ಇರುವುದೊಂದೇ ಜನ್ಮದಲ್ಲಿ ಮೊದಲು MBBS, ನಂತರ IPS, ಮೂರನೇಯದಾಗಿ IAS ಗೆ ಕೂಡ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ ಜಮ್ಮು-ಕಾಶ್ಮೀರದ ಈ ಯುವತಿ!
ಹಿಂದೊಂದು ಕಾಲವಿತ್ತು ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತವಾಗಿರುತ್ತಿದ್ದರು, ಆದರೆ ಇಂದು ಕಾಲ ಬದಲಾಗಿದೆ. ನರ್ಸ್, ಡಾಕ್ಟರ್, ಟೀಚರ್ ನಂತಹ ಸಾಮಾನ್ಯ ಕೆಲಸಗಳಿಂದ ಹಿಡಿದು ಡ್ರೈವಿಂಗ್, ಮಿಲಿಟರಿ, ಪೊಲೀಸ್, ಪೈಲಟ್, ಲೋಕೋ ಪೈಲಟ್ ನಂತಹ ಪುರುಷರು ಮಾಡುವ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಯುವತಿ ಇರುವುದೊಂದು ಜನ್ಮದಲ್ಲಿ MBBS ನಂತಹ ವೈದ್ಯಕೀಯ ಹುದ್ದೆ, ನಂತರ ಐಪಿಎಸ್, ಮೂರನೇಯದಾಗಿ ಐಎಎಸ್ ಕೂಡ ಪಾಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಬನ್ನಿ ಈ ಇಂಟೆರೆಸ್ಟಿಂಗ್ ಸ್ಟೋರಿ ನೋಡೋಣ…
ಭೂಲೋಕದಲ್ಲಿನ ಸ್ವರ್ಗವೆಂದೇ ಕರೆಯಲ್ಪಡುವ ಜಮ್ಮು-ಕಾಶ್ಮೀರದ ಯುವತಿಯಾಗಿರುವ ರುವೈದಾ ಸಲಾಂ ಎಂಬ ಹೆಸರಿನ ಯುವತಿಯೇ ಈ ಅತ್ಯದ್ಭುತ ಸಾಧನೆ ಮಾಡಿದವರಾಗಿದ್ದಾರೆ. ಒಂದಾದ ಮೇಲೊಂದರಂತೆ ಸಾಧನೆ ಮಾಡಿದ ಈ ಯುವತಿಯು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
UPSC ಪರೀಕ್ಷೆಯಲ್ಲಿ 820 ನೆ ರಾಂಕ್ ನೊಂದಿಗೆ ಪಾಸಾಗಿ ಸದ್ಯ ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಇವರು ಭಾರತದಲ್ಲಿ ಐಎಎಸ್ ಪಾಸ್ ಮಾಡಿದ ಮೊದಲ ಮುಸ್ಲಿಂ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಅಂದರೆ 2009 ರಲ್ಲಿ ಶ್ರೀನಗರದಲ್ಲಿ MBBS ಪರೀಕ್ಷೆ ಪಾಸು ಮಾಡಿದ್ದರು, ತದನಂತರ ಅದೇ ಶ್ರೀನಗರದಿಂದಲೇ ಸಿವಿಲ್ ಸರ್ವಿಸ್ ಪರೀಕ್ಷೆ ಕಟ್ಟಿ 24 ನೆ ರಾಂಕ್ ನೊಂದಿಗೆ ಐಪಿಎಸ್ ಪಾಸ್ ಮಾಡಿದ್ದರು.

ಜಮ್ಮುವಿನ ಕುಪವಾಡ ನಗರದ ನಿವಾಸಿಯಾಗಿರುವ ಇವರು ಐಎಎಸ್ ಆಗುವ ಕನಸು ಕಂಡರು, ಅಷ್ಟೇ ಅಲ್ಲದೇ ಅದನ್ನು ಸಾಕಾರಗೊಳಿಸಿದರು ಕೂಡ. ಆದರೆ ಈ ಕೆಲಸ ಅಷ್ಟೊಂದು ಸುಲಭವಾಗಿರಲಿಲ್ಲ, ಹಾಗಂತ ಅವರ ಪ್ರತಿಭೆಗೆ ಏನೂ ಕೊರತೆ ಇರಲಿಲ್ಲ. ಇವರು ಮು’ ಸ್ಲಿಂ ಆಗಿರುವದರಿಂದ ಮನೆಯಲ್ಲಿನ ಕಟ್ಟುನಿಟ್ಟಿನ ಕಟ್ಟುಪಾಡುಗಳಿದ್ದವು.
ಮನೆಯಿಂದ ದೂರ ಅಂದರೆ ಹಾಸ್ಟೆಲ್ ನಲ್ಲಿ ಇದ್ದು ಓದುವುದು ಕಷ್ಟ, ಅಷ್ಟೇ ಅಲ್ಲದೇ ಹೆಚ್ಚು ಓದಲು ಸಹ ಬಿಡುವುದಿಲ್ಲ ಎಂಬುದು ಅವರಿಗೆ ಸ್ವಲ್ಪ ಕಷ್ಟವಾಯಿತು. ಜಮ್ಮುವಿನ ಕುಪವಾಡ ನಗರವು ಒಂದು ಸೂಕ್ಷ್ಮ ನಗರವಾಗಿದ್ದು ಕೆಲವು ಸಮಸ್ಯೆಗಳನ್ನು ಸಹ ಎದುರಿಸಬೇಕಾಯಿತು. ಅವರ ಎದುರಿಗೆ ದಿನಕ್ಕೊಂದರಂತೆ ಸಮಸ್ಯೆಗಳು ಕೂಡ ಎದುರಾಗುತ್ತಿದ್ದವು.
ಶ್ರೀನಗರದಲ್ಲಿದ್ದಾಗಲೂ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇರುತ್ತಿದ್ದವಂತೆ, ಹಲವು ಬಾರಿ ಕ’ರ್ಫ್ಯೂ, ನಿ’ಷೇ’ಧಗಳಿಂದಾಗಿ ಓದುವ ಪುಸ್ತಕಗಳನ್ನು ತರಲು ಕೂಡ ಸಾಧ್ಯವಾಗದೇ ಎಷ್ಟೋ ದಿನಗಳವರೆಗೆ ಅಭ್ಯಾಸ ಮಾಡಲು ಸಹ ಆಗುತ್ತಿರಲಿಲ್ಲವಂತೆ. ಇದರಿಂದ ಮುಂದೆ ಮತ್ತೇನಾಗಬಹುದು ಎಂಬೆಲ್ಲ ಚಿಂತೆಗಳು ಬಹಳಷ್ಟು ಕಾಡುತ್ತಿದ್ದವಂತೆ.

