VIDEO : ಕ್ಯಾಮೆರಾದಲ್ಲಿ ಸೆರೆಯಾದ ಸಿಡಿಲು ಹೊಡೆಯುವ ದೃಶ್ಯಗಳು! ವಿಡಿಯೊ ನೋಡಿ…

ಮಳೆಗಾಲ ಸುರುವಾಯಿತು. ಇನ್ನು ಮೇಲೆ ಮಾಮೂಲಾಗಿ ನಾವೆಲ್ಲ ಸಿಡಿಲು ಹೊಡೆಯುವ ಸುದ್ದಿ ಕೇಳುತ್ತೇವೆ. ಮಳೆ, ಮಿಂಚು ನಾವು ನೋಡಿದ್ದೇವೆ‌. ಗುಡುಗಿನ ಅರ್ಭಟ ಕೂಡ ಕೇಳಿದ್ದೇವೆ. ಆದರೆ ಸಿಡಿಲು ಬೀಳುವ ದೃಶ್ಯವನ್ನು ನೋಡಿದವರು ತೀರ ವಿರಳ. ಸೆಕೆಂಡಿನಲ್ಲಿ ಅದೆಷ್ಟೊ ಭಾಗ ಮಾಡಿ, ಅದರ ಒಂದು ಭಾಗದಲ್ಲಿ ಕಾಣಸಿಗಬಹುದಾದ ಸಿಡಿಲಿನ ಹೊಡೆತವನ್ನು ಬರಿಗಣ್ಣಿಂದ ಕಾಣುವುದು ಅಸಾಧ್ಯವೆಂದೇ ಹೇಳಬಹುದು.

ಅದಕ್ಕಾಗಿ ಕ್ಯಾಮೆರಾದಲ್ಲಿ ಸೆರೆಯಾದ ಕೆಲವು ದೃಶ್ಯಗಳ ವಿಡಿಯೊವನ್ನು ಇಲ್ಲಿ ಕೊನೆಗೆ ಹಾಕಿದ್ದೇವೆ. ಅದಕ್ಕೂ ಮೊದಲು ಆ ಬಗೆಗಿನ ಆಸಕ್ತಿಕರ ಮಾಹಿತಿ ಓದಿ… ಸಿಡಿಲಿಗೆ ಒಂದು ಡೆಫ್ನೆಶನ್ ಕೊಡುವುದಾದರೆ, ಮೋಡ ಮತ್ತು ನೆಲದ ನಡುವೆ ಅಥವಾ ಮೊಡದೊಳಗೆಯೇ ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ವೋಲ್ಟೇಜಿನ ನೈಸರ್ಗಿಕ ವಿದ್ಯುತ್ ಹೊರಸೂಸುವಿಕೆಯನ್ನೇ ಸಿಡಿಲು ಅನ್ನಬಹುದು.

ಈ ಭಾರಿ ಪ್ರಮಾಣದ ವಿದ್ಯುತ್ ಹೊಡೆತವು ಪ್ರಜ್ವಲಿಸುವ ಬೆಳಕು ಹಾಗೂ ಘರ್ಜಿಸುವ ಗುಡುಗಿನೊಂದಿಗೆ ಬಂದು ಬೀಳುತ್ತದೆ. ಬನ್ನಿ ಆ ಬಗ್ಗೆ ಒಂದಿಷ್ಟು ಅಂಶ ನೋಡೋಣ…

