VIDEO : ಸ್ಟಂಪ್ಸ್ ಗೆ ಒದ್ದು ಅಂಪೈರ್ ಗೆ ಹೊ ಡೆಯಲು ಹೋದ ಶಕೀಬ್ ಅಲ್ ಹಸನ್! ಎರಡು ವಿಡಿಯೊ ನೋಡಿ…
ಇಲ್ಲಿ ಎರಡು ವಿಡಿಯೊ ಇವೆ : ವಿಶ್ವ ಕ್ರಿಕೆಟ್ ನ ಕೆಲವೇ ಕೆಲವು ಪ್ರಸಿದ್ದ ಆಲ್ರೌಂಡರ್ ಗಳಲ್ಲಿ ಒಬ್ಬರಾಗಿರುವ ಪಕ್ಕದ ಬಾಂಗ್ಲಾ ದೇಶದ ಶಕೀಬ್ ಅಲ್ ಹಸನ್ ಅವರು ಇಂದು ತಮ್ಮದೇ ದೇಶದಲ್ಲಿ ನಡೆದ ಒಂದು ಟಿ-20 ಮ್ಯಾಚ್ ನಲ್ಲಿ ಸ್ಟಂಪ್ಸ್ ಗೆ ಒದ್ದು ಅಂಪೈರ್ ಮೇಲೂ ಕೈ ಮಾಡಲು ಮುಂದೆ ಬಂದು ತೀರ ಕೆ’ಟ್ಟ ರೀತಿಯಲ್ಲಿ ನಡೆದುಕೊಂಡು ಸುದ್ದಿಯಲ್ಲಿದ್ದಾರೆ, ಬನ್ನಿ ಅದೇನೆಂದು ನೋಡೋಣ..
ತನ್ನದೇ ದೇಶದ ನೆಲದಲ್ಲಿ ನಡೆದ ಒಂದು ಟಿ-20 ಪಂದ್ಯದಲ್ಲಿ ಕೋ’ಪಗೊಂಡ ಬಾಂಗ್ಲಾ ದೇಶದ ಸ್ಟಾರ್ ಆಟಗಾರ ಶಕೀಬ್ ಅಲ್ ಹಸನ್ ಅವರು ಕೋಪದಿಂದ ಸ್ಟಂಪ್ಸ್ ಗೆ ಒದ್ದು ನಂತರ ಅಂಪೈರ್ ರನ್ನೂ ಕೂಡ ಹೊ ಡೆಯಲು ಹೋದರು, ನಂತರ ಶಾಂತವಾದ ಮೇಲೆ ಕ್ಷಮೆ ಯಾಚಿಸಿದ ಘಟನೆ ನಡೆದಿದೆ.
ಶಕೀಬ್ ಅವರ ಸಿಟ್ಟು ಅಂಪೈರ್ ರ ಕೆಟ್ಟ ನಿರ್ವಹಣೆಯಾಗಲಿ ಅಥವಾ ತಮ್ಮ ಕೆ’ಟ್ಟ ಆಟದಿಂದಾಗಲಿ ಅಲ್ಲ, ಬದಲಿಗೆ ಢಾಕಾ ಪ್ರೀಮಿಯರ್ ಲೀಗ್ ನಲ್ಲಿ ಶಕೀಬ್ ಅಲ್ ಹಸನ್ ಪ್ರತಿನಿಧಿಸಿದ್ದ ಮೊಹಮ್ಮದ್ ಸ್ಪೋರ್ಟಿಂಗ್ ಟೀಮ್ ಅಬಾಹಾನಿ ಲಿಮಿಟೆಡ್ ಟೀಮ್ ನ ವಿರುದ್ಧ ಡಕ್ ವರ್ಥ್ ಲೂಯಿಸ್ ನಿಯಮದಡಿಯಲ್ಲಿ ಸೋತಿತ್ತು.
Shakib Al Hasan could be in for a lengthy ban after this incident in the Dhaka Premier League.pic.twitter.com/hiAD7IiVyT
— 🏏FlashScore Cricket Commentators (@FlashCric) June 11, 2021
ಇದೆ ಕಾರಣಕ್ಕೆ ತಡೆಯಲಾರದ ಸಿ’ಟ್ಟಿನಿಂದ ಶಕೀಬ್ ಅವರು ಸ್ಟಂಪ್ಸ್ ಗೆ ಒದ್ದರು ಹಾಗೂ ಅಂಪೈರ್ ಮೇಲೆ ಕೈ ಮಾಡಲು ಹೋದರು. ಬಾಂಗ್ಲಾ ದೇಶದ ಸ್ಟಾರ್ ಆಟಗಾರ ಈ 34 ವರ್ಷದ ಅನುಭವಿ ಶಕೀಬ್ ಅಲ್ ಹಸನ್ ಅವರು ಈ ಘಟನೆ ನಡೆದ ಕೂಡಲೇ ಕ್ಷಮೆ ಯಾಚಿಸಿದ್ದಾರೆ.
