ಹೆಚ್ಚಿದ ಏಲಿಯನ್ ಹಾವಳಿ : UFO ಹಾಗೂ ಏಲಿಯನ್ ಗಳ ಚಲನವಲನ ಗುರುತಿಸಲು ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸಿದ ಚೀನಾ ಸೇನೆ…!
ಏಲಿಯನ್ ಎಂಬ ಮಾನವನಿಗಿಂತ ಬುದ್ಧಿಶಾಲಿ ಜೀವಿಗಳು ಅನ್ಯ ಗ್ರಹದಲ್ಲಿವೆ ಎಂಬ ವಿಷಯವನ್ನು ನೀವು ಆಗಾಗ ಕೇಳುತ್ತಲೇ ಇರುತ್ತೀರಿ ಇಷ್ಟೇ ಅಲ್ಲದೇ ಈ ಮೊದಲು ಕೂಡ ನೀವು ಏಲಿಯನ್ ಗಳು ಅಲ್ಲಿ ಬಂದಿದ್ದವು ಇಲ್ಲಿ ಬಂದಿದ್ದವು ಎಂದೆಲ್ಲ ಕೇಳಿಯೇ ಇರುತ್ತೀರಿ ಆದರೆ ಅವು ಯಾವುಗಳಿಗೂ ನಿಖರ ಸಾಕ್ಷಿ ಆಧಾರ ಸಿಗದ ಕಾರಣ ಈ ವಿಷಯ ಇಷ್ಟು ಗಂಭೀರತೆ ಪಡೆದಿಲ್ಲ.
ಆದರೆ ಚೀನಾದಲ್ಲಿ ಇತ್ತೀಚಿಗೆ ಈ ಹಾರುವ ತಟ್ಟೆಗಳು ಹಾಗೂ ಏಲಿಯನ್ ಗಳು ಕಂಡುಬದಿವೆ ಎಂಬ ವದಂತಿ ಇದ್ದು ಇಷ್ಟೇ ಅಲ್ಲದೇ ಚೀನಾ ಸೇನೆ ಇವುಗಳನ್ನು ಟ್ರ್ಯಾಕ್ ಮಾಡಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧಾರಿತ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸಿದೆ..! ಇವುಗಳನ್ನು ಅಳವಡಿಸುವ ಅವಶ್ಯಕತೆ ಇಲ್ಲ, ಆದರೂ ಸುರಕ್ಷತೆಯ ಕಾರಣದಿಂದ ಅನ್ಯ ಗ್ರಹ ಜೀವಿಗಳ ಮೇಲೆ ನಿಗಾ ಇಡಲಾಗಿದೆಯಂತೆ.
ಚೀನಾ ಸರ್ಕಾರ ಈ UFO (Unidentified Flying Objects) ಗಳನ್ನು UAC ಎಂಬ ಹೆಸರಿನಿಂದ ಗುರುತಿಸುತ್ತಾರೆ UAC ಎಂದರೆ Unidentified Air Condition ಎಂಬ ಹೆಸರು ಕೊಟ್ಟಿದ್ದಾರೆ ಇದೆ ರೀತಿಯಲ್ಲಿ ಅಮೇರಿಕ ಸರ್ಕಾರ ಇವುಗಳಿಗೆ UAP ಅಂದರೆ Unidentified Aerial Phenomena ಎಂಬ ಹೆಸರು ಕೊಟ್ಟಿದ್ದಾರೆ. ಅವರೇನೇ ಹೆಸರು ಕೊಟ್ಟರೂ ಜನರು ಮಾತ್ರ ಇವುಗಳಿಗೆ UAF ಎಂದೇ ಗುರುತಿಸುತ್ತಾರೆ.
