ಮಾಜಿ ಗೆಳೆಯನ ಬಗ್ಗೆ ಮಾತನಾಡಿದ ಕಾಜೋಲ್ : ನಾಲ್ಕು ವರ್ಷದ ಸಂಬಂಧ ಮುರಿದುಕೊಂಡು ಅಜೆಯ್ ದೇವಗನ್ ಜೊತೆ ಮದುವೆಯಾಗಿದ್ದಂತೆ!
ಬಾಲಿವುಡ್ನ ಅತ್ಯಂತ ನೆಚ್ಚಿನ ಜೋಡಿ ಅಜಯ್ ಮತ್ತು ಕಾಜೋಲ್ ತಮ್ಮ ಪ್ರೇಮಕಥೆಗೆ ಹೆಸರುವಾಸಿಯಾಗಿದ್ದಾರೆ. ಈ ಇಬ್ಬರ ಜೋಡಿ ರೀಲ್ ಜೀವನದಲ್ಲಿ ಹಿಟ್ ಮಾತ್ರವಲ್ಲದೆ ರೀಯಲ್ ಜೀವನದಲ್ಲಿ ಕೂಡ ಹಿಟ್ ಆಗಿದೆ. ಇಬ್ಬರೂ ಒಟ್ಟಿಗೆ ಅನೇಕ ಚಿತ್ರಗಳನ್ನು ಪರದೆಯ ಮೇಲೆ ಮಾಡಿದ್ದಾರೆ. ಸಾಕಷ್ಟು ಯಶಸ್ವಿ ಚಿತ್ರಗಳನ್ನು ಸಹ ಕೊಟ್ಟಿದ್ದಾರೆ. ಅಲ್ಲಿಂದ ಆರಂಭವಾದ ಅವರ ಪ್ರೇಮ ಇಂದಿಗೂ ಹಾಗೇ ಉಳಿದಿದೆ.
ಶೂಟಿಂಗ್ ಸೆಟ್ ಗಳಿಂದ ಇಬ್ಬರ ನಡುವೆ ಪ್ರೀತಿ ಅರಳಿತು ಮತ್ತು ನಂತರ ಇಬ್ಬರೂ ತಮ್ಮ ಮಾಜಿ ಸಂಗಾತಿಯನ್ನು ತೊರೆದರು. ಹೌದು, ಕಾಜೋಲ್ ಆಗಾಗ್ಗೆ ತಮ್ಮ ಪ್ರೇಮಕಥೆಯ ಬಗ್ಗೆ ಏನನ್ನಾದರೂ ಬಹಿರಂಗಪಡಿಸುತ್ತಿರುತ್ತಾರೆ. ಈ ಸಲ ಅವರು ಅಜಯ್ ದೇವಗನ್ ಅವರನ್ನು ಪ್ರೀತಿಸುವ ಸಂಪೂರ್ಣ ಕಥೆಯನ್ನು ಹೇಳಿದ್ದಾರೆ, ಇದನ್ನು ಅವರ ಅಭಿಮಾನಿಗಳು ಚೆನ್ನಾಗಿ ಇಷ್ಟಪಡಬಹುದು.

ಬಾಲಿವುಡ್ ನಟಿ ಕಾಜೋಲ್ ಶ್ರೇಷ್ಠ ಕಲಾವಿದೆ. ಅವರು ತಮ್ಮ ನಟನೆಯಿಂದ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ನಟನೆಗೆ ಮಾತ್ರ, ಈ ದಿನಗಳಲ್ಲಿ ಅವಳು ತನ್ನ ವೈಯಕ್ತಿಕ ಜೀವನದ ಕಾರಣದಿಂದಾಗಿ ಕೂಡ ಹೆಸರುವಾಸಿಯಾಗಿದ್ದಾಳೆ. ಇತ್ತೀಚೆಗೆ ಕಾಜೋಲ್ ತನ್ನ ಮತ್ತು ಅಜಯ್ ಅವರ ಪ್ರೇಮಕಥೆಯ ಬಗ್ಗೆ ಮಾಧ್ಯಮಗಳೊಂದಿಗಿನ ಮಾತಾಡಿದರು.
ಈ ಸಮಯದಲ್ಲಿ ಇಬ್ಬರ ನಡುವಿನ ಸಂಬಂಧ ಹೇಗಿದೆ, ಮದುವೆಗೆ ಮೊದಲು ಮತ್ತು ಮದುವೆಯ ನಂತರ ಯಾವ ಬದಲಾವಣೆಗಳು ಸಂಭವಿಸಿದವು, ಅಷ್ಟೇ ಅಲ್ಲ ಅಜಯ್ ರೊಮ್ಯಾಂಟಿಕ್ ಆಗಿರುವುದರ ಬಗ್ಗೆಯೂ ಅವರು ಮುಕ್ತವಾಗಿ ಮಾತನಾಡಿದರು.
ಕಾಜೋಲ್ ಮಾಜಿ ಗೆಳೆಯನ ಬಗ್ಗೆ ಕೂಡ ಮಾತನಾಡಿದರು :
ನಟಿ ಕಾಜೋಲ್ ಅವರು ಅಜಯ್ ದೇವಗನ್ ಅವರನ್ನು ಭೇಟಿಯಾದಾಗ ಮತ್ತು ಅವರೊಂದಿಗಿನ ಸ್ನೇಹ ಬೆಳೆಯುತ್ತಿರುವಾಗ, ಬೇರೊಬ್ಬರೊಂದಿಗೆ ಡೇಟಿಂಗ್ ನಲ್ಲಿದ್ದೆ ಎಂದು ಹೇಳಿದರು. ಆ ದಿನಗಳಲ್ಲಿ ನಾನು ನನ್ನ ಗೆಳೆಯನ ಬಗ್ಗೆ ಅಜಯ್ಗೆ ದೂರು ನೀಡುತ್ತಿದ್ದೆ ಮತ್ತು ಸ್ವಲ್ಪ ಸಮಯದ ನಂತರ ನಾನು ಸಂಬಂಧ ಮುರಿದುಕೊಂಡೆ.

