ಪ್ರೈವೇಟ್ ಜೆಟ್ ಗಳಲ್ಲಿ ಗಗನಸಖಿಯರ ಪರಸ್ಥಿತಿ ಹೇಗಿರುತ್ತದೆ? : ಕೋಲಾಹಲ ಎಬ್ಬಿಸಿದ ಗಗನಸಖಿ ಬಿಚ್ಚಿಟ್ಟ ಕಹಿ ಸತ್ಯಗಳು!
ನೀವೆಲ್ಲ ಓದಿರಬಹುದು ಮಿಲಿಯನೇರ್ ಗಳು ತಮ್ಮ ಓಡಾಟಕ್ಕೆ ಸಾಕಷ್ಟು ಐಷಾರಾಮಿ ಪ್ರೈವೇಟ್ ಜೆಟ್ ಗಳನ್ನು ಬಳಸುತ್ತಾರೆ. ಅವುಗಳು ಯಾವುದೇ ಐಷಾರಾಮಿ ಮಹಲುಗಳಿಗೂ ಕಡಿಮೆ ಇರುವುದಿಲ್ಲ, ಅಷ್ಟೊಂದು ವ್ಯವಸ್ಥೆ ಹೊಂದಿರುತ್ತವೆ. ಅದೆಲ್ಲ ಮೇಲ್ನೋಟಕ್ಕೆ ಕಾಣುವ ತಳುಕು ಬಳುಕು, ಆದರೆ ಇವೆಲ್ಲವುಗಳ ಹಿಂದೆ ನಡೆಯುವ ಕಹಿ ಸತ್ಯಗಳ ಬಗ್ಗೆ ಸಾಸ್ಕಿಯ ಸ್ವಾನ್ ಎಂಬ ಗಗನ ಸಖಿ ತಾವು ಬರೆದ ಪುಸ್ತಕದಲ್ಲಿ ಸತ್ಯ ಬಿಚ್ಚಿಟ್ಟಿದ್ದಾರೆ.
ಸೌದಿ ಅರೇಬಿಯಾದ ಪ್ರಿನ್ಸ್, ಅಮೇರಿಕಾ, ಬ್ರಿಟನ್, ಜಪಾನ್ ಹಾಗೂ ಇನ್ನಿತರೇ ದೇಶಗಳ ಮಿಲಿಯನೇರ್ ಗಳ ಬಗ್ಗೆ ಯಾವುದೇ ಮುಚ್ಚು ಮರೆ ಇಲ್ಲದೆ ಅವರು ಬರೆದಿದ್ದಾರೆ. ಮನಸ್ಸಿಲ್ಲದೇ ಇದ್ದರೂ ಕೂಡ ಗಗನ ಸಖಿಯರು ಅನಿವಾರ್ಯತೆಯ ಕಾರಣದಿಂದ ಪ್ರೈವೇಟ್ ಜೆಟ್ ಗಳಲ್ಲಿ ನಡೆಯುವ ಕೆಟ್ಟ ಕೆಲಸಗಳ ಭಾಗವಾಗಬೇಕಾಗಿ ಬರುತ್ತದೆ ಎಂಬುದರ ಬಗ್ಗೆ Secret of a private Flight Attendant ಎಂಬ ಪುಸ್ತಕದಲ್ಲಿ ಅವರು ದಾಖಲಿಸಿದ್ದಾರೆ.
ಸಿರಿವಂತರ ಪ್ರೈವೇಟ್ ಜೆಟ್ ಗಳನ್ನು ದೌರ್ಜನ್ಯದ ಗುಹೆಗಳೆಂದು ಜರಿದಿರುವ ಸಾಸ್ಕಿಯ ಅವರು, ಒಮ್ಮೆ ಪ್ರೈವೇಟ್ ಜೆಟ್ ವಿಮಾನದಲ್ಲಿ ತಮ್ಮ ಡ್ಯೂಟಿ ಮೇಲಿದ್ದಾಗ ತಮಗೆ ಗೊತ್ತಿಲ್ಲದೇ ಬಾಸ್ ಕ್ಯಾಬಿನ್ ತಲುಪಿದಾಗ ಅಲ್ಲಿ ಅವರು ಒಬ್ಬ ಮಹಿಳೆಯೊಂದಿಗೆ ಇರಬಾರದ ಸ್ಥಿತಿಯಲ್ಲಿ ಇದ್ದರಂತೆ!
