ಗೂಗಲ್ ನಂತರ ಅಮೇಜಾನ್ ನಿಂದ ಕನ್ನಡಕ್ಕೆ ಅವಮಾನ : ಕನ್ನಡ ದ್ವಜ ಹೋಲುವ ಒಳ ಉಡುಪು ಮಾರಾಟ! ಸಿಟ್ಟಿಗೆದ್ದ ನೆಟ್ಟಿಗರು
ಎರಡು ಮೂರು ದಿನದ ಹಿಂದೆ ತಾನೆ ಗೂಗಲ್ ನವರು ಕನ್ನಡಕ್ಕೆ ಅವಮಾನಿಸಿದ್ದ ಪ್ರಕರಣ ಬಯಲಿಗೆ ಬಂದಿತ್ತು. ಆಗ ಎಲ್ಲರೂ ಒಗ್ಗಟ್ಟಾಗಿ ತೊಳೆದ ಪರಿಣಾಮ ಗೂಗಲ್ ಕ್ಷಮೆಯಾಚಿಸಿತ್ತು. ಈಗ ಮತ್ತೊಂದು ಅಂಥದೇ ಘಟನೆ ನಡೆದಿದ್ದು, ಥೇಟ್ ಕನ್ನಡ ದ್ವಜವನ್ನೇ ಹೋಲುವ ಒಳ ಉಡುಪನ್ನು ಅಮೇಜಾನ್ ಆನ್ ಲೈನ್ ಮಳಿಗೆ ಮಾರಾಟ ಮಾಡುತ್ತಿದೆ. ದ್ವಜದ ಬಣ್ಣದ ಬಿಕಿನಿಯಲ್ಲಿ ಕರ್ನಾಟಕದ ಲಾಂಛನ ಕೂಡ ಇರುವುದು ಬೇಕೆಂತಲೇ ಕನ್ನಡಿಗರನ್ನು ರೊಚ್ಚಿಗೆಬ್ಬಿಸುವ ಪ್ರಕ್ರಿಯೆ ಇದಾಗಿದೆ.
ಮೊನ್ನೆ ಕನ್ನಡವನ್ನು ಕೊಳಕು ಭಾಷೆ ಅಥವಾ ಅಸಹ್ಯ ಭಾಷೆ ಎಂದು ತೋರಿಸುತ್ತಿದ್ದ ಗೂಗಲ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಗೂಗಲ್ ಆ ಪೇಜನ್ನು ತಗೆದು ಕನ್ನಡಿಗರ ಕ್ಷಮೆ ಕೇಳಿತ್ತು. ಅದಾದ ಬಳಿಕ ಈಗ ಜಗತ್ತಿನ ಅತಿ ದೊಡ್ಡ ಆನ್ ಲೈನ್ ಸ್ಟೋರ್ ಅಮೇಜಾನ್ ಕೂಡ ಬೇಕೆಂತಲೇ ಕನ್ನಡ ನಾಡಿಗೆ ಅವಮಾನಿಸುವ ದುಸ್ಸಾಹಸ ಮಾಡಿದೆ.
ಕೆನಡಾ ದೇಶದ ಅಮೇಜಾನ್ ಆನ್ ಲೈನ್ ಶಾಪಿಂಗ್ ಸೈಟ್ ನಲ್ಲಿ ಕನ್ನಡ ದ್ವಜದ ಬಣ್ಣದ ಬಿಕಿನಿಯನ್ನು ಮಾರಾಟಕ್ಕಿಡಲಾಗಿದ್ದು, ಕರ್ನಾಟಕದ ಕೆಂಪು – ಹಳದಿ ಬಣ್ಣವಿರುವುದರ ಜೊತೆಗೆ ಕರ್ನಾಟಕದ ಲಾಂಛನ ಕೂಡ ಬಳಸಲಾಗಿದೆ. ಉದ್ದೇಶಪೂರ್ವಕವಾಗಿ ಹೀಗೆಲ್ಲ ಮಾಡುವ ಅವರ ಉದ್ದೇಶ ಏನು ಅಂತಾನೇ ಅರ್ಥ ಆಗುತ್ತಿಲ್ಲ.
