ಹಣದ ಹೊಳೆ ಹರಿಯುವ ಐಪಿಎಲ್ ಅನ್ನೇ ತಿರಸ್ಕರಿಸಿದ ಕ್ರಿಕೆಟಿಗರು ಯಾರು ಗೊತ್ತಾ?
ಇಂಡಿಯನ್ ಪ್ರೀಮಿಯರ್ ಲೀಗ್ ಅತಿದೊಡ್ಡ ಕ್ರಿಕೆಟ್ ಪಂದ್ಯಾವಳಿ ಮತ್ತು ಅತಿದೊಡ್ಡ ಬ್ರಾಂಡ್ ಆಗಿದೆ, ಕ್ರಿಕೇಟ್ ಆಡುವ ಬೇರಾವುದೇ ದೇಶ ಆಯೋಜಿಸುವ ಎಲ್ಲ ಟೂರ್ನಿಗಿಂತ ಈ ಟೂರ್ನಿಗೆ ಹೆಚ್ಚು ಬೆಲೆ. ಇದಕ್ಕೆ ಪ್ರಮುಖ ಕಾರಣಗಳು : BCCI ಶ್ರೀಮಂತಿಕೆ, ಕ್ರಿಕೇಟ್ ಪ್ರೇಮಿಗಳ ದೊಡ್ಡ ಸಾಗರ ಮತ್ತು ಹಣದ ಹೊಳೆ. ಆದ್ದರಿಂದ ಪ್ರತಿಯೊಬ್ಬ ಕ್ರಿಕೆಟಿಗರೂ ಈ ಪಂದ್ಯಾವಳಿಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇಷ್ಟಪಡುತ್ತಾರೆ ಮತ್ತು ಹಣವನ್ನು ಸಂಪಾದಿಸಲು ಬಯಸುತ್ತಾರೆ.
ಆದಾಗ್ಯೂ, ಎಲ್ಲರೂ ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಏಕೆಂದರೆ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳಿಗೆ ಉತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡಲು ಬಯಸುತ್ತಾರೆ ಮತ್ತು ಈ ಫ್ರ್ಯಾಂಚೈಸ್‌ನಿಂದ ಆಯ್ಕೆಯಾಗದ ಅನೇಕ ಪ್ರತಿಭಾವಂತ ಕ್ರಿಕೆಟಿಗರು ಕೂಡ ಇದ್ದಾರೆ. ಹಾಗೆಯೇ ಕೆಲವು ಕ್ರಿಕೆಟಿಗರು ಅವಕಾಶವಿದ್ದರೂ ವಿವಿಧ ಕಾರಣಗಳಿಂದಾಗಿ ಐಪಿಎಲ್ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ!
ಇಷ್ಟೊಂದು ದುಡ್ಡು ಸಿಗುವ, ಭರ್ಜರಿ ಪ್ರಚಾರ ದೊರೆಯುವ, ಭವಿಷ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವಿರುವ, ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚುವ ಈ ಪಂದ್ಯಾವಳಿಯನ್ನು ತಿರಸ್ಕರಿಸುವವರು ಇದ್ದಾರೆಯೇ ಎಂದು ನೋಡುವುದಾದರೆ, ಹೌದು ಇದ್ದಾರೆ! ಅವರಲ್ಲಿ ಕೆಲವು ಪ್ರಮುಖರ ಹೆಸರು ಈ ಕೆಳಗಿವೆ ನೋಡಿ…