*ಮಿಂಚಿಗೆ ಸಂಬಂಧಿಸಿದ ಅಧ್ಯಯನವನ್ನು “ಫುಲ್ಮಿನಾಲಜಿ” ಎಂದು ಕರೆಯಲಾಗುತ್ತದೆ.
*ಸಾಮಾನ್ಯ ಮಿಂಚಿನ ಸರಾಸರಿ ಉದ್ದವು ಸುಮಾರು 2 ರಿಂದ 3 ಮೈಲಿಗಳು ಮತ್ತು ಸುಮಾರು 100 ಮಿಲಿಯನ್ ವೋಲ್ಟ್ ವಿದ್ಯುತ್ ಅನ್ನು ಹೊಂದಿರುತ್ತದೆ.
*ಮಿಂಚು ಮತ್ತು ಗುಡುಗಿನ ಭಯವನ್ನು ಆಸ್ಟ್ರೋಫೋಬಿಯಾ ಎಂದು ಕರೆಯಲಾಗುತ್ತದೆ.
*ಪ್ರಪಂಚದಲ್ಲಿ ಪ್ರತಿ ವರ್ಷ ಸಿಡಿಲಿನಿಂದ ಸುಮಾರು 24,000 ಜನರು ಸಾ’ಯುತ್ತಾರೆ.

*ಪ್ರತಿ ಸೆಕೆಂಡಿಗೆ 40 ಬಾರಿ ಸಿಡಿಲು ಬೀಳುತ್ತವೆ, ಅಂದರೆ ದಿನಕ್ಕೆ ಸುಮಾರು 3 ಮಿಲಿಯನ್ ಬಾರಿ! ಆದರೆ ಈ ಎಲ್ಲಾ ಸಿಡಿಲು ನೆಲಕ್ಕೆ ಬಡಿಯುವುದಿಲ್ಲ, ಅವುಗಳಲ್ಲಿ ಹಲವು ಮೋಡಗಳ ಮೇಲೆಯೇ ಬೀಳುತ್ತವೆ.
*ಪ್ರತಿ ವರ್ಷ 1 ಬಿಲಿಯನ್‌ ಗಿಂತಲೂ ಹೆಚ್ಚು ಸಿಡಿಲಿನ ಹೊಡೆತಗಳು ಭೂಮಿಗೆ ಬರುತ್ತವೆ.
*ಮಿಂಚಿನಲ್ಲಿ ತುಂಬಾ ಶಕ್ತಿ ಇದ್ದು, ಒಂದು ಮಿಂಚಿನಲ್ಲಿ 100 ವ್ಯಾಟ್ ಬಲ್ಬ್ ಅನ್ನು 3 ತಿಂಗಳವರೆಗೆ ಬೆಳಗಿಸಬಹುದು.

*ಸಿಡಿಲಿನ ತಾಪಮಾನ 30000 ° C, ಇದು ಸೂರ್ಯನಿಗಿಂತ 5 ಪಟ್ಟು ಹೆಚ್ಚು ಬಿಸಿಯಾಗಿರುತ್ತದೆ!
*ಪ್ರಪಂಚದಾದ್ಯಂತ ಮಿಂಚು ದಿನಕ್ಕೆ 3 ದಶಲಕ್ಷಕ್ಕಿಂತ ಹೆಚ್ಚು ಬಾರಿ ಮಿನುಗುತ್ತದೆ.
*1902 ರಲ್ಲಿ ‘ಐಫೆಲ್ ಟವರ್’ನ ಮೇಲಿನ ಭಾಗವು ಸಿಡಿಲಿನಿಂದ ಹಾಳಾಯಿತು. ಅದನ್ನು ನಂತರ ಸರಿಪಡಿಸಲಾಯಿತು.
*ಗುಡುಗು ಇಲ್ಲದೆ ಮಿಂಚು ಬೀಳುವುದು ಅಸಾಧ್ಯ. ಏಕೆಂದರೆ ಗುಡುಗು ವಾಸ್ತವವಾಗಿ ಮಿಂಚಿನಿಂದ ಉತ್ಪತ್ತಿಯಾಗುವ ಶಬ್ದವಾಗಿದೆ.

