ಆರ್ಥಿಕ ಸಂಕಷ್ಟದಲ್ಲಿ ಸಂಕಟಮೋಚನ ಹನುಮಾನ್ ಪಾತ್ರಧಾರಿ ನಿರ್ಭಯ್ ವಾಧ್ವಾ! ಜೀವನ ನಡೆಸಲು ಮಾಡಿದ್ದೇನು?
ಟಿವಿ ಧಾರಾವಾಹಿಗಳಲ್ಲಿ ‘ಹನುಮಾನ್’ ಪಾತ್ರವನ್ನು ನಿರ್ವಹಿಸುವುದರಲ್ಲಿ ಹೆಸರುವಾಸಿಯಾದ ನಟ ನಿರ್ಭಯ್ ವಾಧ್ವಾ ಈ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಬದುಕು ನಡೆಸಲು ಅವರು ತಮ್ಮ ಬೈಕ್ ಮಾರಾಟ ಮಾಡಬೇಕಾಗಿದೆ. ಪ್ರಪಂಚದಾದ್ಯಂತ ಕರೋನಾ ವೈರಸ್ ಸಾಂಕ್ರಾಮಿಕದಿಂದ ಸಾಕಷ್ಟು ಸಮಸ್ಯೆ ಎದುರಾಗಿವೆ. ಒಂದು ಕಡೆ ಸಾವು ನೋವಿನ ಹೊಡೆತವಾದರೆ, ಮತ್ತೊಂದು ಕಡೆ ಆರ್ಥಿಕ ಹೊಡೆತ.
ಕಳೆದ ಒಂದು ವರ್ಷದಿಂದ ಆಗಾಗ ಲಾಕ್ ಡೌನ್ ಮಾಡುತ್ತಿರುವುದರಿಂದ ವ್ಯಾಪಾರ ವಹಿವಾಟು ನಡೆಯದೇ ಅನೇಕ ಜನರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಅವರಲ್ಲಿ ಹಲವು ಪ್ರಸಿದ್ಧ ನಟರೂ ಸೇರಿದ್ದಾರೆ. ಹಾಗೆಯೇ ಚಿಕ್ಕ ಪರದೆಯ ಕಲಾವಿದರೂ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಅನೇಕ ಕೈಗಾರಿಕೆಗಳು ಸಹ ಈ ಕಾಯಿಲೆಯಿಂದ ಬಲಿಯಾಗುತ್ತಿವೆ. ಕೊರೊನಾವೈರಸ್ ಸಾಂಕ್ರಾಮಿಕದಿಂದ ಕೆಟ್ಟ ಪರಿಣಾಮಕ್ಕೊಳಗಾದವರಲ್ಲಿ ಮನರಂಜನಾ ಉದ್ಯಮವೂ ಒಂದು. ಈ ಅವಧಿಯಲ್ಲಿ ಅನೇಕ ಪ್ರೊಡಕ್ಸನ್ ಸಂಸ್ಥೆಗಳು ಮುಚ್ಚುವಿಕೆಯ ಅಂಚಿನಲ್ಲಿವೆ, ಹಾಗೆಯೇ ಅನೇಕ ನಟರು ಖಿನ್ನತೆಯಿಂದ ಬಳಲುತ್ತಿದ್ದಾರೆ.
ಈ ಮದ್ಯೆ ಟಿವಿ ಧಾರಾವಾಹಿಗಳಲ್ಲಿ ‘ಹನುಮಾನ್’ ಪಾತ್ರದಲ್ಲಿ ಹೆಸರುವಾಸಿಯಾದ ನಟ ನಿರ್ಭಯ್ ವಾಧ್ವಾ ಸಹ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಬದುಕು ನಡೆಸಲು ಅವರು ತಮ್ಮ ಬೈಕು ಮಾರಾಟ ಮಾಡಿದ್ದಾರೆ. ಹಲವು ದಿನದ ತಮ್ಮ ಲೈಫ್ ಸ್ಟೈಲ್ ಮೆಂಟೇನ್ ಮಾಡಲು ಆಗದೇ ಅನೇಕರು ಹೀಗೆ ತೊಂದರೆಗೆ ಸಿಲುಕಿದ್ದಾರೆ.

