VIDEO : ಹೆಬ್ಬಾವು ಮತ್ತು ಮೊಸಳೆ ಇತರೆ ಜೀವಿಗಳನ್ನು ನುಂಗುವುದು ಸಾಮಾನ್ಯ, ಆದರೆ ಹೆಬ್ಬಾವು ಮೊಸಳೆಯನ್ನೇ ನುಂಗಿದ ಅಪರೂಪದ ವಿಡಿಯೊ ಇಲ್ಲಿದೆ ನೋಡಿ

ನಿಜಕ್ಕೂ ಇದೊಂದು ಅಪರೂಪದ ವಿಡಿಯೊ. ನಾವು ಸಾಕಷ್ಟು ಪ್ರಾಣಿಗಳು ಭೇಟೆಯಾಡುವುದನ್ನು ನೋಡಿದ್ದೇವೆ. ನೀರು ಕುಡಿಯಲು ಹಲವು ಪ್ರಾಣಿಗಳನ್ನು ಮೊಸಳೆ ಬೇಟೆಯಾಡುವುದನ್ನು ಕಂಡಿದ್ದೇವೆ‌. ಹುಲಿ, ಚಿರತೆ, ಸಿಂಹಗಳನ್ನು ಕೂಡ ಮೊಸಳೆ ಬಡಿದು ಬಾಯಿಗೆ ಹಾಕಿಕೊಂಡ ವಿಡಿಯೊ ಸಾಕಷ್ಟಿವೆ. ಇನ್ನು ಹೆಬ್ಬಾವು ಕೂಡ ಇತರ ಹಲವು ಜೀವಿಗಳನ್ನು ಇಡಿಇಡಿಯಾಗಿ ನುಂಗುವುದು ನಮಗೆ ಗೊತ್ತು.

ಹೆಬ್ಬಾವು ಮತ್ತು ಮೊಸಳೆಗಳೆರಡೂ ದೊಡ್ಡ ಸರೀಸೃಪಗಳಾಗಿವೆ, ಅವುಗಳು ತಮ್ಮ ಬೇಟೆಯನ್ನು ಜೀವಂತವಾಗಿ ನುಂಗುತ್ತವೆ. ಹೆಬ್ಬಾವು ಅಥವಾ ಮೊಸಳೆ ಪ್ರಾಣಿಗಳನ್ನು ಜೀವಂತವಾಗಿ ನುಂಗಿದ ವೀಡಿಯೊಗಳನ್ನು ನೀವು ಅನೇಕ ಬಾರಿ ನೋಡಿರಬೇಕು.

ಆದರೆ ಇಲ್ಲಿರುವುದು ಮಾತ್ರ ತೀರ ಅಪರೂಪದ ವಿಡಿಯೊ. ದೈತ್ಯ ಹೆಬ್ಬಾವೊಂದು ಮೊಸಳೆಯನ್ನು ನುಂಗುವ ಅತ್ಯಂತ ರೋಚಕ ವಿಡಿಯೊ ಇದು. ಎರಡರ ಮಧ್ಯೆ ಸಾಕಷ್ಟು ಜಟಾಪಟಿ ನಡೆಯುತ್ತದಾದರೂ ಕೊನೆಗೂ ಹೆಬ್ಬಾವು ಗೆಲ್ಲುತ್ತದೆ. ಎಷ್ಟೊ ಸಲ ಮೊಸಳೆ ಹೆಬ್ಬಾವಿನ ಬಾಯಿಂದ ಹೊರಬರಲು ಪ್ರಯತ್ನ ಮಾಡುತ್ತಲೇ ಇರುತ್ತದೆ.

ಹಲವು ಸಲ ಅದು ಇನ್ನೆನು ಬಿಡಿಸಿಕೊಂಡಿತು ಅನ್ನುವಷ್ಟರಲ್ಲಿ ಹೆಬ್ಬಾವು ಅದನ್ನು ಮತ್ರಷ್ಟು ಒಳಗೆಳೆದುಕೊಳ್ಳುತ್ತಿತ್ತು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೊದಲ್ಲಿ ಎರಡೂ ಪ್ರಬಲ ಜೀವಿಗಳು ಪರಸ್ಪರ ನುಂಗುವುದನ್ನು ನಾವು ಕಾಣಬಹುದು. ಈ ಹೆಬ್ಬಾವು ದೊಡ್ಡದಾಗಿದ್ದು ಅಷ್ಟೇ ಶಕ್ತಿಶಾಲಿಯಾಗಿದೆ.

