VIDEO : ಜರ್ಮನಿಯ ಲೇಖಕರ ಪ್ರಕಾರ ಆ ದೇವಾಲಯದ ನೆಲಮಾಳಿಗೆಯಲ್ಲಿದೆಯಂತೆ ಜಗತ್ತಿನ ಮಹಾ ರಹಸ್ಯ! ವಿಡಿಯೊ ನೋಡಿ…
ವಿಶ್ವದ ಅತಿದೊಡ್ಡ ದೇವಾಲಯಗಳಲ್ಲಿ ಒಂದಾದ ಏಕಂಬರೇಶ್ವರ ದೇವಾಲಯವು ಭಾರತದ ತಮಿಳುನಾಡಿನ ಕಾಂಚೀಪುರಂ ನಗರದಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಈ ದೇವಾಲಯವನ್ನು ಏಕಂಬರನಾಥ ದೇವಾಲಯ ಎಂದೂ ಕರೆಯುತ್ತಾರೆ. ಶಿವನಿಗೆ ಅರ್ಪಿತವಾದ ಈ ದೇವಾಲಯದ ಬಗ್ಗೆ ಅಚ್ಚರಿಗೊಳಿಸುವಂಥ ಮಾಹಿತಿ ಕೆಳಗಿನ ವಿಡಿಯೊದಲ್ಲಿ ಇದೆ.
ದಕ್ಷಿಣ ಭಾರತದಲ್ಲಿ ದೇವಾಲಯಗಳಿಗೆ ಕೊರತೆಯಿಲ್ಲ. ಈ ಐತಿಹಾಸಿಕ ದೇವಾಲಯಗಳನ್ನು ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಅಂಥ ಒಂದೊಂದು ದೇವಾಲಯವೂ ಹತ್ತಾಋಉ ವಿಸ್ಮಯಗಳಿಗೆ ಸಾಕ್ಷಿಯಾಗಿವೆ. ಈ ಏಕಂಬರೇಶ್ವರ ದೇವಾಲಯವು ದಕ್ಷಿಣ ಭಾರತದ ವಾಸ್ತುಶಿಲ್ಪಕ್ಕೆ ಅದ್ಭುತ ಉದಾಹರಣೆಯಾಗಿದೆ, ಇಲ್ಲಿಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.
ಏಕಂಬರೇಶ್ವರ ದೇವಸ್ಥಾನದ ಸಂಕ್ಷಿಪ್ತ ವಿವರಣೆ :
*ಸ್ಥಳ ಕಾಂಚೀಪುರಂ, ತಮಿಳುನಾಡು (ಭಾರತ)
*ನಿರ್ಮಾಣ ಏಳನೇ ಶತಮಾನ
*ಪಲ್ಲವ ರಾಜವಂಶದ ಅರಸರಿಂದ ನಿರ್ಮಿಸಲ್ಪಟ್ಟಿದೆ
*ಮುಖ್ಯ ದೇವರು – ಶಿವ

ಕಾಂಚೀಪುರಂನಲ್ಲಿ ನಿರ್ಮಿಸಲಾದ ಈ ಪ್ರಾಚೀನ ದೇವಾಲಯವನ್ನು ಏಳನೇ ಶತಮಾನದಲ್ಲಿ ಪಲ್ಲವ ರಾಜವಂಶದ ಅರಸರು ನಿರ್ಮಿಸಿದರು. 10 ನೇ ಶತಮಾನದ ಆದಿ ಶಂಕರಾಚಾರ್ಯರು ಈ ದೇವಾಲಯವನ್ನು ಪುನರ್ನಿರ್ಮಿಸಿದರು ಮತ್ತು ಈ ದೇವಾಲಯದ ಜೊತೆಗೆ, ಕಾಮಾಕ್ಷಿ ಅಮ್ಮನ್ ದೇವಸ್ಥಾನ ಮತ್ತು ವರದರಾಜ ಪೆರುಮಾಳ್ ದೇವಾಲಯವನ್ನೂ ನಿರ್ಮಿಸಲಾಯಿತು.