ಒಂದೂವರೆ ವರ್ಷದಿಂದ ಯಾವುದೇ ಕೆಲಸವಿಲ್ಲ :
ಕಳೆದ ವರ್ಷ ದೀರ್ಘಕಾಲ ಧಾರಾವಾಹಿಗಳ ಶೂಟಿಂಗ್ ಬಂದ್ ಆಗಿದ್ದರಿಂದ ಅನೇಕ ನಟರು ರಸ್ತೆಗೆ ಬಂದಿದ್ದಾರೆ. ಚಿತ್ರೀಕರಣವು ಮಧ್ಯದಲ್ಲಿ ಪ್ರಾರಂಭವಾಯಿತಾದರೂ ಕೆಲವು ಕಲಾವಿದರಿಗೆ ಈ ಸಮಯದಲ್ಲಿ ಕೆಲಸ ಸಿಗಲಿಲ್ಲ. ಈ ವರ್ಷ ಮತ್ತೆ ಶೂಟಿಂಗ್ ದೀರ್ಘಕಾಲದವರೆಗೆ ನಿಂತುಹೋಗಿದೆ.
ಅಂತಹ ಸ್ಥಿತಿಯಲ್ಲಿ ಸಮರ್ಥರಾಗಿದ್ದ ನಟರು ಕೂಡ ಕೆಟ್ಟ ಆರ್ಥಿಕ ಸ್ಥಿತಿಯಲ್ಲಿದ್ದಾರೆ. ಟಿವಿಯ ‘ಹನುಮಾನ್’ ಪಾತ್ರಧಾರಿ ನಿರ್ಭಯ್ ವಾಧ್ವಾ ಅವರಂತೆಯೇ ಅನೇಕರ ಪರಸ್ಥಿತಿಯೂ ಇದೆ. ಅವರು ಜೀವನ ನಡೆಸಲು ತಮ್ಮ ದುಬಾರಿ ಬೈಕು ಮಾರಾಟ ಮಾಡಬೇಕಾಯಿತು. ಅವರು ಒಂದೂವರೆ ವರ್ಷಗಳಿಂದ ನಿರಂತರವಾಗಿ ನಿರುದ್ಯೋಗವನ್ನು ಎದುರಿಸುತ್ತಿದ್ದಾರೆ.

ಸೇವಿಂಗ್ಸ್ ಮುಗಿದಿದೆ :
ಅವರು ಸುಮಾರು ಒಂದೂವರೆ ವರ್ಷಗಳಿಂದ ಮನೆಯಲ್ಲಿ ಕುಳಿತಿದ್ದಾರೆ, ಹೀಗಾಗಿ ಅವರ ಸೇವಿಂಗ್ಸ್ ಎಲ್ಲವೂ ಖಾಲಿಯಾಗಿದೆ ಮತ್ತು ಇನ್ನೂ ಯಾವುದೇ ಕೆಲಸ ಕೈಯಲ್ಲಿಲ್ಲ ಎಂದು ಸ್ವತ ಅವರೇ ಹೇಳಿದ್ದಾರೆ. ಎಲ್ಲಿಯೂ ಲೈವ್ ಶೋ ಕೂಡ ನಡೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಾಕಿ ಇದ್ದವರೂ ಕೂಡ ಕೊಡಲಾಗುತ್ತಿಲ್ಲ.
22 ಲಕ್ಷದ ಬೈಕ್ ಮಾರಾಟ!
ಕರೋನಾ ಸಾಂಕ್ರಾಮಿಕಕ್ಕೆ ಮುಂಚಿತವಾಗಿ ಅವರು ಸೂಪರ್ ಬೈಕ್ ತೆಗೆದುಕೊಂಡಿದ್ದರು. ಆದರೆ ಪರಿಸ್ಥಿತಿಯು ಈ ಬೈಕನ್ನು ಮಾರಾಟ ಮಾಡಲು ಹಚ್ಚಿತು. ಬೈಕ್ ತನ್ನ ಸ್ವಂತ ಊರಾದ ಜೈಪುರದಲ್ಲಿತ್ತು, ಅವರು ಮಾರ್ಚ್ನಲ್ಲಿ ಜೈಪುರಕ್ಕೆ ಹೋಗಿ ಬೈಕು ಮಾರಾಟ ಮಾಡಿದರು. ಆದರೆ ಈ ಸೂಪರ್ ಬೈಕು ಮಾರಾಟ ಮಾಡುವುದು ಸುಲಭವಾಗಿರಲಿಲ್ಲ.

ಈ ಬೈಕನ್ನು ಅವರು 22 ಲಕ್ಷ ರೂ.ಗೆ ಖರೀದಿಸಿದ್ದರು, ಆದರೆ ನಾವು ಮಾರಾಟ ಮಾಡಲು ಹೊರಟಾಗ ಗ್ರಾಹಕರೇ ಸಿಗಲಿಲ್ಲ. ಅದಕ್ಕಾಗಿಯೇ ಅವರು ಬೈಕ್ ಅನ್ನು ಕಂಪನಿಗೇ ವಾಪಸ್ ಕೇವಲ ಒಂಬತ್ತು ಲಕ್ಷಕ್ಕೆ ಮಾರಾಟ ಮಾಡಿದರು! ಇಲ್ಲಿಯೂ ಅವರಿಗೆ ಸಾಕಷ್ಟು ನಷ್ಟವಾಯಿತು. ಆದಷ್ಟು ಬೇಗ ಈ ವ್ಯಾದಿ ದೂರವಾಗಿ ಎಲ್ಲರ ಬದುಕು ಹಸನಾಗಲಿ.
-Team Infotrend