ಕುಶಾಲ್ ಪೆರೆರಾ :
2018 ರಲ್ಲಿ ಸ್ಯಾಂಡ್ ಪೇಪರ್ ವಿವಾದದಿಂದಾಗಿ ಡೇವಿಡ್ ವಾರ್ನರ್ ಐಪಿಎಲ್ ನಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಿದಾಗ, ವಾರ್ನರ್ ಬದಲಿಗೆ ಸನ್ ರೈಸರ್ಸ್ ಹೈದರಾಬಾದ್ ಕುಶಾಲ್ ಪೆರೆರಾ ಅವರನ್ನು ಸಂಪರ್ಕಿಸಿತು, ಆದರೆ ಪೆರೆರಾ ಈ ಪ್ರಸ್ತಾಪವನ್ನು ನಿರಾಕರಿಸಿದರು. ಮತ್ತು ಬದಲಾಗಿ ಶ್ರೀಲಂಕಾ ದೇಶಿ ಕ್ರಿಕೇಟಿನಲ್ಲಿ ಆಡಲು ಹೋದರು. ಅವರ ಕಠಿಣ ಪರಿಶ್ರಮದಿಂದಾಗಿ ಅವರು ಒಂದೂವರೆ ವರ್ಷದ ನಂತರ ತಮ್ಮ ದೇಶದ ಟೆಸ್ಟ್ ತಂಡಕ್ಕೆ ಮರಳಲು ಸಾಧ್ಯವಾಯಿತು.
ಮಿಚೆಲ್ ಮಾರ್ಷ್ :
ಮಾರ್ಷ್ ಸಹೋದರರಾದ ಶಾನ್ ಮತ್ತು ಮಿಚೆಲ್ ಮಾರ್ಷ್ ಇಬ್ಬರೂ ಐಪಿಎಲ್ ನಲ್ಲಿ ಭಾಗವಹಿಸಿದ್ದಾರೆ, ಆದರೆ 2018 ರಲ್ಲಿ ಮಿಚೆಲ್ ರಾಷ್ಟ್ರೀಯ ಟೆಸ್ಟ್ ತಂಡದಲ್ಲಿ ಹಿಂದಿರುಗುವ ಸಲುವಾಗಿ ಐಪಿಎಲ್ ಫ್ರ್ಯಾಂಚೈಸ್ ನೀಡಿದ್ದ 3 ಮಿಲಿಯನ್ ಡಾಲರ್ ಆಫರನ್ನು ತಿರಸ್ಕರಿಸಿದರು, ಐಪಿಎಲ್ ದುಡ್ಡಿಗಿಂತ ಟೆಸ್ಟ್ ಕ್ರಿಕೇಟ್ ಮೇಲು ಎಂದು ಅವರು ಭಾವಿಸಿದ್ದರು.

ಆರನ್ ಫಿಂಚ್ :
2019 ಕ್ರಿಕೆಟ್ ವಿಶ್ವಕಪ್ ಬಗ್ಗೆ ಗಮನಹರಿಸಲು ಬಯಸಿದ್ದರಿಂದ ಆರನ್ ಫಿಂಚ್ ಅವರು 2019 ರ ಐಪಿಎಲ್ ಹರಾಜಿನಿಂದ ಹೊರಗುಳಿದರು
ರವೀಂದರ್ ಬೋಪಾರ :
ಬೋಪಾರ ಪ್ರಕರಣ ಸ್ವಲ್ಪ ಭಿನ್ನವಾಗಿದೆ, ಐಪಿಎಲ್ ಆರಂಭದಲ್ಲಿ ಐಪಿಎಲ್ ನಲ್ಲಿ ಆಡಲು ಆಹ್ವಾನಿಸಿದರೂ ಅವರು ಇಂಗ್ಲೆಂಡ್ ಪರ ಆಡಲು ಬಯಸಿದ್ದರಿಂದ ನಿರಾಕರಿಸಿದರು. ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಎರಡು ಋತುಗಳಲ್ಲಿ (2009–2010) ಆಡಿದ್ದರು. ಗಾಯಗೊಂಡ ಡೇವಿ ಜೇಕಬ್ಸ್ ಅವರನ್ನು ಬದಲಿಸಲು 2011 ರಲ್ಲಿ ಅವರನ್ನು ಮುಂಬೈ ಇಂಡಿಯನ್ಸ್ ಸಂಪರ್ಕಿಸಿದರು, ಮುಂಬೈ ಇಂಡಿಯನ್ಸ್ ಸಹ ಅವರಿಗೆ, 150,000 ಪೌಂಡ್ ನೀಡಲು ಒಪ್ಪಿತ್ತು. ಆದರೆ ಅವರು ಈ ಪ್ರಸ್ತಾಪವನ್ನು ನಿರಾಕರಿಸಿದರು! ಮತ್ತೆ 2015 ರಲ್ಲಿ ಅವರು ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದರು.

ಜೋಶ್ ಹೆಜಲ್ ವುಡ್ :
ಅವರನ್ನು ಮುಂಬೈ ಇಂಡಿಯನ್ಸ್ ಆಯ್ಕೆ ಮಾಡಿಕೊಂಡು ಉಳಿಸಿಕೊಂಡಿದ್ದರೂ, ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ವಿಸ್ತರಿಸಿಕೊಳ್ಳಲು, ಜೋಶ್ ಹೆಜಲ್ ವುಡ್ ಅವರು 2014 ರಿಂದ ಐಪಿಎಲ್ ನಲ್ಲಿ ಭಾಗವಹಿಸದಿರಲು ನಿರ್ಧರಿಸಿದರು. ಅವರು ಇಲ್ಲಿಯವರೆಗೆ ಯಾವುದೇ ಐಪಿಎಲ್ ಪಂದ್ಯಗಳನ್ನು ಆಡಲಿಲ್ಲ. 2020 ರಲ್ಲಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಆಯ್ಕೆ ಮಾಡಿದೆ.
-Team Infotrend