ಪತ್ನಿಯಿಂದ ಎರವಲು ಪಡೆದ ಹಣದಿಂದ ಪ್ರಾರಂಭಿಸಿದ ಉದ್ಯೋಗ ಇಂದು ಮಿಲಿಯನ್ ಡಾಲರ್ ಕಂಪನಿ!


ಒಬ್ಬ ನಿರುದ್ಯೋಗಿ ಒಂದು ಲಕ್ಷ ಡಾಲರ್ ಬಂಡವಾಳದ ಕಂಪನಿಯ ಮಾಲೀಕನಾಗುತ್ತಾನೆಂದರೆ ಈ ವಿಷಯ ನಿಜಕ್ಕೂ ಅದ್ಭುತವೇ ಸರಿ.
ಈ ನಿರುದ್ಯೋಗಿ ತನ್ನ ಪತ್ನಿಯಿಂದ 50,000 ರೂಪಾಯಿಗಳನ್ನು ಎರವಲು ಪಡೆದು ಮುಂಬಯಿಯ ಅಂಧೇರಿಯಲ್ಲಿ ಪುಟ್ಟ ಗ್ಯಾರೇಜನ್ನು ಪ್ರಾರಂಭಿಸಿದನು. ಅದರಿಂದಲೇ ಕ್ರಮೇಣ ಎತ್ತರಕ್ಕೆ ಬೆಳೆದು ಇಂದು ಆತ ಸ್ಥಾಪಿಸಿದ ಬ್ರಾಂಡ್ ಭಾರತದ ಅಗ್ರಗಣ್ಯ ಬ್ರಾಂಡ್ ಆಗಿ ಹೆಸರು ಪಡೆದಿದೆ.
ಹೌದು ನಾವು ಮೇರು ಕ್ಯಾಬ್ಸ್ ನ ವಿಷಯ ಪ್ರಸ್ತಾಪಿಸುತ್ತೇದ್ದೇವೆ. ಇದರ ಸಂಸ್ಥಾಪಕ ನೀರಜ್ ಗುಪ್ತಾ ಒಂದು ಬಿಜಿನೆಸ್ ಫ್ಯಾಮಿಲಿಯಲ್ಲಿ ಬೆಳೆದವರು. ತಮ್ಮ ಸ್ನಾತಕ ಪದವಿಯನ್ನು ಮುಂಬಯಿಯ ಮಿಠಿಬಾಯಿ ಕಾಲೇಜ್ ನಲ್ಲಿ ಮುಗಿಸಿದರು. ಅಭ್ಯಾಸದಲ್ಲಿ ಸಾಧಾರಣವಾಗಿದ್ದರಿಂದ ತಂದೆಯ ಗುರುತಿನಿಂದಾಗಿ ಟೇಕ್ಸಟಾಯಿಲ್ ಕಂಪನಿಯಲ್ಲಿ ಒಂದು ನೌಕರಿ ಸಿಕ್ಕಿತು, ಆದರೆ ಮದುವೆಯ ನಂತರ ಅದನ್ನೂ ಬಿಟ್ಟುಬಿಟ್ಟರು. ಮುಂದೆ ಕೆಲಸವಿಲ್ಲದೆ ಮನೆಯಲ್ಲಿಯೇ ಇರುತ್ತಿದ್ದರು. ಪತ್ನಿ ಜೆಟ್ ಏರ್ ವೆಜ್ ನಲ್ಲಿ ಕೆಲಸ ಮಾಡುತ್ತಿದ್ದರು. ಐದು ವರ್ಷಗಳವರೆಗೆ ಹೆಂಡತಿಯನ್ನು ಏರ್ ಪೋರ್ಟ್ ಗೆ ಒಯ್ದು ಬಿಡುವದು ಮತ್ತು ಕರೆದು ತರಲು ಮಾತ್ರ ಹೋಗುತ್ತಿದ್ದರು.
ಈ ಐದು ವರ್ಷಗಳ ನಂತರ ನೀರಜ್ ಏನಾದರೊಂದು ಬಿಜಿನೆಸ್ ಮಾಡಬೇಕು ಎಂದು ವಿಚಾರ ಮಾಡಹತ್ತಿದನು. ಅದರ ನಂತರ ಮಾತ್ರ ಯಶಸ್ಸು ಆತನ ಬೆನ್ನು ಹತ್ತಿದ್ದೇ ಹತ್ತಿದ್ದು. 1999 ರಲ್ಲಿ ಪತ್ನಿಯಿಂದ 50,000 ರೂಪಾಯಿಗಳನ್ನು ಪಡೆದು ಮಿತ್ರನೊಂದಿಗೆ ಇಲಿಟ್ ಕ್ಲಾಸ್ ಹೆಸರಿನ ಗ್ಯಾರೇಜ್ ಓಪನ್ ಮಾಡಿದರು. ಕೆಲಸ ಮಾಡುತ್ತ ಮಾಡುತ್ತ ಕಾರ್ಪೊರೇಟ್ ಕಂಪನಿಗಳ ಜೊತೆಗೆ ಲಾಂಗ್ ಟರ್ಮ್ ಕಾಂಟ್ರಾಕ್ಟ್ ಮಾಡಿಕೊಂಡ ನಂತರ ಮುಂದೆ 8-9 ತಿಂಗಳುಗಳಲ್ಲಿ ದೊಡ್ಡ ದೊಡ್ಡ ಕಂಪನಿಗಳಾದ ಬ್ಲೂ ಡಾರ್ಟ್ ಮತ್ತು ಸೋನಿ ಯಂತಹವರು ಇವರ ಗ್ರಾಹಕರಾದರು. ಮುಂದೆ ಈ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಕೆಲಸಕ್ಕಾಗಿ ಹೋಗಿ ಬರಲು 2001 ರಲ್ಲಿ 14 ಲಕ್ಷ ರೂಪಾಯಿಗಳ ಲೋನ್ ಮಾಡಿ ಒಂದು ಬಸ್ ಖರೀದಿಸಿ ತಮ್ಮ ಸೇವೆಯನ್ನು ಆರಂಭಿಸಿದರು, ಜೊತೆಗೆ ಟಾಟಾ ಗ್ರೂಪ್ ನವರೊಂದಿಗೆ ಕಲೆತು ಶಟಲ್ ಸರ್ವಿಸ್ ಕೊಡಲು ಮುಂದಾದರು. ಹೀಗೆ 6 ವರ್ಷಗಳ ನಂತರ ಮೇರು ಹೆಸರಿನ ಕ್ಯಾಬ್ ಸೇವೆ ಆರಂಭಿಸಿದರು.