ನಂತರ ನಮ್ಮ ಮಾರ್ಗವು ತೆರವಾಯಿತು ಎಂದು ಅವರು ಹೇಳಿದರು. ಆ ಸಮಯದಲ್ಲಿ ಅಜಯ್ ಕೂಡ ಬೇರೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದ, ಆಗ ಅವರೂ ಕೂಡ ಮಾಜಿ ಸಂಗಾತಿಯನ್ನು ತೊರೆದು ಈ ಸಂಬಂಧಕ್ಕೆ ಸಿಲುಕಿದೆವು ಎಂದು ಹಳೆಯದನ್ನೆಲ್ಲ ಕಾಜೋಲ್ ನೆನಪಿಸಿಕೊಂಡರು.
4 ವರ್ಷಗಳ ಡೇಟಿಂಗ್!
ಮಾಧ್ಯಮಗಳೊಂದಿಗಿನ ಸಂಭಾಷಣೆಯಲ್ಲಿ, ಕಾಜೋಲ್ ಅವರು ಅಜಯ್ ಅವರೊಂದಿಗೆ ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದು, ನಂತರ ಅವರು ಅಜೆಯ್ ರನ್ನು ಮದುವೆಯಾಗಲು ನಿರ್ಧರಿಸಿದೆ ಎಂದು ಹೇಳಿದರು. ಇಶ್ಕ್ ಚಿತ್ರದ ಸೆಟ್ನಿಂದ ಇಬ್ಬರ ನಡುವಿನ ಪ್ರೀತಿ ಪ್ರಾರಂಭವಾಯಿತು ಎಂದು ನೆನಪಿಸಿಕೊಂಡರು.

ನಂತರ ಇಬ್ಬರೂ ಪರಸ್ಪರ ಶ್ರದ್ಧೆಯಿಂದ ಪ್ರೀತಿ ಉಳಿಸಿಕೊಂಡು ಬಂದರು ಮತ್ತು ಈಗ ಅವರ ಸಂಬಂಧವು ಮತ್ತಷ್ಟು ಬಲಗೊಂಡಿದೆ. ಅವರ ಮದುವೆಯ ನಿರ್ಧಾರದಿಂದ ಅವರ ತಂದೆಗೆ ಸಂತೋಷವಾಗಿರಲಿಲ್ಲ ಮತ್ತು ಅವರ ಮೇಲೆ 4 ದಿನ ಕಾಲ ಕೋಪಗೊಂಡಿದ್ದರಂತೆ. ಕಾಜೋಲ್ ತನ್ನ ವೃತ್ತಿಜೀವನದತ್ತ ಹೆಚ್ಚು ಗಮನ ಹರಿಸಬೇಕೆಂದು ಅವರು ಬಯಸಿದ್ದರು.
ಕಭಿ ಖುಷಿ ಕಭಿ ಘಾಮ್ ಸಮಯದಲ್ಲಿ ಕಾಜೋಲ್ ಗರ್ಭಿಣಿಯಾಗಿದ್ದಳು :
ಕಭಿ ಖುಷಿ ಕಭಿ ಘಮ್ ಚಿತ್ರದ ಶೂಟಿಂಗ್ ಸಮಯದಲ್ಲಿ ಕಾಜೋಲ್ ಗರ್ಭಿಣಿಯಾಗಿದ್ದಳು, ಆದರೆ ನಂತರ ಆಕೆಗೆ ಗರ್ಭಪಾತವಾಯಿತು, ಆಮೇಲೆ ಅವಳು ನ್ಯಾಸಾಗೆ ಜನ್ಮ ನೀಡಿದಳು. ಈಗ ಅಜಯ್ ಮತ್ತು ಕಾಜೋಲ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಾಜೋಲ್ – ಅಜೆಯ್ ಇಬ್ಬರೂ ರೋಮ್ಯಾಂಟಿಕ್ ಅಲ್ಲ, ಆದರೆ ಒಬ್ಬರಿಗೊಬ್ಬರು ಹೆಚ್ಚು ಕಾಳಜಿ ವಹಿಸುತ್ತಾರೆ, ಇದರಿಂದಾಗಿ ಅವರ ನಡುವೆ ಸಾಕಷ್ಟು ಪ್ರೀತಿ ಇದೆಯಂತೆ.
-Team Infotrend