ನಮ್ಮ ಮೇಕ್ ಇನ್ ಇಂಡಿಯಾ ಉತ್ಪಾದನೆಗಳನ್ನು ಅವಮಾನಿಸಿದ ಬಾಂಗ್ಲಾದೇಶಕ್ಕೆ ದಕ್ಷಿಣ ಕೋರಿಯಾ ಕೊಟ್ಟ ಏಟು ಹೇಗಿತ್ತು ನೋಡಿ!

ಭಾರತ ಇತ್ತೀಚೆಗೆ ತಂತ್ರಜ್ಞಾನ ಹಾಗೂ ವಾಹನಗಳ ವಿಷಯದಲ್ಲಿ ಹೆಚ್ಚು ಹೆಚ್ಚು ಸ್ವಾವಲಂಬಿಯಾಗಲು ಪ್ರಯತ್ನ ಮಾಡುತ್ತಿದೆ. ಇದರ ಪ್ರತೀಕ ಎಂಬಂತೆ “ಮೇಕ್ ಇನ್ ಇಂಡಿಯಾ” ಎಂಬ ಅಭಿಯಾನ ಶುರು ಮಾಡಿ ಆದಷ್ಟು ವಿದೇಶಿ ವಸ್ತುಗಳ ಆಮದು ಪ್ರಮಾಣ ಕಡಿಮೆ ಮಾಡಿಕೊಂಡಿದೆ. ಅಷ್ಟೇ ಅಲ್ಲದೇ ಈ ಅಭಿಯಾನದಲ್ಲಿ ತುಂಬಾ ಯಶಸ್ಸು ಕೂಡ ಕಾಣುತ್ತಿದೆ. ಇಷ್ಟೇ ಅಲ್ಲದೇ ಬೇರೆ ಬೇರೆ ದೇಶಗಳು ಕೂಡ ಮೇಕ್ ಇನ್ ಇಂಡಿಯಾ ವಸ್ತುಗಳ ಖರೀದಿಗೆ ಮನಸ್ಸು ಮಾಡುತ್ತಿವೆ.

ಆದರೆ ಕಳೆದ ವರ್ಷ ಭಾರತ ಪಕ್ಕದ ಬಾಂಗ್ಲಾ ದೇಶಕ್ಕೆ 10 ಬ್ರಾಡ್ ಗೇಜ್ ಡೀಸೆಲ್ ಲೋಕೋಮೋಟಿವ್ ರೈಲ್ವೆ ಎಂಜಿನ್ ಗಳನ್ನು ಕೊಟ್ಟಿತ್ತು, ಅವು ಕೂಡ ಉಚಿತವಾಗಿ ನೀಡಲಾಗಿತ್ತು ಎಂದು ಕೆಲವು ವರದಿಗಳು ಹೇಳಿದರೆ ಇನ್ನೂ ಕೆಲವು ವರದಿಗಳಲ್ಲಿ ಅತ್ಯಂತ ಕಡಿಮೆ ಇಂಟರೆಸ್ಟ್ ರೇಟ್ ನಲ್ಲಿ ಬಾಂಗ್ಲಾದೇಶಕ್ಕೆ ಭಾರತ ಈ ಲೋಕೋಮೋಟಿವ್ ಗಳನ್ನು ಎಕ್ಸ್ಪೋರ್ಟ್ ಮಾಡಿದೆ ಎಂದು ಹೇಳಲಾಗುತ್ತಿದೆ.