ಇದು ನಿಮಗೆಲ್ಲ ಅಚ್ಚರಿ ತರಬಹುದು ಆದರೆ ಸಾಸ್ಕಿಯ ಅವರಿಗೆ ಇದೇನು ಹೊಸತಲ್ಲ ಏಕೆಂದರೆ ನಿತ್ಯ ಅವರ ಕಣ್ಮುಂದೆಯೇ ನಡೆಯುವ ಘಟನೆಗಳಲ್ಲಿ ಇದೂ ಒಂದು ಅಷ್ಟೇ. ಆರು ವರ್ಷಗಳ ಕಾಲ ಕಮರ್ಷಿಯಲ್ ವಿಮಾನಗಳಲ್ಲಿ ಕೆಲಸ ಮಾಡಿದ ಸಾಸ್ಕಿಯ ಅವರು ನಂತರ ಪ್ರೈವೇಟ್ ವಿಮಾನಗಳಲ್ಲಿ ಕೆಲಸ ಮಾಡಲು ಶುರು ಮಾಡಿದರು.

ಇವರೇ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿರುವಂತೆ ಬ್ರಿಟನ್ ನ ಒಬ್ಬ ಪ್ರಧಾನಿ ಇವರನ್ನು ಇಷ್ಟ ಪಡುತ್ತಿದ್ದರಂತೆ! ಇಷ್ಟೇ ಅಲ್ಲದೇ ಇವರು ಕಮರ್ಷಿಯಲ್ ವಿಮಾನ ಬಿಟ್ಟು ಪ್ರೈವೇಟ್ ಜೆಟ್ ಗಳಲ್ಲಿ ಕೆಲಸ ಹುಡುಕಿದಾಗ ಮೊದಲು ಆಫರ್ ಬಂದಿದ್ದು ರಷ್ಯಾದ ಒಬ್ಬ ಮಿಲಿಯನೇರ್ ನ ಪ್ರೈವೇಟ್ ಜೆಟ್ ನಲ್ಲಿ.
ಅಲ್ಲಿ ಇವರಿಗೆ ವಾರ್ಷಿಕ 41 ಲಕ್ಷ ರೂಪಾಯಿಯ ಪ್ಯಾಕೇಜ್ ಸಿಕ್ಕಾಗ ಸಿಕ್ಕಾಪಟ್ಟೆ ಖುಷಿ ಪಟ್ಟ ಇವರು ನಂತರ ಆ ಕೆಲಸದ ಅಂತರಾಳ ತಿಳಿದು ಸಾಕಷ್ಟು ನೊಂದಿದ್ದರಂತೆ. ಏಕೆಂದರೆ ಆ ಕೆಲಸ ಸಿಗಬೇಕೆಂದರೆ 8 ಗುಪ್ತ ಒಪ್ಪಂದಗಳಿಗೆ ಸಹಿ ಹಾಕಬೇಕಾಗಿತ್ತಂತೆ!
ಅದೇ ರಷ್ಯಾ ಮಿಲಿಯನೇರ್ ನ ಜೆಟ್ ನಲ್ಲಿ ಕೆಲಸ ಮಾಡುತ್ತಿರುವಾಗ, ಇವರಿಗೆ ಒಮ್ಮೆ ನ್ಯೂಯಾರ್ಕ್ ಪ್ರಯಾಣಕ್ಕೆ ಅವರ ಬಾಸ್ ನೊಂದಿಗೆ ಪ್ರಯಾಣ ಬೆಳೆಸಲು ನಿಯೋಜಿಸಲಾಗಿತ್ತಂತೆ. ಅಲ್ಲಿ ಇವರಿಗೆ ಅವರ ಬಾಸ್ ನೊಂದಿಗೆ ಮ’ಲ’ಗ’ಬೇಕು ಎಂಬ ನಿಯಮ ಹಾಕಲಾಯಿತಂತೆ.
