹೊರದಬ್ಬಿದ್ದಾಳೆ..!
ಕೋವಿಡ್-19 ಪಾಸಿಟಿವ್ ಬಂದ ನಂತರ ಅತ್ತೆಯನ್ನು ಮನೆಯಲ್ಲಿಯೇ ಐಸೋಲೇಷನ್ ಮಾಡಲಾಗಿತ್ತು, ಕೋವಿಡ್ ನಿಯಮದ ಪ್ರಕಾರ ಪಾಸಿಟಿವ್ ಬಂದ ವ್ಯಕ್ತಿಗಳಿಂದ ಸೋಶಿಯಲ್ ಡಿಸ್ಟೆನ್ಸ್ ಮೆಂಟೈನ್ ಮಾಡುವ ಸಲುವಾಗಿ ಅತ್ತೆಯನ್ನು ಸೊಸೆ ಪ್ರತ್ಯೇಕವಾಗಿಟ್ಟು ಊಟ ನೀರು ಔಷದಿ ಪೂರೈಸುತ್ತಿದ್ದರು. ಇದರಿಂದ ಅತ್ತೆಗೆ ವಿಪರೀತ ಕೋಪ ಬಂದಿತು.

ಆಗ ಆಕೆ ತನ್ನ ಸೊಸೆ ತನ್ನನ್ನು ದೂರ ಇಟ್ಟು ಆರಾಮವಾಗಿದ್ದಾಳೆ ಎಂದು ಭಾವಿಸಿ ಅವಳನ್ನು ಪದೇ ಪದೇ ತನ್ನ ಬಳಿ ಕರೆದು ವಿನಾಕಾರಣ ತಬ್ಬಿಕೊಂಡಿದ್ದಳು. ಅಷ್ಟೇ ಅಲ್ಲದೇ ತನ್ನದೇ ಮೊಮ್ಮಕ್ಕಳನ್ನು ಕರೆದು ಬೇಕೆಂತಲೇ ತಬ್ಬಿಕೊಂಡು ಮುದ್ದು ಮಾಡಿದ್ದಳು. ಹೀಗಾಗಿ ಸದ್ಯ ಅವರೆಲ್ಲ ಕೋವಿಡ್ ಪಾಸಿಟಿವ್ ಆಗಿದ್ದಾರೆ.!
ತೆಲಂಗಾಣದ ಯಲ್ಲಾರೆಡ್ಡಿಪೇಟ್ ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಯುವತಿಯ ಮದುವೆ ಮೂರು ವರ್ಷದ ಹಿಂದೆ ಕಾಮಾರೆಡ್ಡಿ ಜಿಲ್ಲೆಯ ಮಚರೆಡ್ಡಿ ತಾಲ್ಲೂಕಿನ ಸೋಮಾರಿಪೇಟ್ ಕ್ಷೇತ್ರದ ನೇಮಲಿಗುಟ್ಟಾ ತಾಂಡಾದ ಒಬ್ಬ ವ್ಯಕ್ತಿಯೊಂದಿಗೆ ಆಗಿತ್ತು. ಅವರಿಗೆ ಸದ್ಯ ಎರಡು ಮಕ್ಕಳೂ ಕೂಡ ಇದ್ದಾರೆ. ಆದರೂ ಅತ್ತೆಯ ಕಾಟ ತಪ್ಪಿರಲಿಲ್ಲ.
ಇವರು ಹೊಟ್ಟೆ ಪಾಡಿಗಾಗಿ ಒರಿಸ್ಸಾ ರಾಜ್ಯಕ್ಕೆ ವಲಸೆ ಹೋಗಿದ್ದರು, ಅಲ್ಲಿ ಆ ವ್ಯಕ್ತಿ ಆಟೋ ಚಾಲಕನಾಗಿದ್ದ, ಐದು ದಿನಗಳ ಹಿಂದೆ ಅವರ ತಾಯಿಗೆ ಕರೋನ ಪಾಸಿಟಿವ್ ಆಗಿತ್ತು. ಇದರಿಂದ ಅವರನ್ನು ದೂರ ಇಟ್ಟಿದ್ದನ್ನೇ ತಪ್ಪಾಗಿ ಅರ್ಥೈಸಿಕೊಂಡು ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳಿಗೂ ಕರೋನ ಅಂಟಿಸಿ, ಅಷ್ಟಕ್ಕೂ ಸುಮ್ಮನಾಗದ ಆ ಅಜ್ಜಿ ಅವರನ್ನು ಮನೆಯಿಂದ ಹೊರಗೆ ಹಾಕಿದ್ದಾರೆ.
ಸಧ್ಯ ಆ ಮಹಿಳೆಗೆ ಅವಳ ಸಹೋದರಿ ಆಶ್ರಯ ಕೊಟ್ಟಿದ್ದು, ತಮ್ಮ ಹಳ್ಳಿಯಾದ ಗೊಲ್ಲಾಪಲ್ಲಿ ಎಂಬಲ್ಲಿಗೆ ಆ ತಾಯಿ ಮತ್ತು ಮಕ್ಕಳನ್ನು ಕರೆತಂದು ಹೋಮ್ ಐಸೋಲೇಷನ್ ನಲ್ಲಿ ಇರಿಸಿದ್ದಾರಂತೆ. ಆಕೆಯನ್ನು ಮನೆಯಿಂದ ಹೊರಹಾಕಲು ಅವಳು ಕೊರೊನವನ್ನೇ ಬಳಸಿಕೊಂಡಳು. ಎಂಥೆಂಥ ವಿ’ಲ’ಕ್ಷ’ಣ ಮನಸ್ಥಿತಿಯ ಜನರು ಭೂಮಿ ಮೇಲಿದ್ದಾರೆ ನೋಡಿ.
-ಮಂಜುನಾಥ್