ಆದರೆ ಸ್ಟಂಪ್ಸ್ ಗೆ ಒದೆಯುವುದು ಗಂಭೀರ ಪ್ರಕರಣವಾಗಿದ್ದು ಅವರಿಗೆ ಹಲವು ಪಂದ್ಯಗಳ ನಿ’ಷೇ’ಧ ಹೇರುವ ಸಾಧ್ಯತೆ ಇದೆ. ಶಕೀಬ್ ಅವರು ತಮ್ಮ ಫೇಸ್ಬುಕ್ ಪೇಜ್ ನಲ್ಲಿಯೂ ಕೂಡ ಬಹಿರಂಗ ಕ್ಷಮೆ ಯಾಚಿಸಿದ್ದು “ಪ್ರಿಯ ಬೆಂಬಲಿಗರೇ, ಅಭಿಮಾನಿಗಳೆ ಇಂದು ನಾನು ಮಾಡಿರುವುದು ಕ್ಷಮಿಸಲಾರದ ತಪ್ಪು” ಎಂದಿದ್ದಾರೆ.
“ಆದರೂ ಸಹ ತಾವು ದೊಡ್ಡ ಮನಸ್ಸು ಮಾಡಿ ಕ್ಷಮಿಸಿ ಇನ್ನೂ ಮುಂದೆ ಇಂತಹ ಘಟನೆ ಯಾವತ್ತೂ ನಡೆಯುವುದಿಲ್ಲ, ಇದೆ ರೀತಿಯಲ್ಲಿ ಈ ಟೂರ್ನಮೆಂಟ್ ನ ಆಯೋಜಕರು, ಅಧಿಕಾರಿಗಳು, ಅಂಪೈರ್ ಗಳು ಅಷ್ಟೇ ಅಲ್ಲದೇ ಉಳಿದ ತಂಡದ ಆಟಗಾರರಲ್ಲಿಯೂ ನಾನು ಕ್ಷಮೆ ಯಾಚಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಶೇರ್ ಎ ಬಾಂಗ್ಲಾ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಮುಶ್ಪಿಕರ್ ರಹೀಮ್ ಅವರ ವಿರುದ್ಧ ಎಲ್ ಬಿ ಡಬ್ಲ್ಯೂ ಗಾಗಿ ಮನವಿ ಮಾಡಿದರು, ಆದರೆ ಅದನ್ನು ಅಂಪೈರ್ ಪುರಸ್ಕರಿಸಲಿಲ್ಲ, ಇದು ಒಂದು ಕಾರಣವಾಗಿತ್ತು, ಇದರಿಂದ ಕು’ಪಿತಗೊಂಡು ಸ್ಟಂಪ್ ಗೆ ಕಾಲಿಂದ ಒ’ದ್ದರು.
ಇಷ್ಟೇ ಅಲ್ಲದೇ ಮಳೆ ಬಂದ ಕಾರಣ ಅಬಹಾನಿ ಟೀಮ್ ನ ಆರನೇ ಓವರ್ ನ ಐದನೇ ಎಸೆತದ ನಂತರ ಪಂದ್ಯವನ್ನು ನಿಲ್ಲಿಸುವಂತೆ ತೀರ್ಪು ನೀಡಿದರು, ಇದರಿಂದ ಮತ್ತಷ್ಟು ಕೋಪಗೊಂಡ ಶಕೀಬ್ ಅವರು ಮತ್ತೊಮ್ಮೆ ಸ್ಟಂಪ್ಸ್ ಗೆ ಒದ್ದರು.
How long a ban should Shakib Al Hasan get for this incident? pic.twitter.com/Sx9H2UjXTn
— 🏏FlashScore Cricket Commentators (@FlashCric) June 11, 2021
ಸದ್ಯ ಈ ಎರಡು ಘಟನೆಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಶಕೀಬ್ ಅವರ ಈ ಸಿಟ್ಟಿಗೆ ಮುಖ್ಯ ಕಾರಣವೆಂದರೆ, ಆ ಆರನೇ ಓವರ್ ನ ಕೊನೆ ಎಸೆತವೊಂದು ಎಸೆತ ಕಂಡಿದ್ದರೆ ಪಂದ್ಯದ ದಿಕ್ಕೇ ಬದಲಾಗುತ್ತಿತ್ತಂತೆ..!
ಬಾಂಗ್ಲಾ ಪರ ವ್ಯಯಕ್ತಿಕ ಹತ್ತು ಸಾವಿರ ರನ್ ಹಾಗೂ 600 ವಿಕೆಟ್ ಪಡೆದ ಯಶಸ್ವಿ ಆಟಗಾರ ನಿಷೇಧ ಭೀತಿ ಎದುರಿಸುತ್ತಿರುವುದು ಇದೆ ಮೊದಲೆನಲ್ಲ, ಬದಲಾಗಿ ಈ ಹಿಂದೆಯೇ ಫಿಕ್ಸಿಂಗ್ ವಿಷಯವಾಗಿ ಬರೋಬ್ಬರಿ ಎರಡು ವರ್ಷ ನಿ’ಷೇ’ಧ ಶಿಕ್ಷೆ ಅನುಭವಿಸಿದ್ದಾರೆ.
-ಮಂಜುನಾಥ್