VIDEO : ಪೆಟ್ರೋಲ್ ಬೆಲೆ ನೂರು ರೂಪಾಯಿಯಾಗಲು ಆ ಯಡವಟ್ಟೇ ಕಾರಣವಾಯ್ತಾ?
ಸದ್ಯ ಭಾರತದಲ್ಲಿ ಎರಡೇ ವಿಷಯಗಳ ಚರ್ಚೆ ಸಾಕಷ್ಟು ಪ್ರಚಲಿತದಲ್ಲಿದೆ, ಒಂದು ಕೋವಿಡ್-19 ಎರಡನೇ ಅಲೆ ಮತ್ತೊಂದು ತೈಲ ಬೆಲೆಯ ಏರಿಕೆ. ಅದರಲ್ಲೂ ಅಡುಗೆ ಎಣ್ಣೆ ಬೆಲೆ ಮತ್ತು ಪೆಟ್ರೋಲ್ ಬೆಲೆಯ ಏರಿಕೆ ಎಲ್ಲರನ್ನೂ ಹೈರಾಣಾಗಿಸಿದೆ. ಸದ್ಯ ದೊಡ್ಡ ದೊಡ್ಡ ನಗರಗಳಲ್ಲಿ ಈ ಹಿಂದೆ ಎಂದೂ ಕಾಣದ ನೂರು ರೂಪಾಯಿ ಬೆಲೆ ದಾಟಿ ಮುಂದುವರೆದಿರುವ ಪೆಟ್ರೋಲ್ ಬಗ್ಗೆಯಂತೂ ಸಾಕಷ್ಟು ಚರ್ಚೆಗಳಾಗುತ್ತಿವೆ. ಆದರೆ ಈ ಪೆಟ್ರೋಲ್ ಬೆಲೆ ಇಷ್ಟೊಂದು ಹೆಚ್ಚಾಗಲು ಭಾರತ ಕಳೆದ ವರ್ಷ ಮಾಡಿದ ಆ ಒಂದು ಯಡವಟ್ಟು ಕಾರಣ ಎಂದೆನಿಸುತ್ತಿದೆ.
ಈ ಪೆಟ್ರೋಲ್ ಬೆಲೆ ಒಂದು ರೀತಿಯಲ್ಲಿ ದ್ರವ ರೂಪದ ಬಂಗಾರ ಇದ್ದಂತೆ, ಆ ಬಂಗಾರದ ಬೆಲೆ ಯಾವ ರೀತಿಯಲ್ಲಿ ಏರಿಳತಗಳನ್ನು ಕಾಣುತ್ತದೋ ಅದೇ ರೀತಿಯಲ್ಲಿ ಇದರ ಬೆಲೆಯೂ ಕೂಡ ಏರಿಳಿತ ಕಾಣುತ್ತಲೇ ಇರುತ್ತದೆ. ಈ ಬೆಲೆಯ ಏರಿಳಿತದ ಹಿಂದಿನ ಕಾರಣವೇನೆಂದರೆ ಪೆಟ್ರೋಲ್ ಡೀಸೆಲ್ ಭೂಮಿಯ ಅಂತಾರಾಳದಲ್ಲಿ ಸಿಗುವ ಒಂದು ದ್ರವ ರೂಪದ ನಿಕ್ಷೇಪ.
ಇದನ್ನು ಕ್ರೂಡ್ ಆಯಿಲ್ ಎಂದು ಕರೆಯುತ್ತಾರೆ, ಇದು ಎಲ್ಲಾ ಕಡೆ ಸಿಗುವುದಿಲ್ಲ, ಬದಲಾಗಿ ಸಮುದ್ರದ ಮಧ್ಯದಲ್ಲಿ ಇರುವ ಕೆಲವು ದೇಶಗಳಲ್ಲಿ ಮಾತ್ರ ಸಿಗುತ್ತದೆ ಕೋಟ್ಯಾಂತರ ವರ್ಷಗಳ ಹಿಂದೆ ಭೂಮಿಯಲ್ಲಿ ಹೂತು ಹೋದ ಪ್ರಾಣಿ ಹಾಗೂ ಸಸ್ಯಗಳ ಕೊಳೆತ ದೇಹಗಳಿಂದ ಉತ್ಪತ್ತಿಯಾದ ಒಂದು ದ್ರವವೇ ಈ ಪೆಟ್ರೋಲ್ ನಿಕ್ಷೇಪ.

