VIDEO : ಅರ್ದ ಸೆಕೆಂಡ್ ತಡ ಆಗಿದ್ದರೂ ಆ ಮಗು ಏನಾಗುತ್ತಿತ್ತೋ! ವಿಡಿಯೊ ನೋಡಿ
ಇದೊಂದು ಅದ್ಭುತ ವಿಡಿಯೊ, ಆ ಯುವಕ ಮಾಡಿದ ಸಾಹಸ ನಿಜಕ್ಕೂ ಅತ್ಯದ್ಭುತ ಹಾಗೂ ರೋಚಕ. ಆತನ ಸಮಯಪ್ರಜ್ಞೆಯಿಂದ ಅಲ್ಲಿ ಒಂದು ಚಿಕ್ಕ ಜೀವ ಉಳಿದಿತ್ತು. ಟೈಟಲ್ ನಲ್ಲಿ ಹೇಳಿದ ಹಾಗೆ ಒಂದು ಸೆಕೆಂಡಿನಲ್ಲಿ ಹತ್ತು ಭಾಗದಲ್ಲಿ ಒಂದು ಭಾಗದಷ್ಟು ತಡವಾಗಿದ್ದರೂ ಆ ಮಗು ಏನಾಗುತ್ತಿತ್ತೊ. ಅಥವಾ ಆ ಯುವಕ ಆ ಕ್ಷಣಕ್ಕೆ ಆಚೆ ಸರಿಯದೇ ಇದ್ದಿದ್ದರೆ ಖಂಡಿತ ಆತನಿಗೂ ಅ’ಪಾ’,ಯ ಆಗುತ್ತಿತ್ತು.
ಕೊನೆಗೆ ಇರುವ ವಿಡಿಯೊದಲ್ಲಿ ನೀವು ಇದನ್ನು ನೋಡಬಹುದು. ಅಮೇರಿಕಾದ ಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚಾಪ್ಮನ್ ಅವರು ಈ ವಿಡಿಯೊವನ್ನು ಹಂಚಿಕೊಂಡಿದ್ದು, A little girl. And a stranger with no hesitation whatsoever. Not all heroes wear capes… ಎಂಬ ಶಿರ್ಷಿಕೆಯಡಿ ಅವರು ಅಪ್ ಲೋಡ್ ಮಾಡಿರುವ ವಿಡಿಯೊವನ್ನು ಲಕ್ಷಾಂತರ ಜನ ನೋಡಿ ಮೆಚ್ಚಿದ್ದಾರೆ.
23 ಸೆಕೆಂಡಿನ ಈ ವಿಡಿಯೊ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಆ ವ್ಯಕ್ತಿ ಆ ಸಮಯಕ್ಕೆ ಆ ಸಾಹಸ ಮಾಡದೇ ಹೋಗಿದ್ದರೆ ಖಂಡಿತ ಮುಂದಾಗುವುದನ್ನು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ವಾಸ್ತವದಲ್ಲಿ ರಸ್ತೆ ದಾಟಲೆಂದು ಒಂದು ಮಗು ರಸ್ತೆ ಬದಿ ಬಂದು ನಿಲ್ಲುತ್ತದೆ.
ಆಗ ಆ ಯುವಕ ಕೂಡ ಅಲ್ಲಿ ಬಂದು ನಿಲ್ಲುತ್ತಾನೆ. ಕೆಲಸ ಸೆಕೆಂಡುಗಳನಂತರ ಅವರ ವಿರುದ್ಧ ದಿಕ್ಕಿನಲ್ಲಿ ಅಂದರೆ ರಸ್ತೆಯ ಆ ಬದಿಯಲ್ಲಿ ಮಗುವೊಂದು ಆ ಕಡೆ ಈ ಕಡೆ ವಾಹನ ಲೆಕ್ಕಿಸದೇ ರಸ್ತೆ ದಾಟಲು ಓಡಿತು. ಜೊತೆಗೆ ವೇಗವಾಗಿ ಕಾರ್ ಕೂಡ ಬರುತ್ತಲಿತ್ತು.
ತಕ್ಷಣ ಮಿಂಚಿನಂತೆ ಕದಲಿದ ಆ ಯುವಕ ತಾನು ರಸ್ತೆ ದಾಟುತ್ತಲೇ ಆ ಮಗುವನ್ನು ಎತ್ತಿಕೊಂಡೇ ಆ ಕಡೆ ಹೋದ. ಅರೆಕ್ಷಣ ತಡವಾಗಿದ್ದರೂ ಅಲ್ಲಿ ಜನ ಸೇರುವಂತಾಗುತ್ತಿತ್ತು. ಆತ ದಾಟುತ್ತಲೇ ಕಾರಿನ ಚಾಲಕ ಕೂಡ ತಕ್ಷಣ ಬ್ರೇಕ್ ಅದುಮಿ ನಿಲ್ಲಿಸಿದ.
ಸಹಜವಾಗಿಯೇ ಈ ವಿಡಿಯೊ ತುಂಬಾ ಜನರಿಗೆ ಇಷ್ಟವಾಗಿದೆ. ಸಾಕಷ್ಟು ಜನ ಆತನನ್ನು ಹೀರೊ ಎಂದು ಹೊಗಳಿದ್ದಾರೆ, ಜೊತೆಗೆ ಆ ಮಗುವಿನ ಪಾಲಕರಿಗೆ ಯರ್ರಾಬಿರ್ರಿ ಉಗಿದಿದ್ದಾರೆ. ಮೊದಲು Mdayousmile ಎಂಬ ಖಾತೆಯಲ್ಲಿ ಶೇರ್ ಆದ ವಿಡಿಯೊವನ್ನು ನಂತರ Rex Chapman ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೊ ಮೇಲಿದೆ ನೋಡಿ.
-Team Infotrend