ಐಎಎಸ್ ಪಾಸ್ ಮಾಡಲು ರುವೈದಾ ಅವರಿಗೆ ಕೇವಲ ಹೊರಗಿನ ಚಿಂತೆಗಳಷ್ಟೇ ಅಲ್ಲದೇ ಮನೆಯಲ್ಲಿ ಕೂಡ ಅವರು MBBS ಪರೀಕ್ಷೆ ಪಾಸು ಮಾಡಿದ ಕೂಡಲೇ ಅವರ ತಂದೆ ತಾಯಿ ಅಷ್ಟೇ ಅಲ್ಲದೇ ಅವರ ಸಂಬಂಧಿಕರೆಲ್ಲರು ಮದುವೆಯಾಗುವಂತೆ ಒತ್ತಾಯ ಮಾಡಿದರಂತೆ. ಇವೆಲ್ಲದರ ಜೊತೆಗೆ ಸಮಾಜದಲ್ಲಿ ಕೇಳಿಬರುವ ಮಾತುಗಳನ್ನು ಸಹ ಎದುರಿಸಬೇಕಾಯಿತು.
ಅವರು ಐಪಿಎಸ್ ಹಾಗೂ ಐಎಎಸ್ ಪಾಸ್ ಮಾಡಿ ಇಡೀ ಜಮ್ಮು ಕಾಶ್ಮೀರಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಿದ್ದಾರೆ. ಮೊದಲು ಮದುವೆಯಾಗುವಂತೆ ಹೇಳಿದ ಇವರ ಪರಿವಾರ ನಂತರದ ದಿನಗಳಲ್ಲಿ ಮಗಳ ಈ ಧೃಡ ನಿರ್ಧಾರವನ್ನು ಕಂಡು ಸಮಾಜದ ಕಟ್ಟುಪಾಡುಗಳಿಗೆ ಮಣೆ ಹಾಕದೆ ಮಗಳಿಗೆ ಪ್ರೋತ್ಸಾಹ ನೀಡಿದರಂತೆ.

ಇದು ಕೂಡ ರುವೈದಾ ಅವರಿಗೆ ಸಹಾಯವಾಯಿತಂತೆ. ಇವರ ತಂದೆಯ ಹೆಸರು ಸಲಾಮುದ್ದಿನ್ ಬಜದ್ ಇವರು ಕೆಲವೇ ವರ್ಷಗಳ ಕೆಳಗೆ ದೂರದರ್ಶನದಲ್ಲಿ ಉಪನಿರ್ದೇಶಕ ಹುದ್ದೆಯಿಂದ ನಿವೃತ್ತಿ ಹೊಂದಿದ್ದಾರೆ. ಮಗಳ ಈ ಸಾಧನೆಗೆ ಬಹಳಷ್ಟು ಸಂತಸ ವ್ಯಕ್ತಪಡಿಸಿರುವ ಇವರು ನನ್ನ ಮಗಳು ಕೇವಲ ನನ್ನ ಕುಟುಂಬವಷ್ಟೇ ಅಲ್ಲ ಬದಲಾಗಿ ಜಮ್ಮು ಕಾಶ್ಮೀರ ರಾಜ್ಯ ಹಾಗೂ ಭಾರತದ ಮಹಿಳೆಯರಿಗೆಲ್ಲ ಹೆಮ್ಮೆ ತಂದಳು ಎಂದಿದ್ದಾರೆ.
ಇಂತಹ ಸಾಧನೆಗಳನ್ನು ನೋಡಿ ಇಷ್ಟು ದಿನಗಳವರೆಗೆ ಸರ್ಕಾರಿ ನೌಕರಿ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ ಇದ್ದ ಕಾಶ್ಮೀರಿ ಯುವಜನತೆ ಇತ್ತೀಚೆಗೆ ಸರ್ಕಾರಿ ನೌಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ, ಮಿಲಿಟರಿಯಲ್ಲಿಯೂ ಕೂಡ ಆಸಕ್ತಿ ತೋರುತ್ತಿರುವುದು ವಿಶೇಷವಾಗಿದೆ.
-ಮಂಜುನಾಥ್