ಇಂತಹ ಪೆಟ್ರೋಲ್ ನಿಕ್ಷೇಪವು ಯುನೈಟೆಡ್ ಅರಬ್ ಎಮಿರೆಟ್ಸ್ ನ ದೇಶಗಳು ಹಾಗೂ ಇರಾಕ್ ಇರಾನ್ ನಂತಹ ಸಮುದ್ರದ ಮಧ್ಯದಲ್ಲಿ ಇರುವ ದೇಶಗಳಲ್ಲಿ ಮಾತ್ರ ಸಿಗುತ್ತದೆ. ಹೀಗಾಗಿ ಅಲ್ಲಿನ ಒಂದು ಕ್ರೂಡ್ ಆಯಿಲ್ ಬ್ಯಾರೆಲ್ ನ ಬೆಲೆಯ ಮೇಲೆ ಪೆಟ್ರೋಲ್ ಬೆಲೆ ನಿರ್ಧರಿತವಾಗುತ್ತದೆ. ಅದು ಹೆಚ್ಚು ಕಮ್ಮಿಯಾದ ಹಾಗೆಲ್ಲ ಎಲ್ಲ ದೇಶಗಳಲ್ಲಿ ದರ ಹೆಚ್ಚು ಕಮ್ಮಿಯಾಗಬಹುದು.
ಆದರೆ ನಿಮಗೆಲ್ಲ ಒಂದು ಪ್ರಶ್ನೆ ಕಾಡುತ್ತಿರಬಹುದು, 2010 ರಲ್ಲಿ ಒಂದು ಬ್ಯಾರೆಲ್ ಕ್ರೂಡ್ ಆಯಿಲ್ ಬೆಲೆ 90 ರೂಪಾಯಿ ಇದ್ದಾಗ ಪೆಟ್ರೋಲ್ ಬೆಲೆ 60 ರೂಪಾಯಿಯ ಆಸು ಪಾಸು ಇರುತ್ತಿತ್ತು, ಆದರೆ ಇಂದು ಅದೇ ಕ್ರೂಡ್ ಆಯಿಲ್ ಬೆಲೆ ಕೇವಲ 68 ರಿಂದ 70 ರೂಪಾಯಿ ಇದ್ದಾಗಲೂ ಭಾರತದಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಡಾಟಲು ಮುಖ್ಯ ಕಾರಣವಾದರೂ ಏನು? ಅದಕ್ಕೆ ಕಾರಣ ಇಲ್ಲಿದೆ…
ಕಳೆದ ವರ್ಷ ಕರೋನ ಎಂಬ ಹೆಮ್ಮಾರಿಯ ಅಟ್ಟಹಾಸ ಹೆಚ್ಚಾದಾಗ ಇಡೀ ಜಗತ್ತಿನ ಬಹುಭಾಗ ಲಾಕ್ ಡೌನ್ ನಿಂದಾಗಿ ಸ್ತಬ್ಧವಾಗಿ ವಾಹನಗಳಿರಲಿ ಮನುಷ್ಯರು ಕೂಡ ಮನೆಯಿಂದ ಹೊರಗೆ ಬರದಂತೆ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು, ಆದರೆ ಈ ಲಾಕ್ ಡೌನ್ ಧಿಡೀರ್ ಚಾಲನೆಗೆ ಬಂದಿದ್ದರಿಂದ ಅದಾಗಲೇ ಪೆಟ್ರೋಲಿಯಮ್ ರೆಫೈನರಿಗಳಲ್ಲಿ ತಯಾರಿಸಿಟ್ಟಿದ್ದ ಪೆಟ್ರೋಲಿಯಂ ಉತ್ಪನ್ನಗಳನ್ನು ವಿಧಿಯಿಲ್ಲದೇ ಅರಬ್ ರಾಷ್ಟಗಳು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಯಿತು.

ಇಂತಹ ಸಮಯದಲ್ಲಿ ಈ ಪೆಟ್ರೋಲಿಯಂ ಉತ್ಪನ್ನಗಳನ್ನು ಯಾವ ದೇಶಗಳು ಕೊಂಡುಕೊಳ್ಳಲು ಮುಂದೆ ಬರದೇ ಇದ್ದಾಗ ಭಾರತ, ಚೀನಾ ಮತ್ತು ಜಪಾನ್ ನಂತಹ ಮುಂಚೂಣಿ ದೇಶಗಳು ಮಾತ್ರ ದೊಡ್ಡ ಪ್ರಮಾಣದಲ್ಲಿ ಕೊಂಡುಕೊಂಡು ಸ್ಟಾಕ್ ಇಟ್ಟುಕೊಂಡಿದ್ದವು. ಆದರೆ ಈ ರೀತಿ ಕಡಿಮೆ ಬೆಲೆಗೆ ಖರೀದಿಸಿದ ಪೆಟ್ರೋಲಿಯಮ್ ಉತ್ಪನ್ನಗಳನ್ನು ಸ್ಟಾಕ್ ಇಟ್ಟುಕೊಂಡ ಭಾರತ, ಜಪಾನ್ ಮತ್ತು ಚೀನಾ ದೇಶಗಳು ಅವುಗಳ ಬೆಲೆ ಕಡಿಮೆ ಮಾಡುವುದರ ಬದಲಾಗಿ ಅವುಗಳ ಮೇಲಿನ ತೆರಿಗೆಯನ್ನು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿಸಿ ಅದೇ ದರದಲ್ಲಿ ಮಾರಾಟ ಮಾಡಿದವು.
