ಸ’ತ್ತ ಮೀನಿನ ಹೊಟ್ಟೆಯಲ್ಲಿ ಇತ್ತು ಬೆಲೆಬಾಳುವ ಸಂಪತ್ತು : ಅದರ ಹೊಟ್ಟೆ ಸೀಳಿದ ಮೀನುಗಾರ ಆದ ಕೋಟ್ಯಾಧಿಪತಿ!
ಅದೃಷ್ಟ ಎನ್ನುವುದು ಜೊತೆಯಲ್ಲಿ ಇದೆ ಎಂದರೆ ಎಂತಹ ಅದ್ಭುತವೇ ಬೇಕಾದರೂ ನಡೆಯಬಹುದು. ಅದೃಷ್ಟ ಒಲಿದು ಬಂದರೆ ರಸ್ತೆ ಬದಿಯಲ್ಲಿ ಕುಳಿತಿರುವ ನಿರ್ಗತಿಕನು ಕೂಡಾ ದಿನ ಕಳೆಯುವುದರೊಳಗೆ ಕೋಟ್ಯಾಧಿಪತಿ ಆಗಬಹುದು. ಅದೃಷ್ಟ ಯಾರಿಗಾದರೂ, ಹೇಗೆ ಬೇಕಾದರೂ ಬರಬಹುದು. ಇಂತಹದೊಂದು ಅದೃಷ್ಟವು ಯಮನ್ ನ ಮೀನುಗಾರರ ಸಮೂಹ ಒಂದಕ್ಕೆ ಒಲಿದು ಬಂದಿದೆ. ಇದು ಅವರ ಭಾಗ್ಯವನ್ನು ಬದಲಾಯಿಸುವುದರಲ್ಲಿ ಸಂಶಯವೇ ಇಲ್ಲ ಎನ್ನಬಹುದು.
ಮೀನುಗಾರರು ಎಂದಿನಂತೆ ಮೀನುಗಳನ್ನು ಹಿಡಿಯುವ ಸಲುವಾಗಿ ಸಮುದ್ರಕ್ಕೆ ಬಲೆಯನ್ನು ಹಾಕಿದ್ದಾರೆ. ಆಗ ಮೀನುಗಾರರಿಗೆ ಬಲೆಯಲ್ಲಿ ಬಂದು ಸ’ತ್ತಿರುವ ಶಾರ್ಕ್ ನ ದೇಹವು ದೊರೆತಿದೆ. ಆದರೆ ಆಸಕ್ತಿಕರ ವಿಚಾರ ಆ ಸ’ತ್ತ ಶಾರ್ಕ್ ನ ದೇಹವಲ್ಲ, ಬದಲಾಗಿ ಅದರ ಹೊಟ್ಟೆಯಲ್ಲಿ ಅಡಗಿಕೊಂಡಿದ್ದಂತಹ ವಿಶೇಷವಾದ, ಅಮೂಲ್ಯವಾದ ವಸ್ತುವಾಗಿದೆ.
ಸ’ತ್ತ ತಿಮಿಂಗಲವನ್ನು ಕತ್ತರಿಸಿದಾಗ ಅದರ ಹೊಟ್ಟೆಯಲ್ಲಿ ಮೀನುಗಾರರಿಗೆ ಗ್ರೇ ಕಲರ್ ನಲ್ಲಿ ಇರುವಂತಹ ಒಂದು ಕಲ್ಲಿನಂತಹ ಆಕಾರದ ವಸ್ತುವು ದೊರೆತಿದೆ. ಆದರೆ ವಾಸ್ತವವಾಗಿ ಅದನ್ನು ಅಂಬರ್ ಗ್ರೀಸ್ ಎಂದು ಕರೆಯಲಾಗುತ್ತದೆ. ಇದು ಬಹಳ ಬೆಲೆಬಾಳುವ ವಸ್ತುವಾಗಿದ್ದು, ಮಾರುಕಟ್ಟೆಯಲ್ಲಿ ಅಂಬರ್ ಗ್ರೀಸ್ ನ ಒಂದು ಕಿಲೋಗ್ರಾಂ ಸುಮಾರು 36 ಲಕ್ಷ ರೂಪಾಯಿಗಳ ಬೆಲೆ ಬಾಳುತ್ತದೆ.

ಅಂಬರ್ ಗ್ರಿಸ್ ಸಿಗುವುದು ಬಹಳ ವಿರಳ ಹಾಗೂ ಇದರ ಉಪಯೋಗವನ್ನು ಸುಗಂಧ ದ್ರವ್ಯಗಳ ಉತ್ಪಾದನೆಯಲ್ಲಿ ಮಾಡಲಾಗುತ್ತದೆ. ಸುಗಂಧ ದ್ರವ್ಯ ತಯಾರಿಕಾ ಕಂಪನಿಗಳ ಬಳಿ ಈ ಅಂಬರ್ ಗ್ರೀಸ್ ಗೆ ಬಹಳ ಬೇಡಿಕೆ ಇದೆ. ತಿಮಿಂಗಲದ ಈ ವ್ಯರ್ಥ ಪದಾರ್ಥ ಅಥವಾ ಅವುಗಳ ವಾಂತಿಯಾದ ಈ ಅಂಬರ್ ಗ್ರೀಸನ್ನು ಸುಗಂಧ ದ್ರವ್ಯಗಳ ವಿಶ್ವಮಟ್ಟದ ಬ್ರಾಂಡ್ ಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ.
