VIDEO : ಮುಗ್ಧತೆ ಮತ್ತು ಮುಗುಳ್ನಗೆಯಿಂದ ಅಂತರ್ಜಾಲಕ್ಕೆ ಬೆಂಕಿ ಹಚ್ಚಿದ ಅಕ್ಕ ತಂಗಿಯರು! ಎರಡು ವಿಡಿಯೊ ನೋಡಿ…
ಫೋಟೊ ಚೆನ್ನಾಗಿ ಬರಲು, ಅಥವಾ ಯಾರಾದರೂ ಚೆನ್ನಾಗಿ ಕಾಣಲು ಒಳ್ಳೆ ಬಟ್ಟೆ ಹಾಕಬೇಕಿಲ್ಲ, ಸುಂದರ ಮುಗುಳ್ನಗೆ ಇದ್ದರೆ ಸಾಕು. ಇಲ್ಲಿ ರೋಟಿ ಮಾಡುತ್ತಿರುವ ಬಡ ಹುಡುಗಿಯರನ್ನು ನೋಡಿ, ಅವರ ಆ ಸುಂದರ – ಮುಗ್ಧ ನಗು ಯಾವ ಮಾಡೆಲ್ ಗಿಂತ ಕಮ್ಮಿ ಇದೆ ಹೇಳಿ. ಇದೇ ಕಾರಣಕ್ಕೆ ಇಂದು ಈ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಇನ್ಸ್ಟಾದಲ್ಲಿನ ಇವರ ಚಿಕ್ಕ ಚಿಕ್ಕ ವಿಡಿಯೊ ತುಣುಕುಗಳು ಭರ್ಜರಿಯಾಗಿ ಹಂಚಿಕೆಯಾಗುತ್ತಿವೆ.
ಇವರನ್ನು ನೀವು ಈ ಮೊದಲೂ ನೋಡಿರಬಹುದು, ನೋಡಿರದಿದ್ದರೆ ಕೆಳಗೆ ವಿಡಿಯೊದಲ್ಲಿ ನೋಡಿ. ಅವರ ಮುಗ್ಧತೆ, ಕ್ಯಾಮೆರಾ ನೋಡಿದಾಗ ಅವರ ಪ್ರತಿಕ್ರಿಯೆ, ಕಿರುನಗೆ ಇವೆಲ್ಲ ಅಂತರ್ಜಾಲಕ್ಕೆ ಬೆಂಕಿ ಹಚ್ಚಿವೆ. ತೀರ ಚಿಕ್ಕ ವಿಡಿಯೊ ತುಣುಕುಗಳಾದರೂ ಜನ ಹುಚ್ಚೆದ್ದು ಶೇರ್ ಮಾಡುತ್ತಿದ್ದಾರೆ.
ಮಾಮೂಲಾಗಿ ನೋಡಿದರೆ ಹಾಗೇನೂ ಅನಿಸುವುದಿಲ್ಲವಾದರೂ, ಅವರ ನಗುವಿನ ರೀತಿಯನ್ನು ವಿಶೇಷವಾಗಿ ಗಮನಿಸಿದಾಗ ಆಕರ್ಷಿಸದೇ ಇರದು. ರೋಟಿ ಮಾಡುತ್ತಿರುವ ಆ ಹುಡುಗಿಯ ಒಂದೇ ಒಂದು ನೇರ ನೋಟ ಅದೆಷ್ಟೊ ಜನರನ್ನು ಕ್ಲೀನ್ ಬೋಲ್ಡ್ ಮಾಡಿದೆ.