ಈ ಡೀಸೆಲ್ ಲೋಕೋಮೋಟಿವ್ ಎಂಜಿನ್ ಗಳ ಲೈಫ್ ಇನ್ನೂ ಕನಿಷ್ಠ 25 ರಿಂದ 30 ವರ್ಷ ಬಾಕಿ ಇದೆ, ಅಂದರೆ ಅವು ಒಳ್ಳೆ ಕಂಡಿಷನ್ ನಲ್ಲೇ ಇದ್ದವು, ಒಟ್ಟಿನಲ್ಲಿ ಇದರಿಂದ ಬಾಂಗ್ಲಾದೇಶಕ್ಕೆ ಸಹಾಯವಾಗಿತ್ತೇ ಹೊರತು ಭಾರತಕ್ಕಲ್ಲ. ಆದರೆ ಮಾಡಿದ ಸಹಾಯವನ್ನು ನೆನೆಸಿಕೊಳ್ಳುವ ಗುಣ ಭಾರತಕ್ಕಾಗಲಿ ಪಕ್ಕದ ಪಾಕಿಸ್ತಾನಕ್ಕಾಗಲಿ ಯಾವತ್ತೂ ಇಲ್ಲ.

ಬಡ ಬಾಂಗ್ಲಾ ದೇಶ ಇವುಗಳನ್ನು ತಮ್ಮ ಎಮರ್ಜೆನ್ಸಿ ಸಮಯದಲ್ಲಿ ಬಳಸಿಕೊಳ್ಳಲಿ ಎಂಬುದು ಭಾರತದ ಆಶಯವಾಗಿತ್ತು. ಇಷ್ಟೊಂದು ಪರ್ಫೆಕ್ಟ್ ಆಗಿರುವ ಹಾಗೂ ಇಷ್ಟು ಒಳ್ಳೆಯ ಕಂಡೀಶನ್ ನಲ್ಲಿರುವ ಲೋಕೋಮೋಟಿವ್ ಗಳು ಬಾಂಗ್ಲಾ ದೇಶಕ್ಕೆ ಯಾವ ದೇಶದಿಂದಲೂ ಸಿಗಲು ಸಾಧ್ಯವಿರಲಿಲ್ಲ. ಅಷ್ಟೇ ಅಲ್ಲದೇ ಭಾರತದಲ್ಲಿ ನಿರ್ಮಿತವಾದ ಇಂತಹ ಹಲವಾರು ಡೀಸೆಲ್ ಲೋಕೋಮೋಟಿವ್ ಗಳು ಇಂದಿಗೂ ಸಹ ಬಾಂಗ್ಲಾ ದೇಶದಲ್ಲಿ ಓಡುತ್ತಿವೆ.

ಆದರೆ ಇದನ್ನೆಲ್ಲ ಮರೆತಂತಿರುವ ಬಾಂಗ್ಲಾ ದೇಶ, ಭಾರತ ಕೊಟ್ಟ ಒಳ್ಳೆ ಎಂಜಿನ್ ಗಳನ್ನು ಗರಾಜಿನಲ್ಲಿ ನಿಲ್ಲಿಸಿ, ಮತ್ತೆ ಹತ್ತು ಲೋಕೋಮೋಟಿವ್ ಗಳನ್ನು ಖರೀದಿಸಲು ಭಾರತದ ಬದಲಾಗಿ ದಕ್ಷಿಣ ಕೊರಿಯಾ ದೇಶಕ್ಕೆ ಆರ್ಡರ್ ನೀಡಿತು. ಡಿಸೆಂಬರ್ 2020 ರಲ್ಲಿ 10 ಡೀಸೆಲ್ ಲೋಕೋಮೋಟಿವ್ ಗಳು ದಕ್ಷಿಣ ಕೊರಿಯಾದಿಂದ ಬಾಂಗ್ಲಾ ದೇಶಕ್ಕೆ ಬಂದವು.