ವಿಮೆನ್ಸ್ ಫ್ಲಾಗ್ ಆಫ್ ಕರ್ನಾಟಕ ಓರಿಜಿನಲ್ ಡಿಜೈನ್ ಎಂಬ ಹೆಸರಿನಡಿ ಈ ಮಾರಾಟ ನಡೆಯುತ್ತಿದ್ದು, ಸದ್ಯ ಆ ಬಿಕಿನಿ ಸೋಲ್ಡ್ ಔಟ್ ಆಗಿವೆ. ಈ ಅಮೆಜಾನ್ ಇದೇ ಮೊದಲಲ್ಲ, ಹಿಂದ ಕೂಡ ಹಲವು ಸಲ ಭಾರತ ಹಾಗೂ ಭಾರತೀಯರ ಭಾವನೆಗಳ ಜೊತೆ ಆಟವಾಡಿದ ಉದಾಹರಣೆಗಳಿವೆ.
ಹಿಂದೂ ದೇವತೆಗಳ ಚಿತ್ರವನ್ನು ಪಾದರಕ್ಷೆ ಹಾಗೂ ಇನ್ನಿತರ ಕಡೆ ಮುದ್ರಿಸಿ ಮಾರಿದ ಹೇಯ ಕಂಪನಿ ಈ ಅಮೇಜಾನ್. ಈ ಮಾರಾಟ ಭಾರತದಲ್ಲಿ ಇಲ್ಲ, ಕೆನಡಾದಲ್ಲಿ ಮಾತ್ರ ಇದನ್ನು ಮಾರಲಾಗುತ್ತಿದೆ. ಆದೂ ಇದನ್ನು ಪತ್ತೆ ಹಚ್ಚಿರುವ ನೆಟ್ಟಿಗರು ಹಾಗೂ ಕರ್ನಾಟಕ ರತ್ನ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ವಿರೋಧಿಸುವ ಹಾಗೂ ದೂರು ದಾಖಲಿಸುವ ಕೆಲಸ ಕೂಡ ನಡೆಯುತ್ತಿದೆ.
Stuppid @amazonca #ಕನ್ನಡದ್ರೋಹಿAmazonca pic.twitter.com/y3aXtWta2Q
— ಹರ್ಷ ಭಗತ್ ಮುರ್ಡೇಶ್ವರ (@harshabhagath59) June 5, 2021
ಭಾರತದಿಂದ – ಕರ್ನಾಟಕದಿಂದ ಸಾವಿರಾರು ಕೋಟಿ ದುಡಿಯುವ ಅಮೇಜಾನ್ ಆಯಾ ಪ್ರದೇಶದ ಘನತೆಗಳ ಬಗ್ಗೆ, ಜನರ ಭಾವನೆಗಳ ಬಗ್ಗೆ ಕೂಡ ಯೋಚನೆ ಮಾಡಬೇಕು. ಯಾರೊ ತಮ್ಮ ರಿಟೇಲರ್ ಏನೋ ಮಾರುತ್ತಿದ್ದಾರೆಂದು ಅನುಮತಿ ಕೊಟ್ಟುಬಿಡುವುದಲ್ಲ, ಎಲ್ಲವನ್ನೂ ಪರಿಶೀಲಿಸಬೇಕು. ಈಗ ನೆಟ್ಟಿಗರು ಟ್ಬಿಟರ್ ಮೂಲಕ ಅಮೇಜಾನ್ ಅನ್ನು ಟ್ಯಾಗ್ ಪುಷ್ಪಾರ್ಚನೆ ಮಾಡುತ್ತಿದ್ದಾರೆ. ತಾವೂ ಕೂಡ ಅವರ ಈ ನಡೆಯನ್ನು ಖಂಡಿಸಬೇಕು.
-Team Infotrend