ಪಕ್ಕಾ ದೇಶಿ ಅನ್ನಬಹುದಾದ ಇವರ ಮುಖದಲ್ಲಿ ಎಲ್ಲಾದರೂ ಮೇಕಪ್ ಕಲೆ ಇದೆಯಾ ನೋಡಿ. ಒಂಚೂರೂ ಮೇಕಪ್ ಮಾಡಿಕೊಳ್ಳದ ಯಾವುದೇ ಸೌಂದರ್ಯ ವರ್ಧಕ ಬಳಸದ ಅವರ ಮುಖ, ನೋಟ, ನಗು ಎಲ್ಲರ ಭ್ರಮೆಯನ್ನು ತೊಡೆದು ಹಾಕಿದೆ. ವಿಡಿಯೊ ಚೆನ್ನಾಗಿ ಬರಲು ಒಳ್ಳೆ ಸೆಟ್, ಮೇಕಪ್, ಡ್ರೆಸ್ ಇವೆಲ್ಲ ಬೇಕು ಅನ್ನುವುದು ಇವರ ವಿಡಿಯೊದಿಂದ ಕೇವಲ ಒಂದು ಭ್ರಮೆ ಎಂದಾಗಿದೆ.
ಇನ್ನೊಂದು ವಿಡಿಯೊದಲ್ಲಿ ತರಕಾರಿ – ಈರುಳ್ಳಿ ಕತ್ತರಿಸುತ್ತಿರುವ ಸಾಮಾನ್ಯ ದೃಶ್ಯ ಕೂಡ ಆ ಹುಡುಗಿಯ ನಗೆಯಿಂದಾಗಿ ಹಬ್ಬವಾಗಿ ಪರಿಣಮಿಸಿದೆ. ಈರುಳ್ಳಿ ಕತ್ತರಿಸುವುದರಲ್ಲಿ ಮಗ್ನಳಾಗಿದ್ದ ಆಕೆಗೆ ಪಕ್ಕದಲ್ಲಿದ್ದವರು ಕ್ಯಾಮೆರಾ ಬಗ್ಗೆ ತಿಳಿಸಿದಾಗ ಆಕೆ ಕ್ಯಾಮೆರಾದತ್ತ ನೋಡಿದ್ದು ಹಾಗೂ ಕಿರುನಗೆ ಚೆಲ್ಲಿದ್ದು ನೋಡುಗರನ್ನು ಎರ್ರಾಬಿರ್ರಿ ಸೆಳೆದಿದೆ.
ಅದನ್ನು ತಮ್ಮ ಫೇಸ್ಬುಕ್ ಗೋಡೆ ಹಾಗೂ ಸಾಮಾಜಿಕ ಜಾಲತಾಣದ ಇತರ ವೇದಿಕೆಗಳಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸುವವರ ಸಂಖ್ಯೆ ಹೆಚ್ಚಾಗಿದೆ. ವಿಚಿತ್ರ ಸಂಗತಿಯೆಂದರೆ, ಇಷ್ಟೆಲ್ಲ ವೈರಲ್ ಆಗುತ್ತಿರುವ ಇವರ ಹೆಸರು ಏನೆಂಬುದೇ ಯಾರಿಗೂ ಗೊತ್ತಾಗಿಲ್ಲ. ekiya5 ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ಈ ವಿಡಿಯೊಗಳು ವೈರಲ್ ಆಗುತ್ತಿವೆ.
ಇವಷ್ಟೇ ಅಲ್ಲದೇ ಅವರ ಸಾಕಷ್ಟು ವಿಡಿಯೊಗಳು ಇವೆ. ವಿಶೇಷವೆಂದರೆ, ಎಲ್ಲ ವಿಡಿಯೊಗಳಲ್ಲೂ ಅವರು ಒಂದೊ ಅಡುಗೆ ಮಾಡುತ್ತಿರುತ್ತಾರೆ ಅಥವಾ ಏನಾದರೂ ಹೊರಾಂಗಣ ಕೆಲಸ ಮಾಡುತ್ತಿರುತ್ತಾರೆ. ಮುಕ್ತ ಆಕಾಶದ ಕೆಳಗೆ ಯಾವುದೇ ಸೆಟ್ – ಕೃತಕ ಬೆಳಕು ಇಲ್ಲದ ಆ ವಿಡಿಯೊಗಳು ಸಾಕಷ್ಟು ನೈಜವಾಗಿ – ದೇಶಿಯವಾಗಿ ಮೂಡಿಬಂದಿವೆ. ಎರಡು ವಿಡಿಯೊ ಮೇಲಿವೆ ನೋಡಿ.
-Team Infotrend