ಮೊಸಳೆ ಕೂಡ ಬಲಶಾಲಿಯಗಾಗಿದ್ದು, ಕಾಲನ್ನು ಬಿಗಿಯಾಗಿ ಹಿಡಿಯುವ ಮೂಲಕ ಅದು ಹೆಬ್ಬಾವಿಗೆ ಸಾಕಷ್ಟು ಸವಾಲು ಒಡ್ಡುತ್ತದೆ. ಈ ಹಾವುಗಳು ನೀರಿನಲ್ಲಿ, ಗಿಡದ ಮೇಲೆ, ಭೂಮಿ ಮೇಲೆ ಹೀಗೆ ಎಲ್ಲ ಕಡೆ ಕಾಯ್ದು ಕುಳಿತು ಅಥವಾ ಅಡಗಿ ಕುಳಿತು ತನ್ನ ಆಹಾರವನ್ನು ಹುಡುಕುತ್ತಿರುತ್ತವೆ. ಹಸಿವಾದಾಗ ಅಲ್ಲಿಗೆ ಬರುವ ಯಾವುದೇ ಜೀವಿಯನ್ನು ಅದು ತನ್ನ ಒಡಲೊಳಗೆ ಇಳಿಸಿಕೊಳ್ಳಲು ಹಿಂಜರಿಯುವುದಿಲ್ಲ.

ಹೆಬ್ಬಾವು ಭಾರತದ ಅತಿದೊಡ್ಡ ಹಾವು ಎಂದು ಪರಿಗಣಿಸಲ್ಪಟ್ಟಿದೆ, ಅಂದರೆ ಭಾರತದಲ್ಲಿ ಹೆಬ್ಬಾವಿಗಿಂತ ದೊಡ್ಡ ಹಾವು ಇಲ್ಲ. ಇದು ದೈತ್ಯ ಹಾವುಗಳ ವಿಭಾಗದಲ್ಲಿ ಬರುತ್ತದೆ. ಈ ಪೈಥಾನ್ ಒಂದು ರೀತಿಯ ಮಾಂಸಾಹಾರಿ ಪ್ರಾಣಿ. ಇದು ಸಣ್ಣ ಮತ್ತು ದೊಡ್ಡ ಜೀವಿಗಳನ್ನು ಬಹಳ ಸುಲಭವಾಗಿ ಬೇಟೆಯಾಡಬಲ್ಲದು.

ಹೆಬ್ಬಾವು ಇಲಿಗಳಿಂದ ಹಿಡಿದು ಜಿಂಕೆಗಳಂತಹ ದೊಡ್ಡ ಪ್ರಾಣಿಗಳನ್ನು ಸಹ ಬೇಟೆಯಾಡಬಲ್ಲದು. ಇದು ಎಂತಹ ಅಪಾಯಕಾರಿ ಪ್ರಾಣಿಯೆಂದರೆ ಕೆಲವೊಮ್ಮೆ ಅದು ಮನುಷ್ಯರನ್ನು ಸಹ ಬೇಟೆಯಾಡುತ್ತದೆ. ಕುರಿ – ಆಡುಗಳು ಇದರ ಸುಲಭ ಆಹಾರ. ಇದು ಸೈಲೆಂಟಾಗಿ ಇದ್ದು ಬೇಟೆಯಾಗುವ ಜೀವಿ ಬಳಿಗೆ ಬರಲು ಕಾಯುತ್ತದೆ. ಹತ್ತಿರ ಬಂದ ಕೂಡಲೇ ಅದನ್ನು ಹಿಡಿದು ಉಸಿರುಗಟ್ಟಿಸಿ ಮುಗಿಸಿ ನುಂಗುತ್ತದೆ.

ಹೆಬ್ಬಾವು ಮೊದಲು ಸಿಕ್ಕ ಜೀವಿಯನ್ನು ಮುಗಿಸಲು ಅದರ ಸುತ್ತ ಸುತ್ತಿಕೊಳ್ಳುತ್ತದೆ ಆ ಸುತ್ತಿಕೊಳ್ಳುವಿಕೆ ಎಷ್ಟು ಬಿಗಿಯಾಗಿರುತ್ತದೆಂದರೆ, ಆ ಜೀವಿ ಉಸಿರುಗಟ್ಟಿ ಜೀವ ಕಳೆದುಕೊಳ್ಳುತ್ತದೆ. ಅದಿನ್ನೂ ಜೀವಂತವಿರುವಾಘಲೇ ಹೆಬ್ಬಾವು ಅದನ್ನು ನುಂಗಲು ಸುರುಮಾಡುತ್ತದೆ.