ಏಕೆಂದರೆ ಇದು ಕೂಡ ಪ್ರೈವೇಟ್ ಜೆಟ್ ಗಳಲ್ಲಿ ಅವರ ಕೆಲಸದ ಒಂದು ಭಾಗವಾಗಿತ್ತಂತೆ! ಕೆಲವು ವರ್ಷಗಳ ನಂತರ ಇವರು ಅಲ್ಲಿ ಕೆಲಸ ಬಿಟ್ಟು ಸೌದಿ ಅರೇಬಿಯಾದ ಪ್ರಿನ್ಸ್ ಒಬ್ಬರ ಪ್ರೈವೇಟ್ ಜೆಟ್ ನಲ್ಲಿ ಕೆಲಸಕ್ಕೆ ಸೇರಿದಾಗ, ಅಲ್ಲಿಯೂ ಸಹ ಇಂತಹ ಘಟನೆಗಳು ಅವರಿಗೆ ನೋಡಲು ಕೇಳಲು ಸಿಕ್ಕವು.

ಒಮ್ಮೆ ಸೌದಿ ಪ್ರಿನ್ಸ್ ತಮ್ಮ ಗರ್ಲ್ಫ್ರೆಂಡ್ ಜೊತೆಗೆ ಹಾಸಿಗೆಯಲ್ಲಿ ಇದ್ದಾಗ ಇವರು ನೋಡಿದ್ದರಂತೆ. ಅವರ ರೂಮ್ ನಲ್ಲಿ ಬಟ್ಟೆಗಳು ಚೆಲ್ಲಾಡಿದ್ದು ಸಹ ನೋಡಿದ ಇವರು ತಮ್ಮ ಅದೃಷ್ಟ ಚೆನ್ನಾಗಿದೆ ಏಕೆಂದರೆ ಸೌದಿ ಪ್ರಿನ್ಸ್ ಇವರನ್ನು ನೋಡಲಿಲ್ಲ ಎಂದು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ರಾಯಲ್ ಫ್ಯಾಮಿಲಿಯ ಗಂಡಸರನ್ನು ಖುಷಿಪಡಿಸಿದರೆ ಸಾಕಷ್ಟು ದುಡ್ಡು ಸಿಗುತ್ತದೆ ಎಂಬ ಕಾರಣಕ್ಕೆ ಬಹಳಷ್ಟು ಹುಡುಗಿಯರು ಬರುತ್ತಾರಂತೆ. ಆದರೆ ಅವರೆಲ್ಲರಿಗೂ ಮೊದಲು ಏಡ್ಸ್ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದಂತೆ! ಇನ್ನು ಇವರು ಈ ಗಗನಸಖಿ ಕೆಲಸಕ್ಕಾಗಿ ಮಾಲ್ದಿವ್ಸ್ ಇಂದ ಹಿಡಿದು ಕೆರಿಬಿಯನ್ ದೇಶಗಳವರೆಗೂ ಸುತ್ತಾಡಿದ್ದಾರಂತೆ.
ಈ ಕೆಲಸಕ್ಕಾಗಿ ಸಾಸ್ಕಿಯ ಅವರಿಗೆ ದಿನಕ್ಕೆ 450 ಡಾಲರ್ ಸಂಬಳ ಹಾಗೂ 125 ಡಾಲರ್ ಭತ್ಯೆ ನೀಡಲಾಗುತ್ತದಂತೆ. ಈಗ ತಮ್ಮ ಪುಸ್ತಕದ ಮೂಲಕ ಎಲ್ಲರೂ ದಂಗಾಗುವಂತ ಕಥೆ ಬಿಚ್ಚಿಟ್ಟಿದ್ದು, ಈ ಕೆಲಸ ಮಾಡಿದವರ ಬದುಕಲ್ಲಿ ಕೋಲಾಹಲ ಏಳಲಿದೆ. ಸಾಸ್ಕಿಯ ಅವರಿಗೆ ಸುರಕ್ಷತೆಯ ಭ’ಯ ಕಾಡಬಹುದು.
-Team Infotrend