VIDEO : ಸಿಲೆಂಡರ್ ಎತ್ತಿ ವ್ಯಾಯಾಮ ಮಾಡಿದ ಮಹಿಳೆಯ ವಿಡಿಯೊ ವೈರಲ್ : ವ್ಹಾ… ಲೇಡಿ ಬಾಹುಬಲಿ ಎಂದ ನೆಟ್ಟಿಗರು!
ಕೊರೋನ ವೈರಸ್ ಕಾರಣಕ್ಕೆ ಜಿಮ್ ಗಳೆಲ್ಲ ಬಂದ್ ಆಗಿ ಇತ್ತೀಚಿನ ದಿನಗಳಲ್ಲಿ ಜನ ವ್ಯಾಯಾಮ ಮಾಡುವುದು ದುಸ್ತರವಾಗಿದೆ. ಅದರಲ್ಲೂ ಮಹಿಳೆಯರು ಯಾವುದೇ ಎಕ್ಸರ್ಸೈಜ್ ಇಲ್ಲದೇ ತೂಕ ಹೆಚ್ಚಿಸಿಕೊಳ್ಳುವ ಹಾಗಾಗಿದೆ. ಕೆಲವರು ಟೆರೆಸ್ ಮೇಲೆಯೇ ಸಾಧ್ಯವಾದಷ್ಟು ಕೈಕಾಲು ಆಡಿಸುತ್ತಿದ್ದಾರಷ್ಟೆ. ದೂರದೂರಕ್ಕೆ ವಾಕಿಂಗ್ – ಜಾಗಿಂಗ್ ಹೋಗುವುದು ಊಡ ಕೆಲವು ನಗರಗಳಲ್ಲಿ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಕೆಲವು ಜನ ಹಲವಾರು ಉಪಾಯ ಮಾಡಿದ್ದಾರೆ.
ಆದರೆ ಕೆಳಗೆ ವಿಡಿಯೊದಲ್ಲಿರುವ ಮಹಿಳೆ ಮೊದಲಿನಿಂದಲೂ ಡಿಫ್ರೆಂಟ್ ಡಿಫ್ರೆಂಟಾಗಿ ವ್ಯಾಯಾಮ ಮಾಡುವುದಕ್ಕೆ ಹೆಸರುವಾಸಿ. ಆ ತಮ್ಮ ವ್ಯಾಯಾಮಗಳ ವಿಡಿಯೊ ತುಣುಕುಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ ಲೋಡ್ ಮಾಡುವ ಅವರಿಗೆ ಸುಮಾರು ಮೂರು ಲಕ್ಷ ಫಾಲೊವರ್ಸ್ ಇದ್ದಾರೆ. ನೋಡಲು ಕೂಡ ಗ್ಲಾಮರಸ್ ಆಗಿರುವ ಈ ಫಿಟ್ ಮಹಿಳೆಯ ಈ ವಿಡಿಯೊ ಮಾತ್ರ ಭರ್ಜರಿ ವೈರಲ್ ಆಗಿದೆ.

ಬಹಳಷ್ಟು ಮಹಿಳೆಯರು ಫಿಟ್ ಆಗಿರಲು ಮನೆಯಲ್ಲಿ ತಾಲೀಮು ಅಥವಾ ಯೋಗವನ್ನೂ ಮಾಡುತ್ತಾರೆ. ಆದರೆ ಈ ಮಹಿಳೆ ಮಾಡಿದ್ದನ್ನು ನೋಡಿ ಜನರು ಅಚ್ಚರಿ ವ್ಯಕ್ತಪಡಿದಿದ್ದಾರೆ. ಪುರುಷನಾಗಲಿ, ಮಹಿಳೆಯಾಗಲಿ, ಜನರು ಈ ದಿನಗಳಲ್ಲಿ ಸುದ್ದಿಯಾಗಲು ಏನೇನೋ ಮಾಡುತ್ತಾರೆ. ಎಷ್ಟೋ ಜನರು ತಮ್ಮ ಪ್ರಾ’ಣವನ್ನು ಕೂಡ ಪಣಕ್ಕಿಡುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ತೀವ್ರವಾಗಿ ಚರ್ಚಿಸಲಾಗುತ್ತಿರುವ ವಿಷಯಗಳಲ್ಲಿ ಈ ಮಹಿಳೆಯ ವೀಡಿಯೊ ಕೂಡ ಒಂದು. ವಿವಿಧ ಭಂಗಿಯಲ್ಲಿ ಆಕೆ ವ್ಯಾಯಾಮ ಮಾಡುವ ಪರಿ ಅಚ್ಚರಿ ಮೂಡಿಸುತ್ತದೆ. ಆ ಮಹಿಳೆಯ ಶಕ್ತಿ ಕಂಡು ಜನರು ಈ ಮಹಿಳೆಯನ್ನು ‘ಲೇಡಿ ಬಾಹುಬಲಿ’ ಎಂದೂ ಕರೆಯುತ್ತಿದ್ದಾರೆ.

ಕೆಂಪು ಸೀರೆ ಉಟ್ಟಿರುವ ಈ ಮಹಿಳೆ ಭಾರವಾದ ಗ್ಯಾಸ್ ಸಿಲಿಂಡರ್ ಅನ್ನು ಎತ್ತುವ ಮೂಲಕ ವ್ಯಾಯಾಮ ಮಾಡುತ್ತಾರೆ. ಹಾಗೆ ಮಾಡುವುದರಲ್ಲಿ ಅವರಿಗೆ ಯಾವುದೇ ಕಷ್ಟ ಅನಿಸುತ್ತಿಲ್ಲ. ಈ ವೀಡಿಯೊವನ್ನು ನೋಡಿದವರು ಮೊದಲು ಶಾಕ್ ಆದರು, ನಂತರ ಅವರ ಖಾತೆ ತೆರೆದು ನೋಡಿದಾಗ ಇಂಥ ಬಹಳಷ್ಟು ವಿಡಿಯೊ ಅಲ್ಲಿದ್ದವು.
ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ನಲ್ಲಿ Shaili Chikara ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಾವಿರಾರು ಜನರು ಈ ವೀಡಿಯೊವನ್ನು ಇಷ್ಟಪಟ್ಟಿದ್ದಾರೆ. ತುಂಬಾ ಬಳಕೆದಾರರು ಈ ವೀಡಿಯೊದಲ್ಲಿ ತಮಾಷೆಯಾಗಿ ಕೂಡ ಕಾಮೆಂಟ್ ಮಾಡುತ್ತಿದ್ದಾರೆ.
ಪ್ರಮಾಣೀಕೃತ ವ್ಯಾಯಾಮ ತರಬೇತಿದಾರರು (Certified Fitness Consultant) ಕೂಡ ಆಗಿರುವ ಇವರು ಯೂಟ್ಯೂಬ್ ಸೇರಿದಂತೆ ಇತರೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ಇದ್ದು, ಎಲ್ಲ ಕಡೆಯೂ ಲಕ್ಷಗಟ್ಟಲೆ ಫಾಲೊವರ್ಸ್ ಹೊಂದಿದ್ದಾರೆ, ಅವರ ಇತರೆ ನೋಡುವವರು ಮೇಲಿರುವ ವಿಡಿಯೊದಲ್ಲಿನ ಲಿಂಕ್ ಮೂಲಕ ಅವರ ಖಾತೆಗೆ ಹೋಗಿ ನೋಡಬಹುದು.
-Team Infotrend