ಆದರೆ ಇವುಗಳನ್ನು ರೈಲ್ವೆ ವರ್ಕ್ ಶಾಪ್ ನಲ್ಲಿ ಇನ್ಸ್ಪೆಕ್ಷನ್ ಮಾಡಿ ನೋಡಿದಾಗ ಅವುಗಳು ಬಾಂಗ್ಲಾ ದೇಶ ಆರ್ಡರ್ ಕೊಟ್ಟಂತ ಅಗ್ರಿಮೆಂಟ್ ನಲ್ಲಿ ಇರಬೇಕಾದ ಫೀಚರ್ಸ್ ಹೊಂದಿರಲೇ ಇಲ್ಲ! ಅಲ್ಟರ್ನೆಟರ್, ಕಾಂಪ್ರೆಸರ್ ಹಾಗೂ ಟ್ರಾಕ್ಷನ್ ಮೋಟರ್ಸ್ ಎಂಬ ಮೂರು ಫೀಚರ್ಸ್ ಇರಲೇ ಇಲ್ಲ!

ಅಗ್ರಿಮೆಂಟ್ ನಲ್ಲಿ ಇರುವಂತೆ TA-12 C-9 ಮಾಡೆಲ್ ನ ಅಲ್ಟರ್ನೆಟರ್ ಹಾಕಬೇಕಿತ್ತು, ಆದರೆ ದಕ್ಷಿಣ ಕೊರಿಯಾದಿಂದ ಬಂದಂತ ಲೋಕೋಮೋಟಿವ್ ಗಳಲ್ಲಿ TA-912 CA-9 ಮಾಡೆಲ್ ಅಲ್ಟರ್ನೆಟಿವ್ ಗಳನ್ನು ಹಾಕಲಾಗಿತ್ತು. ಈ ರೀತಿಯಲ್ಲಿ ಬೇರೆ ಬೇರೆ ಅಲ್ಟರ್ನೇಟಿವ್ ಗಳನ್ನು ಹಾಕುವದರಿಂದ ಬ್ರಾಡ್ ಗೇಜ್ ಟ್ರ್ಯಾಕ್ ಮೇಲೆ ಇಂತಹ ಭೋಗಿಗಳನ್ನು ನಡೆಸಲು ಸಾಧ್ಯವಿಲ್ಲ.

ಈ ಕಾರಣದಿಂದ ಅವುಗಳು ದಕ್ಷಿಣ ಕೊರಿಯಾದಿಂದ ಬಾಂಗ್ಲಾ ದೇಶಕ್ಕೆ ಬಂದಾಗಿನಿಂದ ನಿಂತಲ್ಲಿಯೇ ನಿಂತಿವೆ ಹೊರತು ಒಂದೇ ಒಂದು ಲೋಕೋಮೋಟಿವ್ ಕೂಡ ಟ್ರ್ಯಾಕ್ ಗೆ ಇಳಿದಿಲ್ಲ. ಈ ಹತ್ತು ಲೋಕೋಮೋಟಿವ್ ಗಳನ್ನು ಪರೀಕ್ಷೆ ಮಾಡುವ ಮುನ್ನವೇ ಬಾಂಗ್ಲಾ ದೇಶ ದಕ್ಷಿಣ ಕೊರಿಯಾಗೆ ಪೇಮೆಂಟ್ ಕೂಡ ಮಾಡಿ ಮುಗಿಸಿದೆ!

ಸದ್ಯ ಬಾಂಗ್ಲಾ ರೈಲ್ವೆ ಅಧಿಕಾರಿಗಳ ಪ್ರಕಾರ ಈ ಎಂಜಿನ್ ಗಳು ಟ್ರ್ಯಾಕ್ ಗೆ ಇಳಿಸಲು ಸಾಧ್ಯವೇ ಇಲ್ಲವಂತೆ. ಹೀಗಾಗಿ ಇವುಗಳನ್ನು ಖರೀದಿಸಿದ್ದು ಪೂರ್ತಿ ವ್ಯರ್ಥವಾಗಿದೆ. ಇನ್ನು ಭಾರತದ ಉದಾರ ನೀತಿಯಿಂದ ದಕ್ಕಿದ ಆ ಹತ್ತು ಒಳ್ಳೆಯ ಕಂಡೀಶನ್ ನಲ್ಲಿಯೇ ಇದ್ದ ರೈಲ್ವೆ ಲೋಕೋಮೋಟಿವ್ ಗಳ ಬಗ್ಗೆ ಅಲ್ಲಿನ ಮೀಡಿಯಾಗಳು ಸೆಕೆಂಡ್ ಹ್ಯಾಂಡ್ ಎಂದು ಬಹಳಷ್ಟು ಟೀಕಿಸಿದ್ದವು.