15 ನೇ ಶತಮಾನದಲ್ಲಿ ರಾಜಗೋಪುರಂ ಸೇರಿದಂತೆ ದೊಡ್ಡ ಪ್ರಮಾಣದ ನವೀಕರಣ ಕಾರ್ಯಗಳನ್ನು ವಿಜಯನಗರ ಚಕ್ರವರ್ತಿಗಳು ನಡೆಸಿದರು, ತಂಜಾವೂರಿನ ನಾಯಕರು ಸಹ ದೇವಾಲಯಕ್ಕೆ ಕೊಡುಗೆ ನೀಡಿದ್ದಾರೆ. ಕಾಂಚೀಪುರಂನ ಅತಿದೊಡ್ಡ ದೇವಾಲಯವಾಗಿರುವುದರ ಜೊತೆಗೆ ಇದು ವಿಜಯನಗರ ರಾಜವಂಶದ ಉನ್ನತ ಸಂಕೇತವಾಗಿದೆ.
ಈ ದೇವಾಲಯವು ಪಂಚಭೂತ ಸ್ಥಲಂನ 5 ಪವಿತ್ರ ಶಿವ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಭೂಮಿಯ ಅಂಶವನ್ನು ಪ್ರತಿನಿಧಿಸುತ್ತದೆ. ಈ ಏಕಂಬರೇಶ್ವರ ದೇವಸ್ಥಾನದ ಬಗ್ಗೆ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ…
*ತಮಿಳುನಾಡಿನಲ್ಲಿ 40 ಎಕರೆ ಪ್ರದೇಶದಲ್ಲಿ ಹರಡಿರುವ ಈ ಭವ್ಯವಾದ ದೇವಾಲಯವು 11 ಮಹಡಿಗಳಷ್ಟು ಎತ್ತರದಲ್ಲಿದೆ.
*ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ದಕ್ಷಿಣ ಭಾರತದ ಅತಿ ಎತ್ತರದ ದೇವಾಲಯಗಳಲ್ಲಿ ಒಂದಾಗಿದೆ.
*59 ಮೀಟರ್ ಎತ್ತರದ ಗೋಪುರಂ (ದೇವಾಲಯದ ಮುಖ್ಯ ದ್ವಾರ) ಅನ್ನು ವಿಜಯನಗರ ಕೃಷ್ಣದೇವರಾಯರು ನಿರ್ಮಿಸಿದ್ದಾರೆ.

*ನೀವು ದೇವಾಲಯದ ಸಂಕೀರ್ಣದ ಮುಖ್ಯ ಚೌಕವನ್ನು ಪ್ರವೇಶಿಸಿದಾಗ, ಒಂದು ದೊಡ್ಡ ಕಾರಿಡಾರ್ ನಿಮ್ಮನ್ನು ಸ್ವಾಗತಿಸುತ್ತದೆ. ದೇವಾಲಯದಲ್ಲಿ ಅಂತಹ 5 ದೊಡ್ಡ ಕಾರಿಡಾರ್ಗಳಿವೆ.
*ಮಂದಿರದ ನೆಲಮಾಳಿಗೆಯಲ್ಲಿ ಅದ್ಭುತ ಅನ್ನಬಹುದಾದ ಶಾಸನ ಅಥವಾ ದಾಖಲೆಗಳ ಸಂಗ್ರಹವಿದೆ. ಇಲ್ಲಿ ಇಡೀ ವಿಶ್ವದ ಇತಿಹಾಸ – ರೋಚಕ ಮಾಹಿತಿ ಇದೆ ಎನ್ನಲಾಗಿದೆ.
*ಶಿವನು ದೇವಾಲಯದ ಮುಖ್ಯ ಮಂಟಪದಲ್ಲಿ ಕುಳಿತಿದ್ದಾನೆ, ಇಲ್ಲಿ ಮಾತಾ ಪಾರ್ವತಿಯ ದೇವಾಲಯವಿಲ್ಲ, ಏಕೆಂದರೆ ನಗರದ ಕಾಮಾಕ್ಷಿ ದೇವಾಲಯವು ತಾಯಿಯನ್ನು ಪ್ರತಿನಿಧಿಸುತ್ತದೆ.