ವುಹಾನ್ ನಲ್ಲಿರುವ Air force Early Warning Academy ಯ ಸಂಶೋಧಕರಾದ ಚೆನ್ ಲೀ ಯವರು ಹೇಳುವ ಪ್ರಕಾರ ಇಡೀ ಚೀನಾ ದೇಶದ ತುಂಬೆಲ್ಲ ಜನರು ಹಾಗೂ ಸ್ವತಃ ಚೀನಾ ಮಿಲಿಟರಿಯೇ ಇಂತಹ ಆಕೃತಿಗಳು ಆಕಾಶದಲ್ಲಿ ಹಾರಾಡುವುದನ್ನು ನೋಡಿದ್ದಾರಂತೆ. ಇದೆ ಕಾರಣದಿಂದಾಗಿಯೇ ದೇಶದ ವಾಯು ಮಾರ್ಗದಲ್ಲಿನ ಸುರಕ್ಷತೆಗಾಗಿಯೇ ಈ ಕೆಲಸ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ.

ಚೇನ್ ಲೀ 2019 ರಲ್ಲಿ ಬೀಜಿಂಗ್ ನಲ್ಲಿ ನಡೆದ ಸೀನಿಯರ್ ಇನ್ಫಾರ್ಮಶನ್ ಟೆಕ್ನಾಲಜಿ ಸೈಂಟಿಸ್ಟ್ ಕಾನ್ಫರೆನ್ಸ್ ನಲ್ಲಿಯೂ ಕೂಡ ಈ ಮಾತು ಹೇಳಿದ್ದರು. ಇವರ ಮಾಹಿತಿಯ ನಂತರ ಚೀನಾ ಸೇನೆ ಪೀಪಲ್ ಲಿಬೆರೇಷನ್ ಆರ್ಮಿಯ ವಿಜ್ಞಾನಿಗಳು ಈ ಆರ್ಟಿಫಿಷಿಯಲ್ ಇನ್ಫಾರ್ಮಶನ್ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸುವ ನಿರ್ಧಾರಕ್ಕೆ ಬಂದರು.
ಇದು ಹೇಗೆ ಕೆಲಸ ಮಾಡುತ್ತದೆ ಎಂದರೆ, ಇಡೀ ದೇಶದ ಆಕಾಶದ ಗಡಿಯನ್ನು ನಿಯಂತ್ರಿಸಿ ವಿವಿಧ ಡೇಟಾವನ್ನು ರವಾನಿಸುತ್ತವಂತೆ, ಈ ಡೇಟಾದಲ್ಲಿ ಫೋಟೋ ವಿಡಿಯೋ ಕ್ಲಿಪ್ ಗಳು ಸಹ ಸಿಗುತ್ತವಂತೆ, ಇದರಿಂದ ಯಾವುದೇ ದೇಶದ ವಿಮಾನ ಅಥವಾ ಇಂತಹ ವಿಶೇಷ ಪ್ರಾಣಿಗಳು ಹಾರಾಟ ನಡೆಸುತ್ತಿವೇಯೋ ಏನೋ ಎಂಬುದರ ಮೇಲೆ ನಿಗಾ ಇಡಬಹುದಾಗಿದೆ.
ಒಂದು ಹೆಜ್ಜೆ ಮುಂದೆ ಇಟ್ಟಿರುವ ಅಮೇರಿಕಾ ರಕ್ಷಣಾ ಸೇನೆ, ಈ ರೀತಿ ಆಕಾಶದಲ್ಲಿ ಧಿಢಿರ್ ಎಂದು ಹಾರಾಡುವ ಯಾವುದೇ ವಸ್ತು ಕಂಡಾಗ ಅದನ್ನು ಸಾರ್ವಜನಿಕವಾಗಿ ಇಡಲಾಗುತ್ತದಂತೆ ಏಕೆಂದರೆ, ಈ ರೀತಿಯಲ್ಲಿ ಕಾಣುವ ವಸ್ತುಗಳು ಅನ್ಯ ಗ್ರಹ ಜೀವಿಗಳು ಆಗಿರಬಹುದು ಅಥವಾ ಶತ್ರು ದೇಶಗಳ ಗುಪ್ತ ವಾಹಕಗಳು ಕೂಡ ಆಗಿರಬಹುದು ಎಂಬ ಶಂಕೆ ಇದೆ ಅವರಿಗೆ.
