ಮನೋಜ್ ವಾಜಪೇಯಿಯವರ ಆನ್ ಸ್ಕ್ರೀನ್ ಮಗಳು ಸದ್ಯ ಫುಲ್ ಫೇಮಸ್ : ಅವಕಾಶಗಳ ಸುರಿಮಳೆಯೇ ಆಗುತ್ತಿದೆ!
ಇಂದಿನ ದಿನಗಳಲ್ಲಿ ಎಲ್ಲ ಕಡೆ ಫ್ಯಾಮಿಲಿ ಮ್ಯಾನ್-2 ವೆಬ್ ಸೀರಿಸ್ ಬಗ್ಗೆಯೇ ಚರ್ಚೆ ಮಾಡಲಾಗುತ್ತಿದೆ, ಈ ಚಿತ್ರ ತಂಡದವರಂತೂ ಈ ಷೋಗೆ ಬರುವ ಪ್ರಶಂಸೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಶೋ ದ ಮೊದಲ ಸೀಸನ್ ನಂತೆಯೇ ಎರಡನೇ ಸೀಸನ್ ಗೂ ಕೂಡ ಪ್ರಶಂಸೆ ಬರುತ್ತಿದೆ, ಆದರೂ ದಕ್ಷಿಣ ಭಾರತದ ಕಡೆ ಈ ಚಿತ್ರದಲ್ಲಿನ ಕೆಲವು ಶಬ್ದಗಳ ಬಗ್ಗೆ ವಿರೋಧ ಕೂಡ ಮೂಡಿ ಬರುತ್ತಿದೆ.
ಇದೆ ವೆಬ್ ಸೀರಿಸ್ ನಲ್ಲಿ ಮನೋಜ್ ವಾಜಪೇಯಿಯವರ ಮಗಳು ಧೃತಿಯವರ ಪಾತ್ರ ಮಾಡಿದ ಆಶ್ಲೇಷ ಠಾಕೂರ್ ಅವರು ಇತ್ತೀಚೆಗೆ ಬಹಳಷ್ಟು ಪ್ರಚಾರದಲ್ಲಿದ್ದಾರೆ, ಈ ನಟಿಯ ಫ್ಯಾನ್ ಫಾಲೋಯಿಂಗ್ ಕೂಡ ಹೆಚ್ಚುತ್ತಲಿದೆ. ಇಷ್ಟೊಂದು ಸಣ್ಣ ವಯಸ್ಸಿನಲ್ಲಿಯೇ ಈ ನಟಿಗೆ ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ.

ಈ ವೆಬ್ ಸೀರಿಸ್ ನಲ್ಲಿ ನಟಿಸುವುದಕ್ಕಿಂತಲೂ ಮೊದಲೇ ಆಶ್ಲೇಷ ಠಾಕೂರ್ ಅವರು ಬೇರೆ ಬೇರೆ ಚಿತ್ರ ಹಾಗೂ ಜಾಹೀರಾತುಗಳಲ್ಲಿ ನಟಿಸಿದ್ದರು. ಆದರೆ ಅವರು ಇಷ್ಟೊಂದು ಪ್ರಚಾರ ಪಡೆದದ್ದು ಇದೆ ಫ್ಯಾಮಿಲಿ ಮ್ಯಾನ್ 2 ಚಿತ್ರದಲ್ಲಿ ಮನೋಜ್ ವಾಜಪೇಯಿಯವರ ಮಗಳು ಧೃತಿಯವರ ಪಾತ್ರ ಮಾಡಿದ ಮೇಲೆಯೇ ಎಂಬುದು ವಿಶೇಷ.
ಆಶ್ಲೇಷ ಅವರ ವಯಸ್ಸು ಕೇವಲ 17 ವರ್ಷವಾಗಿದ್ದರೂ ಕೂಡ ಈ ಚಿತ್ರದ ಮೂಲಕ ಸಾಕಷ್ಟು ಪ್ರಚಾರ ಪಡೆದಿದ್ದಾರೆ. ಇದಕ್ಕಿಂತಲೂ ಮೊದಲೇ ಇವರು ಕೆಲವು ಜಾಹಿರಾತುಗಳಲ್ಲಿಯೂ ನಟಿಸಿದ್ದಾರೆ. ಹಿಮಾಲಯ, ಕಿಸಾನ್, ಕ್ಯಾಡ್ಬರಿ, ಮತ್ತು ಬಜಾಜ್ ಇಲೆಕ್ಟ್ರಾನಿಕ್ಸ್ ನಂತಹ ಫೇಮಸ್ ಜಾಹಿರಾತುಗಳಲ್ಲೂ ಕೂಡ ಅಭಿನಯಿಸಿದ್ದಾರೆ.
ಇದರ ಹೊರತಾಗಿ ಇವರು ಟಿವಿ ಸೀರಿಯಲ್ ಗಳಲ್ಲಿಯೂ ಕೂಡ ನಟಿಸಿದ್ದಾರೆ, ಜೀ ಟಿವಿಯ ಶಕ್ತಿ ಅಸ್ತಿತ್ವ ಕೆ ಎಹಾಸಸ್ ನಲ್ಲಿ ನಟಿಸಿದ್ದಾರೆ. 2017 ರಲ್ಲಿಯೇ ಜೀನಾ ಇಸಿ ಕಾ ನಾಮ್ ಹೈ ಎಂಬ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಅವರ ಇತ್ತೀಚಿನ ಚಿತ್ರಗಳಲ್ಲಿ ಸಾನ್ಯ ಮಲ್ಹೋತ್ರ ಅವರ ಪಗ್ಲೆಟ್ ಎಂಬ ಚಿತ್ರದಲ್ಲಿಯೂ ಇವರು ಒಂದು ಸಣ್ಣ ಪಾತ್ರ ಮಾಡಿದ್ದಾರೆ, ಆದರೂ ಕೂಡ ಅವರು ಗಮನ ಸೆಳೆದಿದ್ದಾರೆ.

ದಿ ಫ್ಯಾಮಿಲಿ ಮ್ಯಾನ್ 2 ಚಿತ್ರದಲ್ಲಿ ಇವರು ಸ್ಕೂಲ್ ಗರ್ಲ್ ಪಾತ್ರದಲ್ಲಿ ನಟಿಸಿದ್ದಾರೆ. ಇವರಿಗಿಂತ ಜಾಸ್ತಿ ವಯಸ್ಸಿನ ಹುಡುಗನೊಂದಿಗೆ ಇವರು ಈ ಚಿತ್ರದಲ್ಲಿ ಅಫೇರ್ ಹೊಂದಿರುತ್ತರಂತೆ. ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟೊಂದು ಫೇಮಸ್ ಆಗುತ್ತಿರುವ ಇವರು ಮುಂದಿನ ಸೀರಿಸ್ ಫ್ಯಾಮಿಲಿ ಮ್ಯಾನ್ 3 ದಲ್ಲಿಯೂ ಕೂಡ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
-Team Infotrend