*ದೇವಾಲಯದ ಒಳಗೆ ಎರಡೂವರೆ ಅಡಿ ಎತ್ತರದ ಮರಳಿನಿಂದ ಮಾಡಿದ ಶಿವಲಿಂಗ ಕೂಡ ಇದೆ. ಇಲ್ಲಿ ಜಲಾಭಿಷೇಕ ಮಾಡಲ್ಲ, ತೈಲಾಭಿಷೇಕ ಮಾಡುವ ಮೂಲಕ ಪೂಜಿಸಲಾಗುತ್ತದೆ. ಶಿವಲಿಂಗದವರೆಗೆ ಹೋಗಲು ಭಕ್ತರಿಗೆ ಅವಕಾಶವಿಲ್ಲ.
*ದೇವಾಲಯದಲ್ಲಿ ವಿಷ್ಣುವಿನ ಸಣ್ಣ ವಿಗ್ರಹವನ್ನು ಸಹ ಸ್ಥಾಪಿಸಲಾಗಿದೆ, ಇದನ್ನು ಇಲ್ಲಿ ವಾಮ ಮೂರ್ತಿ ಎಂದು ಕರೆಯಲಾಗುತ್ತದೆ.
*ಅವಿರಾಂ ಕಾಲ ಮಂಟಪವು 1000 ಸ್ತಂಭಗಳನ್ನು ಹೊಂದಿರುವ ದೇವಾಲಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಸ್ತಂಭಗಳ ಮೇಲೆ ಅದ್ಭುತ ಕೆತ್ತನೆಗಳನ್ನು ಮಾಡಲಾಗಿದೆ, ಇದು ಅದರ ಭವ್ಯತೆಯನ್ನು ಹೆಚ್ಚಿಸುತ್ತದೆ.
*ದೇವಾಲಯದ ಒಳ ಪ್ರಾಂಗಣದ ಗೋಡೆಗಳ ಜೊತೆಗೆ 1008 ಶಿವಲಿಂಗಗಳನ್ನೂ ಸಹ ಸ್ಥಾಪಿಸಲಾಗಿದೆ.

*ದೇವಾಲಯದ ಆವರಣದಲ್ಲಿ ಮಂಟಪವಿರುವ ಸುಂದರವಾದ ಕೊಳವೂ ಇದೆ, ಇದನ್ನು ಶಿವ ಗಂಗಾ ತೀರ್ಥಂ ಎಂದು ಕರೆಯಲಾಗುತ್ತದೆ. ಈ ಸರೋವರದ ಮಧ್ಯದಲ್ಲಿ ಶಿವನ ಪುತ್ರನಾದ ಗಣೇಶನ ವಿಗ್ರಹವನ್ನು ಸಹ ಸ್ಥಾಪಿಸಲಾಗಿದೆ.
*ದೇವಾಲಯದ ಹಿಂಭಾಗದ ವೇದಿಕೆಯಲ್ಲಿ ಸುಮಾರು 3,500 ವರ್ಷಗಳಷ್ಟು ಹಳೆಯದಾದ ಮಾವಿನ ಮರವಿದೆ. ಈ ಮರದ ಕೆಳಗೆ ಪಾರ್ವತಿಯು ಶಿವನನ್ನು ಪಡೆಯಲು ತೀವ್ರ ತಪಸ್ಸು ಮಾಡಿದಳೆಂದು ಹೇಳಲಾಗುತ್ತದೆ.
