ಬ್ಯಾಂಕ್ ಖಾತೆಯಲ್ಲಿ ಬರೀ 60 ₹ ಗಳಿದ್ದಾಗ, ಆಕಸ್ಮಿಕವಾಗಿ ಬಂದವು 30 ಕೋಟಿ ₹ ಗಳು. ಹೂ ಮಾರುವ ಮಹಿಳೆ ತಬ್ಬಿಬ್ಬು!!
ಪ್ರತಿ ವ್ಯಕ್ತಿ ಶ್ರೀಮಂತನಾಗಬೇಕೆಂಬ ಆಸೆ ಹೊತ್ತಿರುತ್ತಾನೆ. ತನ್ನ ಬ್ಯಾಂಕ್ ಖಾತೆಯಲ್ಲಿ ಒಮ್ಮೆಲೇ ಕೋಟ್ಯಾವಧಿ ರೂಪಾಯಿಗಳು ಬರಬೇಕು, ತನ್ನ ಜೀವನದ ಪ್ರತಿಯೊಂದು ದುಃಖ ದೂರವಾಗಿ ಸುಖದಿಂದ ಬಾಳಬೇಕು ಎಂದೆನಿಸುತ್ತದೆ.
ಚನ್ನಪಟ್ಟಣದ ನಿವಾಸಿಯಾದ ಬುರಹಾನ್ ನ ಜೀವನದಲ್ಲಿ ಪ್ರತ್ಯಕ್ಷವಾಗಿ ಇದು ನಿಜವಾಗಿದೆ ಎಂದರೆ ನಂಬುತ್ತೀರಾ?

ಒಂದಿನ ಬುರಹಾನ್ ಹೆಂಡತಿಯ ಅಕೌಂಟ್ ನಲ್ಲಿ ಒಮ್ಮೆಲೇ ಕೋಟ್ಯಾವಧಿ ರೂಪಾಯಿಗಳು ಜಮೆಯಾದದ್ದು ಕೇಳಿ ಆತನ ಪ್ರಜ್ಞೆ ತಪ್ಪುವದೊಂದೆ ಬಾಕಿ ಇತ್ತು. ಸಯೀದ್ ಬುರಹಾನ್ ಮಲಿಕ್ ಹೂ ಮಾರುವ ಕೆಲಸ ಮಾಡಿಕೊಂಡಿದ್ದಾನೆ. ಆತನ ಆರ್ಥಿಕ ಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ಹೀಗಿರುವಾಗ 2 ನೇ ಡಿಸೆಂಬರ್ ದಂದು ಬ್ಯಾಂಕಿನ ಅಧಿಕಾರಿಗಳು ಮನೆಗೆ ಬಂದು ಪತ್ನಿಯ ಬ್ಯಾಂಕ್ ಖಾತೆಯ ಬಗ್ಗೆ ಮಾಹಿತಿ ಕೇಳಿದಾದ ಸಯೀದ್ ಗೆ ಅವಾಗ್ಲೇ ಗೊತ್ತಾಗಿದ್ದು ಹೆಂಡತಿಯ ಅಕೌಂಟ್ ನಲ್ಲಿ ಇಷ್ಟೊಂದು ಹಣ ಜಮಾಯಿಸಿದ್ದು. ಇಷ್ಟೊಂದು ದುಡ್ಡು ಬಂದದ್ದನ್ನು ಕೇಳಿ ಆತನಿಗೆ ಆಶ್ಚರ್ಯವೇ ಆಯಿತು. ಬ್ಯಾಂಕಿನವರು ಸಯೀದ್ ನಿಗೆ ಪತ್ನಿಯ ಜೊತೆ ಆಧಾರ್ ಕಾರ್ಡ್ ತೆಗೆದುಕೊಂಡು ಬ್ಯಾಂಕಿಗೆ ಬಂದು ಭೆಟ್ಟಿಯಾಗು ಎಂದು ಹೇಳಿ ಹೋದರು. ಅಷ್ಟೇ ಅಲ್ಲ ಬ್ಯಾಂಕಿನವರು ಬಿಳಿ ಹಾಳೆಯ ಮೇಲೆ ಸೈನ್ ಮಾಡಿಕೊಡಲು ತುಂಬಾ ಒತ್ತಾಯ ಮಾಡಿದರು. ಸಯೀದ್ ಮಾತ್ರ ಯಾವುದೇ ಕಾರಣಕ್ಕೂ ಸೈನ್ ಕೊಡಲಿಲ್ಲವಂತೆ.

ಸಯೀದ್ ಹೇಳುವ ಪ್ರಕಾರ ಆನ್ ಲೈನ್ ಪೋರ್ಟಲ್ ಮುಖಾಂತರ ಒಂದು ಸೀರೆಯನ್ನು ಖರೀಸಿದಾಗ, ನೀವು ಒಂದು ಬೈಕ್ ನ್ನು ಗೆದ್ದಿದ್ದೀರಿ ಎಂದು ಹೇಳಿ ನಿಮ್ಮ ಬ್ಯಾಂಕಿನ ಸಂಪೂರ್ಣ ಮಾಹಿತಿಯನ್ನು ಕೊಡಿ ಎಂದು ಕೇಳಿದ್ದರು. ಆ ಸಮಯದಲ್ಲಿ ನಮ್ಮ ಕಡೆಗೆ ಬ್ಯಾಂಕಿನಲ್ಲಿ ಇದ್ದದ್ದು ಬರೀ 60 ₹ ಗಳು. ಆದರೀಗ ಇಷ್ಟೊಂದು ಹಣ ಬಂದದ್ದು ನೋಡಿದರೆ ನಮ್ಮ ವಿಶ್ವಾಸಕ್ಕೆ ತುಂಬಾ ದೂರ ಅಂತಿದ್ದಾರೆ. ಆದ್ದರಿಂದಲೇ ನಾನು IT ಯಲ್ಲಿಯೂ ದೂರು ದಾಖಲಿಸಿದೆ, ಮೊದಮೊದಲು ಅವರು ವಿಷಯವನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ. ನಂತರ ರಾಮನಗರ ವಿಭಾಗದ ಪೊಲೀಸರು ಪ್ರಸ್ತುತ ಹಣ ಹೇಗೆ, ಯಾರಿಂದ ಮತ್ತು ಯಾವ ಕಾರಣಕ್ಕಾಗಿ ಬಂದಿವೆ ಮತ್ತು ಈ ವ್ಯವಹಾರ ನಡೆದಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.