KBC ಪ್ರಶ್ನೆ : ಪೃಥ್ವಿಯ ಮೇಲಿನ ಅತ್ಯಂತ ಏಕಾಂತವಿರುವ ಜಾಗ ಯಾವುದು? ಅಥವಾ ನೆಲದಿಂದ ತೀರ ದೂರ ಇರುವ ಸ್ಥಳ ಯಾವುದು? ಮಾಹಿತಿ ಮತ್ತು ವಿಡಿಯೊ ಇದೆ ನೋಡಿ…

ಇಂಥ ಒಂದು ಪ್ರಶ್ನೆಯನ್ನು ಅಮಿತಾಬಚ್ಚನ್ ನಡೆಸಿಕೊಡುವ ಹಿಂದಿಯ ಕೌನ್ ಬನೆಗಾ ಕರೋಡ್ ಪತಿ (KBC) ಕಾರ್ಯಕ್ರಮದಲ್ಲಿ ಕೇಳಲಾಗಿತ್ತು. ಅದೂವರೆಗೆ ಕೆಲವರಿಗೆ ಮಾತ್ರ ಆ ಸ್ಥಳದ ಪರಿಚಯ ಇತ್ತು. ಕಾರ್ಯಕ್ರಮದ ನಂತರ ಮತ್ತೆ ಕೆಲವು ಆಸಕ್ತಿರಿಗೆ ಈ ಬಗ್ಗೆ ತಿಳಯಿತು. ಆದರೆ ತುಂಬಾ ಜನರಿಗೆ ಈ ಬಗ್ಗೆ ಉತ್ತರ ಗೊತ್ತಿಲ್ಲ. ಭೂಮಿಯಿಂದ ಅಥವಾ ನೆಲದಿಂದ ತೀರ ದೂರದಲ್ಲಿರುವ ಮನುಷ್ಯರ ವಾಸದಿಂದ ಅತ್ಯಂತ ದೂರದಲ್ಲಿರುವ ಒಂದು ಪ್ರದೇಶವೆಂದರೆ ಅದು ಪಾಯಿಂಟ್ ನೆಮೊ (Point Nemo) ಅಂತ.

ಈ ಸ್ಥಳ ಬರೀ ಏಕಾಂತವಾಗಿದೆ ಎಂಬುದಕ್ಕಷ್ಟೇ ಫೇಮಸ್ಸಲ್ಲ. ಸಮುದ್ರದ ಮಧ್ಯಭಾಗದಲ್ಲಿರುವ ಈ ಜಾಗ ಇತರೆ ಹಲವು ಕಾರಣಗಳಿಗಾಗಿಯೂ ಪ್ರಸಿದ್ದವಾಗಿದೆ. ಇದನ್ನು ಭೂಮಿ ಮೇಲಿನ ಅತಿ ಏಕಾಂತದ ಸ್ಥಳ ಎಂಬುದರ ಜೊತೆಗೆ ಇದನ್ನು ಜಗತ್ತಿನ ಅತಿ ದೊಡ್ಡ ಡಸ್ಟ್ ಬಿನ್ ಎಂದು ಕೂಡ ಕರೆಯಲಾಗುತ್ತದೆ‌!

ಹೌದು, ಇದು ಜಗತ್ತಿನ ಅತಿ ದೊಡ್ಡ ಡಸ್ಟ್ ಬಿನ್ ಅಥವಾ ಕಸದ ಬುಟ್ಟಿಯಾಗಿದೆ. ಬಹುತೇಕ ಎಲ್ಲ ದೇಶಗಳೂ ಇಲ್ಲಿ ಕಸ ತಂದು ಸುರಿಯುತ್ತವೆ. ಆದರೆ ಇಲ್ಲಿ ಹಾಕುವುದು ಅಂತಿಂಥ ಕಸ ಅಲ್ಲ, ಅದು ಅಂತರಿಕ್ಷದ ಕಸ. ಅಂದರೆ ನಾವು ತಯಾರಿಸಿ ಮೇಲೆ ಕಳಿಸಿರುವ ಉಪಗ್ರಹಗಳ ತಾಜ್ಯ ವಸ್ತುಗಳನ್ನು ಇಲ್ಲಿ ಎಸೆಯಲಾಗುತ್ತದೆ.

ನಿಮಗೆ ಗೊತ್ತಿರುವಂತೆ ಮಾಮೂಲಾಗಿ ಮನುಷ್ಯರು ತಯಾರಿಸುವ ಕೃತಕ ಉಪಗ್ರಹಗಳಿಗೆ ಒಂದು ನಿರ್ಧಿಷ್ಟ ವಯಸ್ಸಿರುತ್ತದೆ. ವಯಸ್ಸು ಮುಗಿದ ಮೇಲೆ ಅದು ನಿರುಪಯುಕ್ತವಾಗುತ್ತದೆ. ಹಾಗೆಯೇ ಕೆಲವು ನಡುಮದ್ಯೆಯೇ ಕೆಲಸ ನಿಲ್ಲಿಸಿ ನಿರುಪಯುಕ್ತ ಆಗುತ್ತವೆ. ಅಂಥವುಗಳನ್ನು ಅಲ್ಲಿಯೇ ತಿರುಗಲು ಬಿಡದೇ ತಂದು ಈ ಪಾಯಿಂಟ್ ನೆಮೊದಲ್ಲಿ ಹಾಕಲಾಗುತ್ತದೆ.

ಅಲ್ಲಿಯೇ ಇರಲು ಬಿಡಬಹುದಾದರೂ ಅವು ಇತರ ಬಾಹ್ಯಾಕಾಶ ನೌಕೆಗಳಿಗೆ ಅಡ್ಡ ಬರಬಹುದು, ಇದರಿಂದ ಘರ್ಷಣೆ ಉಂಟಾಗಿ ಅನಾಹುತ ಜರುಗಬಹುದು. ಮುಂದೆ ಅವು ಎಲ್ಲಾದರೂ ಜನವಸತಿ ಪ್ರದೇಶದ ಮೇಲೆ ಬೀಳಬಹುದು. ಈ ಕಾರಣಕ್ಕೆ ಅವುಗಳನ್ನು ಸೇಫಾಗಿ ತಂದು ಪಾಯಿಂಟ್ ನೆಮೊ ಎಂಬ ಕಸದ ಬುಟ್ಟಿಗೆ ಎಸೆಯಲಾಗುತ್ತದೆ.

ನಿಮಗೆ ಆಶ್ಚರ್ಯವಾಗಬಹುದು, ಅಲ್ಲಿ ಈಗಾಗಲೇ ನೂರಾರು ಬಾಹ್ಯಾಕಾಶ ನೌಕೆಗಳನ್ನು ಎಸೆಯಲಾಗಿದೆ. ಒಂದೊಂದು ದೇಶವೂ ನೂರಾರು ಆ ನಿರುಪಯುಕ್ತ ತಾಜ್ಯವನ್ನು ತಂದು ಇಲ್ಲಿ ಸುರಿದಿವೆ. ಈ ಬಗ್ಗೆ ಕನ್ನಡದಲ್ಲಿ ಅಚ್ಚುಕಟ್ಟಾಗಿ ಮಾಹಿತಿ ನೀಡಲಿದೆ ಮೇಲಿರುವ ವಿಡಿಯೊ, ಆಸಕ್ತರು ನೋಡಿ.
-Team Infotrend