Articles

71 ಲ್ಯಾಂಡ್ ಮೈನ್ ಬಾಂ’ಬ್ ಗಳನ್ನು ಪತ್ತೆ ಹಚ್ಚಿದ ಈ ಇಲಿ ಸಾವಿರಾರು ಜನರ ಪ್ರಾಣ ಉಳಿಸಿದೆಯಂತೆ..!

ನೀವೆಲ್ಲ ಸಾಮಾನ್ಯವಾಗಿ ಪಂಚತಂತ್ರದ ಕಥೆಗಳನ್ನು ಕೇಳಿಯೇ ಇರುತ್ತೀರಿ, ಅದೇ ರೀತಿಯಲ್ಲಿ ನಾಯಿ, ಬೆಕ್ಕು, ಹಸು ಹಾಗೂ ಇನ್ನಿತರೇ ಸಾಕು ಪ್ರಾಣಿಗಳು ಮನುಷ್ಯನಿಗೆ ತಮ್ಮ ಮೂಕ ಭಾಷೆಯಿಂದಲೇ ಮಾಡಿರುವ ಉಪಕಾರಗಳ ಬಗ್ಗೆ ಸಾಮಾನ್ಯವಾಗಿ ಕೇಳಿಯೇ ಇರುತ್ತೀರಿ, ಆದರೆ ಯಾವಾಗಲೂ ಸಮಸ್ಯೆಯನ್ನೇ ಸೃಷ್ಟಿ ಮಾಡುವ ಇಲಿಯೊಂದು ಸಾವಿರಾರು ಜನರ ಜೀವ ಉಳಿಸಿದೆ ಎಂದರೆ ಆಶ್ಚರ್ಯವಾಗದೇ ಇರದು ಅದರ ವಿವರ ಈ ಕಥೆಯಲ್ಲಿದೆ…

ಆಗ್ನೇಯ ಏಷ್ಯ ಖಂಡದ ಸುಂದರ ದೇಶವಾದ ಕಾಂಬೊಡಿಯಾದ ದೇಶದಲ್ಲಿರುವ ಈ ಇಲಿಯ ಹೆಸರು ಮಗಾವಾ ಎಂದು. 7 ವರ್ಷ ವಯಸ್ಸಿನ ಈ ಇಲಿ ಎಷ್ಟೊಂದು ಫೇಮಸ್ ಆಗಿದೆ ಎಂದರೆ ಇದು ಕಾಂಬೋಡಿಯ ದೇಶದಲ್ಲಿ ಲ್ಯಾಂಡ್ ಮೈನ್ ಬಾಂ’ಬ್ ಗಳನ್ನು ಕಂಡು ಹಿಡಿಯುವ ಇಲಿ ಎಂದು ಫೇಮಸ್ ಆಗಿದೆ..!

ಇದುವರೆಗೂ ಇದು ಬರೋಬ್ಬರಿ 71 ಲ್ಯಾಂಡ್ ಮೈನ್ ಬಾಂ’ಬುಗಳ ಇರುವಿಕೆ ಹುಡುಕಿಕೊಟ್ಟು ಸಾವಿರಾರು ಜನರ ಜೀವ ಉಳಿಸಿದೆಯಂತೆ. ಇದಷ್ಟೇ ಅಲ್ಲದೇ ಇದು ಒಟ್ಟು 28 ಜೀವಂತ ವಿ’ಸ್ಪೋ’ಟ’ಕ ಬಾಂ’ಬುಗಳನ್ನು ಸಹ ಪತ್ತೆ ಹಚ್ಚಿದೆಯಂತೆ.

ಮಗಾವಾ ಇಲಿಯ ಈ ಎಲ್ಲಾ ಸಾಹಸಗಳನ್ನು APOP0 ಎಂಬ ಹೆಸರಿನ ಸಂಘಟನೆಯೊಂದು ಟ್ರೆಂಡ್ ಮಾಡಿದ್ದು, ಈ ಸಂಘಟನೆ ಇಲಿಗಳಿಗೆ ಲ್ಯಾಂಡ್ ಮೈನ್ ಗಳ ಹಾಗೂ ಬಾಂ’ಬ್ ಗಳ ಬಗ್ಗೆ ಮಾಹಿತಿ ನೀಡುವ ಟ್ರೇನಿಂಗ್ ಕೊಡುತ್ತಿದ್ದಾರಂತೆ..! ಈ ಸಂಘಟನೆಯ ಪ್ರಕಾರ ಈಗಲೂ ಸಹ ಈ ಮಗಾವಾ ಇಲಿಯು ಅರೋಗ್ಯವಾಗಿದೆ, ಆದರೆ ಈಗ ಇದರ ಸೇವಾ ನಿವೃತ್ತಿ ಸಮೀಪಿಸಿದೆಯಂತೆ.