*ಆಕಾಶದಿಂದ ಬೀಳುವ ಸಿಡಿಲು ಸುಮಾರು 4 ರಿಂದ 5 ಕಿಲೋಮೀಟರ್ ಉದ್ದ ಮತ್ತು ಅದರ ಫ್ಲ್ಯಾಷ್ 1 ಅಥವಾ 2 ಇಂಚು ಅಗಲವಿರುತ್ತದೆ. ಇದು 100 ಮಿಲಿಯನ್ ವೋಲ್ಟ್ಗಳೊಂದಿಗೆ 10000 ಆಂಪ್ಸ್ ಪ್ರವಾಹವನ್ನು ಹೊಂದಿರುತ್ತದೆ.
*ಮಹಿಳೆಯರಿಗಿಂತ ಪುರುಷರು ಸಿಡಿಲಿನಿಂದ ಸಾಯುವ ಸಾಧ್ಯತೆ ಐದು ಪಟ್ಟು ಹೆಚ್ಚು.
*1939 ರಲ್ಲಿ ಯುಎಸ್ ರಾಜ್ಯವಾದ ‘ಉತಾಹ್’ ನಲ್ಲಿ 835 ಕುರಿಗಳು ಸಿಡಿಲಿನಿಂದ ಏಕಕಾಲದಲ್ಲಿ ಕೊಲ್ಲಲ್ಪಟ್ಟವು.

*1998 ರಲ್ಲಿ ಆಫ್ರಿಕಾದ ಕಾಂಗೋದಲ್ಲಿ ಫುಟ್ಬಾಲ್ ಪಂದ್ಯವೊಂದು ನಡೆಯುತ್ತಿತ್ತು, ಇದ್ದಕ್ಕಿದ್ದಂತೆ ಸಿಡಿಲು ಬಿದ್ದು, ಒಂದು ತಂಡದ ಎಲ್ಲಾ 11 ಆಟಗಾರರನ್ನು ಕೊನೆಯುಸೆರೆಳೆದರು, ಆದರೆ ಇತರ ತಂಡದ ಆಟಗಾರರಲ್ಲಿ ಯಾರೊಬ್ಬರಿಗೂ ಏನೂ ಆಗಿರಲಿಲ್ಲ!
*ಇತ್ತೀಚಿನ ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಜಾಗತಿಕ ತಾಪಮಾನ ಏರಿಕೆಯು ಈ ರೀತಿ ಹೆಚ್ಚಾಗುತ್ತಿದ್ದರೆ, 2100 ರ ಹೊತ್ತಿಗೆ, ಇಂದಿನ ದಿನಕ್ಕಿಂತ 50% ಹೆಚ್ಚಿನ ಸಿಡಿಲು ಬೀಳಲಿವೆ!

*ವೆನೆಜುವೆಲಾದ ‘ಮರಕೈಬೊ ಸರೋವರ’ದಲ್ಲಿ ಸಿಡಿಲು ಸದಾಕಾಲ ಬೀಳುತ್ತಲೇ ಇರುತ್ತವೆ. ಒಂದು ರಾತ್ರಿಯಲ್ಲಿ 10 ಗಂಟೆಗಳು ಮತ್ತು ವರ್ಷದಲ್ಲಿ 240 ರಿಂದ 260 ರಾತ್ರಿಗಳು ಸಿಡಿಲು ಬೀಳುತ್ತಿರುತ್ತವೆ. ಪ್ರತಿ ವರ್ಷ ಸಿಡಿಲು ಸುಮಾರು 12 ಲಕ್ಷ ಬಾರಿ ಇಲ್ಲಿ ಬೀಳುತ್ತವೆ!
*ಸಿಡಿಲು ಹೆಚ್ಚಾಗಿ ಮಧ್ಯಾಹ್ನ ಬೀಳುವ ಸಾಧ್ಯತೆ ಹೆಚ್ಚು. ಇದರಿಂದ ತಲೆ, ಕುತ್ತಿಗೆ ಮತ್ತು ಭುಜಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ.