ಆಮೇಲೆ ಪರಿಸ್ಥಿತಿ ಸ್ವಲ್ಪ ತಹಬದಿಗೆ ಬಂದು ಆ ಸ್ಟಾಕ್ ಖಾಲಿಯಾದ ಮೇಲೆ ಮತ್ತೊಮ್ಮೆ ಕ್ರೂಡ್ ಆಯಿಲ್ ಖರೀದಿ ಮಾಡಲು ಹೋದಾಗ ಮೊದಲೆ ನಷ್ಟ ಅನುಭವಿಸಿ ಕುಳಿತಿದ್ದೆ ಪೆಟ್ರೋಲಿಯಮ್ ಉತ್ಪಾದಕ ರಾಷ್ಟ್ರಗಳು ಬ್ಯಾರೆಲ್ ಕ್ರೂಡ್ ಆಯಿಲ್ ಬೆಲೆಯನ್ನು ಏರಿಸಿದ್ದವು, ಇತ್ತ ಭಾರತ ಸರ್ಕಾರ ಈ ಮೊದಲೇ ಏರಿಸಿದ್ದ ಪೆಟ್ರೋಲ್ ಮೇಲಿನ ತೆರಿಗೆಯನ್ನು ಮತ್ತೆ ಇಳಿಸುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ.
ಅಕಸ್ಮಾತ್ ಇದನ್ನು ಕೂಡ ಜಿ. ಎಸ್. ಟಿ ಅಡಿಯಲ್ಲಿ ತೆಗೆದುಕೊಂಡು ಬಂದರೆ ಪೆಟ್ರೋಲ್ ಬೆಲೆ ಸ್ವಲ್ಪ ಕಡಿಮೆಯಾಗಬಹುದು. ಅಥವಾ ಕ್ರೂಡ್ ಆಯಿಲ್ ಬ್ಯಾರೆಲ್ ಬೆಲೆ ಸ್ವಲ್ಪ ಕಡಿಮೆಯಾದರೂ ಕೂಡ ಪೆಟ್ರೋಲ್ ಡೀಸೆಲ್ ಬೆಲೆ ಇಳಿಯಬಹುದು. ಆದರೆ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ ಅರಬ್ ರಾಷ್ಟ್ರಗಳು ಮಾತ್ರ ಕ್ರೂಡ್ ಆಯಿಲ್ ಬೆಲೆ ಇಳಿಸುವ ಯಾವ ಲಕ್ಷಣಗಳು ಇಲ್ಲ.
ಹೀಗಾಗಿ ಸದ್ಯ ಪೆಟ್ರೋಲ್ ಬೆಲೆ ಇಳಿಯುವುದು ಅಸಾಧ್ಯದ ಮಾತು ಎಂದೆನಿಸುತ್ತದೆ. ಪಕ್ಕದ ಪಾಕಿಸ್ತಾನದಲ್ಲಿ 51 ರೂಪಾಯಿ ಗೆ ಸಿಗುವ ಪೆಟ್ರೋಲ್ ಭಾರತದಲ್ಲಿ 100 ರೂಪಾಯಿ ತಲುಪಲು ಅವತ್ತು ಕೈಗೊಂಡ ತೆರಿಗೆ ಏರಿಸುವ ನಿರ್ಧಾರವೇ ಬಹುಮುಖ್ಯ ಕಾರಣವಾಗಿದೆ. ಅಕಸ್ಮಾತ್ ಸರ್ಕಾರ ಬೆಲೆ ಇಳಿಸುವ ಮನಸ್ಸು ಮಾಡಿದರೂ ಸಹ ಅದು ಅಷ್ಟು ಸುಲಭದ ಮಾತಲ್ಲ.
ಹೀಗಾಗಿ ಸದ್ಯ ನಮಗೆ ಪೆಟ್ರೋಲ್ ಬೆಲೆ ಇಳಿಯುವುದು ಕನಸು ಎಂದೆನಿಸುತ್ತದೆ, ಅಕಸ್ಮಾತ್ ಜಿ.ಎಸ್. ಟಿ ಅಡಿಯಲ್ಲಿ ಪೆಟ್ರೋಲ್ ತಂದರೆ ಮಾತ್ರ ಇದರ ಬೆಲೆ ಇಳಿಸಬಹುದಾಗಿದೆ, ಅದು ಆದಷ್ಟು ಬೇಗ ಆಗಲಿ ಎಂಬುದು ನಮ್ಮ ನಿಮ್ಮೆಲ್ಲರ ಆಶಯ. ಆ ಬಗೆಗೆ ಕಂಪ್ಲೀಟ್ ಮಾಹಿತಿ ನೀಡುವ ವಿಡಿಯೊ ಮೇಲಿದೆ, ನೋಡಿ.
-ಮಂಜುನಾಥ್