*ಪಾರ್ವತಿಯ ತಪಸ್ಸಿನಿಂದ ಸಂತಸಗೊಂಡ ಶಿವನು ಈ ಮಾವಿನ ಮರದಲ್ಲಿ ಕಾಣಿಸಿಕೊಂಡನು, ಆದ್ದರಿಂದ ಅವನಿಗೆ ಮಾವಿನ ಮರದ ದೇವರು ಎಂಬರ್ಥದ ‘ಏಕಂಬರೇಶ್ವರ’ ಎಂದು ಹೆಸರಿಸಲಾಯಿತು.
*ಈ ಮರದ ಕಾಂಡವನ್ನು ಕತ್ತರಿಸಿ ದೇವಾಲಯದಲ್ಲಿ ಪರಂಪರೆಯಾಗಿ ಇಡಲಾಗಿದೆ. ಈ ಮರವು ನಾಲ್ಕು ಕೊಂಬೆಗಳನ್ನು ಮಾತ್ರ ಹೊಂದಿದ್ದು, ಇವು ನಾಲ್ಕು ವೇದಗಳ ಸಂಕೇತವಾಗಿದೆ ಮತ್ತು ನಾಲ್ಕು ವಿಭಿನ್ನ ಸುವಾಸನೆಗಳ ಮಾವಿನಹಣ್ಣನ್ನು ನೀಡುತ್ತದೆ!
*ದೇವಾಲಯವು ಸಾಮಾನ್ಯ ಕಾಲದಲ್ಲಿ ಸಾರ್ವಜನಿಕರಿಗೆ ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12.30 ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8.30 ರವರೆಗೆ ತೆರೆದಿರುತ್ತದೆ. ಈಗ ಕೊರೋನ ವೈರಸ್ ಕಾರಣದಿಂದಾಗಿ ಭಕ್ತರಿಗೆ ಪ್ರವೇಶವಿಲ್ಲ.
*ಈ ದೇವಾಲಯದ ಅತಿದೊಡ್ಡ ಹಬ್ಬವೆಂದರೆ ಫಾಲ್ಗುಣಿ ಉತಿರಮ್, ಇದನ್ನು ಮಾರ್ಚ್-ಏಪ್ರಿಲ್ನಲ್ಲಿ ಆಚರಿಸಲಾಗುತ್ತದೆ.
*ತಮಿಳುನಾಡಿನ ಕಾಂಚೀಪುರಂ ನಗರವು ರಸ್ತೆ ಮತ್ತು ರೈಲು ಎರಡರ ಮೂಲಕ ದೇಶದ ಇತರ ರಾಜ್ಯಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಕಾಂಚೀಪುರಂ ಚೆನ್ನೈನಿಂದ ಸುಮಾರು 70 ಕಿ.ಮೀ ದೂರದಲ್ಲಿದೆ. ಕಾಂಚೀಪುರಂಗೆ ಹತ್ತಿರದ ವಿಮಾನ ನಿಲ್ದಾಣ ಚೆನ್ನೈ.
ಕನ್ನಡ ಯೂಟ್ಯೂಬ್ ಚಾನೆಲ್ ಮೀಡಿಯಾ ಮಾಸ್ಟರ್ ನವರು ಈ ದೇವಸ್ಥಾನದ ಹಲವು ವಿಸ್ಮಯ ಹಾಗೂ ಅಚ್ಚರಿಯ ಮಾಹಿತಿ ಉಳ್ಳ ವಿಡಿಯೊ ಮಾಡಿದ್ದು, ಅದರಲ್ಲಿ ಸಾಕಷ್ಟು ಮಾಹಿತಿಯನ್ನು ನೀಡಲಾಗಿದೆ. ವಿದೇಶಿ ಇತಿಹಾಸಕಾರರು ಬೆರಗಾಗುವಂಥ ಮಾಹಿತಿ ಈ ದೇವಸ್ಥಾನದ ನೆಲಮಾಳಿಗೆಯಲ್ಲಿ ಇದೆ, ಆ ಬಗ್ಗೆ ವಿಡಿಯೊದಲ್ಲಿ ಮಾಹಿತಿ ಇದ್ದು ಆಸಕ್ತರು ನೋಡಿ…
-Team Infotrend