ಈ ಇಲಿಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಹೇಳುವ ಪ್ರಕಾರ, ಈ ಮಗಾವ್ ಇಲಿ ನೋಡಲು ಚಿಕ್ಕದಾಗಿದ್ದರೂ ಕೂಡ ಅದು ಬಹಳಷ್ಟು ಜನರ ಜೀವ ಉಳಿಸಿದೆ, ಇದರೊಂದಿಗೆ ಕೆಲಸ ಮಾಡಿದ ಹೆಮ್ಮೆ ನನಗಿದೆ ಎಂದು ಖುಷಿಯಾಗಿ ಹೇಳುತ್ತಾರೆ.

ಅವರು ಹೇಳುವ ಪ್ರಕಾರ ಮಗಾವಾ ಇಲಿಯ ಸ್ಥಾನ ತುಂಬುವುದು ಅಷ್ಟೇನೂ ಕಷ್ಟದ ಕೆಲಸವಲ್ಲ, ಏಕೆಂದರೆ ಈಗ ಲ್ಯಾಂಡ್ ಮೈನ್ ಗುರುತಿಸುವ ತರಬೇತಿ ಪಡೆದಿರುವ ಇಂತಹ ಸಾಕಷ್ಟು ಇಲಿಗಳು ಸಧ್ಯ ಅವರ ತರಬೇತಿ ಕೇಂದ್ರದಲ್ಲಿವೆಯಂತೆ. ಹಾಗೂ ಅವುಗಳು ಈಗಾಗಲೇ ಪ್ರವೇಶ ಪರೀಕ್ಷೆ ಪೂರ್ಣಗೊಳಿಸಿವೆಯಂತೆ.

ಈ ಮಗಾವಾ ಇಲಿಯ ಇಂತಹ ಸಾಧನೆ ಮೆಚ್ಚಿ ಬ್ರಿಟನ್ ನ ಒಂದು ಸಂಸ್ಥೆಯಾದ PDASO ಎಂಬುದು ಸನ್ಮಾನ ಕೂಡ ಮಾಡಿದೆಯಂತೆ. ಈ ಸಂಸ್ಥೆಯು ಪ್ರತಿ ವರ್ಷ ವಿಶೇಷ ಸಾಧನೆ ಮಾಡಿದ ಪ್ರಾಣಿಗಳಿಗೆ ಸನ್ಮಾನಿಸುವ ಸಂಸ್ಥೆಯಾಗಿದೆ. ಬರೋಬ್ಬರಿ 77 ವರ್ಷ ಇತಿಹಾಸ ಇರುವ ಈ ಸಂಸ್ಥೆಯ ಪ್ರಕಾರ ಇದೆ ಮೊದಲ ಬಾರಿಗೆ ಒಂದು ಇಲಿ ಈ ಪ್ರಶಸ್ತಿಗೆ ಭಾಜನವಾಗಿದ್ದು ವಿಶೇಷ.

ಈ ಮಗಾವಾ ಇಲಿಯು ಕ್ಯಾಂಬೊಡಿಯ ದೇಶದಲ್ಲಿನ ಒಟ್ಟು 15 ಲಕ್ಷ ಚದುರ ಅಡಿಯ ಜಾಗದಲ್ಲಿದ್ದ ಲ್ಯಾಂಡ್ ಮೈನ್ ಸುರಂಗದಿಂದ ಮುಕ್ತಗೊಳಿಸಲು ಸಹಾಯ ಮಾಡಿದೆಯಂತೆ. ಅವುಗಳು 1970 ರಿಂದ 80 ರ ನಡುವೆ ಆ ದೇಶದಲ್ಲಿ ನಡೆದ ಯು’ದ್ಧದಲ್ಲಿ ಆದಂತ ಸುರಂಗಗಳಾಗಿವೆಯಂತೆ.

ಆ ಯು’ದ್ಧಗಳಲ್ಲಿ ಶತ್ರುಗಳನ್ನು ಸದೆಬಡಿಯಲು ಅಲ್ಲಿನ ಸೇ’ನೆ ಈ ಸುರಂಗಗಳ ಸಹಾಯ ಪಡೆದಿದ್ದರಂತೆ ಆದರೆ ಇತ್ತೀಚೆಗೆ ಇವುಗಳು ಜನರ ಜೀವ ತೆಗೆದುಕೊಳ್ಳುತ್ತಿದ್ದವಂತೆ. ಒಟ್ಟಾರೆ ನಾಯಿಗಿಂತ ಈ ಇಲಿ ಇಂಥ ಕೆಲಸದಲ್ಲಿ ಫೇಮಸ್ಸಾಗಿದ್ದು ವಿಶೇಷ ಅನ್ನಬಹುದು.
-ಮಂಜುನಾಥ್

Leave a Comment

Your email address will not be published. Required fields are marked *