*ಬೆಳಕಿನ ವೇಗವು ಶಬ್ದಕ್ಕಿಂತ ಹಲವು ಪಟ್ಟು ವೇಗವಾಗಿರುತ್ತದೆ. ಇದೇ ಕಾರಣಕ್ಕೆ ನಾವು ಮೊದಲು ಬೀಳುವ ಮಿಂಚನ್ನು ನೋಡುತ್ತೇವೆ ಮತ್ತು ನಂತರ ಗುಡುಗಿನ ಶಬ್ದವನ್ನು ಕೇಳುತ್ತೇವೆ. ಮಿಂಚನ್ನು ನೋಡುವುದು ಮತ್ತು ಘರ್ಜನೆ ಕೇಳುವ ನಡುವೆ ನೀವು 5 ಎಣಿಸಿದರೆ, ಅದು ನಿಮ್ಮಿಂದ 1 ಮೈಲಿ ದೂರದಲ್ಲಿದೆ ಅಂತ ಅರ್ಥ. ಏಕೆಂದರೆ ಶಬ್ದವು 1 ಮೈಲಿ (1.6 ಕಿಮೀ) ಪ್ರಯಾಣಿಸಲು 5 ಸೆಕೆಂಡುಗಳು ತೆಗೆದುಕೊಳ್ಳುತ್ತದೆ.

*ಸಿಡಿಲು ಪ್ರತಿವರ್ಷ 300 ಬಾರಿ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ ಮೇಲೆ ಬೀಳುತ್ತದೆ. ಈ ಶಕ್ತಿಯನ್ನು ಸಂಗ್ರಹಿಸಿದರೆ, ಅದು 600 ವೋಲ್ಟ್ಗಳನ್ನು ಉತ್ಪಾದಿಸುತ್ತದೆ.
*ಆಫ್ರಿಕನ್ ಪ್ರಾಣಿ ‘ಬೊಂಗೊ’ ಸಿಡಿಲು ಬಿದ್ದು ಸುಟ್ಟ ಮರವನ್ನು ತಿನ್ನುತ್ತದೆ!
*ಸಾಗರಗಳು ಮತ್ತು ಸಮುದ್ರಗಳ ಮೇಲೆ ಸಿಡಿಲಿಗಿಂತ ಭೂಮಿಯ ಮೇಲೆ ಹೆಚ್ಚು ಸಾಮಾನ್ಯವಾಗಿದೆ.
*ಪ್ರಾಚೀನ ಕಾಲದಲ್ಲಿ ಅರಿಸ್ಟಾಟಲ್‌ ನಂತಹ ದಾರ್ಶನಿಕರು ಮೋಡಗಳ ಘರ್ಷಣೆಯಿಂದ ಗುಡುಗು ಉಂಟಾಗುತ್ತದೆ ಎಂದು ನಂಬಿದ್ದರು.

ಎಂಥವರನ್ನೂ ಎದೆ ನಡುಗಿಸುವ ವೇಗ ಹಾಗೂ ಶಬ್ಧದೊಂದಿಗೆ ಬಂದು ಅಪ್ಪಳಿಸುವ ಸಿಡಿಲು ಭೂಮಿಯ ಮೇಲಿನ ಜೀವಿಗಳಿಗೆ ಸಾಕಷ್ಟು ಹಾನಿ ಮಾಡಬಲ್ಲುದು. ಪ್ರತಿವರ್ಷ ಸಾವಿರಾರು ಮನುಷ್ಯರು ಹಾಗೂ ಲಕ್ಷಾಂತರ ಇತರೆ ಜೀವಿಗಳ ಸಾ’ವಿಗೆ ಕಾರಣವಾಗುವ ಸಿಡಿಲಿನ ಕುರಿತು ಒಂದು ವಿಡಿಯೊ ಮೇಲಿದೆ. ತಪ್ಪದೇ ನೋಡಿ ನೋಡಿ…
-Team Infotrend