ಹೆಬ್ಬಾವು ಯಾವತ್ತೂ ತನಗೆ ಆಹಾರವಾಗುವ ಜೀವಿಯನ್ನು ನೇರವಾಗಿ ನುಂಗುತ್ತದೆ. ಅದು ಅಗಿಯುವುದಿಲ್ಲ, ಅದು ನೇರವಾಗಿ ಒಳಗೆ ಕಳಿಸಿಬಿಡುತ್ತದೆ. ಹೆಚ್ಚಿನ ಹೆಬ್ಬಾವುಗಳು ಮರಗಳ ಮೇಲೆ ವಾಸಿಸುತ್ತವೆ ಮತ್ತು ಅವು ಮರಗಳ ಮೇಲೆ ವಾಸಿಸುವ ಪ್ರಾಣಿಗಳನ್ನು ಸಹ ಅಲ್ಲಿಯೇ ಬೇಟೆಯಾಡುತ್ತವೆ.

ಹೆಬ್ಬಾವಿನ ವಿವಿಧ ಪ್ರಭೇದಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಮತ್ತು ದೇಶಗಳಲ್ಲಿ ಕಂಡುಬರುತ್ತವೆ. ಆದರೆ ಮುಖ್ಯವಾಗಿ ಇವು ಏಷ್ಯಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ಕಾಡುಗಳಲ್ಲಿ ಕಂಡುಬರುತ್ತವೆ. ಈ ದೇಶಗಳಲ್ಲಿ ನಾವು ಹೆಚ್ಚಿನ ಹೆಬ್ಬಾವುಗಳನ್ನು ನೋಡಬಹುದು. ಏಕೆಂದರೆ ಇಲ್ಲಿ ದೊಡ್ಡ ಕಾಡುಗಳಿವೆ

ಇಲ್ಲಿ ಮೊಸಳೆಯನ್ನು ಕೂಡ ಅದು ಸಾಕಷ್ಟು ಕಷ್ಟಪಟ್ಟು ಆದರೆ ತನ್ನ ಅಷ್ಟೂ ಶಕ್ತಿ ಸಾಮರ್ಥ್ಯ ಹಾಕಿ ನುಂಗುತ್ತದೆ. ಅದು ಬಿಡಿಸಿಕೊಳ್ಳಲು ಪ್ರಯತ್ನ ಮಾಡಿದ ಹಾಗೆಲ್ಲ ಹಾವು ಇಷ್ಟಿಷ್ಟೇ ಇಷ್ಟಿಷ್ಟೇ ಅದನ್ನು ಒಳಗೆ ತಗೆದುಕೊಳ್ಳುತ್ತಾ ಕೊನೆಗೂ ಅದನ್ನು ಪೂರ್ತಿ ನುಂಗಿಯೇಬಿಟ್ಟಿತು. ಏನೋ ಆಗುತ್ತದೆ, ಅದು ಬಿಡಿಸಿಕೊಳ್ಳುತ್ತದೆ ಎಂದು ನೋಡುಗರು ನಿರೀಕ್ಷಿಸುತ್ತಿದ್ದರು, ಆದರೆ ಹಾಗಾಗಲಿಲ್ಲ.

ಈ ವೀಡಿಯೊವನ್ನು ಓಜಾಟ್ರೊ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಹತ್ತು ವರ್ಷದ ಮೊದಲೇ ಅಪ್ ಲೋಡ್ ಮಾಡಲಾಗಿದೆ. ಆ ವಿಡಿಯೊ ಈಗ ಮತ್ತೆ ವೈರಲ್ ಆಗುತ್ತಿರುವುದು ಕೂಡ ಹಾವು ಮೊಸಳೆಯನ್ನು ನುಂಗಿದಷ್ಟೇ ವಿಚಿತ್ರವಾಗಿದೆ! ವೀಡಿಯೊ ಇಲ್ಲಿಯವರೆಗೆ 15 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ. ಆ ರೋಚಕ ವಿಡಿಯೊ ಮೇಲಿದೆ ನೋಡಿ.
-Team Infotrend