ನೆಲದ ಮೇಲೆ ಬಿದ್ದ ಒಣ ಎಲೆ ಇದ್ದಕ್ಕಿದ್ದಂತೆ ಚಿಟ್ಟೆಯಾಯಿತು! ವೈರಲ್ ವಿಡಿಯೋ ನೋಡಿ

ನೀವು ಇಲ್ಲಿಯವರೆಗೆ ಸೋಷಿಯಲ್ ಮೀಡಿಯಾದಲ್ಲಿ ಅನೇಕ ವೀಡಿಯೊಗಳನ್ನು ನೋಡಿರಬೇಕು, ಅವುಗಳಲ್ಲಿ ಕೆಲವು ತಮಾಷೆಯ – ಕೆಲವು ಮನರಂಜನೆಯ, ಕೆಲವು ಸಾಹಸಮಯ ಹಾಗೂ ಕೆಲವು ಆಘಾತಕಾರಿಯಾಗಿರಬಹುದು. ಇಂದು ನಾವು ಸಹ ಇದೇ ರೀತಿಯ ವೀಡಿಯೊವನ್ನು ನಿಮಗೆ ತೋರಿಸಲಿದ್ದೇವೆ. ಈ ವೀಡಿಯೊ ನಿಮಗೆ ಅಚ್ಚರಿ ಮೂಡಿಸುವುದು ಪಕ್ಕಾ.

ಈ ವೀಡಿಯೊ ಈ ಸಮಯದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಜನರು ಈ ವೈರಲ್ ವೀಡಿಯೊವನ್ನು ನೋಡಿ ಆಶ್ಚರ್ಯ ಪಡುತ್ತಿದ್ದಾರೆ. ನೆಲದ ಮೇಲೆ ಒಂದು ಒಣಗಿದ ೆಲೆ ಬಿದ್ದಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಇದು ಇದ್ದಕ್ಕಿದ್ದಂತೆ ಚಿಟ್ಟೆಯ ಆಕಾರವನ್ನು ತೆಗೆದುಕೊಳ್ಳುತ್ತದೆ.

ಒಬ್ಬ ವ್ಯಕ್ತಿಯು ನೆಲದ ಮೇಲೆ ಬಿದ್ದ ಒಣ ಎಲೆಯನ್ನು ಮುಟ್ಟಿದಾಗ, ಇದ್ದಕ್ಕಿದ್ದಂತೆ ಅದು ಚಿಟ್ಟೆ ಆಗಿ ಹಾರಲು ಪ್ರಾರಂಭಿಸುವುದನ್ನು ನೀವು ಈ ವೀಡಿಯೊದಲ್ಲಿ ನೋಡಬಹುದು. ಕೆಲವು ಜನರು ಈ ವೈರಲ್ ವೀಡಿಯೊವನ್ನು ಮ್ಯಾಜಿಕ್ ಅಥವಾ ವಿಡಿಯೋ ಎಡಿಟಿಂಗ್ ಎಂದು ಪರಿಗಣಿಸುತ್ತಿದ್ದಾರೆ, ಆದರೆ ಇದರಲ್ಲಿ ಎಡಿಟಿಂಗ್ ಅಥವಾ ಯಾವುದೇ ಮ್ಯಾಜಿಕ್ ಇಲ್ಲ.

ಈ ಚಿಟ್ಟೆ ಮಾತ್ರವಲ್ಲ, ಹೀಗೆ ಎಲೆಯಂತೆ ಕಾಣುವ ಹಲವು ಜೀವಿಗಳು ಇವೆ. ಎಲೆಗಳ ಜೊತೆ ಎಲೆಯಾಗಿ, ಕಾಂಡಗಳ ಜೊತೆ ಕಾಂಡವಾಗಿ, ಗಿಡದಲ್ಲಿ ಬೆಳೆದ ಬೂಸ್ಟಿನ ತಾನೂ ಅದೇ ಬೂಸ್ಟ್ ಆಗಿ ಹೀಗೆ ತನ್ನ ಸುತ್ತಮುತ್ತಲಿನ ಪರಿಸರಕ್ಕೆ ತಕ್ಕನಾಗಿ ಇರುವ ಸಾಕಷ್ಟು ಜೀವಿಗಳನ್ನು ನಾವು ನೋಡಬಹುದು. ಇವುಗಳಿಗೆ Leaf Tailed Lizard ಎನ್ನಲಾಗುತ್ತದೆ.

ಈ ವೀಡಿಯೊವನ್ನು ಕಿರಣ್ ಮಜುಂದಾರ್ ಶಾ ಹಂಚಿಕೊಂಡಿದ್ದಾರೆ. ಈಗ ಜನರು ಇದನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಇಲ್ಲಿಯವರೆಗೆ ಈ ವೀಡಿಯೊ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಜೊತೆಗೆ 3000 ಕ್ಕೂ ಹೆಚ್ಚು ಲೈಕ್‌ ಗಳನ್ನು ಪಡೆದಿದೆ. ವಿಡಿಯೊ ಮೇಲಿದೆ ನೋಡಿ.
-Team Infotrend