ಆದರೆ ಏಲಿಯನ್ ಗಳು ಆ ದೇಶದ ರಾಡಾರ್ ನ್ನು ಸ್ತಬ್ದಗೊಳಿಸಿ ಹಾರುತ್ತವೆ, ಇವುಗಳ ವೇಗ ಕೂಡ ಬಹಳಷ್ಟು ಇರುತ್ತದಂತೆ, ಹೀಗಾಗಿ ಇವುಗಳು ಗುರುತು ಹಚ್ಚುವುದರೊಳಗಾಗಿಯೇ ಮರೆಯಾಗಿ ಬಿಡುತ್ತವಂತೆ, ವಿಡಿಯೋ ಅಗಲಿ ಫೋಟೋ ಆಗಲಿ ತೆಗೆಯಲು ಸಾಧ್ಯವಾಗುವುದಿಲ್ಲವಂತೆ.

ಈ ಕಾರಣದಿಂದ ಇವುಗಳನ್ನು ಬೇಕಂತಲೇ ಗುಪ್ತವಾಗಿ ಇಡಲಾಗುತ್ತದಂತೆ. ಏಕೆಂದರೆ ದೇಶದ ಜನರಲ್ಲಿ ಭಯ ಹುಟ್ಟುವುದಲ್ಲದೆ ರಕ್ಷಣಾ ವ್ಯವಸ್ಥೆಯ ಮೇಲೆ ಭರವಸೆ ಕಡಿಮೆಯಾಗುತ್ತದಂತೆ. 1998 ರ ಅಕ್ಟೋಬರ್ 19 ರಂದು ಚೀನಾದಲ್ಲಿ ಹೆಬೇಯಿ ಪ್ರಾಂತ್ಯದ ಕಾಂಗಜೊವು ಮಿಲಿಟರಿ ಕ್ಯಾಂಪ್ ನ ಮೇಲೆ ಇಂತಹ UFO ಹಾರುವುದನ್ನು ನೋಡಿದ್ದರಂತೆ.
ಇವುಗಳನ್ನು ಹಿಡಿಯಲು ಅಥವಾ ಹೊಡೆದುರುಳಿಸಲು ಎರಡು ಫೈಟರ್ ಜೆಟ್ ಗಳನ್ನು ಸಹ ಚೀನಾ ಸೇನೆ ಕಳಿಸಿತ್ತು, ಆದರೆ ಅವುಗಳು 20 ಸಾವಿರ ಮೀಟರ್ ಎತ್ತರ ಹೋಗಿ ಭೂತದಂತೆ ಮಾಯಾವಾದವಂತೆ..! ಇತ್ತ ರಾಡರ್ ಗೂ ಸಿಗದೇ ಕಣ್ಣಿಗೂ ಕಾಣದೆ ಮಾಯವಾದವಂತೆ!ಇವುಗಳು ನೋಡಲು ಅಣಬೆಯಂತಿದ್ದು ಅವುಗಳ ಮಧ್ಯ ಎರಡು ಕಾಲುಗಳಂತ ರಚನೆ ಹಾಗೂ ಪ್ರಕಾಶಮಾನವಾದ ಬೆಳಕು ಇತ್ತಂತೆ..!
ಚೇನ್ ಲೀಯವರ ಪ್ರಕಾರ ಚೀನಾ ಸೇನೆಯ ಬಳಿ ಇಂತವುಗಳನ್ನು ಟ್ರ್ಯಾಕ್ ಮಾಡಲು ಥ್ರೀ ಟೈರ್ ರಿಪೋರ್ಟಿಂಗ್ ಸಿಸ್ಟಮ್ ಇದೆಯಂತೆ..! ಇವುಗಳಿಗಿಂತ ಮೊದಲು ಮಿಲಿಟರಿ ರಾಡಾರ್ ಸ್ಟೇಷನ್, ಪೊಲೀಸ್ ಸ್ಟೇಷನ್, ಪೈಲಟ್ ಗಳು, ಹವಾಮಾನ ಇಲಾಖೆಯ ಕಚೇರಿಗಳು ಇವೆ.
