ಭಾರತೀಯ ಸೈನ್ಯದಲ್ಲಿ ಮೂರು ವರ್ಷಗಳವರೆಗೆ ನೀವೂ ಸೇವೆ ಸಲ್ಲಿಸಬಹುದು! ಸೇನೆ ತರುತ್ತಿದೆ ಇಂಥದ್ದೊಂದು ಪ್ಲಾನ್!!

Indian Army: ಭಾರತೀಯ ಯುವಕರು ಮೂರು ವರ್ಷಗಳವರೆಗೆ ಸೈನ್ಯದಲ್ಲಿ ಭರ್ತಿ ಮಾಡಿಕೊಳ್ಳುವ ಪ್ರಸ್ತಾವನೆಯ ಮೇಲೆ ವಿಚಾರ ಮಾಡುತ್ತಿದೆ. ನೀವು ಪರಿಪೂರ್ಣವಾಗಿ ಫಿಟ್ ಇದ್ದಿದ್ದೀರಾ ಮತ್ತು ನಿಮ್ಮ ಹತ್ತಿರ ಸೈನ್ಯದಲ್ಲಿ ಕೆಲಸ ಮಾಡುವ ಯೋಗ್ಯತೆ ಇದೆ, ಹಾಗಾದರೆ ನಿಮಗೆ ಈ ಸುಸಂಧಿ ದೊರೆಯಬಹುದಾಗಿದೆ. ಒಂದು ವರದಿಯ ಪ್ರಕಾರ ‘ಟೂರ್ ಆಫ್ ಡ್ಯೂಟಿ’ ಹೆಸರಿನ ಒಂದು ಪ್ರಸ್ತಾವನೆಯನ್ನು ತಯಾರಿಸಿದ್ದಾರೆ, ಅದನ್ನೀಗ ಸರಕಾರದ ಮುಂದೆ ಮಂಡಿಸುವ ವಿಚಾರ ನಡೆದಿದೆ. ಒಂದು ವೇಳೆ ಸರಕಾರ ಇದಕ್ಕೆ ಹಸಿರು ನಿಶಾನೆ ತೋರಿಸಿದರೆ ದೊಡ್ಡ ಸಂಖ್ಯೆಯಲ್ಲಿ ಯುವಕರು ಸೈನ್ಯದಲ್ಲಿ ಭರ್ತಿಯಾಗುವ ಕನಸು ಈಡೇರಬಹುದು.
ವರದಿಯ ಪ್ರಕಾರ ಸೈನ್ಯದಲ್ಲಿಯ ಮೇಲಾಧಿಕಾರಿಗಳು ಸದ್ಯಕ್ಕೆ ಈ ‘ಗೇಮ್ ಚೇಂಜಿಂಗ್’ ಪ್ರಸ್ತಾವನೆಯ ಮೇಲೆ ವಿಚಾರ ವಿನಿಮಯ ನಡೆಸುತ್ತಿದ್ದಾರೆ. ಈ ಪ್ರಸ್ತಾವನೆಯ ಮುಖ್ಯ ಉದ್ದೇಶ ದೇಶದ ಜನತೆಗೆ ಸೈನ್ಯ ಜೀವನವನ್ನು ಅನುಭವಿಸುವ ಅವಕಾಶ ಕೊಟ್ಟು 1.3 ಮಿಲಿಯನ್ ಸೈನ್ಯದ ಸಮೀಪ ತರುವ ಉದ್ದೇಶವಾಗಿದೆ. ಸೇನೆಯ ಕರ್ನಲ್ ಅಮನ್ ಆನಂದ್ ಹೇಳುವ ಪ್ರಕಾರ ‘ಒಂದು ವೇಳೆ ಈ ಯೋಜನೆಗೆ ಒಪ್ಪಿಗೆ ಸಿಕ್ಕರೆ ದೇಶದ ಯುವಕರು ಸೈನ್ಯದಲ್ಲಿ ಸ್ವಇಚ್ಛೆಯಿಂದ ದೊಡ್ಡ ಪ್ರಮಾಣದಲ್ಲಿ ಶಾಮೀಲಾಗುವರು, ಆದರೆ ಭರ್ತಿ ಪ್ರಕ್ರಿಯೆಯಲ್ಲಿ ಮಾತ್ರ ಯಾವುದೇ ಸಡಿಲತೆ ಇರುವದಿಲ್ಲ.


ಈ ಯೋಜನೆ ವಿಶೇಷವಾಗಿ 10 ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಲು ತಯಾರಿಲ್ಲದ ಯುವಕರಿಗಾಗಿ ಇದೆ ಎಂದು ಹೇಳಿದರು.
ಈ ಸೇವೆ ಮಿಲಿಟರಿ ಸೇವೆ ತರ ಇರುವದಿಲ್ಲ. ಇದರಿಂದ ಸೈನ್ಯಕ್ಕೂ ಸಹಿತ ಲಾಭವಿದೆ. ಮೂರು ವರ್ಷಗಳವರೆಗೆ ಯುವಕರು ಸೈನ್ಯದಲ್ಲಿ ಕೂಡಿಕೊಳ್ಳುವದಾದರೆ ಸೈನ್ಯದ ಮೇಲೆ ಬೀಳುವ ಭಾರ ಸಹಿತ ಕಡಿಮೆಯಾಗುವದು. ಮತ್ತು ಅಲಾಉನ್ಸ್, ಗ್ರೇಜ್ಯುಟಿ, ಪೆನ್ಶನ್ ನಂತಹ ಸೌಲಭ್ಯಗಳನ್ನು ಕೊಡುವ ಅವಶ್ಯಕತೆ ಬೀಳುವದಿಲ್ಲ.
ಒಂದು ಅಂದಾಜಿನ ಪ್ರಕಾರ ಒಬ್ಬ ಸೈನಿಕನಿಗೆ ಹತ್ತು ವರ್ಷಗಳ ನಂತರ ಸುಮಾರು ಐದು ಕೋಟಿ ರೂಪಾಯಿಗಳವರೆಗೆ ಖರ್ಚಾಗುತ್ತದೆ. ಅದೇ 14 ವರ್ಷಗಳವರೆಗೆ ಸೈನ್ಯದಲ್ಲಿ ಇರುವದರಿಂದ ಒಬ್ಬ ಅಧಿಕಾರಿಗೆ ಸುಮಾರು 7 ಕೋಟಿ ರೂಪಾಯಿಗಳವರೆಗೆ ಖರ್ಚಾಗುವದು. ಆದರೆ ಮೂರು ವರ್ಷಗಳವರೆಗೆ ಸೇವೆ ಸಲ್ಲಿಸುವದರಿಂದ ಒಂದು ಸೈನಿಕನಿಗೆ 80 ರಿಂದ 85 ಲಕ್ಷಗಳವರೆಗೆ ವ್ಯಯವಾಗುವದು. ಸೇನೆ ಒಂದು ಸ್ಟಡಿ ರಿಪೋರ್ಟ್ ದ ಆಧಾರ ಮೇಲಿಂದ ಈ ಪ್ಲಾನ್ ತಯಾರಿಸಿದ್ದಾರೆ.