ಇದಷ್ಟೇ ಅಲ್ಲದೇ ಭಾರತ ಆ ದೇಶಕ್ಕೆ ಬರೋಬ್ಬರಿ 1.2 ಮಿಲಿಯನ್ ಕೊರೊನ ವ್ಯಾಕ್ಸಿನ್ ಕೂಡ ಫ್ರಿಯಾಗಿ ಕೊಟ್ಟಿದೆ, ಈ ಎಲ್ಲಾ ಸಹಾಯ ಮರೆತು ಭಾರತದ ಮೇಕ್ ಇನ್ ಇಂಡಿಯಾ ಲೋಕೋಮೋಟಿವ್ ಗಳನ್ನು ಅವಮಾನಿಸಿದೆ. ಈ ದೇಶಕ್ಕೆ ದಕ್ಷಿಣ ಕೊರಿಯಾ ಸರಿಯಾದ ಪಾಠವನ್ನೇ ಕಲಿಸಿದೆ ಎಂದರೆ ತಪ್ಪಾಗಲಾರದು.

ಭಾರತ ನಿರ್ಮಿತ ಡೀಸೆಲ್ ಲೋಕೋಮೋಟಿವ್ ಗಳನ್ನು ಬಹಳಷ್ಟು ದೇಶಗಳು ಆಮದು ಮಾಡಿಕೊಳ್ಳುತ್ತಿವೆ, ಅಷ್ಟೇ ಅಲ್ಲದೇ ಇವುಗಳ ಕ್ವಾಲಿಟಿ ಕೂಡ ಒಳ್ಳೆಯ ಕ್ವಾಲಿಟಿ ಎಂದು ಪ್ರೂವ್ ಆಗಿದೆ, ಅದರಲ್ಲಿ ಈ ಬಾಂಗ್ಲಾ ದೇಶ ಕೂಡ ಒಂದು, ಆದರೂ ಇಂತ ಭಂಡತನವನ್ನು ಮೆರೆದಿದೆ. ಭಾರತ ತಯಾರಿಸಿದ ಎಂಜಿನ್ ಗಳು ಕಳಪೆ ಮಟ್ಟದ್ದಾಗಿವೆ ಎಂದು ಬಳಸದೇ ಹಾಗೇ ನಿಲ್ಲಿಸಿದೆ

ಅತ್ತ ದಕ್ಷಿಣ ಕೋರಿಯಾ ಕಳಿಸಿದ ಎಂಜಿನ್ ಗಳು ನಿಜಕ್ಕೂ ಬಳಸಲು ಯೋಗ್ಯವಾಗಿಲ್ಲ, ಆಲ್ರೆಡಿ ಬಹುತೇಕ ಪೇಮೆಂಟ್ ಸಿಕ್ಕಿರುವುದರಿಂದ ರಿಪ್ಲೆಶ್ ಮೆಂಟ್ ಅಂಥವಾ ಅಪ್ ಗ್ರೇಡ್ ಮಾಡಲು ದಕ್ಷಿಣ ಕೋರಿಯಾ ತಲೆ ಕೆಡಿಸಿಕೊಂಡಿಲ್ಲ! ಈ ಬಾಂಗ್ಲಾ ದೇಶ ಎಷ್ಟೋ ವಸ್ತುಗಳಿಗಾಗಿ ಭಾರತದ ಮೇಲೆಯೇ ಅವಲಂಬಿತವಾಗಿದೆ ಆದರೂ ದಿಮಾಕು ಮಾಡುವುದನ್ನು ಮಾತ್ರ ಬಿಡುವುದಿಲ್ಲ.
-ಮಂಜುನಾಥ್