ಜಿಯಾಗ್ರಫಿ ವಾಹಿನಿಯ ಪ್ರಕಾರ 1% ರಿಂದ 5% ಅಂಬರ್ ಗ್ರೀಸ್ ತಿಮಿಂಗಲಗಳ ಹೊಟ್ಟೆಯೊಳಗೆ ಉತ್ಪಾದಿಸಲ್ಪಡುತ್ತದೆ. ಇದು ಮೇಣದಂತೆ ಅಂಟುಅಂಟಾಗಿ ಇರುವುದು ಮಾತ್ರವೇ ಅಲ್ಲದೇ ಇದು ಹೆಚ್ಚು ದಹನಶೀಲವೂ ಹೌದು. ಯಮನ್ ನ ಮೀನುಗಾರರ ಗುಂಪಿಗೆ ಸಿಕ್ಕಿರುವ ಅಂಬರ್ ಗ್ರಿಸ್ ಗಾತ್ರದಲ್ಲಿ ಬಹಳ ದೊಡ್ಡದಾಗಿದೆ ಎನ್ನಲಾಗಿದ್ದು, ಸತ್ತ ತಿಮಿಂಗಲದ ಹೊಟ್ಟೆಯಿಂದ ಇದನ್ನು ಹೊರಗೆ ತೆಗೆಯಲು ಅವರು ದೇಹದ ಮೇಲೆ 35 ಕಡೆ ಕ ತ್ತ ರಿ ಸಿರುವುದಾಗಿ ಹೇಳಿದ್ದಾರೆ.
ಸ’ತ್ತಿರುವ ಶಾರ್ಕ್ ನ ದೇಹವು ಅವರಿಗೆ ಸಿಕ್ಕಾಗ ಅದರ ದೇಹದಿಂದ ಒಂದು ವಾಸನೆಯು ಹೊರಗೆ ಬರುತ್ತಿದ್ದರಿಂದ ಬಹುಶಃ ಅದರ ದೇಹದಲ್ಲಿ ಅಂಬರ್ ಗ್ರಿಸ್ ಇದೆ ಎನ್ನುವ ಅನುಮಾನಗಳು ಮೀನುಗಾರರಿಗೆ ಬಂದಿತ್ತು. ಮೀನುಗಾರರು ತಮ್ಮ ಅನುಮಾನ ಪರಿಹಾರ ಮಾಡಿಕೊಳ್ಳಲು ಮೀನಿನ ಹೊಟ್ಟೆಯನ್ನು ಕ’ತ್ತ’ರಿಸಿದ್ದಾರೆ.

ಆಗ ಅವರ ಅನುಮಾನ ನಿಜವಾಗಿತ್ತು, ತಿಮಿಂಗಲದ ಹೊಟ್ಟೆಯಿಂದ ಅಂಬರ್ ಗ್ರೀಸ್ ಅನ್ನು ಹೊರತೆಗೆದಿದ್ದಾರೆ. ಇದರ ಗಾತ್ರ ಎಷ್ಟಿದೆಯೆಂದರೆ ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು 11 ಕೋಟಿ ಗಳಿಗಿಂತ ಅಧಿಕ ಎನ್ನಲಾಗಿದೆ. ಈ ಅಂಬರ್ ಗ್ರೀಸ್ ಆ ಮೀನುಗಾರರ ಭಾಗ್ಯ ಬದಲಿಸಿದೆ.
ಈ ಮೀನುಗಾರರ ಗುಂಪು ಅದನ್ನು ಮಾರಾಟ ಮಾಡಿ ಬರುವ ಹಣವನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳುವ ನಿರ್ಧಾರವನ್ನು ಮಾಡಿದ್ದಾರೆ. ಅಲ್ಲದೇ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ದೇಣಿಗೆ ನೀಡಲು ಅವರು ತೀರ್ಮಾನ ಮಾಡಿದ್ದಾರೆ. ತಿಮಿಂಗಲದ ವ್ಯರ್ಥ ಅಥವಾ ಅವರ ಈ ವಾಂತಿಯು ತಿಮಿಂಗಿಲದ ದೇಹದಲ್ಲಿ ಎಲ್ಲಾ ಸಮಯದಲ್ಲಿ ಉತ್ಪತ್ತಿಯಾಗುವುದಿಲ್ಲ.
ಒಂದು ವೇಳೆ ತಿಮಿಂಗಲ ಜೀರ್ಣಿಸಿಕೊಳ್ಳಲಾಗದ ಸ್ಕ್ವೀಡ್ ಮೀನುಗಳನ್ನು ನುಂಗಿದಂತಹ ಸಂದರ್ಭದಲ್ಲಿ ಅದರ ದೇಹದೊಳಗೆ ಈ ಅಂಬರ್ ಗ್ರೇಸ್ ಉತ್ಪತ್ತಿಯಾಗಲು ಪ್ರಾರಂಭಿಸುತ್ತದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಶ್ರಮಜೀವಿಗಳಾದ ಮೀನುಗಾರರ ಭಾಗ್ಯ ಬದಲಾಯಿತು.
-Team Infotrend