ಮೇರು ಕ್ಯಾಬ್ ಪ್ರಾರಂಭಿಸಿದ ನಂತರ ಭಾರತದ ಮೊದಲ ಮೀಟರ್ ರೇಡಿಯೋ ಕ್ಯಾಬ್ ಸೇವೆ ಒದಗಿಸಲು ಹಣದ ಹೂಡಿಕೆಯ ದೊಡ್ಡ ಸಮಸ್ಯೆ ಇತ್ತು. ಪ್ರೈವೇಟ್ ಇಕ್ವಿಟಿ ಇನ್ವೆಸ್ಟಮೆಂಟ್ ಆಕರ್ಷಿಸಲು ನೀರಜ್ ಎರಡು ಚಿಕ್ಕ ಕಂಪನಿಗಳನ್ನು ತೆಗೆಯುವ ಬಗ್ಗೆ ವಿಚಾರ ಮಾಡಿದನು. ಅದರ ಪ್ರಕಾರ ಮೊದಲನೆಯದು ವಿ-ಲಿಂಕ್ ಸೊಲ್ಯೂಷನ್ ಇದರಲ್ಲಿ ಬೇರೆ ಬೇರೆ ಬಿಪಿಓ ದಲ್ಲಿ ಜನರಿಗೆ ಓಡಾಡಲು, ಇನ್ನೊಂದು ವಿ-ಲಿಂಕ್ ಟ್ಯಾಕ್ಸಿಜ್ (AC) ಮುಂಬಯಿ ರಸ್ತೆ ಮೇಲೆ ಓಡಾಡಲು ಸಿದ್ಧ ಮಾಡಿದನು.
ನೀರಜ್ ಅವರ ಈ ಐಡಿಯಾ ಇಷ್ಟೊಂದು ಸೂಪರ್ ಆಗಿತ್ತು. ಹೇಗೆ ಅಂತ ಹೇಳೋದಾದ್ರೆ 2006 ರಲ್ಲಿ ಇಂಡಿಯಾ ವ್ಯಾಲ್ಯೂ ಹೆಸರಿನ ಕಂಪನಿ ಇವರ ಕಂಪನಿಯಲ್ಲಿ 200 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡಿತು. ಇಂದು ಮೇರು ಕ್ಯಾಬ್ಸ್ ನಲ್ಲಿ ಸುಮಾರು 9,000 ಕಾರುಗಳು, ದಿನಂಪ್ರತಿ 6 ಪಟ್ಟಣಗಳಲ್ಲಿ ತನ್ನ ಕೆಲಸ ನಿರ್ವಹಿಸುತ್ತಿವೆ. ಇವರ ವಾರ್ಷಿಕ ಟರ್ನ್ ಓವರ್ 800 ಕೋಟಿ ರೂಪಾಯಿಗಳದ್ದಾಗಿದೆ. ಅಷ್ಟೇ ಅಲ್ಲ ಮಹಿಳೆಯರಿಗಾಗಿ ವಿಶೇಷ ಕ್ಯಾಬ್ ಸರ್ವಿಸ್ ಸಹಿತ ಪ್ರಾರಂಭಿಸಿದ್ದಾರೆ,ಅದರಲ್ಲಿ ಡ್ರೈವರ್ ಮಹಿಳೆಯರೇ ಇದ್ದಾರೆ.
ನೀರಜ್ ಪ್ರಕಾರ ಮನುಷ್ಯನ ಆಕಾಂಕ್ಷೆ ಇಚ್ಛೆ ಸ್ಪಷ್ಟವಾಗಿದ್ದು, ಸತತ ಪ್ರಯತ್ನಗಳ ಸಹಾಯದಿಂದ ಮಾಡುವ ಕೆಲಸದಲ್ಲಿ ವಿಶ್ವಾಸ ಹೊಂದಿದ್ದಾರೆ ಯಾವುದು ಅಸಾಧ್ಯವಿಲ್ಲ ಎನ್ನುತ್ತಾರೆ. ಇವರ ಪ್ರಯತ್ನ ಮತ್ತು ಯಶಸ್ಸು ಏನಾದರೂ ಮಾಡಬೇಕೆನ್ನುವವರಿಗೆ ನಿಜಕ್ಕೂ ಅದಮ್ಯ ಪ್ರೇರಣೆ ಮತ್ತು ಛಲ ನೀಡುವದಾಗಿದೆ.