ಇನ್ನೂ ಎರಡನೇ ಹಂತದಲ್ಲಿ ಚೀನಾ ಮಿಲಿಟರಿಯೇ ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಡೆಯಿಂದ ಬಂದಂತ ಒಟ್ಟು ಮಾಹಿತಿಯನ್ನು ವಿಶ್ಲೇಷಣೆ ಮಾಡುತ್ತದಂತೆ, ಇದರಲ್ಲಿ ಹಾರಾಟ ನಡೆಸಿದ ವಸ್ತುವಿನ ಆಕಾರ, ಗಾತ್ರ ಅದೇನು ಕೆಲಸ ಮಾಡೀತು ಎಂಬ ಮಾಹಿತಿ ಎಲ್ಲವೂ ಸಿಗುತ್ತದಂತೆ.
China military uses AI to track rapidly increasing UFOs in its airspace. https://t.co/98KK4beVrc #UFOTwitter
— UFO Community (@UFOcommunity) June 4, 2021
ಇವುಗಳ ಇನ್ನೊಂದು ಮಹತ್ವದ ಕೆಲಸ ಏನೆಂದರೆ ಮೇಲೆ ಹಾರಾಡಿದ ವಸ್ತು ಏನು ಎಂಬುದನ್ನು ಇದು ಅತೀ ವೇಗವಾಗಿ ಕಂಡು ಹಿಡಿಯುತ್ತದಂತೆ, ಅದನ್ನೇ ಮಾನವರು ಕಂಪ್ಯೂಟರ್ ಸಹಾಯದಿಂದ ವಿಶ್ಲೇಷಣೆ ಮಾಡುವುದು ಕಷ್ಟವಾಗುತ್ತದಂತೆ. ಚೀನಾದಲ್ಲಿ ಕೆಲವು ವರ್ಷಗಳಿಂದ ವಿಶೇಷ ಕಾರ್ಯಕ್ರಮ ಅಥವಾ ಯಾವುದಾದರೂ ವಿಶೇಷ ವ್ಯಕ್ತಿಯ ರ್ಯಾಲೀ ಇದ್ದಾಗ ಆ ಸ್ಥಳದ ಮೇಲೆ ಒಂದು ಡ್ರೋನ್ ಅಥವಾ ಪುಟ್ಟದೊಂದು ವಿಮಾನ ಹಾರಿಸಲಾಗುತ್ತದಂತೆ.
ಇಂತವುಗಳನ್ನು ಕೂಡ ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಗಳು ಆದಷ್ಟು ಬೇಗನೆ ಕಂಡುಹಿಡಿಯುತ್ತವಂತೆ. ಕೆಲವರ ವಾದಗಳ ಪ್ರಕಾರ ಚೀನಾದಲ್ಲಿ ಯಾವುದೇ ರೀತಿಯಾದ ಏಲಿಯನ್ ಆಗಲಿ ಅನ್ಯ ಗ್ರಹ ಜೀವಿಗಳಾಗಲಿ ಹಾರಾಟ ನಡೆಸಿಲ್ಲ, ಬದಲಾಗಿ ಚೀನಾದಲ್ಲಿ ಡ್ರೋನ್ ಗಳು ಬಹಳಷ್ಟು ಕಡಿಮೆ ಬೆಲೆಗೆ ಸಿಗುವದರಿಂದ ಇವುಗಳನ್ನು ಸಾಮಾನ್ಯ ಜನರು ಕೂಡ ಖರೀದಿಸಿ ಫೋಟೋ ತೆಗೆದುಕೊಳ್ಳಲು ಇನ್ನಿತರೇ ಸಣ್ಣ ಪುಟ್ಟ ಶೋಕಿಗಳಿಗಾಗಿ ಹೆಚ್ಚು ಬಳಸುತ್ತಿದ್ದಾರಂತೆ.
-Team Infotrend